ದೇಶದ ಇಂಟರ್‌ನೆಟ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಫೈಬರ್ (JioFiber ) ಪ್ರವೇಶದ ಬಳಿಕ ಪ್ರಮುಖ ಟೆಲಿಕಾಂ ಕಂಪೆನಿ ಏರ್ಟೆಲ್ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಭಾರೀ ಸ್ಪರ್ಧೆ ನಡೆಸುತ್ತಿದೆ. ರಿಲಯನ್ಸ್ ಜಿಯೋ ಫೈಬರ್ಗೆ ಟ್ಟಕರ್ ಕೊಡಲು ಏರ್ಟೆಲ್ (Airtel) ಎಕ್ಸ್‌ಸ್ಟ್ರೀಮ್ ಸೇವೆಗಳನ್ನು ಭರ್ಜರಿ ಆಫರ್ನಲ್ಲಿ ಬಿಡುಗಡೆ ಮಾಡುತ್ತಿದೆ. ಇತ್ತ ಬಿಎಸ್ಎನ್ಎಲ್ ಕೂಡ ಇದರಲ್ಲಿ ಹಿಂದೆಬಿದ್ದಿಲ್ಲ. ಆನ್ಲೈನ್ ತರಗತಿಗಳು, ಸ್ಟ್ರೀಮಿಂಗ್ ಶೋಗಳು, ಇನ್ನಿತರ ಬಳಕೆಗಾಗಿ ದಿನನಿತ್ಯದ ಇಂಟರ್‌ನೆಟ್ ಸಾಕಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಜಿಯೋ ಫೈಬರ್, ಏರ್ಟೆಲ್ ಎಕ್ಸ್‌ಸ್ಟ್ರೀಮ್ (Airtel Xstream), ಬಿಎಸ್ಎನ್ಎಲ್ (BSNL) ಭಾರತ್ ಫೈಬರ್ ಬಂಪರ್ ಆಫರ್ಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ದಿನನಿತ್ಯದ 1,500 ರೂ. ಕ್ಕಿಂತ ಕಡಿಮೆ ಬೆಲೆಯ ವಿವಿಧ ಪ್ಲಾನ್ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.
ಜಿಯೋ ಫೈಬರ್ 699 ರೂಪಾಯಿಯ ಬ್ರಾಡ್ಬ್ಯಾಂಡ್ ಪ್ಲಾನ್ 60Mbps ವೇಗದಲ್ಲಿ ಅನಿಯಮಿತ ಇಂಟರ್‌ನೆಟ್ ನೀಡುತ್ತದೆ. ಈ ಯೋಜನೆಯು ಜಿಯೋ ಆ್ಯಪ್ಗಳನ್ನು ಹೊರತುಪಡಿಸಿ ಹೆಚ್ಚುವರಿ OTT ಚಂದಾದಾರಿಕೆಗಳೊಂದಿಗೆ ಬರುವುದಿಲ್ಲ. ಆದರೆ ಅನಿಯಮಿತ ಕರೆಯ ಸೌಲಭ್ಯವನ್ನು ನೀಡುತ್ತದೆ. ಇದರ ಜೊತೆಗೆ ಜಿಯೋಫೈಬರ್ 999 ರೂಪಾಯಿಯ ಬ್ರಾಡ್ಬ್ಯಾಂಡ್ ಪ್ಲಾನ್ 150Mbps ವರೆಗಿನ ಡೌನ್ಲೋಡ್ ಮತ್ತು ಅಪ್ಲೋಡ್ ವೇಗ ಮತ್ತು ಅನಿಯಮಿತ ಇಂಟರ್ನೆಟ್ನೊಂದಿಗೆ ಬರುತ್ತದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆ ಮತ್ತು ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್ ಸ್ಟಾರ್, ಸೋನಿ ಎಲ್ಐವಿ, ಜೀ 5, ಆಲ್ಟ್ ಬಾಲಾಜಿ ಸೇರಿದಂತೆ 14 OTT ಆ್ಯಪ್ಗಳಿಗೆ ವೀಕ್ಷಿಸುವ ಪ್ರಯೋಜನ ನೀಡುತ್ತದೆ.
ಏರ್ಟೆಲ್ ಎಕ್ಸ್ಸ್ಟ್ರೀಮ್ನಲ್ಲಿ 799 ರೂ. ವಿನ ಬ್ರಾಡ್ಬ್ಯಾಂಡ್ ಯೋಜನೆಯು 70 Mbps ವೇಗದೊಂದಿಗೆ ಅನಿಯಮಿತ ಇಂಟರ್‌ನೆಟ್ ನೀಡುತ್ತದೆ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್, ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಗೆ ಚಂದಾದಾರಿಕೆಯಂತಹ ಇತರ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ನೀವು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್, ವೂಟ್ ಬೇಸಿಕ್, ಎರೋಸ್ ನೌ, ಹಂಗಾಮ ಪ್ಲೇ, ಬಳಸಬಹುದಾಗಿದೆ. ಏರ್ಟೆಲ್ನ ಇನ್ನೊಂದು 999 ರೂ. ವಿನ ಬ್ರಾಡ್ಬ್ಯಾಂಡ್ ಪ್ಲಾನ್ ಮೂಲಕ ಅನಿಯಮಿತ ಕರೆ ಮತ್ತು 200 Mbps ವೇಗದ ಇಂಟರ್‌ನೆಟ್ ಅನ್ನು ನೀಡುತ್ತದೆ. ಇದು Zee5, Amazon Prime, Disney+ Hotstar ಗೆ VIP ಚಂದಾದಾರಿಕೆ ಮತ್ತು Airtel XStream ಅಪ್ಲಿಕೇಶನ್ನಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ನೀಡುತ್ತದೆ.
ಇನ್ನೂ BSNL ಭಾರತ್ ಫೈಬರ್ನ 799 ರೂ. ಬ್ರಾಡ್ಬ್ಯಾಂಡ್ ಯೋಜನೆಯು 100 Mbps ವೇಗವನ್ನು 3300GB ಅಥವಾ 3.3 TB ಅಥವಾ 3300GB ಡೇಟಾವನ್ನು ನೀಡುತ್ತದೆ. FUP ಮಿತಿಯನ್ನು ತಲುಪಿದ ನಂತರ, ವೇಗವನ್ನು 2 Mbps ಗೆ ಇಳಿಸಲಾಗುತ್ತದೆ. BSNL ಇತ್ತೀಚೆಗೆ ಭಾರತ್ ಫೈಬರ್ ಸೂಪರ್ಸ್ಟಾರ್ ಪ್ರೀಮಿಯಂ ಎಂಬ OTT ಪ್ರಯೋಜನಗಳನ್ನು ಹೊಂದಿರುವ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ರೂ 749 ಬೆಲೆಯಿದೆ ಮತ್ತು 100 Mbps ವೇಗವನ್ನು 100 GB ವರೆಗೆ ನೀಡುತ್ತದೆ. ನಂತರ ಅದನ್ನು 5 Mbps ಗೆ ಇಳಿಸಲಾಗುತ್ತದೆ. ಈ ಯೋಜನೆ ಅಂಡಮಾನ್ ಮತ್ತು ನಿಕೋಬಾರ್ ವಲಯಗಳನ್ನು ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಲಭ್ಯವಿದೆ.
Flipkart Big Billion Days sale 2021: ಐಪೋನ್ ಖರೀದಿಸಲು ಈಗ ಹೆಚ್ಚು ಹಣ ಬೇಡ: ಕೇವಲ 30,000 ರೂ. ಇದ್ದರೆ ಸಾಕು
OnePlus 9RT: ಬಿಡುಗಡೆಗೆ ಸಜ್ಜಾದ ವಿಶೇಷ ವಿನ್ಯಾಸದ ಒನ್ಪ್ಲಸ್ 9RT ಸ್ಮಾರ್ಟ್ಫೋನ್: ಇದರಲ್ಲಿದೆ ಸಾಕಷ್ಟು ವಿಶೇಷತೆ
(Airtel XStream JioFiber and BSNL Bharat Fiber offer a range of broadband plans that are priced under Rs 1500)