Wimbledon 2022: ಜರ್ಮನಿಯ ಮರಿಯಾರನ್ನು ಮಣಿಸಿ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಪ್ರವೇಶಿಸಿದ ಓನ್ಸ್ ಜಬೇರ್..!
Wimbledon 2022: ಗುರುವಾರ ನಡೆದ ವಿಂಬಲ್ಡನ್ ಸೆಮಿಫೈನಲ್ ಪಂದ್ಯದಲ್ಲಿ ಟ್ಯುನಿಷಿಯಾದ ಓನ್ಸ್ ಜಬೇರ್ ಅವರು ಜರ್ಮನಿಯ ತಟ್ಜಾನಾ ಮರಿಯಾ ಅವರನ್ನು 6-2, 3-6, 6-1 ಸೆಟ್‌ಗಳಿಂದ ಸೋಲಿಸಿ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ತಲುಪಿದರು.
ಗುರುವಾರ ನಡೆದ ವಿಂಬಲ್ಡನ್ (Wimbledon 2022) ಸೆಮಿಫೈನಲ್ ಪಂದ್ಯದಲ್ಲಿ ಟ್ಯುನಿಷಿಯಾದ ಓನ್ಸ್ ಜಬೇರ್ (Ons Jabeur) ಅವರು ಜರ್ಮನಿಯ ತಟ್ಜಾನಾ ಮರಿಯಾ (Tatjana Maria) ಅವರನ್ನು 6-2, 3-6, 6-1 ಸೆಟ್‌ಗಳಿಂದ ಸೋಲಿಸಿ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ತಲುಪಿದರು. ಈ ರೋಚಕ ಜಯದೊಂದಿಗೆ ವಿಂಬಲ್ಡನ್ ಫೈನಲ್ ತಲುಪಿದ ಮೊದಲ ಅರಬ್ ಮತ್ತು ಮೊದಲ ಆಫ್ರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟುನೀಶಿಯಾದ 27 ವರ್ಷದ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಶನಿವಾರದ ಚಾಂಪಿಯನ್‌ಶಿಪ್ ಪಂದ್ಯದಲ್ಲಿ 2019 ರ ಚಾಂಪಿಯನ್ ಸಿಮೋನಾ ಹ್ಯಾಲೆಪ್ ಅಥವಾ ಎಲೆನಾ ರೈಬಾಕಿನಾ ಅವರನ್ನು ಎದುರಿಸಲಿದ್ದಾರೆ.
ಓನ್ಸ್ ಜಬೇರ್ ಅವರಿಗೂ ಮೊದಲು, 1927 ರ ಫ್ರೆಂಚ್ ಓಪನ್‌ನಲ್ಲಿ ದಕ್ಷಿಣ ಆಫ್ರಿಕಾದ ಐರಿನ್ ಬೌಡರ್ ಪೀಕಾಕ್ ಮತ್ತು 1959 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ರೆನೀ ಶುರ್ಮನ್ ಸ್ಲಾಮ್ ಸಿಂಗಲ್ಸ್ ಫೈನಲ್ ತಲುಪಿದ ಏಕೈಕ ಆಫ್ರಿಕನ್ ಮಹಿಳೆಯರಾಗಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ ಓನ್ಸ್ ಜಬೇರ್, ಇದು ವರ್ಷಗಳ ಕೆಲಸ ಮತ್ತು ತ್ಯಾಗದಿಂದ ನನಸಾಗುವ ಕನಸು. ಅದು ಫಲ ನೀಡಿದ್ದಕ್ಕೆ ನನಗೆ ಸಂತೋಷವಾಗಿದೆ. ನಾನು ಇದನ್ನೂ ಮುಂದಿನ ಪಂದ್ಯಕ್ಕೂ ಕೊಂಡೊಯ್ಯುತ್ತೇನೆ ಎಂದು ಜಬೇರ್ ಹೇಳಿದರು.
ಮಾರಿಯಾ ಟಟ್ಜಾನಾ 46 ಪ್ರಯತ್ನಗಳ ನಂತರ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್‌ನ ಸೆಮಿಫೈನಲ್ ತಲುಪಿದರು. ಸದ್ಯಕ್ಕೆ ಅವರ ಕನಸು ಸೆಮಿಫೈನಲ್‌ನಲ್ಲಿ ನಿಂತಿದೆ. ಓನ್ಸ್ ಮೊದಲ ಸೆಟ್ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಮರಿಯಾ ತಿರುಗೇಟು ನೀಡಿದರು. ಆದರೆ, ಮೂರನೇ ಸೆಟ್ ಹಾಗೂ ಪಂದ್ಯವನ್ನು ಟ್ಯುನಿಷಿಯಾದ ಓನ್ಸ್ ಜಬೇರ್ ಗೆದ್ದುಕೊಂಡರು.
34 ವರ್ಷದ ಮರಿಯಾ ಮೊದಲ ಗೇಮ್‌ನಲ್ಲಿ ಮೂರು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿಕೊಂಡರು. ಅವರ ಪ್ರತಿರೋಧ ಹೆಚ್ಚು ಕಾಲ ಉಳಿಯಲಿಲ್ಲ. ಓನ್ಸ್ ಮೊದಲ ಸೆಟ್ ಅನ್ನು 6-2 ರಿಂದ ಗೆದ್ದುಕೊಂಡರು. ಮರಿಯಾ ಮುಂದಿನ ಸೆಟ್‌ನಲ್ಲಿ 6-3ರಲ್ಲಿ ಜಯ ಸಾಧಿಸಿ ಸಮಬಲ ಸಾಧಿಸಿದರು. ಆದರೆ, ಮೂರನೇ ಸೆಟ್‌ನಲ್ಲಿ ಒನ್ಸರ್ ಮೇಲುಗೈ ಸಾಧಿಸಿದರು.
Ons the way to a first Grand Slam final ??@Ons_Jabeur defeats Tatjana Maria 6-2, 3-6, 6-1#Wimbledon | #CentreCourt100 pic.twitter.com/tnNObItxw3
— Wimbledon (@Wimbledon) July 7, 2022
Published On - 8:12 pm, Thu, 7 July 22