WTC Final: ಮೊದಲ ಸೆಷನ್ ಮುಕ್ತಾಯ; ಭಾರತಕ್ಕೆ ಆರಂಭಿಕ ಆಘಾತ! ರೋಹಿತ್- ಗಿಲ್ ಔಟ್

WTC Final: ಮೊದಲ ಸೆಷನ್ ಆಟ ಮುಗಿದಿದೆ. ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಅವರ 62 ರನ್‌ಗಳ ಆರಂಭಿಕ ಪಾಲುದಾರಿಕೆಯ ಆಧಾರದ ಮೇಲೆ ಭಾರತ ಈ ಸೆಷನ್​ನನ್ನು ಮೊದಲ ಒಂದೂವರೆ ಗಂಟೆಗಳ ಕಾಲ ತಮ್ಮ ವಶದಲ್ಲಿರಿಸಿಕೊಂಡಿತು.

WTC Final: ಮೊದಲ ಸೆಷನ್ ಮುಕ್ತಾಯ; ಭಾರತಕ್ಕೆ ಆರಂಭಿಕ ಆಘಾತ! ರೋಹಿತ್- ಗಿಲ್ ಔಟ್
ಶುಭ್​ಮನ್ ಗಿಲ್

Updated on: Jun 19, 2021 | 5:19 PM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅಂತಿಮವಾಗಿ ಇಂದು ಪ್ರಾರಂಭವಾಗಿದೆ. ಇದು ಜೂನ್ 18 ಶುಕ್ರವಾರದಿಂದ ಸೌತಾಂಪ್ಟನ್ನಲ್ಲಿ ಪ್ರಾರಂಭವಾಗಬೇಕಿತ್ತು, ಆದರೆ ಮೊದಲ ದಿನ ಮಳೆಯಿಂದಾಗಿ ಸಂಪೂರ್ಣವಾಗಿ ರದ್ದಾಯಿತು. ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಭಾರತ ತಂಡದ ಆಡುವ ಇಲೆವೆನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ರೋಹಿತ್ ಶರ್ಮಾ-ಶುಬ್ಮನ್ ಗಿಲ್ ಜೋಡಿ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಓಪನ್ ಮಾಡಿತು ಮತ್ತು ಇಬ್ಬರೂ ಉತ್ತಮ ಆರಂಭವನ್ನು ನೀಡಿ 62 ರನ್ ಸೇರಿಸಿದರು. ಆದರೆ, ಮೊದಲ ಸೆಷನ್‌ನ ಕೊನೆಯ ಅರ್ಧ ಘಂಟೆಯಲ್ಲಿ ಭಾರತ ಎರಡೂ ವಿಕೆಟ್‌ಗಳನ್ನು ಕಳೆದುಕೊಂಡಿತು.

62 ರನ್‌ಗಳ ಆರಂಭಿಕ ಪಾಲುದಾರಿಕೆ
ಮೊದಲ ಸೆಷನ್ ಆಟ ಮುಗಿದಿದೆ. ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಅವರ 62 ರನ್‌ಗಳ ಆರಂಭಿಕ ಪಾಲುದಾರಿಕೆಯ ಆಧಾರದ ಮೇಲೆ ಭಾರತ ಈ ಸೆಷನ್​ನನ್ನು ಮೊದಲ ಒಂದೂವರೆ ಗಂಟೆಗಳ ಕಾಲ ತಮ್ಮ ವಶದಲ್ಲಿರಿಸಿಕೊಂಡಿತು. ಆದರೆ, ಕೈಲ್ ಜಾಮಿಸನ್ ಮತ್ತು ನೀಲ್ ವ್ಯಾಗ್ನರ್ ರೋಹಿತ್ ಮತ್ತು ಶುಬ್ಮನ್ ವಿಕೆಟ್ ಕಬಳಿಸಿ ಭಾರತಕ್ಕೆ ಶಾಕ್ ನೀಡಿದರು. ಭಾರತದ ಭರವಸೆಯು ವಿರಾಟ್ ಕೊಹ್ಲಿ (ಔಟಾಗದೆ 6) ಮತ್ತು ಚೇತೇಶ್ವರ ಪೂಜಾರ (0 ನಾಟ್ ಔಟ್) ಮೇಲೆ ಉಳಿದಿದೆ ಮತ್ತು ಅವರು ಊಟದ ನಂತರ ಎರಡನೇ ಸೆಷನ್​ನಲ್ಲಿ ಉತ್ತಮ ಪಾಲುದಾರಿಕೆಯನ್ನು ನಿರ್ಮಿಸಬೇಕಾಗುತ್ತದೆ.