Amazon Holi Sale 2024: ಬಂಪರ್ ಡಿಸ್ಕೌಂಟ್​ನಲ್ಲಿ ಸೇಲ್ ಆಗುತ್ತಿವೆ ಈ 5G ಸ್ಮಾರ್ಟ್‌ಫೋನ್ಸ್

Amazon Holi Sale : ಪೋಕೋ, ಟೆಕ್ನೋ, ರೆಡ್ಮಿ, ಐಕ್ಯೂ, ಹಾನರ್, ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳನ್ನು 'Amazon Holi Store' ನಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಈ ಪೈಕಿ ಟಾಪ್-5 ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಆಫರ್‌ಗಳ ಕುರಿತು ಮಾಹಿತಿ ಇಲ್ಲಿದೆ.

Amazon Holi Sale 2024: ಬಂಪರ್ ಡಿಸ್ಕೌಂಟ್​ನಲ್ಲಿ ಸೇಲ್ ಆಗುತ್ತಿವೆ ಈ 5G ಸ್ಮಾರ್ಟ್‌ಫೋನ್ಸ್
amazon holi sale

Updated on: Mar 25, 2024 | 1:58 PM

ದೇಶಾದ್ಯಂತ ಇಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಹೋಳಿ ಹಬ್ಬವನ್ನು ನಾಳೆ ಅಂದರೆ ಮಾರ್ಚ್ 26 ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಸಿದ್ಧ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ವಿವಿಧ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ನೀಡಿದೆ. ಪೋಕೋ, ಟೆಕ್ನೋ, ರೆಡ್ಮಿ, ಐಕ್ಯೂ, ಹಾನರ್, ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳನ್ನು ‘Amazon Holi Store’ ನಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಈ ಪೈಕಿ ಟಾಪ್-5 ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಆಫರ್‌ಗಳ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಪೋಕೋ M6 ಪ್ರೊ 5G

ಪೋಕೋ M6 ಪ್ರೊ 5G ಸ್ಮಾರ್ಟ್‌ಫೋನ್ ಅಮೆಜಾನ್ ಹೋಲಿ ಸ್ಟೋರ್‌ನಲ್ಲಿ 38% ರಿಯಾಯಿತಿಯೊಂದಿಗೆ ಕೇವಲ 9,999 ರೂ. ಗಳಲ್ಲಿ ಲಭ್ಯವಿದೆ. ನೀವು HSBC ಬ್ಯಾಂಕ್ ಕಾರ್ಡ್ ಬಳಸಿದರೆ ಈ ರಿಯಾಯಿತಿ ಇನ್ನಷ್ಟು ಹೆಚ್ಚಾಗಬಹುದು. ಪೋಕೋ M6 ಪ್ರೊ 5G 6.79 ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ, ಇದು 90Hz ನ ರಿಫ್ರೆಶ್ ದರವನ್ನು ಹೊಂದಿದೆ. ಈ ಫೋನ್​ನಲ್ಲಿ 50MP ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 8MP ಕ್ಯಾಮೆರಾವನ್ನು ನೀಡಲಾಗಿದೆ. 5 ಸಾವಿರ mAh ಬ್ಯಾಟರಿಯನ್ನು ಹೊಂದಿದೆ, ಇದು 18 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕೊಂಚ ಕಾಯಿರಿ: ಮಾರ್ಚ್ ಕೊನೆಯ ವಾರದಲ್ಲಿ ಬಿಡುಗಡೆ ಆಗಲಿದೆ ಈ ಸ್ಮಾರ್ಟ್​ಫೋನ್​ಗಳು

ಸ್ಯಾಮ್​ಸಂಗ್ ಗ್ಯಾಲಕ್ಸಿ M14 5G

ಸ್ಯಾಮ್​ಸಂಗ್ ಗ್ಯಾಲಕ್ಸಿ M14 ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್ ಹೋಲಿ ಸ್ಟೋರ್‌ನಲ್ಲಿ 9,990 ರೂಪಾಯಿಗಳಿಗೆ 44 ಶೇಕಡಾ ರಿಯಾಯಿತಿಯೊಂದಿಗೆ ಪಡೆಯಬಹುದು. ಇದು ಈ ಸ್ಮಾರ್ಟ್‌ಫೋನ್‌ನ ಅತ್ಯಂತ ಕಡಿಮೆ ಬೆಲೆಯಾಗಿದೆ. ನೀವು OneCard ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ರಿಯಾಯಿತಿಯನ್ನು ಮತ್ತಷ್ಟು ಹೆಚ್ಚಿಸಬಹುದು. ಸ್ಯಾಮ್​ಸಂಗ್ ಗ್ಯಾಲಕ್ಸಿ M14 50-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. 6 ಸಾವಿರ mAh ಬ್ಯಾಟರಿ ಈ ಫೋನ್‌ನಲ್ಲಿದೆ. ಆದರೆ, ಬಾಕ್ಸ್‌ನಲ್ಲಿ ಚಾರ್ಜರ್ ಲಭ್ಯವಿಲ್ಲ.

ಐಕ್ಯೂ Z9 5G

ಹೋಳಿ ಸಂದರ್ಭದಲ್ಲಿ, ಐಕ್ಯೂ Z9 5G ಅನ್ನು 17,999 ರೂ. ಗೆ ಆರ್ಡರ್ ಮಾಡಬಹುದು. ಇದು 8 GB RAM, 128 GB ಸಂಗ್ರಹಣೆಯನ್ನು ಹೊಂದಿದೆ. ಡೈಮೆನ್ಷನ್ 7200 5G ಪ್ರೊಸೆಸರ್ ನೀಡಲಾಗಿದ್ದು, 120 Hz ನ ರಿಫ್ರೆಶ್ ದರ ಮತ್ತು 1800 nits ನ ಗರಿಷ್ಠ ಬ್ರೈಟ್​ನೆಸ್ ಅನ್ನು ಹೊಂದಿದೆ. ಈ ಫೋನ್‌ನ 17,999 ರೂ. ಗಳ ಬೆಲೆಯು ಬ್ಯಾಂಕ್ ರಿಯಾಯಿತಿಯ ಮೂಲಕ ಸಾಧ್ಯವಾಗಲಿದೆ. ಇದು ICICI ಮತ್ತು HDFC ಬ್ಯಾಂಕ್ ಕಾರ್ಡ್‌ಗಳಿಗೆ ಅನ್ವಯಿಸುತ್ತದೆ.

ಮೊಟೊರೊಲಾದಿಂದ ಬರುತ್ತಿದೆ ವಿಶೇಷ ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಏ. 3 ಕ್ಕೆ ಬಿಡುಗಡೆ

ರೆಡ್ಮಿ 12 5G

ರೆಡ್ಮಿ 12 5G ಸ್ಮಾರ್ಟ್‌ಫೋನ್ ಅಮೆಜಾನ್ ಹೋಲಿ ಸ್ಟೋರ್‌ನಲ್ಲಿ ಶೇಕಡಾ 25 ರಷ್ಟು ರಿಯಾಯಿತಿಯೊಂದಿಗೆ 11,999 ರೂ. ಗಳಲ್ಲಿ ಲಭ್ಯವಿದೆ. ಆಫರ್‌ಗಳ ಮೂಲಕ ಈ ರಿಯಾಯಿತಿಯನ್ನು ರೂ. 1,000 ವರೆಗೆ ಹೆಚ್ಚಿಸಬಹುದು. ರೆಡ್ಮಿ 12 5G 6.79 ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ, ಇದು 90Hz ನ ರಿಫ್ರೆಶ್ ದರದಿಂದ ಕೂಡಿದೆ. ಈ ಫೋನ್ 5 ಸಾವಿರ mAh ಬ್ಯಾಟರಿಯನ್ನು ಹೊಂದಿದೆ. ಇದು ಸ್ನಾಪ್​ಡ್ರಾಗನ್ 4 Gen 2 ಪ್ರೊಸೆಸರ್, ಹಿಂದಿನ ಕ್ಯಾಮೆರಾ 50 ಮೆಗಾಪಿಕ್ಸೆಲ್ ಮತ್ತು ಮುಂಭಾಗದ ಕ್ಯಾಮೆರಾ 8 ಮೆಗಾಪಿಕ್ಸೆಲ್​ನಿಂದ ಕೂಡಿದೆ.

ರಿಯಲ್ ಮಿ ನಾರ್ಜೊ 60

ಹೋಳಿ ಸಂದರ್ಭದಲ್ಲಿ, ರಿಯಲ್ ಮಿ ನಾರ್ಜೊ 60 5G ಸ್ಮಾರ್ಟ್‌ಫೋನ್ ಅನ್ನು 25 ಶೇಕಡಾ ರಿಯಾಯಿತಿಯೊಂದಿಗೆ 14,999 ರೂಗಳಲ್ಲಿ ಪಡೆಯಬಹುದು. ಈ ಫೋನ್ 90 ಹರ್ಟ್ಜ್ ರಿಫ್ರೆಶ್ ದರದೊಂದಿಗೆ ಬರುತ್ತದೆ. ಮೀಡಿಯಾ ಟೆಕ್​ನ ಡೈಮೆನ್ಶನ್ 6020 ಪ್ರೊಸೆಸರ್​ನೊಂದಿಗೆ ಕಾರ್ಯನಿರ್ವಹಿಸುವ 8 GB RAM ಅನ್ನು ಒದಗಿಸಲಾಗಿದೆ. ಈ ಫೋನ್ 64 ಮೆಗಾಪಿಕ್ಸೆಲ್ AI ಕ್ಯಾಮೆರಾವನ್ನು ಹೊಂದಿದೆ. ಬ್ಯಾಟರಿ 5 ಸಾವಿರ mAh ಆಗಿದ್ದು, ಚಾರ್ಜ್ ಮಾಡಲು 33 ವ್ಯಾಟ್ ವೇಗದ ಚಾರ್ಜರ್ ಅನ್ನು ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us