IPL Auction 2021: ಹರಾಜಿನಲ್ಲಿ ಯಾರೂ ಖರೀದಿಸಲಿಲ್ಲ, ಹಾಗಂತ ನನಗೆ ಆಶ್ಚರ್ಯವೂ ಆಗಲಿಲ್ಲ: ಆರನ್ ಫಿಂಚ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 21, 2021 | 7:16 PM

IPL Auction 2021: ಕಳೆದ ಕೆಲವು ವಾರಗಳಿಂದ ಆಸ್ಟ್ರೇಲಿಯಾದ ಟಿ 20 ತಂಡದ ನಾಯಕ ಆರನ್ ಫಿಂಚ್‌ಗೆ ಅದೃಷ್ಟ ಸರಿಯಾಗಿಯೇ ಕೈಕೊಟ್ಟಿದೆ. ಭಾರತ ವಿರುದ್ಧದ ಟಿ 20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಸೋತಿದೆ.

IPL Auction 2021: ಹರಾಜಿನಲ್ಲಿ ಯಾರೂ ಖರೀದಿಸಲಿಲ್ಲ, ಹಾಗಂತ ನನಗೆ ಆಶ್ಚರ್ಯವೂ ಆಗಲಿಲ್ಲ: ಆರನ್ ಫಿಂಚ್
ಆರನ್ ಫಿಂಚ್‌
Follow us on

ಕಳೆದ ಕೆಲವು ವಾರಗಳಿಂದ ಆಸ್ಟ್ರೇಲಿಯಾದ ಟಿ 20 ತಂಡದ ನಾಯಕ ಆರನ್ ಫಿಂಚ್‌ಗೆ ಅದೃಷ್ಟ ಸರಿಯಾಗಿಯೇ ಕೈಕೊಟ್ಟಿದೆ. ಭಾರತ ವಿರುದ್ಧದ ಟಿ 20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಸೋತಿದೆ. ಅದಾದ ನಂತರ, ಬಿಗ್ ಬ್ಯಾಷ್ ಲೀಗ್‌ ಪಂದ್ಯಾವಳಿಯಲ್ಲಿಅವರ ನೇತೃತ್ವದ ತಂಡವಾದ ಮೆಲ್ಬೋರ್ನ್ ರೆನೆಗೇಡ್ಸ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಲೀಗ್ ಸುತ್ತಿನಲ್ಲಿಯೇ ಸರಣಿಯಿಂದ ಹೊರಬಿದ್ದಿತು. ಫಿಂಚ್ ಕೂಡ ಆ ಸರಣಿಯಲ್ಲಿ ಉತ್ತಮವಾಗಿ ಆಡಲಿಲ್ಲ. ಜೊತೆಗೆ ಐಪಿಎಲ್ 2021 ರ ಹರಾಜಿನಲ್ಲಿ ಯಾವುದೇ ಫ್ರ್ಯಾಂಚೈಸ್ ಸಹ ಅವರನ್ನು ಖರೀದಿಸಲು ಮುಂದೆ ಬರಲಿಲ್ಲ.

ವಿಶ್ವದ ಮೂರನೇ ನಂಬರ್ ಬ್ಯಾಟ್ಸ್‌ಮನ್ ಫಿಂಚ್..
ಐಸಿಸಿ ಟಿ 20 ಶ್ರೇಯಾಂಕದಲ್ಲಿ ವಿಶ್ವದ ಮೂರನೇ ನಂಬರ್ ಬ್ಯಾಟ್ಸ್‌ಮನ್ ಫಿಂಚ್ ಅವರನ್ನು ಕಳೆದ ತಿಂಗಳು ಐಪಿಎಲ್ ಫ್ರ್ಯಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಿತು. 2019 ರ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಫಿಂಚ್‌ನ್ನು ಆರ್‌ಸಿಬಿ 4 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಯುಎಇಯಲ್ಲಿ ಆಡಿದ ಐಪಿಎಲ್ 2020 ಆವೃತ್ತಿಯಲ್ಲಿ ಅವರ ಸಾಧನೆ ನಿರೀಕ್ಷೆಯಂತೆ ಇರಲಿಲ್ಲ. ಆರ್‌ಸಿಬಿ ಪರ ಫಿಂಚ್ 12 ಪಂದ್ಯಗಳಲ್ಲಿ ಕೇವಲ 268 ರನ್​ಗಳನ್ನಷ್ಟೇ ಗಳಿಸಲು ಶಕ್ತರಾದರು.

ಮತ್ತೆ ಐಪಿಎಲ್‌ನಲ್ಲಿ ಆಡಲು ಬಯಸುತ್ತೇನೆ..
ಫಿಂಚ್ ಪ್ರಸ್ತುತ ಆಸ್ಟ್ರೇಲಿಯಾ ತಂಡದೊಂದಿಗೆ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ಅಲ್ಲಿ 5 ಪಂದ್ಯಗಳ ಟಿ 20 ಸರಣಿಯು ಸೋಮವಾರದಿಂದ (ಫೆ.22) ಉಭಯ ತಂಡಗಳ ನಡುವೆ ಪ್ರಾರಂಭವಾಗಲಿದೆ. ಸರಣಿ ಪ್ರಾರಂಭವಾಗುವ ಮೊದಲು, ಅಂದ್ರೆ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಫಿಂಚ್ ಐಪಿಎಲ್ ಹರಾಜಿನಲ್ಲಿ ಆಯ್ಕೆಯಾಗದಿರುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಐಪಿಎಲ್‌ನಲ್ಲಿ ಮತ್ತೆ ಆಡಲು ನಾನು ಬಯಸುತ್ತೇನೆ. ಇದು ಒಂದು ದೊಡ್ಡ ಸ್ಪರ್ಧೆ. ನಿಜ ಹೇಳಬೇಕೆಂದರೆ, ನನ್ನನ್ನು ಯಾವುದೇ ತಂಡ ಖರೀದಿಸದೆ ಇರುವುದು ನನಗೆ ಆಶ್ಚರ್ಯವೇನಿಸಿಲ್ಲ. ನಾನು ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ. ಆದರೆ ಮನೆಯಲ್ಲಿ ಸ್ವಲ್ಪ ಸಮಯ ಕಳೆಯುವುದು ಸಹ ಅಂತಹ ಕೆಟ್ಟ ವಿಷಯವಲ್ಲ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

ಮನೆಯಲ್ಲಿದ್ದುಕೊಂಡೆ ಮುಂದಿನ ತಯಾರಿ..
ಈ ಸಮಯವನ್ನು ಬಳಸಿಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯಲು ಮತ್ತು ಮುಂದಿನ ಸರಣಿಗೆ ತಯಾರಿ ನಡೆಸಲು ಸಾಧ್ಯವಾಗುತ್ತದೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಹೇಳಿದರು. ಅಲ್ಲದೆ ಆಗಸ್ಟ್‌ನಿಂದ ತಮ್ಮ ತಂಡದ ವೇಳಾಪಟ್ಟಿ ತುಂಬಾ ಬ್ಯುಸಿಯಾಗಿರಲಿದೆ ಹೀಗಾಗಿ ಈ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ: IPL 2021 Auction | ಹರಾಜಿನಲ್ಲಿ ಮಾರಾಟವಾಗದ ನೋವಿನಲ್ಲಿ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಆಸಿಸ್​ ನಾಯಕ ಫಿಂಚ್