IND vs WI: ಕೇವಲ 6 ಪಂದ್ಯಗಳನ್ನಾಡಿರುವ ರೋಹಿತ್​ಗೆ ಸುಸ್ತಾಗುತ್ತಾ? ಇದು ಫ್ಯಾನ್ಸ್ ಎತ್ತಿರುವ ಪ್ರಶ್ನೆ

IND vs WI: ಸತತ ವಿಶ್ರಾಂತಿ ಪಡೆದು ಫಿಟ್ ಆಗಿ ಮರಳಿರುವ ಅವರು ಕೇವಲ 6 ಪಂದ್ಯಗಳ ಬಳಿಕ ಮತ್ತೆ ವಿಶ್ರಾಂತಿ ಪಡೆಯುವ ಬಗ್ಗೆ ಪ್ರಶ್ನೆ ಎದ್ದಿದೆ.

IND vs WI: ಕೇವಲ 6 ಪಂದ್ಯಗಳನ್ನಾಡಿರುವ ರೋಹಿತ್​ಗೆ ಸುಸ್ತಾಗುತ್ತಾ? ಇದು ಫ್ಯಾನ್ಸ್ ಎತ್ತಿರುವ ಪ್ರಶ್ನೆ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on: Jul 06, 2022 | 7:17 PM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ T20 ಸರಣಿಯು ಜುಲೈ 7 ಗುರುವಾರದಿಂದ ಪ್ರಾರಂಭವಾಗುತ್ತಿದೆ. ಈ ಸರಣಿಯ ನಂತರ, ಎರಡು ತಂಡಗಳ ನಡುವೆ ODI ಸರಣಿ ಕೂಡ ನಡೆಯಲಿದೆ. ಈ ಎರಡೂ ಸರಣಿಗಳು ಭಾರತ ತಂಡಕ್ಕೆ ಮಹತ್ವದ್ದಾಗಿದೆ. ಏಕೆಂದರೆ ಈ ಸರಣಿಯೊಂದಿಗೆ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತೆ ಮೈದಾನಕ್ಕೆ ಮರಳಲಿದ್ದಾರೆ. ರೋಹಿತ್ ಶರ್ಮಾಗೆ ಕೊರೊನಾ ಸೋಂಕು ತಗುಲಿದ್ದು, ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಮತ್ತೆ ಮೈದಾನಕ್ಕಿಳಿಯಲು ಎಲ್ಲರೂ ಬಯಸುತ್ತಿದ್ದಾರೆ. ಆದರೆ ಈ ನಡುವೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli)ಯಂತಹ ಅನುಭವಿ ಆಟಗಾರರ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಸುದ್ದಿಯೊಂದು ಮುನ್ನೆಲೆಗೆ ಬಂದಿದೆ.

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ವಿಶ್ರಾಂತಿ

ಇದನ್ನೂ ಓದಿ
Image
Legends League Cricket: ಕ್ರಿಕೆಟ್ ಅಖಾಡಕ್ಕೆ ಮತ್ತೆ ಎಂಟ್ರಿ ಕೊಟ್ಟ ಸಿಡಿಲಮರಿ ಸೆಹ್ವಾಗ್, ಪಠಾಣ್ ಬ್ರದರ್ಸ್
Image
IND vs WI: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರೋಹಿತ್-ವಿರಾಟ್​ಗೆ ವಿಶ್ರಾಂತಿ, ಧವನ್​ಗೆ ನಾಯಕತ್ವ
Image
IND vs ENG, 1st T20, Match Preview: ಟಿ20 ಸರಣಿಯಲ್ಲಿ ಆಂಗ್ಲರನ್ನು ಸೋಲಿಸುವ ಶಕ್ತಿ ಟೀಂ ಇಂಡಿಯಾಕ್ಕಿದೆಯಾ?

ಬುಧವಾರ ಜುಲೈ 6 ರಂದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಘೋಷಿಸಿತು. ಇಂಗ್ಲೆಂಡಿನಲ್ಲಿ ಟಿ20 ಹಾಗೂ ಏಕದಿನ ಸರಣಿಯಲ್ಲಿ ನೆಲೆಯೂರಿರುವ ಭಾರತ ತಂಡ ಅಲ್ಲಿಂದ ವೆಸ್ಟ್ ಇಂಡೀಸ್​ಗೆ ತೆರಳಲಿದ್ದು, ಅಲ್ಲಿ 3 ಏಕದಿನ ಪಂದ್ಯಗಳನ್ನು ಆಡಬೇಕಿದೆ. ಈ ಸರಣಿಗೆ ಆಯ್ಕೆಯಾಗಿರುವ ತಂಡ ಪ್ರಕಟವಾದ ನಂತರ ಈ ಪ್ರಶ್ನೆ ಉದ್ಭವಿಸಿದೆ. ವಾಸ್ತವವಾಗಿ, ಈ ಪ್ರವಾಸಕ್ಕಾಗಿ, ತಂಡವು ಮತ್ತೊಮ್ಮೆ ತಮ್ಮ ನಿಯಮಿತ ನಾಯಕ ರೋಹಿತ್ ಶರ್ಮಾ ಇಲ್ಲದೆ ಹೋಗಲಿದೆ. ರೋಹಿತ್ ಹೊರತಾಗಿ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಇಲ್ಲಿಂದ ಇಡೀ ಗದ್ದಲ ಪ್ರಾರಂಭವಾಗಿದೆ.

ಇದನ್ನೂ ಓದಿ: IND vs WI: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರೋಹಿತ್-ವಿರಾಟ್​ಗೆ ವಿಶ್ರಾಂತಿ, ಧವನ್​ಗೆ ನಾಯಕತ್ವ

8 ತಿಂಗಳಲ್ಲಿ 6 ಪಂದ್ಯಗಳನ್ನಷ್ಟೇ ಆಡಿದ್ದಾರೆ

ವಾಸ್ತವವಾಗಿ, ರೋಹಿತ್ ಶರ್ಮಾ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಏಕೆಂದರೆ ನವೆಂಬರ್ 2021 ರಲ್ಲಿ T20-ODI ನಾಯಕರಾದ ನಂತರ ಮತ್ತು ಫೆಬ್ರವರಿಯಲ್ಲಿ ಟೆಸ್ಟ್ ತಂಡದ ನಾಯಕರಾದ ನಂತರ, ರೋಹಿತ್ ಶರ್ಮಾ ಈಗಾಗಲೇ ಗಾಯ, ಕೊರೊನಾ ಅಥವಾ ಇತರೆ ಕಾರಣದಿಂದ ಅನೇಕ ಪಂದ್ಯಗಳಿಂದ ಹೊರಗುಳಿದಿದ್ದಾರೆ.

ನವೆಂಬರ್ 2021 ರಲ್ಲಿ T20 ವಿಶ್ವಕಪ್ ನಂತರ ನಾಯಕನಾದ ನಂತರ, ರೋಹಿತ್ ಶರ್ಮಾ 9 T20, 3 ODI ಮತ್ತು 2 ಟೆಸ್ಟ್ ಪಂದ್ಯಗಳು ಸೇರಿದಂತೆ 14 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅದೇ ಸಮಯದಲ್ಲಿ, ಟೀಮ್ ಇಂಡಿಯಾ ಒಟ್ಟು 30 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ರೋಹಿತ್ ಶರ್ಮಾ 16 ಪಂದ್ಯಗಳಿಂದ ಹೊರಗುಳಿದಿದ್ದರು. ಇದರಲ್ಲಿ ಐರ್ಲೆಂಡ್ ವಿರುದ್ಧದ ಇತ್ತೀಚಿನ 2 ಟಿ20 ಪಂದ್ಯಗಳನ್ನು ಹೊರತುಪಡಿಸಿ, ರೋಹಿತ್ ಒಟ್ಟು 14 ಪಂದ್ಯಗಳಿಂದ ಹೊರಗುಳಿದಿದ್ದರು.

ನಾಯಕನಾದ ನಂತರ ರೋಹಿತ್ ಆಡಿದ ಪಂದ್ಯಗಳು

ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಿಂದ ರೋಹಿತ್‌ಗೆ ವಿಶ್ರಾಂತಿ ನೀಡಲಾಯಿತು. ಆದರೆ ಗಾಯದ ಕಾರಣ ಸಂಪೂರ್ಣ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದರು. ನಂತರ ಅವರು ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯಿಂದ ಪುನರಾಗಮನ ಮಾಡಿದರು. ಇದಾದ ಬಳಿಕ ರೋಹಿತ್ ಸತತ 6 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಪೂರ್ಣ 14 ಪಂದ್ಯಗಳನ್ನು ಆಡಿದ ನಂತರ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 5-ಪಂದ್ಯಗಳ ತವರು T20 ಸರಣಿಯಿಂದ ವಿಶ್ರಾಂತಿ ಪಡೆದರು. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಿಂದಾಗಿ ಅವರು 2 ಟಿ20 ಪಂದ್ಯಗಳಿಗೆ ಆಯ್ಕೆಯಾಗಲಿಲ್ಲ. ನಂತರ ಕೊರೊನಾದಿಂದಾಗಿ ಅವರು ಟೆಸ್ಟ್ ಆಡಲು ಸಾಧ್ಯವಾಗಲಿಲ್ಲ.

ಕೇವಲ 6 ಪಂದ್ಯ ಆಡಿದ ರೋಹಿತ್​ಗೆ ಸುಸ್ತಾಗುತ್ತಾ?

ಹೀಗಿರುವಾಗ ಸತತ ವಿಶ್ರಾಂತಿ ಪಡೆದು ಫಿಟ್ ಆಗಿ ಮರಳಿರುವ ಅವರು ಕೇವಲ 6 ಪಂದ್ಯಗಳ ಬಳಿಕ ಮತ್ತೆ ವಿಶ್ರಾಂತಿ ಪಡೆಯುವ ಬಗ್ಗೆ ಪ್ರಶ್ನೆ ಎದ್ದಿದೆ. ಈ ಪ್ರಶ್ನೆ ಏಕೆಂದರೆ ರೋಹಿತ್ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಜೊತೆಗೆ ನಾಯಕನಾಗಿಯೂ ಅವರು ನಿಯಮಿತವಾಗಿ ಕಣಕ್ಕಿಳಿಯುತ್ತಿಲ್ಲ. ಟೀಮ್ ಇಂಡಿಯಾ ಮತ್ತು ವಿಶೇಷವಾಗಿ ರೋಹಿತ್ ಅವರ ಅಭಿಮಾನಿಗಳು ಈ ವಿಶ್ರಾಂತಿಯ ಬಗ್ಗೆ ತುಂಬಾ ಅಸಮಾಧಾನಗೊಂಡಿದ್ದು, ತಮ್ಮ ನಿರಾಶೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಕೇವಲ 6 ಪಂದ್ಯಗಳನ್ನು ಆಡಿ ರೋಹಿತ್ ಸುಸ್ತಾಗಿದ್ದಾರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ