AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Micromax In 2b: ಕೇವಲ 7,999 ರೂ. ಗೆ ಲಾಂಚ್ ಆಯಿತು ಆಕರ್ಷಕ ಫೀಚರ್​ನ ಹೊಸ ಸ್ವದೇಶಿ ಸ್ಮಾರ್ಟ್​ಫೊನ್

ಹೊಸ ಮೈಕ್ರೋಮ್ಯಾಕ್ಸ್ ಇನ್ 2 ಬಿ ಸ್ಮಾರ್ಟ್​ಫೋನ್ ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 4GB RAM ಮತ್ತು 64GB ಶೇಖರಣಾ ಆಯ್ಕೆಗೆ 7,999 ರೂ. ನಿಗದಿ ಮಾಡಲಾಗಿದೆ.

Micromax In 2b: ಕೇವಲ 7,999 ರೂ. ಗೆ ಲಾಂಚ್ ಆಯಿತು ಆಕರ್ಷಕ ಫೀಚರ್​ನ ಹೊಸ ಸ್ವದೇಶಿ ಸ್ಮಾರ್ಟ್​ಫೊನ್
Micromax In 2b
TV9 Web
| Updated By: Vinay Bhat|

Updated on:Jul 31, 2021 | 1:30 PM

Share

ಭಾರತದಲ್ಲಿ ಚೀನೀ ಸ್ಮಾರ್ಟ್​ಫೋನ್​ಗಳ ಹಾವಳಿಗಳ ನಡುವೆ ಸ್ವದೇಶಿ ಫೋನುಗಳು ಕೂಡ ಆಗಾಗ ಸದ್ದು ಮಾಡುತ್ತಿರುತ್ತವೆ. ಅಂತೆಯೆ ಭಾರತದ ಮೊಬೈಲ್‌ ಕಂಪೆನಿ ಮೈಕ್ರೋಮ್ಯಾಕ್ಸ್‌ ಇದೀಗ ಆಕರ್ಷಕ ಫೀಚರ್​ಗಳುಳ್ಳ ತನ್ನ ಹೊಸ ಮೈಕ್ರೋಮ್ಯಾಕ್ಸ್ ಇನ್ 2b ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಮೈಕ್ರೋಮ್ಯಾಕ್ಸ್ ಇನ್ 1b ಯ ಮುಂದಿನ ಆವೃತ್ತಿಯಾಗಿದೆ.

ಹೊಸ ಮೈಕ್ರೋಮ್ಯಾಕ್ಸ್ ಇನ್ 2 ಬಿ ಸ್ಮಾರ್ಟ್​ಫೋನ್ ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 4GB RAM ಮತ್ತು 64GB ಶೇಖರಣಾ ಆಯ್ಕೆಗೆ 7,999 ರೂ. ನಿಗದಿ ಮಾಡಿದ್ದರೆ, 6GB RAM ಮತ್ತು 64GB ಸ್ಟೋರೇಜ್ ಮಾದರಿಗೆ 8,999 ರೂ. ಇದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮತ್ತು ಮೈಕ್ರೋಮ್ಯಾಕ್ಸ್.ಕಾಮ್ ಮೂಲಕ ಫೋನ್ ಮಾರಾಟಕ್ಕೆ ಲಭ್ಯವಿರುತ್ತದೆ. ಆಗಸ್ಟ್ 6 ರಂದು ಮಧ್ಯಾಹ್ನ 12 ಗಂಟೆಗೆ ಮೊದಲ ಸೇಲ್ ಕಾಣಲಿದೆ.

ಮೈಕ್ರೊಮ್ಯಾಕ್ಸ್ ಇನ್‌ 2b ಸ್ಮಾರ್ಟ್‌ಫೋನ್‌ 6.52-ಇಂಚಿನ HD+ ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸಾಕ್ ಟಿ 610 ಆಕ್ಟಾ-ಕೋರ್ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ನೈಟ್ ಮೋಡ್, ಹಿನ್ನೆಲೆ ಭಾವಚಿತ್ರ, ಸೌಂದರ್ಯ ಮೋಡ್, ಚಲನೆಯ ಫೋಟೋ, ಪ್ಲೇ ಮತ್ತು ವಿರಾಮ ವೀಡಿಯೊ ಶೂಟ್, ಮತ್ತು ಪೂರ್ಣ-ಎಚ್ಡಿ ಫ್ರಂಟ್ ಮತ್ತು ಬ್ಯಾಕ್ ರೆಕಾರ್ಡಿಂಗ್ ಸೇರಿವೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 160 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್, 20 ಗಂಟೆಗಳ ವೆಬ್ ಬ್ರೌಸಿಂಗ್, 15 ಗಂಟೆಗಳ ವಿಡಿಯೋ ಸ್ಟ್ರೀಮಿಂಗ್ ಮತ್ತು 50 ಗಂಟೆಗಳ ಟಾಕ್ಟೈಮ್ ಅನ್ನು ನೀಡುತ್ತದೆ ಎಂದು ಕಂಪೆನಿ ಹೇಳಿದೆ.

Mi Hypersonic: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

OTT Plans: ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಥವಾ ಹಾಟ್​ಸ್ಟಾರ್: ಯಾವುದು ಬೆಸ್ಟ್​?

(Micromax In 2b With 5000mAh Battery Launched in India Price Starts at just Rs 7999)

Published On - 1:29 pm, Sat, 31 July 21

ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು