AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon: ಇಂದು ಕೊನೇ ದಿನ: ಅಮೆಜಾನ್ ಅಪ್‌ಗ್ರೇಡ್ ಡೇಸ್ ಸೇಲ್​ನಲ್ಲಿ ಟಿವಿ, ಮೊಬೈಲ್​​ಗಳಿಗೆ ಬಂಪರ್ ಡಿಸ್ಕೌಂಟ್

ಅಮೆಜಾನ್​ನಲ್ಲಿ ಅಪ್‌ಗ್ರೇಡ್ ಡೇಸ್ ಸೇಲ್‌ (Amazon Upgrade Days) ನಡೆಯುತ್ತಿದ್ದು ಇಂದು ಕೊನೇಯ ದಿನವಾಗಿದೆ. ಈ ಪ್ರಯುಕ್ತ ಅನೇಕ ಸ್ಮಾರ್ಟ್ ಫೋನುಗಳ ಮೇಲೆ ಡಿಸ್ಕೌಂಟ್ ನೀಡಿದೆ.

Amazon: ಇಂದು ಕೊನೇ ದಿನ: ಅಮೆಜಾನ್ ಅಪ್‌ಗ್ರೇಡ್ ಡೇಸ್ ಸೇಲ್​ನಲ್ಲಿ ಟಿವಿ, ಮೊಬೈಲ್​​ಗಳಿಗೆ ಬಂಪರ್ ಡಿಸ್ಕೌಂಟ್
Amazon Upgrade Days
TV9 Web
| Updated By: Vinay Bhat|

Updated on: Feb 11, 2022 | 2:47 PM

Share

ಪ್ರಸಿದ್ಧ ಇ ಕಾಮರ್ಸ್ ತಾಣಗಳು ತನ್ನ ಮೆಚ್ಚಿನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಕಡಿಮೆ ಬೆಲೆಗೆ ಆಕರ್ಷಕ ಫೀಚರ್​ಗಳುಳ್ಳ ಸ್ಮಾರ್ಟ್​ಫೋನುಗಳನ್ನು (Smartphone) ಖರೀದಿ ಮಾಡಲು ಅವಕಾಶ ಮಾಡಿಕೊಡುತ್ತಿದೆ. ಈ ಪೈಕಿ ಸದ್ಯ ಅಮೆಜಾನ್​ನಲ್ಲಿ ಅಪ್‌ಗ್ರೇಡ್ ಡೇಸ್ ಸೇಲ್‌ (Amazon Upgrade Days) ನಡೆಯುತ್ತಿದ್ದು ಇಂದು ಕೊನೇಯ ದಿನವಾಗಿದೆ. ಈ ಪ್ರಯುಕ್ತ ಅನೇಕ ಸ್ಮಾರ್ಟ್​​ಫೋನುಗಳ ಮೇಲೆ ಡಿಸ್ಕೌಂಟ್ ನೀಡಿದೆ. ಈ ಸೇಲ್ ಅಡಿಯಲ್ಲಿ, ಬಳಕೆದಾರರು ಅನೇಕ ಸ್ಮಾರ್ಟ್‌ಫೋನ್ ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಸ್ಮಾರ್ಟ್‌ಫೋನ್ ಜೊತೆಗೆ ಸ್ಮಾರ್ಟ್‌ಟಿವಿಗಳ (Smart TV) ಮೇಲೆ ಬಿಗ್‌ ಡಿಸ್ಕೌಂಟ್‌ ಜೊತೆಗೆ ವಿಶೇಷ ಆಫರ್‌ ಅನ್ನು ನೀಡುತ್ತಿದೆ. ಖರೀದಿದಾರರು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ ಮೂಲಕ 1,500ರೂ. ವರೆಗೆ 10% ಡಿಸ್ಕೌಂಟ್‌ ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ, ಪ್ರೈಮ್ ಸದಸ್ಯರು ಕೇವಲ ಪ್ರೈಮ್‌ಗಾಗಿ ಅಡ್ವಾಂಟೇಜ್‌ನೊಂದಿಗೆ 20,000ರೂ. ತನಕ ಸೇವ್‌ ಮಾಡಬಹುದಾಗಿದೆ.

ಅಮೆಜಾನ್‌ ಅಪ್‌ಗ್ರೇಡ್‌ ಸೇಲ್‌ನಲ್ಲಿ ಆ್ಯಪಲ್‌ ಐಫೋನ್‌ 12 ಪ್ರಸ್ತುತ 54,999 ರೂ. ಗಳಿಗೆ ಲಭ್ಯವಿದೆ. ಇದಲ್ಲದೆ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸುವ ಗ್ರಾಹಕರು 1,750 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ಐಫೋನ್‌ ಕೆಂಪು, ಬಿಳಿ, ಕಪ್ಪು, ಹಸಿರು, ನೇರಳೆ ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಇದಲ್ಲದೆ ಪ್ರಸಿದ್ಧ ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನ್‌ 54,999 ರೂ. ಗಳಿಗೆ ದೊರೆಯಲಿದೆ. ಹಾಗೆಯೇ ಒನ್‌ಪ್ಲಸ್‌ 9RT ಸ್ಮಾರ್ಟ್‌ಫೋನ್‌ ರಿಯಾಯಿತಿ ದರದಲ್ಲಿ ಕೇವಲ 42,999ರೂ.ಗಳಿಗೆ ಮಾರಾಟ ಆಗುತ್ತಿದೆ. ಒನ್‌ಪ್ಲಸ್‌ 9 ಪ್ರೊ ಸ್ಮಾರ್ಟ್‌ಫೋನ್‌ 64,999 ರೂ. ಗಳಿಗೆ ಸಿಗಲಿದೆ. ಜೊತೆಗೆ ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ನೋ ಕಾಸ್ಟ್ ಇಎಂಐ ಜೊತೆಗೆ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳಲ್ಲಿ 4,000ರೂ. ವರೆಗೆ ರಿಯಾಯಿತಿ ಪಡೆಯಬಹುದು.

ಟ್ರೆ.ಡಿಂಗ್​ನಲ್ಲಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್‌ 10,499 ರೂ. ಗಳಿಗೆ ಮಾರಾಟವಾಗುತ್ತಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ M21 ಫೋನ್‌ 12,999 ರೂ.ಗಳಿಗೆ, ಗ್ಯಾಲಕ್ಸಿ M32 14,99 9ರೂ.ಗಳಿಗೆ, ಗ್ಯಾಲಕ್ಸಿ M32 5G ನಿಮಗೆ 16,999 ರೂ. ಬೆಲೆಗೆ ಸಿಗಲಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G 24,999 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE 5G 38,240 ರೂ.ಬೆಲೆಗೆ ನಿಮ್ಮದಾಗಿಸಬಹುದು.

ಇದಿಷ್ಟೆ ಅಲ್ಲದೆ ಅಮೆಜಾನ್‌ ಅಪ್‌ಗ್ರೇಡ್‌ ಸೇಲ್‌ನಲ್ಲಿ ಒನ್‌ಪ್ಲಸ್‌ TV Y ಸರಣಿಯು ಕೇವಲ 16,499 ರೂ. ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ. ಇನ್ನು U ಸರಣಿಯ UHD ಟಿವಿಗಳು 40,999 ರೂ. ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಸ್ಯಾಮ್‌ಸಂಗ್ ವಂಡರ್‌ಟೈನ್‌ಮೆಂಟ್ ಸರಣಿಯು ಅಮೆಜಾನ್‌ನಲ್ಲಿ 17,490 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಸ್ಯಾಮ್‌ಸಂಗ್‌ 4K ಕ್ರಿಸ್ಟಲ್ UHD ಸರಣಿಯು 37,990 ರೂ. ಬೆಲೆಯಲ್ಲಿ ದೊರೆಯಲಿದೆ. ಇದರಲ್ಲಿ ಖರೀದಿದಾರರು ಹೆಚ್ಚುವರಿಯಾಗಿ 1,500ರೂ.ಗಳ ರಿಯಾಯಿತಿ ಮತ್ತು 18 ತಿಂಗಳವರೆಗೆ ನೋ ಕಾಸ್ಟ್‌ EMI ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ.

Realme C35: ರಿಯಲ್ ಮಿ ಕಂಪನಿಯಿಂದ ಬೆಸ್ಟ್ ಬಜೆಟ್ ಸ್ಮಾರ್ಟ್​ಫೋನ್ ರಿಯಲ್‌ ಮಿ C35 ಬಿಡುಗಡೆ: ಬೆಲೆ ಎಷ್ಟು?

Airtel Down: ದೇಶದ ಅನೇಕ ಕಡೆಗಳಲ್ಲಿ ಏರ್ಟೆಲ್ ನೆಟ್​​ವರ್ಕ್ ಡೌನ್: ಇಂಟರ್ನೆಟ್ ಕೂಡ ವರ್ಕ್ ಆಗ್ತಿಲ್ಲ