Amazon India: ಭಾರತದ ಕಾನೂನು ಮೀರಿದ ಅಮೆಜಾನ್​ ಬಗ್ಗೆ ವರದಿ ನೋಡಿದ ನಂತರವೂ ಸಮರ್ಥಿಸಿದ್ದ US ಅಧಿಕಾರಿಗಳು

ಅಮೆರಿಕ ಮೂಲದ ಅಮೆಜಾನ್ ಇ-ಕಾಮರ್ಸ್ ಕಂಪೆನಿಯು ಭಾರತದ ಕಾನೂನು ಮೀರುತ್ತಿದೆ ಎಂಬ ಬಗ್ಗೆ ರಾಯಿಟರ್ಸ್ ಸುದ್ದಿ ಪ್ರಕಟಿಸಿತ್ತು. ಆ ನಂತರ ಕೂಡ ಅಮೆರಿಕದ ಅಧಿಕಾರಿಗಳು ಆ ಕಂಪೆನಿಯ ಬೆಂಬಲಕ್ಕೆ ನಿಂತಿದ್ದವು

Amazon India: ಭಾರತದ ಕಾನೂನು ಮೀರಿದ ಅಮೆಜಾನ್​ ಬಗ್ಗೆ ವರದಿ ನೋಡಿದ ನಂತರವೂ ಸಮರ್ಥಿಸಿದ್ದ US ಅಧಿಕಾರಿಗಳು
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:May 21, 2021 | 7:01 PM

ಭಾರತದಲ್ಲಿ ಅಮೆಜಾನ್ ಅನುಸರಿಸುತ್ತಿರುವ ಉದ್ಯಮ ನಡೆಸುವ ಪದ್ಧತಿಯನ್ನು ಅಮೆರಿಕದ ಅಧಿಕಾರಿಗಳು ಸಮರ್ಥಿಸಿಕೊಂಡಿರುವ ಬಗ್ಗೆ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಕೆಲವು ಮಾರಾಟಗಾರರು ಭಾರತದಲ್ಲಿ ಸ್ಥಳೀಯ ಕಾನೂನು ಮೀರಿದ್ದಾರೆ ಎಂದು ಫೆಬ್ರವರಿಯಲ್ಲಿ ರಾಯಿಟರ್ಸ್ ವರದಿ ಮಾಡಿತ್ತು. ವಿದೇಶಿ ಇ- ಕಾಮರ್ಸ್ ಕಂಪೆನಿಯಾದ ಅಮೆಜಾನ್ ಎಲ್ಲ ಮಾರಾಟಗಾರರನ್ನು ಸಮಾನವಾಗಿ ನೋಡಬೇಕು ಎಂದು ಈ ಬಗ್ಗೆ ದಾಖಲಾತಿಗಳನ್ನು ಸಂಗ್ರಹಿಸಿದ್ದ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಆದರೆ ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರಸೆಂಟೇಟಿವ್ (USTR)ನ ಅಮೆರಿಕದ ಮಾಹಿತಿ ಸ್ವಾತಂತ್ರ್ಯ ಕಾಯ್ದೆ ಅಡಿ ಪಡೆಯಲಾದ ಇಮೇಲ್​ ಪ್ರಕಾರ, ಅಧ್ಯಕ್ಷ ಜೋ ಬೈಡನ್​ ಸರ್ಕಾರದಲ್ಲಿ ಪ್ರಮುಖ ರಾಯಭಾರಿ ಹುದ್ದೆಯಲ್ಲಿರುವ ಜಾನ್ ಕೆರಿಗೆ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದು, ಫೆಬ್ರವರಿ 18ರ ದಿನಾಂಕವನ್ನು ಆ ಇಮೇಲ್ ಹೊಂದಿದೆ. ಅದರಲ್ಲಿರುವಂತೆ, ಭಾರತದಲ್ಲಿ ನಿಗಾ ಸಂಸ್ಥೆಗಳು ಇಂಥ ಹಲವು ಆರೋಪಗಳು ಇರುವ ಬಗ್ಗೆ ಅಮೆರಿಕದ ಇ-ಕಾಮರ್ಸ್ ಕಂಪೆನಿಗಳ ವಿರುದ್ಧ ಪರಿಶೀಲಿಸಿವೆ. ಆದರೆ ಯಾವುದೇ ತಪ್ಪು ಕಂಡುಬಂದಿಲ್ಲ ಎನ್ನಲಾಗಿದೆ.

ಅಂದಹಾಗೆ ಈಗ ಹವಾಮಾನ ಬದಲಾವಣೆ ನೀತಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಬೈಡನ್​ರ ರಾಯಭಾರಿ ಆದ ಕೆರಿ. ಭಾರತದ ಸಚಿವರಾದ ಪಿಯೂಷ್ ಗೋಯೆಲ್ ಜತೆಗೆ ಅವರು ಮಾತುಕತೆ ನಡೆಸಲು ಸಮಯ ನಿಗದಿ ಆಗಿತ್ತು. ಎಲ್ಲಿ ಸುದ್ದಿ ಸಂಸ್ಥೆ ಮಾಡಿದ ವರದಿಯ ಬಗ್ಗೆ ಗೋಯೆಲ್ ಧ್ವನಿ ಎತ್ತುತ್ತಾರೋ ಎಂಬ ಆತಂಕ ಅಮೆರಿಕಾಗೆ ಇತ್ತು. ಯಾವುದಕ್ಕೂ ಈ ಲೇಖನದ ಬಗ್ಗೆ ಇರಲಿ ಅಂತ ಒಂದು ವರದಿಯನ್ನು ಸಿದ್ಧಪಡಿಸಿಕೊಂಡಿದ್ದದ್ದು ಇಮೇಲ್​ನಿಂದ ಗೊತ್ತಾಗುತ್ತದೆ. ಮಾತುಕತೆಯ ಮಧ್ಯದಲ್ಲಿ ಈ ವಿಷಯವನ್ನು ಗೋಯೆಲ್ ಪ್ರಸ್ತಾವ ಮಾಡುವ ಸಾಧ್ಯತೆ ಬಗ್ಗೆ ಅಮೆರಿಕದ ರಾಯಭಾರ ಅಧಿಕಾರಿಯಾಗಿ ದೆಹಲಿಯಲ್ಲಿ ಇರುವ ಥಾಮಸ್ ಕಾರ್ನೆಗಿ ಅವರು USTRಗೆ ಇಮೇಲ್ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೆರಿ- ಗೋಯೆಲ್ ಕರೆಯ ನಂತರ ಏನಾಯಿತು? ಮತ್ತೊಬ್ಬ ಅಮೆರಿಕ ರಾಯಭಾರ ಅಧಿಕಾರಿ ಫಿಲಿಪ್ ಎಂ. ಇಂಗೆನೆರಿ ಕೂಡ USTRಗೆ ಫೆಬ್ರವರಿ 18ರಂದು ಇಮೇಲ್​ನಲ್ಲಿ ಈ ಬಗ್ಗೆ ತಿಳಿಸಿದ್ದು. ಅಮೆಜಾನ್ ಇಂಡಿಯಾವು ಸರ್ಕಾರದ ಜತೆಗೆ ನಡೆಸಿರುವ ವ್ಯವಹಾರದ ಬಗ್ಗೆ ಕೆರಿ ಸಿದ್ಧಪಡಿಸಿದ ವರದಿ ಪರಿಶೀಲಿಸಲಾಗಿದೆ. ಅದು ಸತ್ಯ ಮತ್ತು ನಿಖರವಾಗಿದೆ ಎಂದಿದ್ದಾರೆ. ಆದರೆ ಕೆರಿ- ಗೋಯೆಲ್ ಕರೆಯ ನಂತರ ಏನಾಯಿತು ಎಂಬ ಬಗ್ಗೆ ಇ-ಮೇಲ್​ನಿಂದ ಯಾವುದೇ ವಿವರಣೆ ಸಿಕ್ಕಿಲ್ಲ. ನವದೆಹಲಿಯಲ್ಲಿನ ಅಮೆರಿಕ ರಾಯಭಾರ ಕಚೇರಿಯು ವಾಷಿಂಗ್ಟನ್​ನಲ್ಲಿ ಇರುವ ಅಮೆರಿಕ ರಾಜ್ಯ ಇಲಾಖೆಗೆ ಪ್ರಶ್ನೆಯನ್ನು ದಾಟಿಸಿದೆ. ಅಮೆರಿಕ ಇ-ಕಾಮರ್ಸ್ ಕಂಪೆನಿಗಳು ಭಾರತದಲ್ಲಿ ಅನುಸರಿಸುತ್ತಿರುವ ಪದ್ಧತಿಯನ್ನು ಭಾರತ ಸ್ಪರ್ಧಾ ಆಯೋಗ (CCI) ಈ ಹಿಂದೆ ಇದ್ದ ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ವೃತ್ತಿಪರತೆಯೊಂದಿಗೆ ಪರಿಶೀಲಿಸುತ್ತದೆ ಎಂದು ಹೇಳಿದೆ.

ಸಣ್ಣ ಗುಂಪಿನ ಮಾರಾಟಗಾರರಿಗೆ ಆದ್ಯತೆ ಅಂದ ಹಾಗೆ, ಈ ಕುರಿತು ಮಾಧ್ಯಮ ಸಂಸ್ಥೆಗಳು ಕೆರಿಯ ವಕ್ತಾರರು ಹಾಗೂ ಗೋಯೆಲ್ ಎರಡೂ ಕಡೆ ಸಂಪರ್ಕಿಸಿದ್ದು, ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಅಮೆಜಾನ್​ನ ಆಂತರಿಕ ದಾಖಲಾತಿಯ ಆಧಾರದಲ್ಲಿ ರಾಯಿಟರ್ಸ್ ಸುದ್ದಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ, ಅಮೆರಿಕ ಮೂಲದ ಅಮೆಜಾನ್​ನಿಂದ ವರ್ಷಗಳ ಕಾಲ ಭಾರತದಲ್ಲಿನ ಪ್ಲಾಟ್​ಫಾರ್ಮ್​ನಲ್ಲಿ ವರ್ಷಗಳ ಕಾಲದಿಂದ ಸಣ್ಣ ಗುಂಪಿನ ಮಾರಾಟಗಾರರಿಗೆ ಆದ್ಯತೆ ನೀಡಲಾಗುತ್ತಿದೆ. ಭಾರತದ ಸಣ್ಣ ವರ್ತಕರ ಹಿತ ರಕ್ಷಿಸಲು ಕಠಿಣವಾದ ವಿದೇಶಿ ಹೂಡಿಕೆ ನೀತಿ ತಂದರೂ ಹೀಗೆ ಮಾಡಲಾಗುತ್ತಿದೆ ಎಂಬ ದೂರಿತ್ತು.

ಆ ಲೇಖನ ಬಂದ ಮೇಲೆ ವಾರಗಟ್ಟಲೆ ಭಾರತದಲ್ಲಿ ವಿವಾದದ ಕಿಚ್ಚು ಹೊತ್ತಿಸಿತು. ಅಮೆಜಾನ್​ನ ಭಾರತದಲ್ಲಿ ನಿಷೇಧಿಸಬೇಕು ಎಂಬ ಬೇಡಿಕೆ ಬಂತು. ಭಾರತದಲ್ಲಿನ ಅಮೆಜಾನ್​ ನಡೆಸುತ್ತಿರುವ ವ್ಯವಹಾರದ ಬಗ್ಗೆ ಮಾಹಿತಿ ನೀಡುವಂತೆ ಜಾರಿ ನಿರ್ದೇಶನಾಲಯ ಕೇಳಿತು. ಸಿಸಿಐನಿಂದ ಅಮೆಜಾನ್​ ಮೇಲೆ ನಂಬಿಕೆ ದ್ರೋಹದ ಕಾನೂನು ಹೇರಲಾಯಿತು. ಅಂದಹಾಗೆ ಭಾರತವು ಇ-ಕಾಮರ್ಸ್ ವಿದೇಶಿ ಹೂಡಿಕೆಗೆ ಕಠಿಣ ನಿಯಮಗಳನ್ನು ಹಾಕಿರುವುದು ವಾಷಿಂಗ್ಟನ್ ಮತ್ತು ನವದೆಹಲಿ ಮಧ್ಯೆ ತಿಕ್ಕಾಟಕ್ಕೂ ಕಾರಣವಾಗಿದೆ. ಭಾರತದಲ್ಲಿ ಉದಾಹರಣೆಗೆ ಹೇಳುವುದಾದರೆ ಅಮೆಜಾನ್, ವಾಲ್​ಮಾರ್ಟ್ ಇಂಥವು ಕಾರ್ಯ ನಿರ್ವಹಿಸುತ್ತಿದೆ. 2020ರ ಜನವರಿಯಲ್ಲಿ ಸಿಸಿಐನಿಂದ ಅಮೆಜಾನ್ ವಿರುದ್ಧ ತನಿಖೆಗೆ ಚಾಲನೆ ಸಿಕ್ಕಿತು. ಆದರೆ ಕಂಪೆನಿಯು ಕೋರ್ಟ್ ಮೆಟ್ಟಿಲೇರಿದ್ದರಿಂದ ಹಾಗೇ ನಿಂತಿದೆ. ಆನ್​ಲೈನ್ ಮಾರಾಟಗಾರರ ಸಮೂಹವು ನಂಬಿಕೆದ್ರೋಹದ ಪ್ರತ್ಯೇಕವಾದ ದೂರನ್ನು ಅಮೆಜಾನ್ ವಿರುದ್ಧ ಸಲ್ಲಿಸಿದ್ದು, ಸದ್ಯಕ್ಕೆ ಸಿಸಿಐನಿಂದ ಆ ಪ್ರಕರಣ ಬಾಕಿ ಉಳಿದಿದೆ.

ಅಮೆಜಾನ್​ನಿಂದ ಭಾರತದಲ್ಲಿ 550 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚು ಮೊತ್ತ ಹೂಡಿಕೆ ಮಾಡಲಾಗಿದೆ. 1 ಲಕ್ಷ ಭಾರತೀಯರನ್ನು ನೇಮಿಸಿಕೊಂಡಿದೆ. 4 ಲಕ್ಷ ಮಾರಾಟಗಾರರಿಗೆ ಮಾರ್ಕೆಟ್​ನಲ್ಲಿ ಬೆಂಬಲಿಸುತ್ತದೆ.

ಇದನ್ನೂ ಓದಿ: ಅಮೆಜಾನ್​ನ ಡೆಲಿವರಿ ಸಿಬ್ಬಂದಿಯಿಂದ ದೇಶದಾದ್ಯಂತ ಒಂದು ದಿನದ ಮುಷ್ಕರಕ್ಕೆ ಸಿದ್ಧತೆ

(Amazon company defended by America top officals after news report about local law violation in India by e- commerce giant)

Published On - 6:54 pm, Fri, 21 May 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ