‘ಹೆಸರಿಗೆ ಮಾತ್ರ ಟೀಂ ಇಂಡಿಯಾ ಪರ ಆಡಿದ್ದಾರೆ’: ಪದೇ ಪದೇ ರಜೆ ಕೇಳುವ ಹಿರಿಯ ಆಟಗಾರರ ಮೇಲೆ ಬಿಸಿಸಿಐ ಗರಂ

BCCI: ಬಿಸಿಸಿಐ ಮತ್ತು ಆಯ್ಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಅವರು ಹೆಸರಿಗೆ ಮಾತ್ರ ಟೀಂ ಇಂಡಿಯಾ ಪರ ಆಡಿದ್ದಾರೆ ಎಂಬ ಆಶ್ಚರ್ಯಕರ ಹೇಳಿಕೆಯನ್ನು ಸಹ ನೀಡಿದ್ದಾರೆ.

‘ಹೆಸರಿಗೆ ಮಾತ್ರ ಟೀಂ ಇಂಡಿಯಾ ಪರ ಆಡಿದ್ದಾರೆ’: ಪದೇ ಪದೇ ರಜೆ ಕೇಳುವ ಹಿರಿಯ ಆಟಗಾರರ ಮೇಲೆ ಬಿಸಿಸಿಐ ಗರಂ
ರೋಹಿತ್, ವಿರಾಟ್
TV9kannada Web Team

| Edited By: pruthvi Shankar

Jul 07, 2022 | 2:33 PM

ಏನೇ ಆಗಿರಲಿ ಅದು ಅಗತ್ಯಕ್ಕಿಂತ ಹೆಚ್ಚಾದರೆ ಹಾನಿಕಾರಕ ಎಂದು ಅನುಭವಿಗಳು ಹೇಳುತ್ತಾರೆ. ಈಗ ಟೀಂ ಇಂಡಿಯಾದಲ್ಲಿಯೂ ಇದೇ ಪರಿಸ್ಥಿತಿ ಕಾಣುತ್ತಿದೆ. ಟೀಂ ಇಂಡಿಯಾದ ಹಿರಿಯ ಆಟಗಾರರ ವರ್ತನೆಗೆ ಬಿಸಿಸಿಐ (BCCI) ಮತ್ತು ಆಯ್ಕೆದಾರರು ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ. ರೋಹಿತ್, ವಿರಾಟ್, ಪಾಂಡ್ಯ ಮತ್ತು ಶಮಿ (Rohit, Virat, Pandya and Shami) ವಿರುದ್ಧ ಬಿಸಿಸಿಐ ಗರಂ ಆಗಿದೆ ಎಂದು ವರದಿಯಾಗಿದೆ. ಬಿಸಿಸಿಐ ಅಸಮಾಧಾನಕ್ಕೆ ಕಾರಣ ಈ ಆಟಗಾರರ ನಿರ್ಧಾರ. ವಾಸ್ತವವಾಗಿ, ಈ ನಾಲ್ವರು ಆಟಗಾರರಿಗೆ ವಿಶ್ರಾಂತಿ ನೀಡುವ ನಿರ್ಧಾರದಿಂದ ಬಿಸಿಸಿಐ ಮತ್ತು ಆಯ್ಕೆದಾರರು ಅಸಮಾಧಾನಗೊಂಡಿದ್ದಾರೆ. ಈ ನಾಲ್ವರ ನಿರ್ಧಾರದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿಲ್ಲ. ವರದಿಗಳ ಪ್ರಕಾರ, ಬಿಸಿಸಿಐ ಮತ್ತು ಆಯ್ಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಅವರು ಹೆಸರಿಗೆ ಮಾತ್ರ ಟೀಂ ಇಂಡಿಯಾ ಪರ ಆಡಿದ್ದಾರೆ ಎಂಬ ಆಶ್ಚರ್ಯಕರ ಹೇಳಿಕೆಯನ್ನು ಸಹ ನೀಡಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ… ಇವರು ಸುದೀರ್ಘ ರಜೆಯ ನಂತರ ಇತ್ತೀಚೆಗೆ ಭಾರತ ತಂಡಕ್ಕೆ ಮರಳಿದ ಆಟಗಾರರು ಎಂಬುದು ನಿಮಗೆ ಗೊತ್ತಿರಲಿ. ಆದರೆ ಇದರ ನಂತರವೂ ಅವರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಕೋರಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಇದಲ್ಲದೇ ರೋಹಿತ್ ಗಾಯದ ಸಮಸ್ಯೆಯಿಂದ ಎಡ್ಜ್‌ಬಾಸ್ಟನ್ ಟೆಸ್ಟ್ ಕೂಡ ಆಡಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲೂ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿತ್ತು. ಅದೇ ಸಮಯದಲ್ಲಿ, ಹಾರ್ದಿಕ್ ಪಾಂಡ್ಯ ದೀರ್ಘಕಾಲದವರೆಗೆ ಭಾರತೀಯ ಕ್ರಿಕೆಟ್‌ನಿಂದ ದೂರ ಸರಿದಿದ್ದರು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಂಡ್ಯ ತಂಡಕ್ಕೆ ಪುನರಾಗಮನ ಮಾಡಿದರು.

ಇದನ್ನೂ ಓದಿ: IND vs WI: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರೋಹಿತ್-ವಿರಾಟ್​ಗೆ ವಿಶ್ರಾಂತಿ, ಧವನ್​ಗೆ ನಾಯಕತ್ವ

ಈ ಆಟಗಾರರು ಪ್ರತಿ ಆಯ್ಕೆ ಸಭೆಯಲ್ಲಿ ವಿಶ್ರಾಂತಿ ಕೇಳುತ್ತಾರೆ – ವರದಿ

ಬಿಸಿಸಿಐಗೆ ಸಂಬಂಧಿಸಿದ ಮೂಲಗಳು TOI ಗೆ ತಿಳಿಸಿದ್ದು, ಪ್ರತಿ ಆಯ್ಕೆ ಸಭೆಯಲ್ಲಿ ಆಟಗಾರರಿಗೆ ಕೆಲಸದ ಹೊರೆಯ ಸಮಸ್ಯೆ ಉದ್ಭವಿಸುತ್ತದೆ. ರೋಹಿತ್, ಕೊಹ್ಲಿ, ಪಾಂಡ್ಯ, ಬುಮ್ರಾ ಮತ್ತು ಶಮಿ ಪ್ರತಿ ಸಭೆಯಲ್ಲೂ ವಿಶ್ರಾಂತಿ ತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಾರೆ. ತರಬೇತುದಾರ ಮತ್ತು ಫಿಸಿಯೋ ತಂಡದ ನಿರ್ವಹಣೆ ಬಗ್ಗೆ ಕಳುಹಿಸಲಾದ ಟಿಪ್ಪಣಿಯು ಈ ಆಟಗಾರರ ಸೌಕರ್ಯವನ್ನು ಉಲ್ಲೇಖಿಸುತ್ತದೆ.

ಮೂಲಗಳು ಮತ್ತಷ್ಟು ಹೇಳುವಂತೆ, “ಈ ಆಟಗಾರರು ಎಲ್ಲಾ ಇತರ ಸರಣಿಗಳಿಂದ ಹೊರಗುಳಿಯುತ್ತಿದ್ದಾರೆ, ಆದರೆ ಬಿಸಿಸಿಐ ಜೊತೆಗಿನ ಅವರ ವಾರ್ಷಿಕ ಒಪ್ಪಂದವೂ ಉತ್ತಮವಾಗಿದೆ. ರೋಹಿತ್ ಪೂರ್ಣ ಸಮಯದ ನಾಯಕತ್ವವನ್ನು ಪಡೆದಾಗಿನಿಂದ, ಅವರು ಕೇವಲ ಬೆರಳೆಣಿಕೆಯ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಪಾಂಡ್ಯ ಈಗಷ್ಟೇ ಭಾರತ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಬುಮ್ರಾ ಮತ್ತು ಶಮಿ ಕೂಡ ಆಯ್ದ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಈಗ ಪ್ರತಿ ಸರಣಿಯ ನಂತರ ಕೊಹ್ಲಿಗೂ ವಿಶ್ರಾಂತಿಯ ಅಗತ್ಯವಿದೆ ಎಂದು ಬಿಸಿಸಿಐ ಅಸಮಾದಾನ ಹೊರಹಾಕಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತ ಪರ ಗರಿಷ್ಠ ಪಂದ್ಯಗಳನ್ನು ಆಡಿದ ಏಕೈಕ ಆಟಗಾರ ಪಂತ್ ಮಾತ್ರ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಯ್ಕೆ ಇರುತ್ತದೋ ಇಲ್ಲವೋ?

ಇದನ್ನೂ ಓದಿ

ಆದರೆ, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ರೋಹಿತ್, ಬುಮ್ರಾ, ಪಾಂಡ್ಯ ಮತ್ತು ಪಂತ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್‌ಗೆ ಹೋಗುವುದು ಅವರು ಇಂಗ್ಲೆಂಡ್ ವಿರುದ್ಧ ಹೇಗೆ ಆಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada