ದೇಶದ ಪ್ರಮುಖ ಖಾಸಗಿ ಟೆಲಿಕಾಂ ಕಂಪೆನಿಗಳಾದ ಜಿಯೋ, ಏರ್ಟೆಲ್, ವೊಡಾಫೋನ್-ಐಡಿಯಾ ತನ್ನ ಬಳಕೆದಾರರಿಗೆ ನೀಡುತ್ತಿದ್ದ ಪ್ರಮುಖ ಉಚಿತ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಹಿಂದೆ ಉಚಿತವಾಗಿ ನೀಡಲಾಗುತ್ತಿದ್ದ ಎಸ್ಎಂಎಸ್ ಪ್ರಯೋಜನಗಳನ್ನು ಕಡಿಮೆ ಮೊತ್ತದ ರಿಚಾರ್ಜ್ನಲ್ಲಿ ನೀಡಲಾಗುವುದಿಲ್ಲ ಎಂದು ಈ ಕಂಪೆನಿಗಳು ತಿಳಿಸಿದೆ. ಅದರಂತೆ ಇನ್ಮುಂದೆ ಏರ್ಟೆಲ್, ಜಿಯೋ, ಐಡಿಯಾ-ವೊಡಾಫೋನ್ನ 100ಕ್ಕಿಂತ ಕಡಿಮೆ ಮೊತ್ತದ ರಿಚಾರ್ಜ್ನಲ್ಲಿ ಉಚಿತ ಸಂದೇಶಗಳನ್ನು ಕಳುಹಿಸಲಾಗುವುದಿಲ್ಲ. ಬದಲಾಗಿ ಪ್ರತಿ ಎಸ್ಎಂಎಸ್ಗೂ ಕಂಪೆನಿಗಳು ಚಾರ್ಜ್ ಮಾಡಲಿದೆ.
ಈ ಹಿಂದೆ ಪ್ರತಿ ರಿಚಾರ್ಜ್ ಪ್ಯಾಕ್ನಲ್ಲೂ ಕರೆ ಸೌಲಭ್ಯ, ಎಸ್ಎಂಎಸ್ ಹಾಗೂ ಇಂಟರ್ನೆಟ್ ಡೇಟಾ ನೀಡಲಾಗುತ್ತಿತ್ತು. ಇದೀಗ ಈ ಆಫರ್ನಲ್ಲಿ ಬದಲಾವಣೆ ಮಾಡಲಾಗುತ್ತಿದ್ದು, ಅದರಂತೆ ಏರ್ಟೆಲ್ ಹಾಗೂ ಜಿಯೋ ಕಂಪೆನಿಗಳ 100 ರೂ. ಒಳಗಿನ ರಿಚಾರ್ಜ್ ಯೋಜನೆಯಲ್ಲಿ ಫ್ರೀ ಎಸ್ಎಂಎಸ್ ಅನ್ನು ಕಡಿತಗೊಳಿಸುವುದಾಗಿ ತಿಳಿಸಿದೆ.
ಇನ್ನು ಅತೀ ಕಡಿಮೆ ಮೊತ್ತದ ರಿಚಾರ್ಜ್ ಪ್ಲ್ಯಾನ್ಗಳನ್ನು ಕೈ ಬಿಡುವ ಬಗ್ಗೆ ಕೂಡ ಟೆಲಿಕಾಂ ಕಂಪೆನಿಗಳು ಚಿಂತಿಸಿದೆ. ಅದರಂತೆ ಏರ್ಟೆಲ್ ಈಗಾಗಲೇ 49 ರೂ. ಪ್ಲ್ಯಾನ್ ಅನ್ನು ಸ್ಥಗಿತಗೊಳಿಸಿದ್ದು, ಅದರ ಬದಲಾಗಿ 79 ರೂ. ಯೋಜನೆಯನ್ನು ಪರಿಚಯಿಸಿದೆ. ಈ ರಿಚಾರ್ಜ್ನಲ್ಲಿ ಗ್ರಾಹಕರಿಗೆ 64 ರೂ. ಟಾಕ್ಟೈಮ್ ಹಾಗೂ 200 ಎಂಬಿ ಡೇಟಾ ಸಿಗಲಿದೆ ಇದರ ವಾಲಿಟಿಡಿ 28 ದಿನಗಳು.
ಹಾಗೆಯೇ ಜಿಯೋ ಕೂಡ ತನ್ನ ಪ್ಲ್ಯಾನ್ನಲ್ಲಿ ಕೆಲ ಬದಲಾವಣೆ ಮಾಡಿದ್ದು, ಅದರಂತೆ 75 ರೂ. ರಿಚಾರ್ಜ್ನಲ್ಲಿ ಒಟ್ಟು 3 ಜಿಬಿ ಡೇಟಾ ನೀಡಲಿದೆ. ಅಂದರೆ ಪ್ರತಿದಿನ 0.1 ಜಿಬಿ ಡೇಟಾ ಬಳಸಬಹುದು. 28 ದಿನಗಳ ವಾಲಿಡಿಟಿ ಹೊಂದಿರುವ ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವನ್ನೂ ಕೂಡ ನೀಡಿದೆ. ಇದೀಗ ಎಸ್ಎಂಎಸ್ ಪ್ಲ್ಯಾನ್ನಲ್ಲಿ ಬದಲಾವಣೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಈ ಯೋಜನೆಯಲ್ಲಿ ಸಿಗುತ್ತಿದ್ದ ಉಚಿತ 50 ಎಸ್ಎಂಎಸ್ ಲಭ್ಯವಿರುವುದಿಲ್ಲ.
ಪ್ರಸ್ತುತ ರಿಚಾರ್ಜ್ ಪ್ಲ್ಯಾನ್ಗಳನ್ನು ಗಮನಿಸಿದರೆ ಜಿಯೋ ಕಂಪೆನಿಯ ಮೂರು ಯೋಜನೆಗಳು 100 ರೂ. ಒಳಗಿದೆ. 38, 75 ಹಾಗೂ 98 ರೂ.ಗಳ ರಿಚಾರ್ಜ್ನಲ್ಲಿ ಇನ್ಮುಂದೆ ಉಚಿತ ಎಸ್ಎಂಎಸ್ ಅವಕಾಶ ಇರುವುದಿಲ್ಲ. ಹಾಗೆಯೇ ಏರ್ಟೆಲ್ ಕಂಪೆನಿಯ 79 ಹಾಗೂ 98 ರೂ. ಯೋಜನೆಯಲ್ಲೂ ಉಚಿತ ಸಂದೇಶ ಕಳಹಿಸಲಾಗುವುದಿಲ್ಲ. ಇನ್ನು ವೊಡಾಫೋನ್-ಐಡಿಯಾ ಈ ಹಿಂದೆ ಆಯ್ದ ರಿಚಾರ್ಜ್ಗಳ ಮೇಲೆ ಮಾತ್ರ ಫೀ ಎಸ್ಎಂಎಸ್ ನೀಡಿತ್ತು. ಇದೀಗ ಕಡಿಮೆ ಮೊತ್ತದ ರಿಚಾರ್ಜ್ ಮೂಲಕ ಸಿಗುತ್ತಿದ್ದ ಎಸ್ಎಂಎಸ್ ಆಫರ್ನ್ನು ಮೂರು ಕಂಪೆನಿಗಳು ಸ್ಥಗಿತಗೊಳಿಸಿದೆ.
ಇದನ್ನೂ ಓದಿ: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
(Airtel, Vodafone-Idea and Reliance Jio plans don’t offer free SMS)