OTT Plans: ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಥವಾ ಹಾಟ್​ಸ್ಟಾರ್: ಯಾವುದು ಬೆಸ್ಟ್​?

OTT Plans Compared: ದೇಶದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್, ಸೋನಿ ಲೈವ್ ಹಾಗೂ ಹಾಟ್​ಸ್ಟಾರ್ ಅಧಿಪತ್ಯ ಸ್ಥಾಪಿಸಿದ್ದು, ಹೀಗಾಗಿ ಈ ಮೂರು ಒಟಿಟಿ ಫ್ಲಾಟ್​ಫಾರ್ಮ್​ಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ.

OTT Plans: ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಥವಾ ಹಾಟ್​ಸ್ಟಾರ್: ಯಾವುದು ಬೆಸ್ಟ್​?
ott plans comparison
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 30, 2021 | 6:02 PM

ಭಾರತದ ಮನರಂಜನಾ ಕ್ಷೇತ್ರದಲ್ಲಿ ಲೈವ್ ಸ್ಟ್ರೀಮಿಂಗ್ ಆ್ಯಪ್​ಗಳು ಹಾಗೂ ಫ್ಲಾಟ್​ಫಾರ್ಮ್​ಗಳು ಹೊಸ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಒಟಿಟಿ ಫ್ಲಾಟ್​ಫಾರ್ಮ್​ಗಳಂತು ಸಿನಿಪ್ರಿಯರ ನೆಚ್ಚಿನ ತಾಣವಾಗಿ ಮಾರ್ಟಿಪಟ್ಟಿದೆ. ಈಗಾಗಲೇ ವಿಶ್ವದ ಪ್ರಮುಖ ಒಟಿಟಿ ಫ್ಲಾಟ್​ಫಾರ್ಮ್​ಗಳಾದ ನೆಟ್​ಫ್ಲಿಕ್ಸ್ ( Netflix ), ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video ), ಸೋನಿ ಲೈವ್ (Sony Liv ) ಮತ್ತು ಡಿಸ್ನಿ + ಹಾಟ್​ಸ್ಟಾರ್ ( Disney Hotstar )​ಗಳು ದೇಶೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರ, ವೆಬ್ ಸಿರೀಸ್ ಸೇರಿದಂತೆ ಹಲವು ಮನರಂಜನಾತ್ಮಕ ಕಾರ್ಯಕ್ರಮಗಳನ್ನು ವೀಕ್ಷಕರ ಮುಂದಿಡುತ್ತಿದೆ.

ಪ್ರಸ್ತುತ ದೇಶದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ನೆಟ್​ಫ್ಲಿಕ್ಸ್, ಅಮೆಜಾನ್ ಪ್ರೈಮ್, ಸೋನಿ ಲೈವ್ ಹಾಗೂ ಹಾಟ್​ಸ್ಟಾರ್ ಅಧಿಪತ್ಯ ಸ್ಥಾಪಿಸಿದ್ದು, ಹೀಗಾಗಿ ಈ ಮೂರು ಒಟಿಟಿ ಫ್ಲಾಟ್​ಫಾರ್ಮ್​ಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ. ಈ ಫಲವಾಗಿ ಗ್ರಾಹಕರಿಗೂ ಹಲವು ರೀತಿಯ ಆಫರ್​ಗಳು ಕೂಡ ಲಭಿಸುತ್ತಿರುವುದು ವಿಶೇಷ. ಹೀಗೆ ಈ ಕಂಪೆನಿಗಳು ನೀಡುತ್ತಿರುವ ರಿಚಾರ್ಜ್​ ಆಫರ್​ಗಳಲ್ಲಿ ಯಾವುದು ಬೆಸ್ಟ್ ಎಂದು ನೋಡುವುದಾದರೆ…

ನೆಟ್‌ಫ್ಲಿಕ್ಸ್ ( Netflix ): ನಿಸ್ಸಂದೇಹವಾಗಿ ನೆಟ್‌ಫ್ಲಿಕ್ಸ್ ದೇಶದ ಅತ್ಯಂತ ಜನಪ್ರಿಯ OTT ಫ್ಲಾಟ್​ಫಾರ್ಮ್​ ಎಂದೇ ಹೇಳಬಹುದು. ಸಕ್ರೆಡ್ ಗೇಮ್ಸ್ ವೆಬ್ ಸಿರೀಸ್ ಮೂಲಕ ಜನಮನ್ನಣೆ ಪಡೆದ ನೆಟ್​ಫ್ಲಿಕ್ ಆ ಬಳಿಕ ಹಿಂತಿರುಗಿ ನೋಡಿಲ್ಲ. ದೆಹಲಿ ಕ್ರೈಮ್ಸ್, ಜಮ್ತಾರಾ ಮೂಲಕ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದುಕೊಂಡರು. ಇದರ ಜೊತೆ ಬಾಲಿವುಡ್ ಪ್ರೀಮಿಯರ್ ಮೂವೀಸ್, ಜನಪ್ರಿಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಾದ ಬಿಬಿಸಿ ಒನ್‌ನ ಎ ಸೂಟಬಲ್ ಬಾಯ್, ಡರ್ಟಿ ಜಾನ್ ಬ್ರಾವೋ ಹಲವು ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಇದೀಗ ಸ್ಥಳೀಯ ಭಾಷೆಗಳತ್ತ ಕೂಡ ನೆಟ್​ಫ್ಲಿಕ್ಸ್​ ಮುಖ ಮಾಡಿರುವುದು ವಿಶೇಷ. ಈ ಒಟಿಟಿ ಫ್ಲಾಟ್​ಫಾರ್ಮ್​ನ ರಿಚಾರ್ಜ್​ ಪ್ಲ್ಯಾನ್​ಗಳು ಹೀಗಿವೆ.

ರಿಚಾರ್ಜ್​ ಯೋಜನೆಗಳು ( Netflix Recharge plans ) : ಮೊಬೈಲ್ ಪ್ಲ್ಯಾನ್ : ತಿಂಗಳಿಗೆ 199 ರೂ., 480p ಪಿ ರೆಸಲ್ಯೂಶನ್, ಫೋನ್ ಮತ್ತು ಟ್ಯಾಬ್ಲೆಟ್​ನಲ್ಲಿ ಒಬ್ಬರು ಮಾತ್ರ ಲಾಗಿನ್ ಆಗಿ ನೆಟ್​ಫ್ಲಿಕ್ಸ್ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಬೇಸಿಕ್ ಪ್ಲ್ಯಾನ್ : ತಿಂಗಳಿಗೆ 499 ರೂ., 480p ರೆಸಲ್ಯೂಶನ್, ಮೊಬೈಲ್, ಕಂಪ್ಯೂಟರ್, ಟಿವಿ ಎಲ್ಲದರಲ್ಲೂ ವೀಕ್ಷಿಸಬಹದು. ಈ ಪ್ಲ್ಯಾನ್​ನಲ್ಲೂ ಏಕೈಕ ಲಾಗಿನ್ ಮಾತ್ರ ನೀಡಲಾಗಿದೆ. ಸ್ಟ್ಯಾಂಡರ್ಡ್ ಪ್ಲ್ಯಾನ್ : ತಿಂಗಳಿಗೆ 649 ರೂ, 1080p ರೆಸಲ್ಯೂಶನ್, ಮೊಬೈಲ್, ಕಂಪ್ಯೂಟರ್, ಟಿವಿ ಎಲ್ಲದರಲ್ಲೂ ವೀಕ್ಷಿಸಬಹದು. ಆದರೆ ಇಲ್ಲಿ ಇಬ್ಬರು ಏಕಕಾಲಕ್ಕೆ ಲಾಗಿನ್ ಆಗಿ ವೀಕ್ಷಿಸಬಹುದು. ಪ್ರೀಮಿಯಂ ಪ್ಲ್ಯಾನ್: ತಿಂಗಳಿಗೆ ರೂ 799, 4K HDR ರೆಸಲ್ಯೂಶನ್, ಮೊಬೈಲ್, ಕಂಪ್ಯೂಟರ್, ಟಿವಿ ಎಲ್ಲದರಲ್ಲೂ ವೀಕ್ಷಿಸಬಹದು. ಇಲ್ಲಿ 4 ಲಾಗಿನ್ ಅವಕಾಶವನ್ನು ನೀಡಲಾಗಿರುವುದು ವಿಶೇಷ. ಅಂದರೆ ಏಕಕಾಲದಲ್ಲಿ ನಾಲ್ಕು ಮಂದಿ ತಮಗೆ ಇಷ್ಟವಿರುವ ನೆಟ್​ಫ್ಲಿಕ್ಸ್​ ಕಾರ್ಯಕ್ರಮವನ್ನು ವೀಕ್ಷಿಸಬಹುದು.

ಅಮೆಜಾನ್ ಪ್ರೈಮ್ ವಿಡಿಯೋ ( Amazon Prime Video ): ಅಮೆಜಾನ್ ಪ್ರೈಮ್ ವಿಡಿಯೋ ಕೂಡ ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಈ ಒಟಿಟಿ ಫ್ಲಾಟ್​ಫಾರ್ಮ್​ ಕೂಡ ಬಾಲಿವುಡ್ ಸೇರಿದಂತೆ ಸ್ಥಳೀಯ ಭಾಷೆಗಳ ಚಲನಚಿತ್ರ ಹಾಗೂ ವೆಬ್ ಸಿರೀಸ್ ಮೂಲಕ ಹೆಚ್ಚು ವೀಕ್ಷಕರನ್ನು ಸೆಳೆದುಕೊಂಡಿದೆ. ಈಗಾಗಲೇ ಕನ್ನಡ ಸೇರಿದಂತೆ ಹಲವು ಭಾಷೆಗಳ ಸೂಪರ್ ಹಿಟ್ ಚಿತ್ರಗಳಿಗೆ ಅಮೆಜಾನ್ ಪ್ರೈಮ್ ವೇದಿಕೆಯಾಗಿದೆ. ಇದರ ರಿಚಾರ್ಜ್ ಪ್ಲ್ಯಾನ್​ಗಳು ಹೀಗಿವೆ.

ರಿಚಾರ್ಜ್​ ಯೋಜನೆಗಳು ( Amazon Prime Recharge Plans) ಮಾಸಿಕ : 129 ರೂ, 4K HDR ರೆಸಲ್ಯೂಶನ್ (ಡಿಸ್​ಪ್ಲೇ ಮತ್ತು ಸ್ಟ್ರೀಮಿಂಗ್ ಸಾಧನವನ್ನು ಅವಲಂಬಿಸಿರಲಿದೆ), ಏಕಕಾಲದಲ್ಲಿ ಮೂವರು ಲಾಗಿನ್ ಆಗಬಹುದು. ತ್ರೈಮಾಸಿಕ : ರೂ 329 ರೂ, 4K HDR ರೆಸಲ್ಯೂಶನ್ (ಡಿಸ್​ಪ್ಲೇ ಮತ್ತು ಸ್ಟ್ರೀಮಿಂಗ್ ಸಾಧನವನ್ನು ಅವಲಂಬಿಸಿರಲಿದೆ), ಏಕಕಾಲದಲ್ಲಿ ಮೂವರು ಲಾಗಿನ್ ಆಗಬಹುದು. ವಾರ್ಷಿಕ : 999 ರೂ, 4K HDR ರೆಸಲ್ಯೂಶನ್ (ಡಿಸ್​ಪ್ಲೇ ಮತ್ತು ಸ್ಟ್ರೀಮಿಂಗ್ ಸಾಧನವನ್ನು ಅವಲಂಬಿಸಿರಲಿದೆ). ಏಕಕಾಲದಲ್ಲಿ ಮೂವರು ಲಾಗಿನ್ ಆಗಬಹುದು.

ಡಿಸ್ನಿ+ ಹಾಟ್ ಸ್ಟಾರ್ ( Disney Hotstar ) ಭಾರತೀಯ ಒಟಿಟಿ ಫ್ಲಾಟ್​ಫಾರ್ಮ್​ನಲ್ಲಿ ಹಾಟ್​ಸ್ಟಾರ್ ಕೂಡ ಒಂದು. ಮುಖ್ಯವಾಗಿ ಈ ಪ್ಲಾಟ್​ಫಾರ್ಮ್​ ಐಪಿಎಲ್​ಗೆ ವೇದಿಕೆ ರೂಪಿಸಿರುವುದು ವಿಶೇಷ. ಹೀಗಾಗಿಯೇ ಅತ್ಯಂತ ಜನಪ್ರಿಯ ವಿಷಯದಲ್ಲಿ ಹಾಟ್​ ಸ್ಟಾರ್ ಮುಂಚೂಣಿಯಲ್ಲಿದೆ. ಕ್ರಿಕೆಟ್​ ಅಲ್ಲದೆ, ಹಲವು ಕಾರ್ಯಕ್ರಮಗಳು, ಸಿನಿಮಾಗಳು ಹಾಗೂ ಲೈವ್ ಚಾನೆಲ್​ಗಳನ್ನು ಹಾಟ್​ ಸ್ಟಾರ್ ಮೂಲಕ ವೀಕ್ಷಿಸಬಹುದು. ಹಾಗಿದ್ರೆ ಈ ಪ್ಲಾಟ್​ಫಾರ್ಮ್​ನ ರಿಚಾರ್ಜ್ ಪ್ಲ್ಯಾನ್​ಗಳಾವುವು ನೋಡೋಣ.

ರಿಚಾರ್ಜ್​ ಯೋಜನೆಗಳು ( Disney Hotstar Recharge plans ): ವಿಐಪಿ : ವರ್ಷಕ್ಕೆ 399 ರೂ., 1080ಪಿ ರೆಸಲ್ಯೂಶನ್, ಒಬ್ಬರು ಮಾತ್ರ ಲಾಗಿನ್ ಆಗಬಹುದು. ಪ್ರೀಮಿಯಂ : ತಿಂಗಳಿಗೆ 299 ರೂ ಅಥವಾ ವರ್ಷಕ್ಕೆ 1,499 ರೂ. ಇದರಲ್ಲಿ ಡಾಲ್ಬಿ ಅಟ್ಮೋಸ್ ಮತ್ತು ಡಾಲ್ಬಿ ವಿಷನ್ ಜೊತೆ 4ಕೆ ರೆಸಲ್ಯೂಶನ್​ನಲ್ಲಿ ವಿಡಿಯೋ ವೀಕ್ಷಿಸಬಹುದು. ಏಕಕಾಲದಲ್ಲಿ ಇಬ್ಬರು ಲಾಗಿನ್ ಆಗಬಹುದು.

ಸೋನಿ ಲೈವ್ ( Sony Liv ): ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಪಡೆದ ಮತ್ತೊಂದು ಒಟಿಟಿ ಪ್ಲಾಟ್​ಫಾರ್ಮ್ ಅಂದರೆ ಸೋನಿ ಲೈವ್. ಫುಟ್​ಬಾಲ್ ಲೈವ್ ಹಾಗೂ ಕ್ರಿಕೆಟ್​ ಟೂರ್ನಿಗಳ ಲೈವ್ ಮೂಲಕ ಹೆಚ್ಚಿನ ವೀಕ್ಷಕರನ್ನು ಸೆಳೆದುಕೊಂಡಿರುವ ಸೋನಿ ಲೈವ್​ನಲ್ಲಿ ನೀವು ಸಿನಿಮಾ ಹಾಗೂ ರಿಯಾಲಿಟಿ ಶೋಗಳನ್ನು ಕೂಡ ವೀಕ್ಷಿಸಬಹುದು. ಹಾಗಿದ್ರೆ ಇದರ ರಿಚಾರ್ಜ್ ಪ್ಲ್ಯಾನ್​ಗಳಾವುವು ನೋಡೋಣ.

ರಿಚಾರ್ಜ್​ ಯೋಜನೆಗಳು ( Sony Liv  Recharge Plans ):

ಸ್ಪೆಷಲ್ : ವರ್ಷಕ್ಕೆ 199 ರೂ., ಈ ಪ್ಲ್ಯಾನ್​ನಲ್ಲಿ ಒರಿಜಿನಲ್ಸ್ ಕಾರ್ಯಕ್ರಮ ವೀಕ್ಷಿಸಲಾಗುವುದಿಲ್ಲ (ಪ್ರಮುಖ ಸಿನಿಮಾ ಅಥವಾ ವೆಸ್ ಸಿರೀಸ್). ಹಾಗೆಯೇ ಕ್ರೀಡಾ ನೇರ ಪ್ರಸಾರವಿರಲ್ಲ. ಜಾಹೀರಾತು ಇರಲಿದ್ದು, ಒಬ್ಬರು ಮಾತ್ರ ಲಾಗಿನ್ ಆಗಬಹುದು. WWE ನೆಟ್​ವರ್ಕ್​ : ವರ್ಷಕ್ಕೆ 299ರೂ, ಒಬ್ಬರು ಮಾತ್ರ ಲಾಗಿನ್ ಆಗಬಹುದು. ಈ ಪ್ಲ್ಯಾನ್​ನಲ್ಲಿ ನೀವು WWE ಕಾರ್ಯಕ್ರಮ ಮಾತ್ರ ವೀಕ್ಷಿಸಬಹುದು. ಸ್ಪೆಷಲ್ + : ವರ್ಷಕ್ಕೆ 399 ರೂ. ಈ ಪ್ಲ್ಯಾನ್​ನಲ್ಲಿ ಒರಿಜಿನಲ್ಸ್ ಕಾರ್ಯಕ್ರಮ ವೀಕ್ಷಿಸಲಾಗುವುದಿಲ್ಲ (ಪ್ರಮುಖ ಸಿನಿಮಾ ಅಥವಾ ವೆಸ್ ಸಿರೀಸ್). ಹಾಗೆಯೇ ಕ್ರೀಡಾ ನೇರ ಪ್ರಸಾರವಿರಲ್ಲ. ಒಬ್ಬರು ಮಾತ್ರ ಲಾಗಿನ್ ಆಗಬಹುದು. ಪ್ರೀಮಿಯಂ : ತಿಂಗಳಿಗೆ 299 ರೂ. ಅರ್ಧ ವರ್ಷಕ್ಕೆ ರೂ 699 ರೂ., ವಾರ್ಷಿಕ ರೂ 999 ರೂ., ಇಬ್ಬರು ಲಾಗಿನ್ ಆಗಬಹುದು.

ಇದನ್ನೂ ಓದಿ: Jio Offer: 3GB ಡೇಟಾ ಜೊತೆ ಕಡಿಮೆ ಬೆಲೆ ಹೊಸ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ ಜಿಯೋ

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

(OTT Plans Compared Netflix v Amazon Prime Video v Hotstar)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್