AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈದಾನದಲ್ಲಿ ವಿರಾಟ ರೂಪಿಯ ಕೊಹ್ಲಿ ತಮ್ಮ ಮನೆಯಲ್ಲಿ ಯಾವುದೇ ಕೆಲಸದಾಳುಗಳನ್ನು ಇಟ್ಕೊಂಡಿಲ್ಲವಂತೆ!

Virat Kohli Household Chores | ಮನೆಯಲ್ಲಿ ಕೆಲಸ ಮಾಡೋಕೆ ಕ್ಯಾಪ್ಟನ್​ ಕೊಹ್ಲಿ ಯಾರನ್ನೂ ಇಟ್ಟುಕೊಂಡಿಲ್ಲ. ಹೀಗಾಗಿ, ಬಂದ ಅತಿಥಿಗಳಿಗೆ ವಿರಾಟ್​ ಹಾಗೂ ಅವರ ಪತ್ನಿಯೇ ಊಟ ಬಡಿಸಿದ್ದರು. ವಿರಾಟ್​ ಬಗ್ಗೆ ಎಲ್ಲಾ ಆಟಗಾರರು ಗೌರವ ಹೊಂದಿದ್ದಾರೆ. ಕೊಹ್ಲಿ ತುಂಬಾನೇ ವಿನಮ್ರವಾಗಿ ನಡೆದುಕೊಳ್ಳುತ್ತಾರೆ ಎಂದು ಸರಂದೀಪ್  ಹೇಳಿದ್ದಾರೆ.

ಮೈದಾನದಲ್ಲಿ ವಿರಾಟ ರೂಪಿಯ ಕೊಹ್ಲಿ ತಮ್ಮ ಮನೆಯಲ್ಲಿ ಯಾವುದೇ ಕೆಲಸದಾಳುಗಳನ್ನು ಇಟ್ಕೊಂಡಿಲ್ಲವಂತೆ!
ರಾಜೇಶ್ ದುಗ್ಗುಮನೆ
| Edited By: ಸಾಧು ಶ್ರೀನಾಥ್​|

Updated on: Feb 22, 2021 | 3:15 PM

Share

ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅನೇಕ ಪ್ರಮುಖ ಪಂದ್ಯಗಳನ್ನು ಗೆಲ್ಲಿಸಿದ ಖ್ಯಾತಿ ವಿರಾಟ್​ ಕೊಹ್ಲಿ ಅವರಿಗಿದೆ. ಇನ್ನು, ವಿರಾಟ್​ ಯಾವಾಗಲೂ ತುಂಬಾನೇ ಅತ್ಯುತ್ಸಾಹದೊಂದಿಗೆ ಮೈದಾನಕ್ಕೆ ಇಳಿಯುತ್ತಾರೆ. ಅವರು ಕೆಲವೊಮ್ಮೆ ಮೈದಾನದಲ್ಲಿ ತೋರುವ ಸಿಟ್ಟು ಅನೇಕರಿಗೆ ಇಷ್ಟವಾಗುವುದಿಲ್ಲ. ಇಂತಹ ವಿರಾಟ್​ ಕೊಹ್ಲಿ ಬಗ್ಗೆ ಈಗ ಅಚ್ಚರಿಯ ವಿಚಾರ ಒಂದು ಹೊರ ಬಿದ್ದಿದೆ. ಅದೇನೆಂದರೆ, ವಿರಾಟ್​ ಮನೆಯಲ್ಲಿ ಕೆಲಸ (Household Chores) ಮಾಡೋಕೆ ಯಾರೊಬ್ಬರೂ ಇಲ್ಲವಂತೆ! ವಿರಾಟ್​ ಹಾಗೂ ಅನುಷ್ಕಾನೇ ಎಲ್ಲ ಕೆಲಸವನ್ನೂ ಮಾಡುತ್ತಾರಂತೆ! ಟೀಂ ಇಂಡಿಯಾ ಮಾಜಿ ಸೆಲೆಕ್ಟರ್ ಸರಂದೀಪ್ ಸಿಂಗ್ ಅವರು ಕುತೂಹಲಕಾರಿ ವಿಚಾರವನ್ನು ಬಹಿರಂಗ ಮಾಡಿದ್ದಾರೆ. ಭಾರತಕ್ಕಾಗಿ 3 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ ಮಾಜಿ ಬ್ಯಾಟ್ಸ್‌ಮನ್ ಮತ್ತು ಬೌಲರ್ ಸರಂದೀಪ್ ಅವರು ಕೊಹ್ಲಿ ಮನೆಗೆ ತೆರಳಿದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

ಮನೆಯಲ್ಲಿ ಕೆಲಸ ಮಾಡೋಕೆ ಕೊಹ್ಲಿ ಯಾರನ್ನೂ ಇಟ್ಟುಕೊಂಡಿಲ್ಲ. ಹೀಗಾಗಿ, ಬಂದ ಅತಿಥಿಗಳಿಗೆ ವಿರಾಟ್​ ಹಾಗೂ ಅವರ ಪತ್ನಿಯೇ ಊಟ ಬಡಿಸಿದ್ದರು. ವಿರಾಟ್​ ಬಗ್ಗೆ ಎಲ್ಲಾ ಆಟಗಾರರು ಗೌರವ ಹೊಂದಿದ್ದಾರೆ. ಕೊಹ್ಲಿ ತುಂಬಾನೇ ವಿನಮ್ರವಾಗಿ ನಡೆದುಕೊಳ್ಳುತ್ತಾರೆ ಎಂದು ಸರಂದೀಪ್  ಹೇಳಿದ್ದಾರೆ.

ವಿರಾಟ್​ ಅಗ್ರೆಸ್ಸಿವ್​ನೆಸ್​ ಬಗ್ಗೆ ಮಾತನಾಡಿರುವ ಸರಂದೀಪ್​​, ವಿರಾಟ್​ ಕ್ಯಾಪ್ಟನ್ ಆಗಿರುವುದರಿಂದ ಅವರು ಅಗ್ರೆಸ್ಸಿವ್​ ಆಗಿ ಇರಬೇಕು. ಅವರು ಯಾವುದೇ ಒತ್ತಡ ಇದ್ದರೂ ಅದನ್ನು ನಿಭಾಯಿಸುತ್ತಾರೆ ಮತ್ತು ಆ ಕ್ಷಣದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ-ಅನುಷ್ಕಾ ದಂಪತಿ ಜನವರಿ ತಿಂಗಳಲ್ಲಿ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು. ಈ ಕಾರಣಕ್ಕೆ ವಿರಾಟ್​ ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್​ ಮಾತ್ರ ಆಡಿ ಭಾರತಕ್ಕೆ ವಾಪಾಸಾಗಿದ್ದರು. ಹೆಣ್ಣು ಮಗು ಜನಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರಾಟ್​ ಕೊಹ್ಲಿ ಹೇಳಿಕೊಂಡಿದ್ದರು. ಮಗಳಿಗೆ ವಮಿಕಾ ಎಂದು ನಾಮಕರಣ ಮಾಡಲಾಗಿತ್ತು.

ಸದ್ಯ, ವಿರಾಟ್​ ಇಂಗ್ಲೆಂಡ್​ ವಿರುದ್ಧದದ ಟೆಸ್ಟ್​ಗೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಟೆಸ್ಟ್​ ಇಂಗ್ಲೆಂಡ್​ ಗೆದ್ದರೆ, ಎರಡನೇ ಟೆಸ್ಟ್​​ಅನ್ನು ಟೀಂ ಇಂಡಿಯಾ ವಶಪಡಿಸಿಕೊಂಡಿದೆ. ಮೂರನೇ ಟೆಸ್ಟ್​ 24ರಿಂದ ಅಹ್ಮದಾಬಾದ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ: IPL Auction 2021: ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​​ ಜತೆ ಆಡಲು ಕಾತುರನಾಗಿದ್ದೇನೆ: ಗ್ಲೆನ್ ಮ್ಯಾಕ್ಸ್​ವೆಲ್

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More