WTC Final: ಮಿಲ್ಖಾ ಸಿಂಗ್ ನಿಧನಕ್ಕೆ ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸಿದ ಟೀಂ ಇಂಡಿಯಾ ಆಟಗಾರರು
WTC Final: ಈ ಪಂದ್ಯದಲ್ಲಿ ಮಿಲ್ಖಾ ಸಿಂಗ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಕಪ್ಪು ಬ್ಯಾಂಡ್ ಧರಿಸಿ ಮೈದಾನಕ್ಕಿಳಿದಿದೆ.
ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಶುಕ್ರವಾರ ತಡರಾತ್ರಿ ನಿಧನರಾದರು. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಫ್ಲೈಯಿಂಗ್ ಸಿಖ್ ಎಂದು ಜನಪ್ರಿಯವಾಗಿರುವ ಈ ಓಟಗಾರನಿಗೆ ಗೌರವ ಸಲ್ಲಿಸಲು ಭಾರತೀಯ ಕ್ರಿಕೆಟ್ ತಂಡ ನಿರ್ಧರಿಸಿದೆ. ಭಾರತ ತಂಡವು ಪ್ರಸ್ತುತ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿದೆ ಮತ್ತು ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡುತ್ತಿದೆ. ಈ ಪಂದ್ಯದಲ್ಲಿ ಮಿಲ್ಖಾ ಸಿಂಗ್ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಕಪ್ಪು ಬ್ಯಾಂಡ್ ಧರಿಸಿ ಮೈದಾನಕ್ಕಿಳಿದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಕೋವಿಡ್ -19 ರ ಕಾರಣದಿಂದಾಗಿ ನಿಧನರಾದ ಮಿಲ್ಖಾ ಸಿಂಗ್ ಅವರಿಗೆ ಗೌರವ ಸೂಚಿಸುವುದಕ್ಕಾಗಿ ಭಾರತೀಯ ತಂಡ ಕಪ್ಪು ಬ್ಯಾಂಡ್ ಧರಿಸಲಿದೆ ಎಂದು ಹೇಳಿದೆ.
ಆಮ್ಲಜನಕದ ಮಟ್ಟ ಕಡಿಮೆಯಾಗಿತ್ತು ಮಿಲ್ಖಾ ಸಿಂಗ್ ಅವರನ್ನು ಜೂನ್ 3 ರಂದು ಪಿಜಿಐ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಹಿಂದೆ ಅವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಆಮ್ಲಜನಕದ ಮಟ್ಟ ಕಡಿಮೆ ಇದ್ದುದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಕೊರೊನಾ ಸೋಂಕಿನಿಂದ ಅವರು ಸಂಪೂರ್ಣ ಗುಣಮುಖರಾಗಿದ್ದರು. ಇದರ ನಂತರ ಅವರನ್ನು ಕೋವಿಡ್ ಐಸಿಯುನಿಂದ ಸಾಮಾನ್ಯ ಐಸಿಯುಗೆ ಸ್ಥಳಾಂತರಿಸಲಾಯಿತು. ಆದರೆ ಈ ಕಾಯಿಲೆಯಿಂದ ಉಂಟಾದ ತೊಂದರೆಗಳಿಂದಾಗಿ ಅವರ ಸ್ಥಿತಿ ಗಂಭೀರವಾಗಿತ್ತು ಇದರ ಅಡಿಯಲ್ಲಿ, ಶುಕ್ರವಾರ, ಅವರ ಆಮ್ಲಜನಕದ ಮಟ್ಟ ಕಡಿಮೆಯಾಗಿತ್ತು. ಜೊತೆಗೆ ಜ್ವರ ಕಾಣಸಿಕೊಂಡಿತ್ತು. ನಂತರ ಮಿಲ್ಖಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದವು.
#TeamIndia is wearing black armbands in remembrance of Milkha Singhji, who passed away due to COVID-19. ?#WTC21
— BCCI (@BCCI) June 19, 2021
ಪತ್ನಿ ಐದು ದಿನಗಳ ಹಿಂದೆ ನಿಧನರಾದರು ಮಿಲ್ಖಾ ಅವರ ನಿಧನದ ಬಗ್ಗೆ ಕುಟುಂಬಸ್ಥರು ತಡರಾತ್ರಿ ಮಾಹಿತಿ ನೀಡಿದ್ದರು. ಮಿಲ್ಖಾ ಅವರ ನಿಧನಕ್ಕೂ ಮೊದಲು ಅವರ ಪತ್ನಿ ನಿರ್ಮಲ್ ಕೌರ್ ಜೂನ್ 13 ರಂದು ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ -19 ಸೋಂಕಿನಿಂದ ಸಾವನ್ನಪ್ಪಿದರು. ಕೌರ್ ಸ್ವತಃ ಕ್ರೀಡಾಪಟುವಾಗಿದ್ದರು. ಅವರು ಭಾರತೀಯ ಮಹಿಳಾ ವಾಲಿಬಾಲ್ ತಂಡದ ನಾಯಕರಾಗಿದ್ದರು. ನಿರ್ಮಲ್ ಕೌರ್ 1962 ರಲ್ಲಿ ಮಿಲ್ಖಾ ಸಿಂಗ್ ಅವರನ್ನು ವಿವಾಹವಾಗಿದ್ದರು.
ಭಾರತ ಉತ್ತಮ ಆರಂಭ ಇನ್ನೂ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಮೊದಲ ಸೆಷನ್ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 41 ರನ್ ಗಳಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ರೋಹಿತ್ ಹಾಗೂ ಗಿಲ್ ಉತ್ತಮ ಜೊತೆಯಾಟ ಆಡುತ್ತಿದ್ದಾರೆ.