Amazon Prime Day Sale: ಲ್ಯಾಪ್​ಟಾಪ್ ಖರೀದಿಸಲು ಇದೇ ಸಮಯ: ಪ್ರೈಮ್ ಡೇ ಪ್ರಯುಕ್ತ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಲ್ಯಾಪ್​ಟಾಪ್​ಗಳು!

| Updated By: Vinay Bhat

Updated on: Jul 27, 2021 | 11:32 AM

Budget Laptops Under Rs 50000: ಅಮೆಜಾನ್ ಇಂಡಿಯಾ ಪ್ರೈಮ್ ಡೇ ಸೇಲ್ ಹಮ್ಮಿಕೊಂಡಿದ್ದು ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್​ಗಳನ್ನು ಬಂಪರ್ ಡಿಸ್ಕೌಂಟ್​ನಲ್ಲಿ ಮಾರಾಟ ಮಾಡುತ್ತಿದೆ. ಹಾಗಾದ್ರೆ 50000 ರೂ. ಒಳಗೆ ಲಭ್ಯರುವ ಬೆಸ್ಟ್​ ಲ್ಯಾಪ್​ಟಾಪ್ ಯಾವುದು ಎಂಬುದನ್ನು ನೋಡುವುದಾದರೆ…

Amazon Prime Day Sale: ಲ್ಯಾಪ್​ಟಾಪ್ ಖರೀದಿಸಲು ಇದೇ ಸಮಯ: ಪ್ರೈಮ್ ಡೇ ಪ್ರಯುಕ್ತ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಲ್ಯಾಪ್​ಟಾಪ್​ಗಳು!
Laptop
Follow us on

ಅಮೆಜಾನ್ ಇಂಡಿಯಾ ಪ್ರೈಮ್ ಡೇ ಸೇಲ್ (Amazon Prime Day Sale) ಹಮ್ಮಿಕೊಂಡಿದ್ದು ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್​ಗಳನ್ನು ಬಂಪರ್ ಡಿಸ್ಕೌಂಟ್​ನಲ್ಲಿ ಮಾರಾಟ ಮಾಡುತ್ತಿದೆ. ಜುಲೈ 26ಕ್ಕೆ ಈ ಮೇಳ ಶುರುವಾಗಿದ್ದು ಇಂದು ಕೊನೆಯ ದಿನವಾಗಿದೆ. ಈ ಸೇಲ್‌ನಲ್ಲಿ ಎಲ್ಲಾ ಮಾದರಿಯ ಆಕ್ಸಿಸರೀಸ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲಾಗ್ತಿದೆ. ಅದರಲ್ಲೂ 60% ಕೆಳಗೆ ಎಲೆಕ್ಟ್ರಾನಿಕ್ಸ್ ಮತ್ತು ಇತರೆ ಪರಿಕರಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ.

ಪ್ರಮುಖವಾಗಿ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ ಖರೀದಿಸಲು ಬಯಸಿದರೆ, ನೀವು 35,000 ರೂ. ತನಕ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಮಾರಾಟದ ಸಮಯದಲ್ಲಿ ಅಮೆಜಾನ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಭೇಟಿ ನೀಡಿದರೆ ಈ ರಿಯಾಯಿತಿಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಸದ್ಯ ಆನ್‌ಲೈನ್ ಕ್ಲಾಸ್‌, ವರ್ಕ್​ ಫ್ರಂ ಹೋಮ್ ಪ್ರವೃತ್ತಿಯಲ್ಲಿರುವುದರಿಂದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಇದು ಸರಿಯಾದ ಸಮಯ. ಹಾಗಾದ್ರೆ 50000 ರೂ. ಒಳಗೆ ಲಭ್ಯರುವ ಬೆಸ್ಟ್​ ಲ್ಯಾಪ್​ಟಾಪ್ ಯಾವುದು ಎಂಬುದನ್ನು ನೋಡುವುದಾದರೆ…

Acer Aspire 5: ಏಸರ್ ಆಸ್ಪೈರ್ 5 ಲ್ಯಾಪ್​ಟಾಪ್ ಅಮೆಜಾನ್​ನಲ್ಲಿ ಪ್ರೈಮ್ ಡೇ ಪ್ರಯುಕ್ತ ಆಫರ್​ನಲ್ಲಿ ಕೇವಲ 38,990 ರೂ. ಗೆ ಲಭ್ಯವಾಗುತ್ತಿದೆ. ಇದು 11ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್ ಹೊಂದಿದ್ದು, 4GBಯ DDR4 RAMನಿಂದ ಕೂಡಿದೆ. 12GB ತನಕ ಇದನ್ನು ವಿಸ್ತರಿಸಬಹುದು. ಜೊತೆಗೆ 256GB SSD ಫಾಸ್ಟ್ ಸ್ಟೋರೆಜ್ ಆಯ್ಕೆಯನ್ನು ಹೊಂದಿದೆ. 15 ಇಂಚಿನ ಫುಲ್ ಹೆಚ್​ಡಿ ಡಿಸ್​ ಪ್ಲೇ ನೀಡಲಾಗಿದ್ದು ತುಂಬಾನೆ ಸ್ಲಿಮ್ ಆಗಿದೆ. ಇದರ ತೂಕ ಕೇವಲ 1.65kg ಆಗಿದೆ.

Asus VivoBook Ultra: ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್ ತಯಾರಿಕ ಕಂಪನಿ ಏಸಸ್ ವಿವೋಬುಕ್ ಅಲ್ಟ್ರಾ ಸಿರೀಸ್ ಲ್ಯಾಪ್‌ಟ್ಯಾಪ್‌ ಕಳೆದ ವರ್ಷಾಂತ್ಯದಲ್ಲಿ ಪರಿಚಯಿಸಿತ್ತು. ಅಲ್ಟ್ರಾ ಸ್ಲಿಮ್ ವಿನ್ಯಾಸ, ನ್ಯಾನೋಎಡ್ಜ್ ಡಿಸ್‌ಪ್ಲೇ ಹೊಂದಿರುವ ಈ ಲ್ಯಾಪ್​ಟಾಪ್ ಆಫರ್​ನಲ್ಲಿ ಕೇವಲ 43,990 ರೂ. ಗೆ ಸಿಗುತ್ತಿದೆ. 11ನೇ ತಲೆಮಾರಿನ ಇಂಟೆಲ್ ಕೋರ್ ಐ3 ಪ್ರೊಸೆಸರ್​ನಿಂದ ಕೂಡಿದ್ದು, ಬ್ಯಾಕ್​ಲಿಟ್ ಕೀ ಬೋರ್ಡ್ ಜೊತೆಗೆ ಫಿಂಗರ್ ಪ್ರಿಂಟ್ ರೀಡರ್ ಕೂಡ ಇದರಲ್ಲಿದೆ. 8GB RAM ಮತ್ತು 256 GB SSD ಸ್ಟೋರೆಜ್ ಜೊತೆಗೆ ಮತ್ತಷ್ಟು ಆಯ್ಕೆ ಇದೆ.

Lenovo IdeaPad Slim 3: ಲೆನೊವೊ ಕಂಪೆನಿಯ ಐಡಿಯಾಪ್ಯಾಡ್ ಸ್ಲಿಮ್ 3 ಲ್ಯಾಪ್​ಟಾಪ್ 43,990 ರೂ. ಗೆ ಮಾರಾಟವಾಗುತ್ತಿದೆ. ಹಗುರ ಮತ್ತು ತೆಳ್ಳಗಿರುವ ಕೆಲವೇ ಕೆಲವು ಲ್ಯಾಪ್​ಟಾಪ್​ಗಳ ಪಟ್ಟಿಯಲ್ಲಿ ಇದುಕೂಡ ಒಂದಾಗಿದೆ. ಇದು 11ನೇ ತಲೆಮಾರಿನ ಇಂಟೆಲ್ ಕೋರ್ ಐ3 ಪ್ರೊಸೆಸರ್​ನಿಂದ ಕೂಡಿದ್ದು, 8G RAM ಮತ್ತು 256GB ಸ್ಟೋರೆಜ್ ಆಯ್ಕೆಯನ್ನು ಹೊಂದಿದೆ. ಇದರ ತೂಕ ಕೇವಲ 1.4kg ಆಗಿದೆ.

HP 15s: 11 ನೇ ತಲೆಮಾರಿನ ಇಂಟೆಲ್ ಕೋರ್ I3 ಪ್ರೊಸೆಸರ್ ಹೊಂದಿರುವ HP 15s ಲ್ಯಾಪ್‌ಟಾಪ್‌ 8GB RAM + 512GB ಮಾದರಿಗೆ ಅಮೆಜಾನ್​ನಲ್ಲಿ 44,990 ರೂ. ನಿಗದಿ ಮಾಡಲಾಗಿದೆ. ಈ ಲ್ಯಾಪ್‌ಟಾಪ್ 1920 x 1080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 720P HD ವೆಬ್‌ಕ್ಯಾಮ್ ಮತ್ತು ಇಂಟೆಲ್ ಇಂಟಿಗ್ರೇಟೆಡ್ UHD ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ. ಇದುಕೂಡ ಹಗುರ ಮತ್ತು ತೆಳ್ಳಗಿರುವ ಕೆಲವೇ ಕೆಲವು ಲ್ಯಾಪ್​ಟಾಪ್​ಗಳ ಪಟ್ಟಿಯಲ್ಲಿ ಇದುಕೂಡ ಒಂದಾಗಿದೆ. ಇದರ ತೂಕ 1.7kg ಆಗಿದೆ.

Dell Inspiron 5410: ಈ ಲ್ಯಾಪ್​ಟಾಪ್ ಆಫರ್​ನಲ್ಲಿ 48,990 ರೂ. ಗೆ ಲಭ್ಯವಾಗುತ್ತಿದೆ. ವಿಶೇಷ ಎಂದರೆ ಇದು 14 ಇಂಚಿನ ಫುಲ್​ ಹೆಚ್​ಡಿ ಟಚ್ ಸ್ಕ್ರೀನ್ ಡಿಸ್​ಪ್ಲೇ ಅನ್ನು ಹೊಂದಿದೆ. 360 ಡಿಗ್ರಿ ರೊಟೆಟ್ ಮಾಡುವ ಆಯ್ಕೆಯನ್ನು ಹೊಂದಿದ್ದು ಟ್ಯಾಬ್​ಲ್ಲೆಟ್ ಮೋಡ್​ನಲ್ಲಿ ನೀವು ಕೆಲಸ ಮಾಡಬಹುದು. 11ನೇ ತಲೆಮಾರಿನ ಇಂಟೆಲ್ ಕೋರ್ ಐ3 ಪ್ರೊಸೆಸರ್ ಅಳವಡಿಸಲಾಗಿದೆ. 8GB RAM + 512GB ಸ್ಟೋರೆಜ್ ಆಯ್ಕೆ ನೀಡಲಾಗಿದೆ. 50000 ರೂ. ಒಳಗೆ ಲಭ್ಯವಿರುವ ಬೆಸ್ಟ್​ ಲ್ಯಾಪ್​ಟಾಪ್​ನಲ್ಲಿ ಇದನ್ನು ಖರೀದಿಸಬಹುದು.

Poco F3 GT: ಪೊಕೊ 8 ಜಿಬಿ + 256 ಸ್ಟೊರೇಜ್​ ಸ್ಮಾರ್ಟ್​ಫೋನ್: ಕಡಿಮೆ ಬೆಲೆಗೆ ಆಕರ್ಷಕ ಮೊಬೈಲ್

iPhone 12: ಐಫೋನ್ 12 ಮೇಲೆ ಭರ್ಜರಿ ಆಫರ್: 12 ಸಾವಿರ ರೂ. ಕಡಿಮೆಗೆ ಖರೀದಿಸಬಹುದು

(Amazon Prime Day sale 2021 Best Budget Laptops Under Rs 50000 at Amazon Prime Day Sale ft HP 15 and More)