India vs England: 100ನೇ ಟೆಸ್ಟ್​ ಆಡುವ ತವಕದಲ್ಲಿ ಇಶಾಂತ್​ ಶರ್ಮಾ, ಕಪಿಲ್ ದೇವ್ ನಂತರ ಈ ಸಾಧನೆ ಮಾಡಿದ 2ನೇ ಆಟಗಾರ

India vs England: ದೇಶಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡುವ ಕೊನೆಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಇಶಾಂತ್ ಪಾತ್ರರಾಗಲಿದ್ದಾರೆ ಎಂಬುದು ಇಶಾಂತ್​ ಅವರ ತರಬೇತುದಾರ ವಿಜಯ್ ದಹಿಯಾ ಅಭಿಪ್ರಾಯ.

India vs England: 100ನೇ ಟೆಸ್ಟ್​ ಆಡುವ ತವಕದಲ್ಲಿ ಇಶಾಂತ್​ ಶರ್ಮಾ, ಕಪಿಲ್ ದೇವ್ ನಂತರ ಈ ಸಾಧನೆ ಮಾಡಿದ 2ನೇ ಆಟಗಾರ
ಇಶಾಂತ್​ ಶರ್ಮಾ
Follow us
ಪೃಥ್ವಿಶಂಕರ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 21, 2021 | 4:49 PM

ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಇಶಾಂತ್ ಶರ್ಮಾ ಇತಿಹಾಸ ನಿರ್ಮಿಸುವ ಹಾದಿಯಲ್ಲಿದ್ದಾರೆ. ಟೀಮ್ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳನ್ನು ಆಡಲು ಅವರು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ. ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್ ಮೂಲಕ ಅವರು 99 ಟೆಸ್ಟ್ ಪಂದ್ಯಗಳ ಪ್ರಯಾಣವನ್ನು ಪೂರ್ಣಗೊಳಿಸಿದರು. ಅಹಮದಾಬಾದ್‌ನಲ್ಲಿ ನಡೆಯಲಿರುವ ಡೇ ನೈಟ್ ಟೆಸ್ಟ್ ಪಂದ್ಯದಿಂದ ಇಶಾಂತ್ ಶರ್ಮಾ ಈಗ ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಲಿದ್ದಾರೆ.

100 ಟೆಸ್ಟ್ ಪಂದ್ಯಗಳನ್ನು ಆಡುವ ಕೊನೆಯ ವೇಗದ ಬೌಲರ್.. ಕಪಿಲ್ ದೇವ್ ನಂತರ ಭಾರತಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡುವ ಎರಡನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಇಶಾಂತ್ ಶರ್ಮಾ ಪಾತ್ರರಾಗಿದ್ದಾರೆ. ಈ ವೇಳೆ ದೇಶಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡುವ ಕೊನೆಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಇಶಾಂತ್ ಪಾತ್ರರಾಗಲಿದ್ದಾರೆ ಎಂದು ಇಶಾಂತ್​ ಅವರ ತರಬೇತುದಾರ ವಿಜಯ್ ದಹಿಯಾ ಅಭಿಪ್ರಾಯಪಟ್ಟಿದ್ದಾರೆ.

‘100 ಟೆಸ್ಟ್ ಪಂದ್ಯಗಳನ್ನು ಆಡುವ ಕೊನೆಯ ಭಾರತದ ವೇಗದ ಬೌಲರ್ ಇಶಾಂತ್. ಬೇರೆಯವರಿಗೆ ಇಷ್ಟು ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಹೆಚ್ಚಿನ ವೇಗದ ಬೌಲರ್‌ಗಳು ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಮತ್ತು ಸೀಮಿತ ಓವರ್ ಪಂದ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈಗಿನ ಬೌಲರ್​ಗಳು ಭಾರತಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡಲು ತುಂಬಾ ಕಷ್ಟವಾಗುತ್ತದೆ’ ನಾನು ಎಂದು ಅವರು ತಿಳಿಸಿದರು.

79 ಟೆಸ್ಟ್ ಪಂದ್ಯಗಳಲ್ಲಿ 226 ವಿಕೆಟ್ ಪಡೆದರು.. 17 ವರ್ಷದೊಳಗಿನವರಲ್ಲಿಯೂ ಅವರು ತುಂಬಾ ಎತ್ತರವಾಗಿದ್ದರು ಮತ್ತು ತುಂಬಾ ವೇಗವಾಗಿ ಬೌಲಿಂಗ್ ಮಾಡುತ್ತಿದ್ದರು. 2008 ರಲ್ಲಿ ವಿರಾಟ್ ನೇತೃತ್ವದಲ್ಲಿ ನಾವು ಅಂಡರ್-19 ವಿಶ್ವಕಪ್ ಗೆಲ್ಲುವ ಹೊತ್ತಿಗೆ, ಇಶಾಂತ್ ಟೆಸ್ಟ್ ಆಟಗಾರನಾಗಿದ್ದ ಎಂದು ದೆಹಲಿ ತಂಡದ ನಾಯಕ ಪ್ರದೀಪ್​ ಸಂಗ್ವಾನ್​ ಹೇಳಿದರು.

ಇಶಾಂತ್ ತಮ್ಮ ಮೊದಲ 79 ಟೆಸ್ಟ್ ಪಂದ್ಯಗಳಲ್ಲಿ 226 ವಿಕೆಟ್ ಪಡೆದರು ಆದರೆ ಕಳೆದ 20 ಪಂದ್ಯಗಳಲ್ಲಿ 76 ವಿಕೆಟ್ ಪಡೆದಿದ್ದಾರೆ. ಈ ದೆಹಲಿ ವೇಗದ ಬೌಲರ್ ತಂಡದ ಅಗತ್ಯಗಳಿಗೆ ತಕ್ಕಂತೆ ತನ್ನನ್ನು ರೂಪಿಸಿಕೊಂಡಿದ್ದಾನೆ ಎಂದು ತೋರುತ್ತದೆ ಎಂದು ದಹಿಯಾ ಹೇಳಿದರು. ಇಶಾಂತ್ ಶರ್ಮಾರನ್ನು ಮಹೇಂದ್ರ ಸಿಂಗ್ ಧೋನಿ ರಕ್ಷಣಾತ್ಮಕ ಬೌಲರ್ ಆಗಿ ಬಳಸಿಕೊಂಡರು. ಅಲ್ಲದೆ ನಿಮ್ಮ ನಾಯಕನಿಗೆ ಏನು ಬೇಕು ಎಂದು ತಿಳಿಯುವುದು ಮತ್ತು ಅದಕ್ಕೆ ತಕ್ಕಂತೆ ನಡೆಯುವುದು ಅವಶ್ಯಕವಾದ ಅಂಶವಾಗಿರುತ್ತದೆ. ಇದನ್ನು ಇಶಾಂತ್ ಶರ್ಮಾ ಮಾಡಿದ್ದರಿಂದಲ್ಲೇ ಇಷ್ಟು ದಿನ ತಂಡದಲ್ಲಿ ಉಳಿದಿದ್ದಾನೆ ಎಂದರು.

ಇದನ್ನೂ ಓದಿ:India vs England: ಇಂಗ್ಲೆಂಡ್ ವಿರುದ್ಧದ ಕೊನೆಯ 2 ಪಂದ್ಯಗಳಿಗೆ ಭಾರತ ತಂಡ ಪ್ರಕಟ