ಅಂಡರ್ಟೇಕರ್ VS ಅಕ್ಷಯ್ ಕುಮಾರ್ ರಿಯಲ್ ಫೈಟ್; WWE ದೈತ್ಯನ ಸವಾಲಿಗೆ ಅಕ್ಕಿ ಕೊಟ್ಟ ಉತ್ತರವೇನು?
Akshay Kumar vs Undertaker: ‘ರಿಯಲ್ ಮ್ಯಾಚ್ಗೆ ನೀವು ಯಾವಾಗ ಸಿದ್ಧವಿದ್ದೀರಿ ಹೇಳಿ’ ಎಂದು ಅಕ್ಷಯ್ ಕುಮಾರ್ಗೆ ಅಂಡರ್ಟೇಕರ್ ನೇರವಾಗಿ ಸವಾಲು ಹಾಕಿದ್ದಾರೆ. ಅದಕ್ಕೆ ಅಕ್ಕಿ ಕಮೆಂಟ್ ಮಾಡಿದ್ದಾರೆ.

ನಟ ಅಕ್ಷಯ್ ಕುಮಾರ್ ಅವರು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಸಾಹಸ ಮಾಡುತ್ತಾರೆ. ಹಾಗಂತ ಅವರು ನಿಜಜೀವನದಲ್ಲಿಯೂ WWE ಫೈಟರ್ಗಳ ಜೊತೆ ಬಡಿದಾಡಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಆದರೂ ಅವರನ್ನು WWE ದೈತ್ಯ ಪ್ರತಿಭೆ ಅಂಡರ್ಟೇಕರ್ ಅವರು ಕಾದಾಟಕ್ಕೆ ಆಹ್ವಾನಿಸಿದ್ದಾರೆ. ಆ ಆಹ್ವಾನ ಕಂಡ ಫ್ಯಾನ್ಸ್ ಸಖತ್ ಎಗ್ಸೈಟ್ ಆಗಿದ್ದಾರೆ. WWE ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲೂ ಈ ವಿಚಾರ ಚರ್ಚೆ ಆಗಿದೆ.
ಅಷ್ಟಕ್ಕೂ ಈ ಚರ್ಚೆ ಹುಟ್ಟಿಕೊಳ್ಳಲು ಕಾರಣ ‘ಖಿಲಾಡಿಯೋಂಕಾ ಕಾ ಖಿಲಾಡಿ’ ಸಿನಿಮಾ. ಈ ಚಿತ್ರ ಇತ್ತೀಚೆಗೆ 25 ವರ್ಷ ಪೂರೈಸಿತು. ಅದರಲ್ಲಿ ಅಕ್ಷಯ್ ಕುಮಾರ್ ಮತ್ತು ಅಂಡರ್ಟೇಕರ್ ನಡುವಿನ ಒಂದು ಫೈಟಿಂಗ್ ದೃಶ್ಯವಿತ್ತು. ಆದರೆ ಅದರಲ್ಲಿ ನಟಿಸಿರುವುದು ನಿಜವಾದ ಅಂಡರ್ಟೇಕರ್ ಅಲ್ಲ ಎಂಬ ಸತ್ಯವನ್ನು ಅಕ್ಷಯ್ ಕುಮಾರ್ ಇತ್ತೀಚೆಗೆ ಬಾಯಿ ಬಿಟ್ಟಿದ್ದರು. ಅದಕ್ಕೆ ಅಂಡರ್ಟೇಕರ್ ಕಡೆಯಿಂದ ಈಗ ಪ್ರತಿಕ್ರಿಯೆ ಕೂಡ ಸಿಕ್ಕಿದೆ.
View this post on Instagram
‘ರಿಯಲ್ ಮ್ಯಾಚ್ಗೆ ನೀವು ಯಾವಾಗ ಸಿದ್ಧವಿದ್ದೀರಿ ಹೇಳಿ’ ಎಂದು ಅಕ್ಷಯ್ ಕುಮಾರ್ಗೆ ಅಂಡರ್ಟೇಕರ್ ನೇರವಾಗಿ ಸವಾಲು ಹಾಕಿದ್ದಾರೆ. ಅದಕ್ಕೆ ಕಮೆಂಟ್ ಮಾಡಿರುವ ಅಕ್ಕಿ, ‘ನಾನು ನನ್ನ ಇನ್ಶೂರೆನ್ಸ್ ಚೆಕ್ ಮಾಡಿಕೊಂಡು ಬರುತ್ತೇನೆ. ಸ್ವಲ್ಪ ನಿಲ್ಲಿ’ ಎಂದು ತಮಾಷೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಕೆಲವು ಅಭಿಮಾನಿಗಳು ನಿಜವಾಗಿಯೂ ಅಕ್ಷಯ್ ಕುಮಾರ್ ಈ ಸವಾಲು ಸ್ವೀಕರಿಸಬೇಕು, ಇಬ್ಬರ ನಡುವೆ ಒಂದು ರಿಯಲ್ ಮ್ಯಾಚ್ ಆಗಲೇ ಬೇಕು ಎಂದಿದ್ದಾರೆ. ಆದರೆ ಅಕ್ಷಯ್ ಕುಮಾರ್ ಹುಷಾರಾಗಿ ಇರಬೇಕು ಎಂದು ಕೆಲವಿ ಫ್ಯಾನ್ಸ್ ಎಚ್ಚರಿಕೆ ಕೂಡ ನೀಡಿದ್ದಾರೆ.
View this post on Instagram
ಅನೇಕ ಜನಪರ ಕಾರ್ಯಗಳ ಮೂಲಕವೂ ಅಕ್ಷಯ್ ಕುಮಾರ್ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಜಮ್ಮು ಕಾಶ್ಮೀರ ಪ್ರದೇಶಕ್ಕೆ ಅವರು ಭೇಟಿ ನೀಡಿದ್ದರು. ಅಲ್ಲಿನ ಜನರೊಂದಿಗೆ ಕೆಲ ಕಾಲ ಬೆರೆತರು. ನಂತರ ಸೈನಿಕರ ಜೊತೆ ಸಂವಾದ ನಡೆಸಿದರು. ಅವರಿಗೆ ಉತ್ಸಾಹ ತುಂಬಲು ಹಾಡಿ, ಕುಣಿದರು. ಬಿಎಸ್ಎಫ್ ಸೈನಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಬಾಲಿವುಡ್ ನಟನನ್ನು ನೋಡಲು ಸುತ್ತಮುತ್ತಲಿನ ಹಳ್ಳಿಯ ಜನರು ಮುಗಿಬಿದ್ದಿದ್ದರು. ಈ ವೇಳೆ ಅಲ್ಲಿನ ನೀರೂ ಗ್ರಾಮದಲ್ಲಿ ಶಾಲೆ ನಿರ್ಮಾಣಕ್ಕಾಗಿ 1 ಕೋಟಿ ರೂ. ದೇಣಿಗೆ ಕೊಟ್ಟು ಬಂದಿದ್ದಾರೆ.
ಇದನ್ನೂ ಓದಿ:
Akshay Kumar: ಪಾಕಿಸ್ತಾನದ ಬಗ್ಗೆ ಅಕ್ಷಯ್ ಕುಮಾರ್ ಪ್ರೀತಿಯ ಮಾತು; ವಿಡಿಯೋ ವೈರಲ್ ಮಾಡಿದ ಕಮಾಲ್ ಖಾನ್
ಅಂಡರ್ಟೇಕರ್ ಜತೆ ಗುದ್ದಾಡಿದ್ದ ಅಕ್ಷಯ್ ಕುಮಾರ್? ಫೋಟೋ ಹಂಚಿಕೊಂಡ ನಟ




