ಯಾವ ವಯಸ್ಸಿನಲ್ಲಿ ಜನರು ವಿಶ್ರಾಂತಿ ಪಡೆಯಬೇಕೆಂದು ಸಲಹೆ ನೀಡುತ್ತಾರೋ, ಆ ವಯಸ್ಸಿನಲ್ಲಿ, ಭಾರತೀಯ ಅಥ್ಲೀಟ್ ವಿದೇಶಿ ನೆಲದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. 94 ನೇ ವಯಸ್ಸಿನಲ್ಲಿ, ಭಗವಾನ್ ದೇವಿ ದಾಗರ್ (Bhagwan Devi Dagar) ಎಂಬ ಅಜ್ಜಿ, ಫಿನ್‌ಲ್ಯಾಂಡ್‌ನಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಅವರು ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 (World Masters Athletics Championships 2022)ರಲ್ಲಿ ಹಿರಿಯ ನಾಗರಿಕರ ವಿಭಾಗದಲ್ಲಿ ಒಂದು ಚಿನ್ನ ಸೇರಿದಂತೆ 3 ಪದಕಗಳನ್ನು ಗೆದ್ದಿದ್ದಾರೆ. ಭಗವಾನ್ ದೇವಿ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದರೆ, ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 100 ಮೀಟರ್ ಓಟವನ್ನು 24.74 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಭಾರತದ ಬ್ಯಾಗ್‌ಗೆ ಚಿನ್ನವನ್ನು ಹಾಕಿದ್ದಾರೆ.
ವಯಸ್ಸು ಅಡ್ಡಿಯಿಲ್ಲ
ಟ್ವೀಟ್‌ನಲ್ಲಿ ಕ್ರೀಡಾ ಸಚಿವಾಲಯ ಭಗವಾನಿ ದೇವಿ ಅವರನ್ನು ಹೊಗಳಿದ್ದು, ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅವರು ಈ ಹಿಂದೆ ದೆಹಲಿ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟ, ಶಾಟ್‌ಪುಟ್ ಮತ್ತು ಜಾವೆಲಿನ್ ಎಸೆತದಲ್ಲಿ 3 ಚಿನ್ನದ ಪದಕಗಳನ್ನು ಗೆದ್ದಿದ್ದರು ಎಂಬುದನ್ನು ಸಹ ಉಲ್ಲೇಖಿಸಿದ್ದಾರೆ.
India's 94-year-old #BhagwaniDevi Ji has yet again proved that age is no bar!
She won a GOLD medal at the #WorldMastersAthleticsChampionships in Tampere in the 100m sprint event with a timing of 24.74 seconds.?She also bagged a BRONZE in Shot put.
Truly commendable effort!? pic.twitter.com/Qa1tI4a8zS
— Dept of Sports MYAS (@IndiaSports) July 11, 2022
‘ಕಡಿಮೆ ಇಲ್ಲ ಅಜ್ಜಿ’
ಭಗವಾನಿ ದೇವಿಯ ಮೊಮ್ಮಗ ವಿಕಾಸ್ ದಾಗರ್ ಪ್ಯಾರಾ ಅಥ್ಲೀಟ್ ಆಗಿದ್ದು, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈಗ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅವರ ಧೈರ್ಯ ಮತ್ತು ಉತ್ಸಾಹವನ್ನು ಇಡೀ ದೇಶ ಕೊಂಡಾಡುತ್ತಿದೆ. ನಮ್ಮ ಅಜ್ಜಿ ಯಾರಿಗೂ ಕಡಿಮೆ ಇಲ್ಲ ಎನ್ನುತ್ತಾರೆ ಅಭಿಮಾನಿಗಳು. ಅವರ ವಿಶ್ವಾಸವನ್ನು ನೋಡಿ ಎಂದು ಮಾಜಿ ಕ್ಯಾಬಿನೆಟ್ ಸಚಿವ ಅಸ್ಲಾಂ ಶೇಖ್ ಹೇಳಿಕೊಂಡು ಅಜ್ಜಿಯನ್ನು ಹೊಗಳಿದ್ದಾರೆ.