Poco F3 GT: ಪೊಕೊ 8 ಜಿಬಿ + 256 ಸ್ಟೊರೇಜ್​ ಸ್ಮಾರ್ಟ್​ಫೋನ್: ಕಡಿಮೆ ಬೆಲೆಗೆ ಆಕರ್ಷಕ ಮೊಬೈಲ್

poco f3 gt specifications: ಈ ಫೋನ್​ನಲ್ಲಿ ಒಟ್ಟು 4 ಕ್ಯಾಮೆರಾಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ 64 ಮೆಗಾ ಪಿಕ್ಸೆಲ್ (f/1.65) + 8 ಮೆಗಾ ಪಿಕ್ಸೆಲ್ ಹಾಗೂ 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಿರಲಿವೆ. ಹಾಗೆಯೇ , ಸೆಲ್ಫಿಗಾಗಿ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ.

Poco F3 GT: ಪೊಕೊ 8 ಜಿಬಿ + 256 ಸ್ಟೊರೇಜ್​ ಸ್ಮಾರ್ಟ್​ಫೋನ್: ಕಡಿಮೆ ಬೆಲೆಗೆ ಆಕರ್ಷಕ ಮೊಬೈಲ್
Poco F3 GT
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jul 26, 2021 | 6:42 PM

ಜನಪ್ರಿಯ ಸ್ಮಾರ್ಟ್​ಫೋನ್ ಕಂಪೆನಿ ಪೊಕೊ ತನ್ನ ನೂತನ ಮೊಬೈಲ್ Poco F3 GT ಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ ಹಾಗೂ ಅತ್ಯುತ್ತಮ ಆಯ್ಕೆಗಳೊಂದಿಗೆ ಲಭ್ಯವಿರುವ ಪೊಕೊ ಎಫ್ 3 ಜಿಟಿ ಸ್ಮಾರ್ಟ್​ಫೋನ್ ಒನ್‌ಪ್ಲಸ್ ನಾರ್ಡ್ 2, ರಿಯಲ್​ಮಿ ಎಕ್ಸ್ 7 ಮ್ಯಾಕ್ಸ್ ಮತ್ತು ಒಪ್ಪೊ ರೆನೋ 6 ಮೊಬೈಲ್​ಗಳಿಗೆ ಕಠಿಣ ಸ್ಪರ್ಧೆಯೊಡ್ಡುವ ಸಾಧ್ಯತೆಯಿದೆ. ಏಕೆಂದರೆ ಈ ಸ್ಮಾರ್ಟ್​ಫೋನ್ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಅದರಂತೆ ಗ್ರಾಹಕರು Poco F3 GT ಅನ್ನು 6 ಜಿಬಿ + 128 ಜಿಬಿ, 8 ಜಿಬಿ + 128 ಜಿಬಿ ಮತ್ತು 8 ಜಿಬಿ + 256 ಜಿಬಿ ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಸಬಹುದು.

Poco F3 GT ವೈಶಿಷ್ಟ್ಯಗಳು ಮತ್ತು ವಿಶೇಷತೆಗಳು:

ಡಿಸ್​ಪ್ಲೇ: ಪೊಕೊ ಕಂಪೆನಿಯು ಈ ಸ್ಮಾರ್ಟ್​ ಫೋನ್​ನಲ್ಲಿ 6.67 ಇಂಚಿನ ಟರ್ಬೊ ಅಮೋಲೆಡ್ 10-ಬಿಟ್ ಡಿಸ್​ಪ್ಲೇ ಅನ್ನು ನೀಡಿದೆ. ಈ ಡಿಸ್​ಪ್ಲೇ HDR10 + ಹಾಗೂ 1080×2400 ರೆಸಲ್ಯೂಷನ್​ನ್ನು ಹೊಂದಿರಲಿದೆ.

ಕ್ಯಾಮೆರಾ: ಈ ಫೋನ್​ನಲ್ಲಿ ಒಟ್ಟು 4 ಕ್ಯಾಮೆರಾಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ 64 ಮೆಗಾ ಪಿಕ್ಸೆಲ್ (f/1.65) + 8 ಮೆಗಾ ಪಿಕ್ಸೆಲ್ ಹಾಗೂ 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಿರಲಿವೆ. ಹಾಗೆಯೇ , ಸೆಲ್ಫಿಗಾಗಿ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ.

ಪ್ರೊಸೆಸರ್: ಇದರಲ್ಲಿ ಅಕ್ಟಾ ಕೋರ್ (ಮೀಡಿಯಾಟೆಕ್ ಡೈಮೆನ್ಸಿಟಿ 1200) ಪ್ರೊಸೆಸರ್ ನೀಡಲಾಗಿದ್ದು, ಅಂಡ್ರಾಯ್ಡ್ 11 ಅಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿದೆ.

ಸ್ಟೊರೇಜ್: Poco F3 GT ಸ್ಮಾರ್ಟ್​ಫೋನ್​ನಲ್ಲಿ 3 ಸ್ಟೊರೇಜ್ ಆಯ್ಕೆ ನೀಡಲಾಗಿದ್ದು, ಅದರಂತೆ 6 ಜಿಬಿ + 128 ಜಿಬಿ, 8 ಜಿಬಿ + 128 ಜಿಬಿ ಮತ್ತು 8 ಜಿಬಿ + 256 ಜಿಬಿ ಆಯ್ಕೆಗಳಲ್ಲಿ​ ಫೋನ್​ನ್ನು ಖರೀದಿಸಬಹುದು.

ಬ್ಯಾಟರಿ: ಈ ಫೋನ್​ನಲ್ಲಿ ಕಂಪೆನಿಯು 5065 mAh ಸಾಮರ್ಥ್ಯದ ಬ್ಯಾಟರಿ ನೀಡಿದ್ದು, ಇದು 67 ಡಬ್ಲ್ಯೂ ಫಾಸ್ಟ್​ ಚಾರ್ಜಿಂಗ್​ನ್ನು ಸಪೋರ್ಟ್ ಮಾಡಲಿದೆ.

ಸಿಮ್ ಸಪೋರ್ಟ್​: ಪೊಕೊ ಕಂಪೆನಿಯ ನೂತನ ಸ್ಮಾರ್ಟ್​ಫೋನ್ 5ಜಿ ಸಿಮ್​ ನೆಟ್​ವರ್ಕ್​ನ್ನು ಸಪೋರ್ಟ್ ಮಾಡಲಿದ್ದು, ಅದರ ಜೊತೆಗೆ ಈ ಹಿಂದಿನ 3G/4G/ LTE ನೆಟ್​ವರ್ಕ್​ನಲ್ಲಿ ಕಾರ್ಯ ನಿರ್ವಹಿಸಲಿದೆ.

ಗೇಮಿಂಗ್ ಫೆಸಿಲಿಟಿ: ಪೊಕೊ ಎಫ್ 3 ಜಿಟಿ ಗೇಮಿಂಗ್ ಸ್ಮಾರ್ಟ್​ಫೋನ್ ಆಗಿದ್ದು, ಉತ್ತಮ ಗೇಮಿಂಗ್ ಅನುಭವಕ್ಕಾಗಿ ಇದರಲ್ಲಿ ‘ಮ್ಯಾಗ್ಲೆವ್’ ಟ್ರಿಗರ್ಸ್​ ನೀಡಲಾಗಿದೆ. ಹಾಗೆಯೇ ಕಂಪನಿಯು ಎಲ್-ಆಕಾರದ ಚಾರ್ಜಿಂಗ್ ಕೇಬಲ್‌ಗಳನ್ನು ನೀಡಿದ್ದು, ಗೇಮ್ ಆಡುವಾಗ ಮೊಬೈಲ್ ಚಾರ್ಜ್ ಮಾಡುವುದನ್ನು ಮತ್ತಷ್ಟು ಸುಲಭವಾಗಿಸುತ್ತದೆ.

ಇನ್ನಿತರ ವೈಶಿಷ್ಟ್ಯಗಳು: ಈ ಸ್ಮಾರ್ಟ್​ಫೋನ್​ನಲ್ಲಿ ಫಿಂಗರ್​ಪ್ರಿಂಟ್ ಸೆನ್ಸಾರ್, ಗೊರಿಲ್ಲಾ ಗ್ಲಾಸ್ 5 ಅನ್ನು ಸಹ ಸಹ ನೀಡಲಾಗಿದೆ.

ಬೆಲೆ: Poco F3 GT ಸ್ಮಾರ್ಟ್​ಫೋನ್​ನ 6 ಜಿಬಿ + 128 ಜಿಬಿ ರೂಪಾಂತರದ ಬೆಲೆ 26,999 ರೂ. ಹಾಗೆಯೇ 8 ಜಿಬಿ + 128 ಜಿಬಿ ಮಾಡೆಲ್​ಗೆ 28,999 ರೂ ನಿಗದಿಪಡಿಸಲಾಗಿದೆ. ಹಾಗೆಯೇ, ಪೊಕೊ ಎಫ್ 3 ಜಿಟಿಯ ಟಾಪ್ ಮಾಡೆಲ್ ಅಂದರೆ 8 ಜಿಬಿ + 256 ಜಿಬಿ ರೂಪಾಂತರದ ಬೆಲೆ 30,999 ರೂ.

ಇದನ್ನೂ ಓದಿ: Team India: ಟೀಮ್ ಇಂಡಿಯಾಗೆ ಮತ್ತಿಬ್ಬರು ಆಟಗಾರರ ಆಯ್ಕೆ

ಇದನ್ನೂ ಓದಿ: ಸೂರ್ಯಕುಮಾರ್ ಔಟ್ ಆಗುತ್ತಿದ್ದಂತೆ ಅಸಮಾಧಾನ ಹೊರಹಾಕಿದ ರಾಹುಲ್ ದ್ರಾವಿಡ್

( Poco F3 GT’s First Sale Starts in India)

Published On - 6:41 pm, Mon, 26 July 21