England Playing XI: ಟಿ20 ಸ್ಪೆಷಲಿಸ್ಟ್​​​ಗಳನ್ನೇ ಹೊಂದಿರುವ ಇಂಗ್ಲೆಂಡ್​ಗೆ ಭಾರತದ ಸವಾಲು; ಹೇಗಿರಲಿದೆ ಪ್ಲೇಯಿಂಗ್ XI?

IND vs ENG, 1st T20I: ಟಿ20 ಮಾದರಿಯಲ್ಲಿ ಉತ್ತಮ ಬೌಲರ್‌ಗಳ ಲೈನ್-ಲೆಂಗ್ತ್ ಅನ್ನು ಹಾಳುಮಾಡುವಂತಹ ಕೆಲವು ಆಟಗಾರರನ್ನು ಇಂಗ್ಲೆಂಡ್ ಹೊಂದಿದೆ. ಜೋಸ್ ಬಟ್ಲರ್ ಹೊರತಾಗಿ, ಜೇಸನ್ ರಾಯ್, ಡೇವಿಡ್ ಮಲಾನ್, ಲಿಯಾಮ್ ಲಿವಿಂಗ್ಸ್ಟನ್ ಮತ್ತು ಮೊಯಿನ್ ಅಲಿ ಹೆಸರುಗಳನ್ನು ಇದರಲ್ಲಿ ಸೇರಿಸಬಹುದು.

England Playing XI: ಟಿ20 ಸ್ಪೆಷಲಿಸ್ಟ್​​​ಗಳನ್ನೇ ಹೊಂದಿರುವ ಇಂಗ್ಲೆಂಡ್​ಗೆ ಭಾರತದ ಸವಾಲು; ಹೇಗಿರಲಿದೆ ಪ್ಲೇಯಿಂಗ್ XI?
ಬಟ್ಲರ್, ರಾಯ್
TV9kannada Web Team

| Edited By: pruthvi Shankar

Jul 07, 2022 | 3:01 PM

ಟೆಸ್ಟ್ ಪಂದ್ಯ ಸೋತ ನಂತರ ಇದೀಗ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು ಟೀಂ ಇಂಡಿಯಾ ಗುರಿಯಾಗಿದೆ. ಭಾರತ ತಂಡವು ಸೌತಾಂಪ್ಟನ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ T20 (IND vs ENG, 1st T20I) ಪಂದ್ಯವನ್ನು ಇಂದು ಆಡಲಿದೆ. ನಿಸ್ಸಂಶಯವಾಗಿ ಸರಣಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸುವುದು ತಂಡದ ಗುರಿಯಾಗಿದೆ. ಆದಾಗ್ಯೂ, ಸೀಮಿತ ಓವರ್‌ಗಳಲ್ಲಿ ಇಂಗ್ಲೆಂಡ್ ತಂಡವು ಹೆಚ್ಚು ಅಪಾಯಕಾರಿಯಾದ ಕಾರಣ ಅದು ಅಷ್ಟು ಸುಲಭವಲ್ಲ. ಆಂಗ್ಲರ ತಂಡವು ಕ್ಷಣಾರ್ಧದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿರುವ ಆಟಗಾರರನ್ನು ಹೊಂದಿದೆ. ಸ್ವತಃ ಅದ್ಭುತ ಬ್ಯಾಟ್ಸ್‌ಮನ್ ಆಗಿರುವ ಜೋಸ್ ಬಟ್ಲರ್ (Jos Buttler) ಕೈಯಲ್ಲಿ ತಂಡದ ಕಮಾಂಡ್ ಇದೆ. ಅವರ ಫಾರ್ಮ್ ಕೂಡ ಅದ್ಭುತವಾಗಿದೆ. ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ಯಾವ ಆಟಗಾರರೊಂದಿಗೆ ಕಣಕ್ಕಿಳಿಯಬಹುದು ಎಂಬುದನ್ನು ನಾವೀಗ ನೋಡೋಣ.

ಇಂಗ್ಲೆಂಡ್ ಬ್ಯಾಟಿಂಗ್ ಅಪಾಯಕಾರಿ

ಟಿ20 ಮಾದರಿಯಲ್ಲಿ ಉತ್ತಮ ಬೌಲರ್‌ಗಳ ಲೈನ್-ಲೆಂಗ್ತ್ ಅನ್ನು ಹಾಳುಮಾಡುವಂತಹ ಕೆಲವು ಆಟಗಾರರನ್ನು ಇಂಗ್ಲೆಂಡ್ ಹೊಂದಿದೆ. ಜೋಸ್ ಬಟ್ಲರ್ ಹೊರತಾಗಿ, ಜೇಸನ್ ರಾಯ್, ಡೇವಿಡ್ ಮಲಾನ್, ಲಿಯಾಮ್ ಲಿವಿಂಗ್ಸ್ಟನ್ ಮತ್ತು ಮೊಯಿನ್ ಅಲಿ ಹೆಸರುಗಳನ್ನು ಇದರಲ್ಲಿ ಸೇರಿಸಬಹುದು. ಮಲಾನ್, ರಾಯ್ ಮತ್ತು ಬಟ್ಲರ್ ಈಗಾಗಲೇ ನೆದರ್ಲೆಂಡ್ಸ್ ಸರಣಿಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು. ಇದಲ್ಲದೆ, ಫಿಲ್ ಸಾಲ್ಟ್ ಕೂಡ ಅಬ್ಬರಿಸುವ ಸಾಮಥ್ರ್ಯ ಹೊಂದಿದ್ದು, ಅವರನ್ನು ಅವರನ್ನು ಇಂಗ್ಲೆಂಡ್‌ನ ಭವಿಷ್ಯ ಸ್ಟಾರ್ ಎಂದು ಕರೆಯಲಾಗುತ್ತಿದೆ.

ಇದನ್ನೂ ಓದಿ: IND vs ENG: ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ! ಯಾರಿಗೆಲ್ಲ ಚಾನ್ಸ್?

ಇಂಗ್ಲೆಂಡ್ ಬೌಲಿಂಗ್ ಕೂಡ ಅದ್ಭುತವಾಗಿದೆ

ಇಂಗ್ಲೆಂಡ್ ಕೂಡ ಉತ್ತಮ ಬೌಲಿಂಗ್ ಹೊಂದಿದೆ. ಡೇವಿಡ್ ವಿಲ್ಲಿ ಅಲ್ಲದೆ, ರೀಸ್ ಟೋಪ್ಲಿ, ಕ್ರಿಸ್ ಜೋರ್ಡಾನ್ ಮತ್ತು ಟಿಮಲ್ ಮಿಲ್ಸ್ ಕೂಡ ತಂಡದ ವೇಗದ ಬೌಲಿಂಗ್‌ನ ಶಕ್ತಿಯಾಗಿದ್ದಾರೆ. ಆದರೆ, ಆದಿಲ್ ರಶೀದ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ತಂಡದಲ್ಲಿ ಅನುಭವಿ ಟಿ20 ಸ್ಪಿನ್ನರ್ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಜವಾಬ್ದಾರಿಯನ್ನು ಮ್ಯಾಥ್ಯೂ ಪಾರ್ಕಿನ್ಸನ್ ಅವರಿಗೆ ವಹಿಸಲಾಗಿದೆ.

ಇಂಗ್ಲೆಂಡ್‌ನ ಸಂಭಾವ್ಯ ಪ್ಲೇಯಿಂಗ್ XI: ಜೋಸ್ ಬಟ್ಲರ್, ಜೇಸನ್ ರಾಯ್, ಡೇವಿಡ್ ಮಲನ್, ಲಿಯಾಮ್ ಲಿವಿಂಗ್‌ಸ್ಟನ್, ಮೊಯಿನ್ ಅಲಿ, ಫಿಲ್ ಸಾಲ್ಟ್, ಸ್ಯಾಮ್ ಕರ್ರಾನ್, ಕ್ರಿಸ್ ಜೋರ್ಡಾನ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ ಮತ್ತು ಮ್ಯಾಥ್ಯೂ ಪಾರ್ಕಿನ್ಸನ್.

ಭಾರತ ಯುವ ಆಟಗಾರರೊಂದಿಗೆ ಮೈದಾನಕ್ಕಿಳಿಯಲಿದೆ

ವಿರಾಟ್ ಕೊಹ್ಲಿ, ರಿಷಬ್ ಪಂತ್ ಅವರಂತಹ ಆಟಗಾರರು ಇಲ್ಲದೆ ಭಾರತ ತಂಡ ಸೌತಾಂಪ್ಟನ್ ಟಿ20 ಪ್ರವೇಶಿಸಲಿದೆ. ಆದರೆ, ರೋಹಿತ್ ಶರ್ಮಾ ಪ್ರವಾಸದಲ್ಲಿ ಮೊದಲ ಪಂದ್ಯವನ್ನು ಆಡಲಿದ್ದಾರೆ. ಕೋವಿಡ್‌ನಿಂದಾಗಿ ರೋಹಿತ್‌ಗೆ ಎಜ್‌ಬಾಸ್ಟನ್‌ ಟೆಸ್ಟ್‌ ಆಡಲಾಗಲಿಲ್ಲ. ಆದರೆ ಅವರು ಟಿ20 ಸರಣಿಗೆ ಸಂಪೂರ್ಣ ಫಿಟ್ ಆಗಿದ್ದಾರೆ. ರೋಹಿತ್ ಶರ್ಮಾ ಯುವ ತಂಡವನ್ನು ಮುನ್ನಡೆಸಲಿದ್ದಾರೆ.

ಇದನ್ನೂ ಓದಿ

ಭಾರತದ ಸಂಭಾವ್ಯ ಪ್ಲೇಯಿಂಗ್ XI- ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada