Viral Video: ಕಬಡ್ಡಿ ಪಂದ್ಯದ ವೇಳೆ ಆಟಗಾರ ಸಾವು: ಕಪ್​ನೊಂದಿಗೆ ಅಂತ್ಯ ಸಂಸ್ಕಾರ

Youth dies while playing kabaddi: ಅಸ್ವಸ್ಥರಾದ ವಿಮಲ್​ ರಾಜ್ ಅವರನ್ನು ತಕ್ಷಣವೇ ಪನ್ರುತಿ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯೆದಲ್ಲೇ ಮೃತಪಟ್ಟಿರುವುದನ್ನು ವೈದ್ಯರು ಘೋಷಿಸಿದ್ದಾರೆ.

Viral Video: ಕಬಡ್ಡಿ ಪಂದ್ಯದ ವೇಳೆ ಆಟಗಾರ ಸಾವು: ಕಪ್​ನೊಂದಿಗೆ ಅಂತ್ಯ ಸಂಸ್ಕಾರ
Vimal Raj
Edited By:

Updated on: Jul 26, 2022 | 11:53 AM

ಕಬಡ್ಡಿ ಪಂದ್ಯಾಟದ ವೇಳೆ ಯುವ ಆಟಗಾರರೊಬ್ಬರು ಮೈದಾನದಲ್ಲೇ ಅಸುನೀಗಿದ (Youth dies while playing kabaddi) ಘಟನೆ ಚೆನೈ ಸಮೀಪದ ಕಡಲೂರಿನಲ್ಲಿ ನಡೆದಿದೆ. ಭಾನುವಾರ ರಾತ್ರಿ ಕಡಲೂರಿನ ಪನ್ರುತಿ ಸಮೀಪದ ಮಂಡಿಕುಪ್ಪಂನಲ್ಲಿ ಕಬಡ್ಡಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮುರುಟ್ಟು ಕಾಳೈ ತಂಡದ ಪರ ಆಡುತ್ತಿದ್ದ 22ರ ಹರೆಯದ ವಿಮಲ್​ರಾಜ್ (Vimal Raj) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ವಿಮಲ್‌ರಾಜ್ ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಡಲೂರು ಜಿಲ್ಲೆಯ ಕಡಂಪುಲಿಯೂರು ಸಮೀಪದ ಪುರಂಗಿಣಿ ಗ್ರಾಮದವರಾದ ವಿಮಲ್‌ರಾಜ್ ಅವರು ಮಂಡಿಕುಪ್ಪಂನಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುರಟ್ಟು ಕಾಳೈ ತಂಡದ ಪರ ಕಣಕ್ಕಿಳಿದಿದ್ದರು. ರೈಡಿಂಗ್ ಮುಗಿಸಿ ಗೆರೆ ಮುಟ್ಟಲು ವಾಪಾಸ್ ಆಗುವ ವೇಳೆ ಎದುರಾಳಿ ತಂಡದ ಆಟಗಾರನ ಮೊಣಕಾಲು ಎದೆಯ ಭಾಗಕ್ಕೆ ಜೋರಾಗಿ ತಾಗಿದೆ.

Unexpected death in Kabaddi player tamil nadu ?

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

 

ಇದರಿಂದ ಅಸ್ವಸ್ಥರಾದ ವಿಮಲ್​ ರಾಜ್ ಅವರನ್ನು ತಕ್ಷಣವೇ ಪನ್ರುತಿ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯೆದಲ್ಲೇ ಮೃತಪಟ್ಟಿರುವುದನ್ನು ವೈದ್ಯರು ಘೋಷಿಸಿದ್ದಾರೆ. ಗೆಳೆಯನ ಅಗಲಿಕೆಯ ನೋವಿನ ನಡುವೆ ಮೈದಾನಕ್ಕಿಳಿದ ಮುರುಟ್ಟು ಕಾಳೈ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದ್ದು ವಿಶೇಷ. ಅಷ್ಟೇ ಅಲ್ಲದೆ ಗೆದ್ದ ಟ್ರೋಫಿಯೊಂದಿಗೆ ವಿಮಲ್ ರಾಜ್ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.

 

 

TV9 Web

TV9 Kannada

Read More
Loading...
Unable to load recommendations.
Follow Us