AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಲ್ಪ ಸಂಬಳದಲ್ಲಿ ಬದುಕುವುದು ಹೇಗೆ? ಭಾರತ ಮಹಿಳಾ ಫುಟ್ಬಾಲ್ ಬಗ್ಗೆ ಪದ್ಮಶ್ರೀ ಬೆಂಬೆಮ್ ದೇವಿ ಕಳವಳ

ಕ್ಲಬ್‌ಗಳು ಮತ್ತು ಟೂರ್ನಮೆಂಟ್‌ಗಳನ್ನು ಪ್ರಾಯೋಜಿಸಲು ದೊಡ್ಡ ಕಂಪನಿಗಳು ಮುಂದೆ ಬಂದರೆ, ಮಹಿಳಾ ಆಟಗಾರರು ಉತ್ತಮ ಸಂಬಳವನ್ನು ಪಡೆಯಲು ಪ್ರಾರಂಭಿಸುತ್ತಾರೆ ಮತ್ತು ಪುರುಷ ಆಟಗಾರರಂತೆ ಅವರೂ ಫುಟ್‌ಬಾಲ್‌ನಲ್ಲಿ ವೃತ್ತಿಜೀವನವನ್ನು ಹೊಂದುತ್ತಾರೆ ಎಂದು ಹೇಳಿದರು.

ಸ್ವಲ್ಪ ಸಂಬಳದಲ್ಲಿ ಬದುಕುವುದು ಹೇಗೆ? ಭಾರತ ಮಹಿಳಾ ಫುಟ್ಬಾಲ್ ಬಗ್ಗೆ ಪದ್ಮಶ್ರೀ ಬೆಂಬೆಮ್ ದೇವಿ ಕಳವಳ
ಪದ್ಮಶ್ರೀ ಬೆಂಬೆಮ್ ದೇವಿ
TV9 Web
| Updated By: ಪೃಥ್ವಿಶಂಕರ|

Updated on: Nov 12, 2021 | 9:20 PM

Share

ಕ್ರಿಕೆಟಿಗರ ಮೇಲೆ ಕೋಟಿ ಕೋಟಿ ಹಣದ ಸುರಿಮಳೆಯಾಗುವ ಕ್ರಿಕೆಟ್ ಪ್ರೇಮಿ ದೇಶದಲ್ಲಿ ಮತ್ತೊಂದೆಡೆ ಇತರೆ ಕ್ರೀಡೆಗಳಿಗೆ ಸಂಬಂಧಿಸಿದ ಆಟಗಾರರು ಹಣ ಮತ್ತು ಅವಕಾಶಗಳಿಗಾಗಿ ಜಗಳವಾಡುತ್ತಲೇ ಇರುತ್ತಾರೆ. ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಕ್ರೀಡೆಯಾದ ಫುಟ್‌ಬಾಲ್ ಭಾರತದಲ್ಲಿ ಕೆಟ್ಟ ಸ್ಥಿತಿಯಲ್ಲಿದೆ. ಪುರುಷರ ತಂಡದ ಆಟಗಾರರಿಗೆ ರಸ್ತೆ ಕೊಂಚ ಸುಲಭವಾಗಿದೆ. ಆದರೆ ಮಹಿಳೆಯರಿಗೆ ಈ ಆಟದಲ್ಲಿ ಭವಿಷ್ಯವನ್ನು ನೋಡುವುದು ತುಂಬಾ ಕಷ್ಟಕರವಾಗಿದೆ. ಇದಕ್ಕೆ ದೊಡ್ಡ ಕಾರಣವೆಂದರೆ ಅವಕಾಶಗಳ ಕೊರತೆ ಮತ್ತು ಕಡಿಮೆ ಸಂಬಳ.

ಇಂತಹ ಪರಿಸ್ಥಿತಿಯಲ್ಲಿ, ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಮಹಿಳಾ ಫುಟ್ಬಾಲ್ ಆಟಗಾರ್ತಿ ಬೆಂಬೆಮ್ ದೇವಿ ಅವರು ಶುಕ್ರವಾರ ಸಹ ಆಟಗಾರರ ಆರ್ಥಿಕ ದುಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಕ್ಲಬ್‌ಗಳು ಮತ್ತು ಪಂದ್ಯಾವಳಿಗಳನ್ನು ಪ್ರಾಯೋಜಿಸಲು ಕಾರ್ಪೊರೇಟ್ ಜಗತ್ತನ್ನು ಅವರು ಒತ್ತಾಯಿಸಿದರು. 1995 ರಿಂದ 2016 ರವರೆಗೆ ಭಾರತಕ್ಕಾಗಿ 85 ಪಂದ್ಯಗಳನ್ನು ಆಡಿರುವ ಬೆಂಬೆಮ್ ದೇವಿ ಅವರು ಕ್ಲಬ್‌ಗಳು ಮತ್ತು ಟೂರ್ನಮೆಂಟ್‌ಗಳನ್ನು ಪ್ರಾಯೋಜಿಸಲು ದೊಡ್ಡ ಕಂಪನಿಗಳು ಮುಂದೆ ಬಂದರೆ, ಮಹಿಳಾ ಆಟಗಾರರು ಉತ್ತಮ ಸಂಬಳವನ್ನು ಪಡೆಯಲು ಪ್ರಾರಂಭಿಸುತ್ತಾರೆ ಮತ್ತು ಪುರುಷ ಆಟಗಾರರಂತೆ ಅವರೂ ಫುಟ್‌ಬಾಲ್‌ನಲ್ಲಿ ವೃತ್ತಿಜೀವನವನ್ನು ಹೊಂದುತ್ತಾರೆ ಎಂದು ಹೇಳಿದರು.

ಮಹಿಳೆಯರ ಸಂಬಳದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ ತಮ್ಮ 21 ವರ್ಷಗಳ ವೃತ್ತಿಜೀವನದಲ್ಲಿ ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿದ್ದ 41 ವರ್ಷದ ದೇವಿ, ವಿಶೇಷವಾಗಿ ಖಾಸಗಿ ಕಂಪನಿಗಳು ಮಹಿಳಾ ಫುಟ್‌ಬಾಲ್‌ನಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಇದರಿಂದ ಮಹಿಳೆಯರು ಪುರುಷರಂತೆ ಕ್ರೀಡೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಪ್ರೋತ್ಸಾಹಿಸಬೇಕು. ಇಂಡಿಯನ್ ವುಮೆನ್ಸ್ ಲೀಗ್‌ನಲ್ಲಿ (ಐಡಬ್ಲ್ಯುಎಲ್) ಕ್ಲಬ್‌ಗಾಗಿ ಆಡುವ ಮಹಿಳಾ ಆಟಗಾರರಿಗೆ ಉತ್ತಮ ಹಣ ಸಿಗುವುದಿಲ್ಲ. ಅವರು (ಕ್ಲಬ್ ಮಾಲೀಕರು) ಯಾವಾಗಲೂ ಆಟಗಾರರನ್ನು ಸಣ್ಣ ಮೊತ್ತವನ್ನು ತೆಗೆದುಕೊಳ್ಳುವಂತೆ ಕೇಳುತ್ತಾರೆ. ರೂ 50,000 ಅಥವಾ ರೂ 60,000. ನೀಡುತ್ತಾರೆ. ಈ ಮೊತ್ತವು ವಾಸ್ತವವಾಗಿ ತುಂಬಾ ಕಡಿಮೆ ಇದೆ ಎಂದಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಭಾರತೀಯ ಫುಟ್‌ಬಾಲ್‌ನ ‘ದುರ್ಗಾ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಓಣಂ ಬೆಂಬೆಮ್ ದೇವಿ, ಪದ್ಮಶ್ರೀ ಪಡೆದ ಮೊದಲ ಭಾರತೀಯ ಮಹಿಳಾ ಫುಟ್‌ಬಾಲ್ ಆಟಗಾರ್ತಿ ಮತ್ತು ಒಟ್ಟಾರೆ ಏಳನೇ ಫುಟ್‌ಬಾಲ್ ಆಟಗಾರ್ತಿ. ಇಂಡಿಯನ್ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ತಮ್ಮ ಹೇಳಿಕೆಯಲ್ಲಿ, ಇದು ಭಾರತೀಯ ಫುಟ್‌ಬಾಲ್‌ಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಬೆಂಬೆಮ್ ದೇವಿ ಭಾರತೀಯ ಫುಟ್‌ಬಾಲ್‌ಗೆ ಮಾದರಿಯಾಗಿದ್ದಾರೆ ಮತ್ತು ವರ್ಷಗಳಿಂದ ಭಾರತಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹೆಚ್ಚಿನ ಹುಡುಗಿಯರು ಅವರಿಂದ ಸ್ಫೂರ್ತಿ ಪಡೆದು ಭಾರತೀಯ ಮಹಿಳಾ ಫುಟ್‌ಬಾಲ್ ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ