ನವದೆಹಲಿ, (ಡಿಸೆಂಬರ್ 15): ಭಾರತ ಈ ಎಲ್ಲಾ ಬೆಳವಣಿಗೆ ನಡುವೆ ಮೊಬೈಲ್ ಫೋನ್ ವಿಭಾಗದಲ್ಲಿ ‘ಮೇಡ್ ಇನ್ ಇಂಡಿಯಾ’ (Made in India) ಶಿಪ್‌ಮೆಂಟ್‌ಗಳೊಂದಿಗೆ ಭಾರತ ದೊಡ್ಡ ಸಾಧನೆ ಮಾಡಿದೆ. ಹೌದು.. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರೀ ಹೆಚ್ಚಳವಾಗಿದೆ. 2023 24ರ ಸಾಲಿನ ಬರೋಬ್ಬರಿ 22 ಪಟ್ಟು ಅಂದರೆ 4,16,700 ಕೋಟಿ ಮೊಬೈಲ್ ಉತ್ಪಾದನೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಭಾರತ ಫೋನ್ ಉತ್ಪಾದನೆಯಲ್ಲಿ ಹೊಸ ಕ್ರಾಂತಿ ಮಾಡಿದೆ.
ಈ ಬಗ್ಗೆ ಎಕ್ಸ್(ಟ್ವಿಟ್ಟರ್) ಮಾಹಿತಿ ಹಂಚಿಕೊಂಡಿರುವ ಸಚಿವ ಅಶ್ವಿನಿ ವೈಷ್ಣವ್(ashwini vaishnaw ), 2014ರಲ್ಲಿ 18,900 ಕೋಟಿ ಮೊಬೈಲ್ ಉತ್ಪಾದನೆಯಾಗಿದ್ದರೆ, 2023 24ರಲ್ಲಿ 22 ಪಟ್ಟು ಅಂದರೆ 4,16,700 ಕೋಟಿ ಮೊಬೈಲ್ ಉತ್ಪಾದನೆಯಾಗಿದೆ. ಕಳೆದ 9 ವರ್ಷಗಳಲ್ಲಿ ಮೇಡ್ ಇನ್ ಇಂಡಿಯಾ ಮೊಬೈಲ್‌ಗಳ ಉತ್ಪಾದನೆಯು 22 ಪಟ್ಟು ಹೆಚ್ಚಾಗಿದೆ. ಇದರೊಂದಿಗೆ ಭಾರತದಲ್ಲಿ ಮೊಬೈಲ್ ಫೋನ್‌ಗಳ ಉತ್ಪಾದನಾ ದರ ನಿರಂತರವಾಗಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
📱22 X increase in ‘Made in India’ mobile phone production.
🎯12 lakh employment generated (direct + indirect).@ICEA_India pic.twitter.com/hp8VQeiV4w
— Ashwini Vaishnaw (@AshwiniVaishnaw) December 15, 2023
ಇನ್ನು ಮೇಡ್ ಇನ್ ಇಂಡಿಯಾ ಮೊಬೈಲ್ ಉತ್ಪಾದನೆ ಮೂಲಕ ದೇಶದಲ್ಲಿ 12 ಲಕ್ಷ ಜನರರು ಉದ್ಯೋಗ ಸಿಕ್ಕಿದೆ. 2014 ರ ನಂತರ ಮೊಬೈಲ್ ಫೋನ್‌ಗಳ ಉತ್ಪಾದನೆಯು ಕ್ರಮೇಣ ಹೆಚ್ಚಾಗಿದೆ. 2014ರಲ್ಲಿ ಭಾರತದಲ್ಲಿ ಮೊಬೈಲ್ ಉತ್ಪಾದನೆಯ ಸಂಖ್ಯೆ 18,900 ಕೋಟಿಯಾಗಿದ್ದರೆ, 2023-24ರಲ್ಲಿ ಈ ಸಂಖ್ಯೆ 4,16,700 ಕೋಟಿಗೆ ಏರಿಕೆಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ