ಟಿ 20 ಪಂದ್ಯ: ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಜಿಂಬಾಬ್ವೆ, ಟ್ವಿಟ್ಟರ್​ನಲ್ಲಿ ಹಬ್ಬ ಆಚರಿಸಿದ ನೆಟ್ಟಿಗರು!

Zim vs Pak 2nd T20I at Harare| ಜಿಂಬಾಬ್ವೆ ತಂಡದ ಲ್ಯೂಕ್​ ಜೋಂಗ್ವೆ (Luke Jongwe) 3.5 ಓವರ್​ಗಳಲ್ಲಿ 18 ಟನ್​ ನೀಡಿ ಪಾಕ್​ನ 4 ವಿಕೆಟ್​ಗಳನ್ನು ಧೂಳೀಪಟ ಮಾಡಿಬಿಟ್ಟರು. ಅಲ್ಲಿಗೆ ಹೆಚ್ಚು ಪ್ರತಿರೋಧ ತೋರದೆ ಪಾಕ್​ ತಂಡ ಸೋಲೊಪ್ಪಿಕೊಂಡಿತು. ಮುಂದೆ ಟ್ವಿಟ್ಟರ್​ನಲ್ಲಿ ಮೀಮ್​ಗಳ ರಣಕೇಕೆ ಕಂಡು ಬೆಚ್ಚಿಬಿದ್ದರು.

ಟಿ 20 ಪಂದ್ಯ: ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಜಿಂಬಾಬ್ವೆ, ಟ್ವಿಟ್ಟರ್​ನಲ್ಲಿ ಹಬ್ಬ ಆಚರಿಸಿದ ನೆಟ್ಟಿಗರು!
ಟಿ 20 ಪಂದ್ಯ: ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಜಿಂಬಾಬ್ವೆ, ಟ್ವಿಟ್ಟರ್​ನಲ್ಲಿ ಹಬ್ಬ ಆಚರಿಸಿದ ನೆಟ್ಟಿಗರು!
Follow us
ಸಾಧು ಶ್ರೀನಾಥ್​
|

Updated on:Apr 24, 2021 | 1:26 PM

ಹರಾರೆ (ಜಿಂಬಾಬ್ವೆ): ಪಾಕಿಸ್ತಾನ ಮತ್ತು ಜಿಂಬಾಬ್ವೆ ತಂಡಗಳ ನಡುವಣ ಎರಡನೆಯ ಟಿ 20 ಅಂತಾರಾಷ್ಟ್ರೀಯ ಪಂದ್ಯ ವೀರೋಚಿತವಾಗಿತ್ತು. ಪಂದ್ಯದಲ್ಲಿ ಕೇವಲ 119 ರನ್ ಗುರಿ ನೀಡಿ, ಅಷ್ಟು ಅಲ್ಪ ಮೊತ್ತವನ್ನೇ ರಕ್ಷಿಸಿಕೊಂಡು ತಮ್ಮ ತಾಯ್ನಾಡಿನಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸುವಲ್ಲಿ ಜಿಂಬಾಬ್ವೆ ಬೌರ್​ಗಳು ಯಶಸ್ವಿಯಾಗಿದ್ದಾರೆ. ಇದನ್ನು ಆಸ್ವಾದಿಸಿದ ನೆಟ್ಟಿಗರು ಟ್ವಿಟ್ಟರ್​ನಲ್ಲಿ ಹಬ್ಬ ಆಚರಿಸಿದ್ದಾರೆ! ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಇದೀಗ ಜಿಂಬಾಬ್ವೆ 1-1 ಸಮ ಮಾಡಿಕೊಂಡಿದ್ದು, ಅಂತಿಮ ಪಂದ್ಯ ಕುತೂಹಲದ ಗಣಿಯಾಗಿದೆ.

ಹರಾರೆ ಸ್ಪೋರ್ಟ್ಸ್​ ಕ್ಲಬ್​ ಮೈದಾನದಲ್ಲಿ ಶುಕ್ರವಾರ ನಡೆದ ಎರಡನೆಯ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿಜಿಂಬಾಬ್ವೆ 19 ರನ್​ಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಅಂದಹಾಗೆ ಪಾಕಿಸ್ತಾನದ ವಿರುದ್ಧ ಟಿ 20 ಸರಣಿಯಲ್ಲಿ ಜಿಂಬಾಬ್ವೆ ತಂಡ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಬಾಬರ್ ಅಜಾಮ್, ಫಕರ್​ ಜಮಾನ್, ಮೊಹಮದ್ ರಿಜ್ವಾನ್ ಮುಂತಾದ ಖಡಕ್ ಬ್ಯಾಟ್ಸ್​ಮನ್​ಗಳನ್ನು ಹೊಂದಿರುವ ಪಾಕಿಸ್ತಾನದ ವಿರುದ್ಧ ಸಾಧಿಸಿದ ಈ ಜಯ ಕಂಡು ಜಿಂಬಾಬ್ವೆ ತಂಡದ ಆಟಗಾರರನ್ನು ನೆಟ್ಟಿಗರು ಮನಸಾರೆ ಅಭಿನಂದಿಸಿದ್ದಾರೆ. ಪೂರ್ಣ ಪ್ರಮಾಣದ ತಂಡದೊಂದಿಗೆ ಕೇವಲ 119 ರನ್​ ಬೆನ್ನುಹತ್ತಿದ ಪಾಕಿಸ್ತಾನದ ಬ್ಯಾಟ್ಸ್​ಮನ್​ಗಳು ಇಡೀ ತಂಡವಾಗಿ ನರ್ವಸ್​ ನೈಂಟೀಸ್​ನಲ್ಲಿ ಮುಗ್ಗರಿಸಿದೆ. ಶತಕ ತಲುಪುವುದಕ್ಕೂ ಮುನ್ನ 99 ರನ್​ಗೆ ಆಲೌಟ್​ ಆಗಿಬಿಟ್ಟಿದೆ.

ತಂಡದ ಕ್ಯಾಪ್ಟನ್​- ಬ್ಯಾಟ್ಸ್​ಮನ್​ ಬಾಬರ್ ಅಜಾಮ್ ಅರ್ಧ ಸೆಂಚುರಿ ಬಾರಿಸುತ್ತಾರೆ ಅಂದುಕೊಂಡಿತ್ತು ಪಾಕಿಸ್ತಾನ. ಆದರೆ 45 ಬಾಲ್​ನಲ್ಲಿ 41 ರನ್​ ಬಾರಿಸುವಷ್ಟರಲ್ಲಿಯೇ ಬಾಬರ್​ ಏದುಸಿರುಬಿಟ್ಟರು. ಆದರೂ ತಂಡದ ಅರ್ಧ ಮೊತ್ತವನ್ನು ಅವರೊಬ್ಬರೇ ಬಾರಿಸಿದರು ಎಂಬುದು ಗಮನಾರ್ಹ. ಕ್ಯಾಪ್ಟನ್ ಬಿಟ್ಟರೆ ಇನ್ನಿಬ್ಬರು ಬ್ಯಾಟ್ಸ್​ಮನ್​ಗಳು ಮಾತ್ರವೇ ಎರಡಂಕಿ ಮೊತ್ತ ಬಾರಿಸುವಲ್ಲಿ ಯಶಸ್ವಿಯಾದರು.

ಪಾಕಿಸ್ತಾನದ ಕ್ರಿಕೆಟ್​ ಪ್ರೇಮಿಗಳು ತಮ್ಮ ತಂಡದ ಕಳಪೆ ಪ್ರದರ್ಶನವನ್ನು ಕಂಡು ಸಹಜವಾಗಿಯೇ ಕುದ್ದುಹೋಗಿದ್ದಾರೆ. ಆದರೆ ವಿಶ್ವದ ಇತರೆ ಕ್ರಿಕೆಟ್​ ಪ್ರೇಮಿಗಳು ಟ್ವಿಟ್ಟರ್​ನಲ್ಲಿ ಪಾಕ್​ ಪ್ರದರ್ಶನ ಕಂಡು ಆಟಗಾರರನ್ನು ಗೋಳುಹೊಯ್ದುಕೊಂಡಿದ್ದಾರೆ.

ಪಂದ್ಯದ ಆರಂಭದಲ್ಲಿ ಪಾಕ್​ ಬೌಲರ್​ಗಳು ಜಿಂಬಾಬ್ವೆ ಬ್ಯಾಟ್ಸ್​ಮನ್​ಗಳನ್ನು 20 ಓವರ್​ಗಳಲ್ಲಿ 118 ರನ್​ಗೆ 9 ವಿಕೆಟ್​ ಸ್ಕೋರ್​ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿ, ಜಯದ ಕನಸು ಕಾಣತೊಡಗಿದ್ದರು. ಆದರೆ ಗುರಿ ಬೆನ್ನತ್ತಿದ ಪಾಕ್​ಗೆ ಮೈದಾನದಲ್ಲಿ ಆಗಿದ್ದೇ ಬೇರೆ..

ಜಿಂಬಾಬ್ವೆ ತಂಡದ ಲ್ಯೂಕ್​ ಜೋಂಗ್ವೆ (Luke Jongwe) 3.5 ಓವರ್​ಗಳಲ್ಲಿ 18 ರನ್​ ನೀಡಿ ಪಾಕ್​ನ 4 ವಿಕೆಟ್​ಗಳನ್ನು ಧೂಳೀಪಟ ಮಾಡಿಬಿಟ್ಟರು. ಅಲ್ಲಿಗೆ ಹೆಚ್ಚು ಪ್ರತಿರೋಧ ತೋರದೆ ಪಾಕ್​ ತಂಡ ಸೋಲೊಪ್ಪಿಕೊಂಡಿತು. ಮುಂದೆ ಟ್ವಿಟ್ಟರ್​ನಲ್ಲಿ ಮೀಮ್​ಗಳ ರಣಕೇಕೆ ಕಂಡು ಬೆಚ್ಚಿಬಿದ್ದರು. (Zim vs Pak 2nd T20I at Harare Zimbabwe defeated Pakistan by Defending 119 Triggers Meme-Fest On Twitter)

Published On - 1:11 pm, Sat, 24 April 21