IND vs ENG: ಇಂಗ್ಲೆಂಡ ತಂಡವನ್ನು ಕಾಡುತ್ತಿವೆ ಕ್ಯಾಪ್ಟನ್ ರೋಹಿತ್ ಶರ್ಮಾ ದಾಖಲೆಗಳು..!
IND vs ENG: ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಒಮ್ಮೆ ಮಾತ್ರ ಸೋತಿದ್ದರೆ, ಭಾರತ ತಂಡ 12 ಸರಣಿಗಳಲ್ಲಿ ಚಾಂಪಿಯನ್ ಆಯಿತು.
ಇಂಗ್ಲೆಂಡ್ ಪ್ರವಾಸದ ವೇಳೆ ಕೊರೊನಾ ವಿರುದ್ಧ ಹೋರಾಡಿ ಗೆದ್ದ ರೋಹಿತ್ ಶರ್ಮಾ (Rohit Sharma) ಈಗ ಸಂಪೂರ್ಣ ಫಿಟ್ ಆಗಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಪಂದ್ಯ ಇಂದು (ಜುಲೈ 7) ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ನಾಯಕನಾಗಿ ರೋಹಿತ್ ಶರ್ಮಾ ಅವರ ಮೊದಲ ವಿದೇಶಿ ಸರಣಿ ಇದಾಗಿದೆ. ಕಳೆದ ವರ್ಷಾಂತ್ಯದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ (Virat Kohli) ಟಿ20 ಮಾದರಿಯ ನಾಯಕತ್ವದಿಂದ ಹಿಂದೆ ಸರಿದಿದ್ದು ಗೊತ್ತೇ ಇದೆ. ಇದರ ನಂತರ, ಬಿಸಿಸಿಐ ಏಕದಿನ ನಾಯಕತ್ವದಿಂದಲೂ ಕೊಹ್ಲಿಯನ್ನು ಕೆಳಗಿಳಿಸಿ, ರೋಹಿತ್‌ಗೆ ಎರಡೂ ಸ್ವರೂಪಗಳ ನಾಯಕತ್ವವನ್ನು ಹಸ್ತಾಂತರಿಸಿತು.
ರೋಹಿತ್ ಸೇನೆ ಎಲ್ಲಾ ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿದೆ
ವಿರಾಟ್ ಕೊಹ್ಲಿ ಈ ವರ್ಷದ ಆರಂಭದಲ್ಲಿ ಅಂದರೆ 2022 ರಲ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದರು. ಇದರೊಂದಿಗೆ ಬಿಸಿಸಿಐ ಈ ಸ್ವರೂಪವನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸಿತು. ಅಂತಹ ಸಂದರ್ಭಗಳಲ್ಲಿ, ರೋಹಿತ್ ಎಲ್ಲಾ ಮೂರು ಸ್ವರೂಪಗಳಲ್ಲಿ ಸಂಪೂರ್ಣ ನಾಯಕತ್ವವನ್ನು ಪಡೆದರು. ಪೂರ್ಣ ನಾಯಕನಾಗಿ ರೋಹಿತ್ ಶರ್ಮಾ ಅವರ ಮೊದಲ ವಿದೇಶಿ ಸರಣಿ ಇದಾಗಿದೆ. ಅದರಲ್ಲಿ ಯಶಸ್ಸು ಸಾಧಿಸಿ ಖಾತೆ ತೆರೆಯುವ ಭರವಸೆಯನ್ನು ರೋಹಿತ್ ಹೊಂದಿದ್ದಾರೆ.
ರೋಹಿತ್ ಶರ್ಮಾ ಪೂರ್ಣ ನಾಯಕನಾಗಿ ಕೇವಲ 5 ಸರಣಿಗಳನ್ನು ಆಡಿದ್ದಾರೆ. ಅವನ್ನೆಲ್ಲ ಕ್ಲೀನ್ ಸ್ವೀಪ್ ಮೂಲಕ ಗೆದಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಏಕದಿನದಲ್ಲಿ ವೆಸ್ಟ್ ಇಂಡೀಸ್ ಮತ್ತು ಟೆಸ್ಟ್‌ನಲ್ಲಿ ಶ್ರೀಲಂಕಾ ಕ್ಲೀನ್ ಸ್ವೀಪ್ ಅನುಭವಿಸಿದೆ. ರೋಹಿತ್ ಈ ಕ್ಲೀನ್ ಸ್ವೀಪ್ ದಾಖಲೆಯನ್ನು ಕಾಯ್ದುಕೊಳ್ಳುತ್ತಾರೋ ಅಥವಾ ಇಂಗ್ಲೆಂಡ್ ತಂಡ ಅವರ ದಾಖಲೆಯನ್ನು ಮುರಿಯುತ್ತಾರೋ ಕಾದು ನೋಡಬೇಕಿದೆ.
ರೋಹಿತ್ ನಾಯಕತ್ವದಲ್ಲಿ ಭಾರತ ತವರಿನಲ್ಲಿ ಆಡಿದ ಸರಣಿ..
T20 ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಕ್ಲೀನ್ ಸ್ವೀಪ್ (ನವೆಂಬರ್ 2021)
ವೆಸ್ಟ್ ಇಂಡೀಸ್ ವಿರುದ್ಧ ODI ಸರಣಿಯಲ್ಲಿ 3-0 ಕ್ಲೀನ್ ಸ್ವೀಪ್ (ಫೆಬ್ರವರಿ 2022)
T20 ಸರಣಿಯಲ್ಲಿ ವೆಸ್ಟ್ ಇಂಡೀಸ್ 3-0 ಕ್ಲೀನ್ ಸ್ವೀಪ್ (ಫೆಬ್ರವರಿ 2022)
ಟಿ20 ಸರಣಿಯಲ್ಲಿ ಶ್ರೀಲಂಕಾ 3-0 ಕ್ಲೀನ್ ಸ್ವೀಪ್ (ಫೆಬ್ರವರಿ 2022)
ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ 2-0 ಕ್ಲೀನ್ ಸ್ವೀಪ್ (ಮಾರ್ಚ್ 2022)
ರೋಹಿತ್ ನಾಯಕತ್ವದಲ್ಲಿ ಒಂದೇ ಒಂದು ಸರಣಿ ಮಿಸ್..
ರೋಹಿತ್ ಶರ್ಮಾ ಇದುವರೆಗೆ ಮೂರು ಮಾದರಿಗಳಲ್ಲಿ (ಟೆಸ್ಟ್, ODI, T20I) ಒಟ್ಟು 13 ದ್ವಿಪಕ್ಷೀಯ ಸರಣಿಗಳ ಸಾರಥ್ಯ ವಹಿಸಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಒಮ್ಮೆ ಮಾತ್ರ ಸೋತಿದ್ದರೆ, ಭಾರತ ತಂಡ 12 ಸರಣಿಗಳಲ್ಲಿ ಚಾಂಪಿಯನ್ ಆಯಿತು. ಹೀಗಾಗಿ ರೋಹಿತ್ ದಾಖಲೆ ಇಂಗ್ಲೆಂಡ್‌ಗೆ ಭಯಾನಕವಾಗಲಿದೆ.
ಮೊದಲ ಟಿ20 ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್ , ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.
2ನೇ-3ನೇ ಟಿ20 ಪಂದ್ಯಗಳಿಗೆ ಭಾರತ ತಂಡ..
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್, ಭುವನೇಶ್ವರ್, ಭುವನೇಶ್ವರ್ ಉಮ್ರಾನ್ ಮಲಿಕ್.
Published On - 6:56 pm, Thu, 7 July 22