Realme 10 Pro: ರಿಯಲ್ ಮಿಯಿಂದ ಒಂದಲ್ಲ ಎರಡು 108MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

ರಿಯಲ್‌ಮಿ 10 ಪ್ರೊ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ರಿಯಲ್‌ಮಿ 10 ಪ್ರೊ 5G ಮತ್ತು ರಿಯಲ್‌ಮಿ 10 ಪ್ರೊ + 5G ಎಂಬ ಎರಡು ಮೊಬೈಲ್ ಇದೆ. ಈ ಎರಡೂ ಸ್ಮಾರ್ಟ್​ಫೋನ್​ಗಳಲ್ಲಿ ಅತ್ಯಂತ ಬಲಿಷ್ಠವದ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ನೀಡಲಾಗಿದೆ.

Realme 10 Pro: ರಿಯಲ್ ಮಿಯಿಂದ ಒಂದಲ್ಲ ಎರಡು 108MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
realme 10 Pro and Realme 10 Pro Plus
Follow us
| Updated By: Vinay Bhat

Updated on: Nov 18, 2022 | 12:28 PM

ಪ್ರಸಿದ್ಧ ರಿಯಲ್ ಮಿ (Realme) ಕಂಪನಿಯ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತಿರುವ ಸಂಖ್ಯೆ ಈಗ ಕಡಿಮೆ ಆಗಿದೆ. ಅಪರೂಪಕ್ಕೆ ಒಂದೊಂದು ಮೊಬೈಲ್​ಗಳನ್ನು ರಿಲೀಸ್ ಮಾಡುತ್ತಿದೆಯಷ್ಟೆ. ಹಲವು ದಿನಗಳ ಬಳಿಕ ಮೊನ್ನೆಯಷ್ಟೆ ರಿಯಲ್‌ ಮಿ 10 5ಜಿ (Realme 10 5G) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದ್ದ ಕಂಪನಿ ಇದೀಗ ರಿಯಲ್‌ಮಿ 10 ಪ್ರೊ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ರಿಯಲ್‌ಮಿ 10 ಪ್ರೊ 5G (Realme 10 Pro) ಮತ್ತು ರಿಯಲ್‌ಮಿ 10 ಪ್ರೊ + 5G ಎಂಬ ಎರಡು ಮೊಬೈಲ್ ಇದೆ. ಈ ಎರಡೂ ಸ್ಮಾರ್ಟ್​ಫೋನ್​ಗಳಲ್ಲಿ ಅತ್ಯಂತ ಬಲಿಷ್ಠವದ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ನೀಡಲಾಗಿದೆ. ಸದ್ಯಕ್ಕೆ ವಿದೇಶದಲ್ಲಿ ರಿಲೀಸ್ ಆಗಿರುವ ಈ ಮೊಬೈಲ್​ಗಳ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ರಿಯಲ್‌ ಮಿ 10 ಪ್ರೊ:

ರಿಯಲ್‌ ಮಿ 10 ಪ್ರೊ 5G ಸ್ಮಾರ್ಟ್‌ಫೋನ್‌ ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM ಮತ್ತು 256GB ಇಂಟರ್ ಸ್ಟೋರೇಜ್‌ ಆಯ್ಕೆಗೆ CNY 1599, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 18,300ರೂ. 12GB + 256GB ಸ್ಟೋರೇಜ್ ಆಯ್ಕೆಯ ಬೆಲೆ CNY 1899 (ಸುಮಾರು 21,700 ರೂ.) ಆಗಿದೆ.

ಇದನ್ನೂ ಓದಿ
Image
Meta India Head: ಭಾರತದಲ್ಲಿ ಸಂಧ್ಯಾ ದೇವನಾಥನ್​ಗೆ ಮೆಟಾ ಚುಕ್ಕಾಣಿ; ಆದಾಯ ವೃದ್ಧಿಯತ್ತ ಚಿತ್ತ
Image
Oppo A1 Pro 5G: ಒಪ್ಪೋದಿಂದ 108MP ಕ್ಯಾಮೆರಾದ ಚೊಚ್ಚಲ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?
Image
Jio Offers: 5 ಹೊಸ ಪ್ಲಾನ್: ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನ ಜಿಯೋದಿಂದ ಧಮಾಕ ಆಫರ್ ಘೋಷಣೆ
Image
Most Common Passwords: ಭಾರತದಲ್ಲಿ ಜನರು ಹೆಚ್ಚಾಗಿ ಬಳಸುವ ಪಾಸ್​ವರ್ಡ್ ಯಾವುದು ಗೊತ್ತೇ?: ಶಾಕಿಂಗ್ ವಿಚಾರ ಬಹಿರಂಗ

ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ ಇದು 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇದು ಬಲಿಷ್ಠವಾದ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 13ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ ಅಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108MP ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2MP ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು 33W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

ರಿಯಲ್‌ ಮಿ 10 ಪ್ರೊ ಪ್ಲಸ್‌:

ಈ ಸ್ಮಾರ್ಟ್​ಫೋನ್​ನ 8GB + 128GB ಸ್ಟೋರೇಜ್ ಆಯ್ಕೆಗೆ CNY 1699, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 19,400ರೂ. 8GB + 256GB ಸ್ಟೋರೇಜ್ ಆಯ್ಕೆಯು CNY 1999 (ಸುಮಾರು 22,900ರೂ) ಬೆಲೆ ನಿಗದಿ ಮಾಡಲಾಗಿದೆ.

ರಿಯಲ್‌ ಮಿ 10 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ 6.7 ಇಂಚಿನ ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 2160Hz PWM ಬ್ಲರ್‌ ಮತ್ತು 100% DCI-P3 ಕಲರ್‌ ಗ್ಯಾಮಟ್‌ ಅನ್ನು ಹೊಂದಿರುವುದು ವಿಶೇಷ. ಮೀಡಿಯಾಟೆಕ್‌ ಡೈಮೆನ್ಸಿಟಿ 1080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಈ ಫೋನಿನಲ್ಲಿ ಕೂಡ ಮುಖ್ಯ ಕ್ಯಾಮೆರಾ 108MP ಸೆನ್ಸಾರ್‌ ಸಾಮರ್ಥ್ಯದಿಂದ ಕೂಡಿದೆ. ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿ, 67W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ.