Women FIFA World Cup 2023: 32 ತಂಡಗಳ ನಡುವೆ ಫುಟ್ಬಾಲ್ ಕದನ; ವಿಜೇತರಿಗೆ ₹86 ಕೋಟಿ ಬಹುಮಾನ..!

Women FIFA World Cup 2023: ಕತಾರ್‌ನಲ್ಲಿ ನಡೆದ 2022 ರ ಪುರುಷರ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಅದ್ಭುತ ಯಶಸ್ಸಿನ ನಂತರ, ಇದೀಗ ಮಹಿಳಾ ಫಿಫಾ ಫುಟ್ಬಾಲ್ ವಿಶ್ವಕಪ್ ಇಂದಿನಿಂದ ಅಂದರೆ ಜುಲೈ 20 ರಿಂದ ಆರಂಭವಾಗುತ್ತಿದೆ.

Women FIFA World Cup 2023: 32 ತಂಡಗಳ ನಡುವೆ ಫುಟ್ಬಾಲ್ ಕದನ; ವಿಜೇತರಿಗೆ ₹86 ಕೋಟಿ ಬಹುಮಾನ..!
ಫಿಫಾ ಮಹಿಳಾ ವಿಶ್ವಕಪ್
Follow us
|

Updated on:Jul 20, 2023 | 10:03 AM

ಕತಾರ್‌ನಲ್ಲಿ ನಡೆದ 2022 ರ ಪುರುಷರ ಫಿಫಾ ಫುಟ್ಬಾಲ್ ವಿಶ್ವಕಪ್‌ನ (FIFA World Cup 2022) ಅದ್ಭುತ ಯಶಸ್ಸಿನ ನಂತರ, ಇದೀಗ ಮಹಿಳಾ ಫಿಫಾ ಫುಟ್ಬಾಲ್ ವಿಶ್ವಕಪ್ (FIFA Women’s World Cup 2023) ಇಂದಿನಿಂದ ಅಂದರೆ ಜುಲೈ 20 ರಿಂದ ಆರಂಭವಾಗುತ್ತಿದೆ. ಈ ಬಾರಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಜಂಟಿಯಾಗಿ ಮಹಿಳಾ ಫಿಫಾ ವಿಶ್ವಕಪ್ ಅನ್ನು ಆಯೋಜಿಸುತ್ತಿದ್ದು, 32 ತಂಡಗಳ ನಡುವಿನ ಈ ಕದನದಲ್ಲಿ ಅಮೆರಿಕದ ಮಹಿಳಾ ತಂಡವನ್ನು ಗೆಲುವಿನ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಅಮೆರಿಕದ ಹೊರತಾಗಿ ಇಂಗ್ಲೆಂಡ್, ಹೈಟಿ ಮತ್ತು ಆಸ್ಟ್ರೇಲಿಯಾದ ಮಹಿಳಾ ತಂಡವೂ ಈ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಅವಕಾಶ ಹೊಂದಿವೆ. ಇಂದಿನಿಂದ 1 ತಿಂಗಳವರೆಗೆ ನಡೆಯುವ ಈ ಕ್ರೀಡಾಕೂಟವೂ ಆಗಸ್ಟ್ 20 ರಂದು ನಡೆಯುವ ಫೈನಲ್ ಪಂದ್ಯದೊಂದಿಗೆ ಮುಕ್ತಾಯವಾಗಲಿದೆ.

ಹಿಂದಿನ ಮಹಿಳಾ ಫಿಫಾ ವಿಶ್ವಕಪ್‌ನಲ್ಲಿ 24 ತಂಡಗಳು ಭಾಗವಹಿಸಿದ್ದವು. ಈ ಬಾರಿ ಇನ್ನೂ 8 ತಂಡಗಳು ಅಧಿಕವಾಗಿ ಸೇರ್ಪಡೆಗೊಂಡಿದ್ದು, ಒಟ್ಟು 32 ತಂಡಗಳು ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿವೆ. ಒಟ್ಟು 32 ತಂಡಗಳನ್ನು 8 ಗುಂಪುಗಳಾಗಿ ವಿಂಗಡಿಸಲಾಗಿದೆ. ಕ್ರೀಡಾಕೂಟದ ಮೊದಲ ದಿನದಂದು ಎರಡು ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ನಾರ್ವೆ ತಂಡಗಳು ಮುಖಾಮುಖಿಯಾಗುತ್ತಿದ್ದರೆ, ಇಂದಿನ ಎರಡನೇ ಪಂದ್ಯದಲ್ಲಿ ಬಿ ಗುಂಪಿನಲ್ಲಿರುವ ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ.

ಭಾರತದಲ್ಲಿ ಫಿಫಾ ವಿಶ್ವಕಪ್‌, ನಮ್ಮ ತಂಡವೂ ಅಖಾಡಕ್ಕೆ’; ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

32 ತಂಡಗಳನ್ನು 8 ಗುಂಪುಗಳಾಗಿ ವಿಂಗಡಿಸಲಾಗಿದೆ

ಗುಂಪು ಎ: ನ್ಯೂಜಿಲೆಂಡ್, ನಾರ್ವೆ, ಫಿಲಿಪೈನ್ಸ್, ಸ್ವಿಟ್ಜರ್ಲೆಂಡ್

ಗುಂಪು ಬಿ: ಆಸ್ಟ್ರೇಲಿಯಾ, ಐರ್ಲೆಂಡ್, ನೈಜೀರಿಯಾ, ಕೆನಡಾ,

ಗುಂಪು ಸಿ: ಕೋಸ್ಟರಿಕಾ, ಜಪಾನ್, ಸ್ಪೇನ್, ಜಾಂಬಿಯಾ,

ಗುಂಪು ಡಿ: ಇಂಗ್ಲೆಂಡ್, ಹೈಟಿ, ಡೆನ್ಮಾರ್ಕ್, ಚೀನಾ,

ಗುಂಪು ಇ: ಯುಎಸ್ಎ, ವಿಯೆಟ್ನಾಂ, ನೆದರ್ಲ್ಯಾಂಡ್ಸ್, ಪೋರ್ಚುಗಲ್,

ಗುಂಪು ಎಫ್: ಫ್ರಾನ್ಸ್, ಜಮೈಕಾ, ಬ್ರೆಜಿಲ್, ಪನಾಮ,

ಗುಂಪು ಜಿ: ಸ್ವೀಡನ್, ದಕ್ಷಿಣ ಆಫ್ರಿಕಾ, ಇಟಲಿ, ಅರ್ಜೆಂಟೀನಾ

ಗುಂಪು ಎಚ್: ಜರ್ಮನಿ, ಮೊರಾಕೊ, ಕೊಲಂಬಿಯಾ, ಕೊರಿಯಾ ರಿಪಬ್ಲಿಕ್

ವೇಳಾಪಟ್ಟಿ

10 ಕ್ರೀಡಾಂಗಣಗಳಲ್ಲಿ ಪಂದ್ಯಗಳು

ಟೂರ್ನಿಯಲ್ಲಿ ಒಟ್ಟು 64 ಪಂದ್ಯಗಳು ನಡೆಯಲಿವೆ. ಒಟ್ಟು 10 ಕ್ರೀಡಾಂಗಣಗಳಲ್ಲಿ ಇಡೀ ಟೂರ್ನಿ ನಡೆಯಲಿದೆ. ಆಸ್ಟ್ರೇಲಿಯಾದ 6 ಕ್ರೀಡಾಂಗಣಗಳಾದ ಸಿಡ್ನಿ, ಮೆಲ್ಬೋರ್ನ್, ಪರ್ತ್, ಬ್ರಿಸ್ಬೇನ್ ಮತ್ತು ಅಡಿಲೇಡ್ ಮತ್ತು ನ್ಯೂಜಿಲೆಂಡ್‌ನ 4 ಸ್ಟೇಡಿಯಂಗಳಾದ ಆಕ್ಲೆಂಡ್, ವೆಲ್ಲಿಂಗ್ಟನ್, ಡ್ಯುನೆಡಿನ್, ಹ್ಯಾಮಿಲ್ಟನ್‌ಗಳಲ್ಲಿ ಪಂದ್ಯಗಳು ನಡೆಯಲಿವೆ.

ಅಮೆರಿಕ ಅತ್ಯಂತ ಯಶಸ್ವಿ ತಂಡ

ಪ್ರಶಸ್ತಿ ಉಳಿಸಿಕೊಳ್ಳುವ ಉದ್ದೇಶದಿಂದ ಅಮೆರಿಕ ತಂಡ ಕಣಕ್ಕಿಳಿಯಲಿದೆ. 2015 ಮತ್ತು 2019ರಲ್ಲಿ ಗೆದ್ದಿದ್ದ ಅಮೆರಿಕ ಈ ಬಾರಿ ಹ್ಯಾಟ್ರಿಕ್‌ ಮೇಲೆ ಕಣ್ಣಿಟ್ಟಿದೆ. ಇದು ಅತ್ಯಂತ ಯಶಸ್ವಿ ತಂಡವೂ ಹೌದು. ಅಮೆರಿಕ ಗರಿಷ್ಠ 4 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಜರ್ಮನಿ ತಂಡ 2 ಬಾರಿ ಚಾಂಪಿಯನ್ ಆಗಿದೆ. ಹಾಗೆಯೇ ನಾರ್ವೆ ಮತ್ತು ಜಪಾನ್ ತಂಡಗಳು ತಲಾ ಒಂದು ಬಾರಿ ವಿಜೇತರಾಗಿವೆ.

ವಿಜೇತರಿಗೆ ₹86 ಕೋಟಿ ಬಹುಮಾನ..!

ಈ ಆವೃತ್ತಿಯ ಫುಟ್ಬಾಲ್ ವಿಶ್ವಕಪ್‌ನ ಬಹುಮಾನದ ಮೊತ್ತವನ್ನು 3 ಪಟ್ಟು ಹೆಚ್ಚು ಹೆಚ್ಚಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಅಂದರೆ 2019 ರ ವಿಶ್ವಕಪ್‌ನ ಬಹುಮಾನದ ಮೊತ್ತವು 30 ಮಿಲಿಯನ್‌ನ ಸಮೀಪವಿತ್ತು. ಆದರೆ ಈ ಬಾರಿ ಬಹುಮಾನದ ಮೊತ್ತವು $ 110 ಮಿಲಿಯನ್ ಅಂದರೆ ಹತ್ತಿರತ್ತಿರ 900 ಕೋಟಿ ರೂಪಾಯಿ ಆಗಲಿದೆ. ಇದನ್ನು ಎಲ್ಲಾ ತಂಡಗಳಿಗೆ ವಿತರಿಸಲಾಗುತ್ತದೆ. ಪ್ರಶಸ್ತಿ ಗೆಲ್ಲುವ ತಂಡಕ್ಕೆ ಟ್ರೋಫಿ ಜತೆಗೆ 86 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.

ಜುಲೈ 20 ರಿಂದ ಗುಂಪು ಹಂತ ಆರಂಭ

ಮಹಿಳಾ ವಿಶ್ವಕಪ್​ನ ಗುಂಪು ಹಂತವು ಜುಲೈ 20 ರಿಂದ ಆರಂಭವಾಗಿ ಆಗಸ್ಟ್ 3 ರವರೆಗೆ ನಡೆಯಲಿದೆ. ಆ ಬಳಿಕ 16ನೇ ಸುತ್ತಿನ ಪಂದ್ಯಗಳು ಆಗಸ್ಟ್ 5 ಮತ್ತು ಆಗಸ್ಟ್ 8 ರ ನಡುವೆ ನಡೆಯಲಿವೆ. ನಂತರ ಕ್ವಾರ್ಟರ್ ಫೈನಲ್ ಸುತ್ತು ಆರಂಭವಾಗಲಿದ್ದು, ಮೊದಲ ಮತ್ತು ಎರಡನೇ ಕ್ವಾರ್ಟರ್ ಫೈನಲ್ ಪಂದ್ಯಗಳು ಆಗಸ್ಟ್ 11 ರಂದು ಮತ್ತು ಮೂರು ಮತ್ತು ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯಗಳು ಆಗಸ್ಟ್ 12 ರಂದು ನಡೆಯಲಿವೆ.

ಮೊದಲ ಸೆಮಿಫೈನಲ್ ಪಂದ್ಯ ಆಗಸ್ಟ್ 15 ರಂದು ಮತ್ತು ಎರಡನೇ ಸೆಮಿಫೈನಲ್ ಪಂದ್ಯ ಆಗಸ್ಟ್ 16 ರಂದು ನಡೆಯಲಿದೆ. ಮೂರನೇ ಸ್ಥಾನಕ್ಕಾಗಿ ಆಗಸ್ಟ್ 19 ರಂದು ಪಂದ್ಯ ನಡೆಯಲಿದೆ. ಬಳಿಕ ಫೈನಲ್ ಪಂದ್ಯ ಆಗಸ್ಟ್ 20ರಂದು ನಡೆಯಲ್ಲಿದೆ.

ಭಾರತದಲ್ಲಿ ವೀಕ್ಷಿಸುವುದು ಹೇಗೆ?

ದೂರದರ್ಶನದಲ್ಲಿ ಮಹಿಳಾ ಫಿಫಾ ವಿಶ್ವಕಪ್ ಪಂದ್ಯಗಳನ್ನು ಭಾರತದಾದ್ಯಂತ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ. ಫ್ಯಾನ್‌ಕೋಡ್​ನಲ್ಲಿ ಪಂದ್ಯಗಳನ್ನು ಇಂಟರ್ನೆಟ್‌ನಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:01 am, Thu, 20 July 23

ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್