Reliance AGM: ಅಲ್ಟ್ರಾ-ಹೈ ಫೈಬರ್ ಸ್ಪೀಡ್​ನೊಂದಿಗೆ ಜಿಯೋದಿಂದ ಬರುತ್ತಿದೆ ಹೊಸ ಹಾಟ್​​ಸ್ಪಾಟ್

| Updated By: Vinay Bhat

Updated on: Aug 29, 2022 | 3:56 PM

ಜಿಯೋ ಏರ್‌ಫೈಬರ್ ಗ್ರಾಹಕರಿಗೆ ಮನೆ ಮತ್ತು ಕಚೇರಿಗಳಲ್ಲಿ ಫೈಬರ್ ಮಾದರಿ ವೇಗವಿರುವ ವೈಫೈ ಹಾಟ್‌ಸ್ಪಾಟ್ ಆಗಿದೆ. ಗಿಗಾಬಿಟ್ ಸ್ಪೀಡ್​ನಲ್ಲಿ ನಿಮ್ಮ ಮನೆ ಅಥವಾ ಕಚೇರಿಗಳಲ್ಲಿ ಇದನ್ನು ಉಪಯೋಗಿಸಬಹುದು ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.

Reliance AGM: ಅಲ್ಟ್ರಾ-ಹೈ ಫೈಬರ್ ಸ್ಪೀಡ್​ನೊಂದಿಗೆ ಜಿಯೋದಿಂದ ಬರುತ್ತಿದೆ ಹೊಸ ಹಾಟ್​​ಸ್ಪಾಟ್
Akash Ambani and Mukesh Ambani
Follow us on

ರಿಲಯನ್ಸ್​ 2022ರ (Reliance AGM) ವಾರ್ಷಿಕ ಸಾಮಾನ್ಯ ಸಭೆಯನ್ನು ಇಂದು ನಡೆದಿದ್ದು ಇದರಲ್ಲಿ, 2022 ರ ದೀಪಾವಳಿ ಹೊತ್ತಿಗೆ ಜಿಯೋ 5 ಜಿ (JIO 5G) ಅನ್ನು ಭಾರತದ ಮೆಟ್ರೋ ನಗರಗಳಲ್ಲಿ ಪ್ರಾರಂಭಿಸಲಿದ್ದೇವೆ ಎಂದು ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಣೆ ಮಾಡಿದ್ದಾರೆ. ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳಿಗೆ ಮೊದಲು ಈ 5ಜಿ ಸೇವೆ ಬರಲಿದೆ. ಇದರ ಜೊತೆಗೆ ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ (Akash Ambani) ಜಿಯೋ ಏರ್‌ಫೈಬರ್ ಅನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ಜಿಯೋ ಏರ್‌ಫೈಬರ್ ಗ್ರಾಹಕರಿಗೆ ಮನೆ ಮತ್ತು ಕಚೇರಿಗಳಲ್ಲಿ ಫೈಬರ್ ಮಾದರಿ ವೇಗವಿರುವ ವೈಫೈ ಹಾಟ್‌ಸ್ಪಾಟ್ ಆಗಿದೆ. ಗಿಗಾಬಿಟ್ ಸ್ಪೀಡ್​ನಲ್ಲಿ ನಿಮ್ಮ ಮನೆ ಅಥವಾ ಕಚೇರಿಗಳಲ್ಲಿ ಇದನ್ನು ಉಪಯೋಗಿಸಬಹುದು ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ. ಜೊತೆಗೆ ಭಾರತದಲ್ಲಿ 5G ಸೇವೆಗಳನ್ನು ಹೊರತರುವುದರೊಂದಿಗೆ, ಪ್ರಸ್ತುತ 800 ಮಿಲಿಯನ್ ಸಂಪರ್ಕಿತ ಇಂಟರ್ನೆಟ್ ಸಾಧನಗಳು ಕೇವಲ ಒಂದು ವರ್ಷದಲ್ಲಿ 1.5 ಶತಕೋಟಿ ಸಂಪರ್ಕಿತ ಇಂಟರ್ನೆಟ್ ಸಾಧನಗಳಿಗೆ ದ್ವಿಗುಣಗೊಳ್ಳುತ್ತವೆ ಎಂದು ಅವರು ಹೇಳಿದರು.

”ಡಿಸೆಂಬರ್ 2023 ರ ವೇಳೆಗೆ ಕಂಪನಿಯು ಭಾರತದ ಪ್ರತಿಯೊಂದು ಪಟ್ಟಣಕ್ಕೆ 5G ಅನ್ನು ತಲುಪಿಸಲಿದೆ. ಜಿಯೋ 5G ಯಾವುದೇ ವೈರ್‌ಗಳಿಲ್ಲದೆ ಗಾಳಿಯ ಮೇಲೆ ಅಲ್ಟ್ರಾಹೈ ಫೈಬರ್ ತರಹದ ವೇಗವನ್ನು ನೀಡುತ್ತದೆ. ನಾವು ಇದನ್ನು ಜಿಯೋ ಏರ್ ಫೈಬರ್ ಎಂದು ಕರೆಯುತ್ತಿದ್ದೇವೆ. JioAirFiber ನೊಂದಿಗೆ, ನಿಮ್ಮ ಮನೆ ಅಥವಾ ಕಚೇರಿಯನ್ನು ಗಿಗಾಬಿಟ್ವೇಗದ ಇಂಟರ್ನೆಟ್‌ಗೆ ತ್ವರಿತವಾಗಿ ಸಂಪರ್ಕಿಸಲು ಸುಲಭವಾಗಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Breaking News: ಭಾರತದಲ್ಲಿ ದೀಪಾವಳಿಗೆ ಜಿಯೋ 5G ಸೇವೆ ಆರಂಭ: ಮುಖೇಶ್ ಅಂಬಾನಿ ಘೋಷಣೆ
Artemis-1 ಉಡ್ಡಯನ: ಭವಿಷ್ಯದಲ್ಲಿ ಚಂದ್ರನ ಮೇಲೆ ಶಾಶ್ವತ ಮಾನವ ನೆಲೆ ಕಂಡುಕೊಳ್ಳಲು ಇಂದು ಮೊದಲ ಹೆಜ್ಜೆ
iQOO Neo 7: ಭಾರತದಲ್ಲಿ ಭರ್ಜರಿ ಯಶಸ್ಸು ಕಂಡ ಐಕ್ಯೂ ನಿಯೋ 6: ಇದೀಗ ನಿಯೋ 7 ಬಿಡುಗಡೆಗೆ ತಯಾರಿ
ವಾಟ್ಸ್​ಆ್ಯಪ್​ನಲ್ಲಿ ಸುಲಭವಾಗಿ ಕರೆ ರೆಕಾರ್ಡ್ ಮಾಡಬಹುದು: ಇಲ್ಲಿದೆ ನೋಡಿ ಟ್ರಿಕ್ಸ್

ಜಿಯೋ 5ಜಿ ಸೇವೆಗಾಗಿ ಬಹುತೇಕರು ಕಾಯುತ್ತಿದ್ದಾರೆ. ಅದರಂತೆಯೇ ಏರ್​ಟೆಲ್​, ವೊಡಾಫೋನ್​ ಐಡಿಯಾ ಕೂಡ 5ಜಿ ಸೇವೆಯ ಬಗ್ಗೆ ಅಪ್ಡೇಡ್​ ಕೊಡುತ್ತಿದ್ದಾರೆ. ಒಟ್ಟಾರೆ ಹೇಳಬೇಕಾದರೆ ಟೆಲಿಕಾಂ ಕಂಪನಿಗಳು ಮುಂದಿನ 5ಜಿ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅದರಂತೆ ಜಿಯೋ ದೀಪಾವಳಿ ಉಡುಗೊರೆ ಎಂಬಂತೆ ಮೆಟ್ರೋ ನಗರಗಳಲ್ಲಿ 5ಜಿ ಸೇವೆ ಪ್ರಾರಂಭಿಸುವುದಾಗಿ ತಿಳಿಸಿದೆ. ಡಿಸೆಂಬರ್ 2023 ರ ವೇಳೆಗೆ 18 ತಿಂಗಳುಗಳಲ್ಲಿ ಇಡೀ ಭಾರತವನ್ನು ಆವರಿಸಲು ಇತರ ನಗರಗಳು ಮತ್ತು ಪಟ್ಟಣಗಳಿಗೆ ಹಂತ ಹಂತವಾಗಿ ವಿಸ್ತರಿಸಲಿದೆ. ವೇಗದ ಇಂಟರ್​ನೆಟ್​ ಸೇವೆಯನ್ನು ನೀಡುವುದಾಗಿ ಜಿಯೋ ಹೇಳಿಕೊಂಡಿದೆ.

ನಮ್ಮ ಕಂಪನಿಯು ವಾರ್ಷಿಕ ಆದಾಯದಲ್ಲಿ 100 ಬಿಲಿಯನ್ ಡಾಲರ್ ದಾಟಿದ ಭಾರತದ ಮೊದಲ ಕಾರ್ಪೊರೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಿಲಯನ್ಸ್ ಏಕೀಕೃತ ಆದಾಯವು ಶೇಕಡಾ 47 ರಷ್ಟು ಏರಿಕೆಯಾಗಿ 7.93 ಲಕ್ಷ ಕೋಟಿ ರೂ.ಗೆ ಅಥವಾ 104.6 ಬಿಲಿಯನ್ ಡಾಲರ್​ಗೆ ತಲುಪಿದೆ. ಜಿಯೋ ಮಾರ್ಟ್​ ಮತ್ತು ವಾಟ್ಸ್​ಆ್ಯಪ್ ಪಾಲುದಾರಿಕೆಯು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರ ಮೂಲಕ ಬಳಕೆದಾರರು ವಾಟ್ಸ್​ಆ್ಯಪ್ ಪಾವತಿ, ಕ್ಯಾಶ್ ಆನ್ ಡೆಲಿವರಿ ಮತ್ತು ಇತರ ಪಾವತಿ ವಿಧಾನಗಳನ್ನು ಬಳಸಬಹುದು,” ಎಂದು ಮುಖೇಶ್ ಅಂಬಾನಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ವಾರ್ಷಿಕ ಸಭೆಯಲ್ಲಿ ಮುಖೇಶ್ ಅಂಬಾನಿ ಕಿರಿಯ ಮಗ ಅನಂತ್ ಅವರನ್ನು ರಿಲಯನ್ಸ್‌ ಉತ್ತರಾಧಿಕಾರಿ ಯೋಜನೆಯಲ್ಲಿ ಹೊಸ ಇಂಧನ ವ್ಯವಹಾರಕ್ಕೆ ಮುಖ್ಯಸ್ಥನಾಗಿ ಘೋಷಣೆ ಮಾಡಲಾಯಿತು. ಜೊತೆಗೆ ಇಶಾ ಅಂಬಾನಿ ಅವರನ್ನು ಚಿಲ್ಲರೆ ವ್ಯಾಪಾರದ ಮುಖ್ಯಸ್ಥೆಯಾಗಿ ನೇಮಕ ಮಾಡಲಾಗಿದೆ.

Published On - 3:49 pm, Mon, 29 August 22