ಐಫೋನ್ 16 ನಲ್ಲಿ ಅಚ್ಚರಿ ವೈಶಿಷ್ಟ್ಯ: ಹೇಗಿರಲಿದೆ ಅಂಡರ್​ವಾಟರ್ ಮೋಡ್ ಫೀಚರ್?

|

Updated on: Feb 10, 2024 | 3:06 PM

iPhone 16 Series Underwater Mode Feature: ಈ ವರ್ಷದ ಅಂತ್ಯದ ವೇಳೆಗೆ ಆ್ಯಪಲ್​ನಿಂದ ಐಫೋನ್ 16 ಸರಣಿ ಬಿಡುಗಡೆ ಆಗಲಿದೆ. ಪ್ರತಿ ಬಾರಿ ಹೊಸ ಹೊಸ ಫೀಚರ್​ಗಳನ್ನು ನೀಡುವ ಆ್ಯಪಲ್ ಈ ಬಾರಿಯ ಐಫೋನ್ 16 ಸರಣಿಯಲ್ಲಿ ಇರಲಿರುವ ಫೀಚರ್ ಗಳ ಬಗ್ಗೆ ಕುತೂಹಲ ಮೂಡಿದೆ.

ಐಫೋನ್ 16 ನಲ್ಲಿ ಅಚ್ಚರಿ ವೈಶಿಷ್ಟ್ಯ: ಹೇಗಿರಲಿದೆ ಅಂಡರ್​ವಾಟರ್ ಮೋಡ್ ಫೀಚರ್?
iphone Underwater Mode Feature
Follow us on

ವಿಶ್ವದಾದ್ಯಂತ ಆ್ಯಪಲ್ (Apple) ಬ್ರ್ಯಾಂಡ್​ಗೆ ಇರುವಂತ ಒಂದು ಕ್ರೇಜ್ ಬೇರೆ ಯಾವುದಕ್ಕೂ ಇಲ್ಲ. ಆ್ಯಪಲ್​ನಿಂದ ಯಾವುದೇ ಹೊಸ ಉತ್ಪನ್ನ ಬಿಡುಗಡೆ ಆಗಲಿದೆ ಎಂದಾದರೆ ಟೆಕ್ ಮಾರುಕಟ್ಟೆಯಲ್ಲಿ ಬುಝ್ ಸೃಷ್ಟಿಸುತ್ತದೆ. ಬಳಕೆದಾರರ ನಿರೀಕ್ಷೆಗಳನ್ನು ಕಡಿಮೆ ಮಾಡದೆ ಆ್ಯಪಲ್ ಕೂಡ ತನ್ನ ಉತ್ಪನ್ನಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ಈ ಕ್ರಮದಲ್ಲಿ, ಆ್ಯಪಲ್ ತನ್ನ ಮುಂದಿನ ಐಫೋನ್ 16 ಸರಣಿಯಲ್ಲಿ ಮತ್ತೊಂದು ಅದ್ಭುತ ವೈಶಿಷ್ಟ್ಯವನ್ನು ತರಲು ಕೆಲಸ ಮಾಡುತ್ತಿದೆ.

ಈ ವರ್ಷದ ಅಂತ್ಯದ ವೇಳೆಗೆ ಆ್ಯಪಲ್​ನಿಂದ ಐಫೋನ್ 16 ಸರಣಿ ಬಿಡುಗಡೆ ಆಗಲಿದೆ. ಪ್ರತಿ ಬಾರಿ ಹೊಸ ಹೊಸ ಫೀಚರ್​ಗಳನ್ನು ನೀಡುವ ಆ್ಯಪಲ್ ಈ ಬಾರಿಯ ಐಫೋನ್ 16 ಸರಣಿಯಲ್ಲಿ ಇರಲಿರುವ ಫೀಚರ್ ಗಳ ಬಗ್ಗೆ ಕುತೂಹಲ ಮೂಡಿದೆ. ಹಿಂದಿನ ಸರಣಿಗೆ ಹೋಲಿಸಿದರೆ, ಐಫೋನ್ 16 ಹೆಚ್ಚು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಹೊಂದಿವೆಯಂತೆ. ಇದರಲ್ಲಿ, ಐಫೋನ್ ಅಂಡರ್​ವಾಟರ್ ಮೋಡ್ ಎಂಬ ವಿಶೇಷ ವೈಶಿಷ್ಟ್ಯವನ್ನು ತರುತ್ತಿದೆ ಎಂದು ಹೇಳಲಾಗಿದೆ. ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಕಚೇರಿಯಲ್ಲಿನ ಪೇಟೆಂಟ್ ಅಂಡರ್​ವಾಟರ್ ಫೀಚರ್ ಬಗ್ಗೆ ಮಾಹಿತಿ ನೀಡಿದೆ.

ನಿಮ್ಮ ಲವ್ವರ್ ಫೋನ್ ದಿನವಿಡೀ ಬ್ಯುಸಿ ಬರುತ್ತಾ?: ಕಾಲ್ ಹಿಸ್ಟರಿ ತೆಗೆಯುವ ಟ್ರಿಕ್ ಇಲ್ಲಿದೆ ನೋಡಿ

ಆದಾಗ್ಯೂ, ಈ ತಂತ್ರಜ್ಞಾನವನ್ನು ಐಫೋನ್ 16 ಸರಣಿಯಲ್ಲಿ ಪರಿಚಯಿಸಲಾಗುವುದು ಎಂಬುದರ ಕುರಿತು ಆ್ಯಪಲ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಅಂಡರ್​ವಾಟರ್ ಮೋಡ್ ವೈಶಿಷ್ಟ್ಯವು ಲಭ್ಯವಾದರೆ, ಬಳಕೆದಾರರು ನೀರಿನ ಒಳಗೆ ಫೋನ್ ಅನ್ನು ಬಳಸಬಹುದು. ಜೊತೆಗೆ ನೀರಿನ ಅಡಿಯಲ್ಲಿ ಉತ್ತಮ ಸ್ಪಷ್ಟತೆಯೊಂದಿಗೆ ಫೋಟೋಗಳನ್ನು ಸಹ ತೆಗೆದುಕೊಳ್ಳಬಹುದು. ಫೋನ್ ಸ್ಪರ್ಶವು ನೀರಿನ ಅಡಿಯಲ್ಲಿ ಕಾರ್ಯನಿರ್ವಹಿಸದ ಕಾರಣ, ಕ್ಯಾಮೆರಾ ಕಾರ್ಯಾಚರಣೆಗಾಗಿ ವಿಶೇಷ ಬಟನ್ ಅನ್ನು ನಿಯೋಜಿಸಬಹುದು.

ನೀವು ನೀರಿನಲ್ಲಿ ಫೋಟೋಗಳನ್ನು ತೆಗೆದುಕೊಳ್ಳಲು ಬಯಸಿದರೆ, ಮೊದಲು ಐಫೋನ್‌ನಲ್ಲಿ ಅಂಡರ್​ವಾಟರ್ ಮೋಡ್ ಅನ್ನು ಆನ್ ಮಾಡಬೇಕು. ನಂತರ ನೀರೊಳಗೆ ಕ್ಯಾಮೆರಾವನ್ನು ಬಳಸಬಹುದು. ಡಿಸ್​ಪ್ಲೇಯನ್ನು ಟಚ್ ಮಾಡಲು ಆಗುತ್ತಾ ಅಥವಾ ಇದಕ್ಕಾಗಿ ವಾಲ್ಯೂಮ್ ರಾಕರ್ ಬಟನ್ ಅನ್ನು ಬಳಸಬೇಕಾಗುತ್ತದ ಎಂಬ ಕುರಿತು ಮುಂದಿನ ದಿನದಲ್ಲಿ ತಿಳಿದುಬರಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Sat, 10 February 24