ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಏರ್ಟೆಲ್ (Airtel) ಮೊಬೈಲ್ ನೆಟ್ವರ್ಕ್ ಡೌನ್ ಆಗಿದೆ ಎಂದು ವರದಿಯಾಗಿದೆ. ಭಾರತದಲ್ಲಿರುವ ಅನೇಕ ಏರ್ಟೆಲ್ ಬಳಕೆದಾರರು ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು, ಇಂಟರ್ನೆಟ್ ಬಳಸಿ ಕೆಸಲ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ. ಈ ಸಮಸ್ಯೆ ಡೆಲ್ಲಿ, ಮುಂಬೈ ಸೇರಿದಂತೆ ದೇಶದ ಹಲವಡೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಹಲವಾರು ಮಂದಿ ಏರ್ಟೆಲ್ ಬಳಕೆದಾರರು ಟ್ವಿಟರ್ನಲ್ಲಿ ನೆಟ್ವರ್ಕ್ ಡೌನ್ ಆಗಿದೆ ಎಂದು ದೂರುಗಳನ್ನು ನೀಡಿದ್ದಾರೆ. #Airteldown ಎಂಬುದು ಟ್ವಿಟರ್ ಟ್ರೆಂಡಿಂಗ್ (Twitter trending) ಕೂಡಾ ಆಗಿದ್ದು, ಕರೆಗಳು ಬರುತ್ತಿಲ್ಲ, ಕರೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಇಂಟರ್ನೆಟ್, ವೈ-ಫೈ ಸರ್ವಿಸ್ ಕೆಲಸ ಮಾಡುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಏರ್ಟೆಲ್ ಆ್ಯಪ್ ಕೂಡ ವರ್ಕ್ ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಏರ್ಟೆಲ್ ಬ್ರಾಡ್ ಬಾಂಡ್ ಮತ್ತು ಇಂಟರ್ ನೆಟ್ ಸ್ಥಗಿತದ ಹಿಂದಿನ ಕಾರಣ ತಿಳಿದಿಲ್ಲ.
ಬಳಕೆದಾರರು ಫೋನ್ ಕರೆಗಳನ್ನು ಹಾಗೂ ಇಂಟರ್ನೆಟ್ ಬಳಸಲಾಗುತ್ತಿಲ್ಲ ಎಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಕಂಪನಿಯ ಗ್ರಾಹಕ ಸೇವೆಯನ್ನು ಸಂಪರ್ಕಿಸಲೂ ಸಾಧ್ಯವಾಗುವುತ್ತಿಲ್ಲ. ಬೆಳಗ್ಗೆ 11:30 ರಿಂದ ಈ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಅನೇಕ ಬಳಕೆದಾರರು ಇದರ ಬಗ್ಗೆ ಗರಂ ಆಗಿದ್ದು ಫೆಬ್ರವರಿಯಲ್ಲಿ ಈರೀತಿಯ ಸಮಸ್ಯೆ ಎದುರಿಸುತ್ತಿರುವುದು ಇದು ಎರಡನೇ ಬಾರಿ ಎಂದು ದೂರುತ್ತಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಏರ್ಟೆಲ್ ಇಂಡಿಯಾ, “ನಮ್ಮ ಇಂಟರ್ನೆಟ್ ಸೇವೆಗಳು ಕೆಲ ಸಮಯ ಅಡಚಣೆಯನ್ನು ಹೊಂದಿದ್ದವು. ಇದರಿಂದ ನಿಮಗೆ ಉಂಟಾದಂತ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ನಮ್ಮ ತಂಡಗಳು ನಮ್ಮ ಗ್ರಾಹಕರಿಗೆ ತಡೆರಹಿತ ಅನುಭವವನ್ನು ನೀಡಲು ಕೆಲಸ ಮಾಡುತ್ತಿದೆ. ಈಗ ಸರಿಯಾಗಿದ್ದು, ಸಾಮಾನ್ಯಸ್ಥಿತಿಗೆ ಮರಳಿದೆ,” ಎಂದು ತಿಳಿಸಿದೆ.
ಕಳೆದ ವಾರವಷ್ಟೆ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಮೊಬೈಲ್ ನೆಟ್ವರ್ಕ್ ಕೂಡ ಡೌನ್ ಆದ ಬಗ್ಗೆ ವರದಿಯಾಗಿಯತ್ತು. ಮುಂಬೈನಲ್ಲಿರುವ ಅನೇಕ ಜಿಯೋ ಬಳಕೆದಾರರು ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದರು. ಕರೆಗಳು ಬರುತ್ತಿಲ್ಲ, ಕರೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ ಎಂದು ಬರೆದುಕೊಂಡಿದ್ದರು. ಅಲ್ಲದೆ ಕರೆ ಮಾಡಲು ಹೊರಟರೆ “Not registered on network” ಎಂಬ ಮೆಸೇಜ್ ತೋರಿಸುತ್ತದೆ ಎಂದು ಹೇಳಿಕೊಂಡಿದ್ದರು.
Tips and Tricks: 68GB, 128GB ಸ್ಟೊರೇಜ್ ಸಾಕಾಗ್ತಿಲ್ವಾ?: ಹಾಗಾದ್ರೆ ಈ ಟ್ರಿಕ್ ಫಾಲೋ ಮಾಡಿ ಮೆಮೋರಿ ಹೆಚ್ಚಿಸಿ
Published On - 12:21 pm, Fri, 11 February 22