Apple Product: ಸಿದ್ಧರಾಗಿ, 1-2 ಅಲ್ಲ, ಈ ವಾರ ಈ 3 ಆಪಲ್ ಉತ್ಪನ್ನಗಳು ಬಿಡುಗಡೆ ಆಗಲಿವೆ
ನೀವು ಹೊಸ ಆಪಲ್ ಸಾಧನಗಳಿಗಾಗಿ ಕಾಯುತ್ತಿದ್ದರೆ, ಕಂಪನಿಯು ಈ ವಾರ ಹೊಸ ಐಪ್ಯಾಡ್ ಪ್ರೊ ಸೇರಿದಂತೆ ಮೂರು ಉತ್ಪನ್ನಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆಪಲ್ ಈ ವಾರ ಐಪ್ಯಾಡ್ ಪ್ರೊ, ವಿಷನ್ ಪ್ರೊ ಮತ್ತು 14-ಇಂಚಿನ ಮ್ಯಾಕ್‌ಬುಕ್ ಪ್ರೊ ಅನ್ನು ಬಿಡುಗಡೆ ಮಾಡುಬಹುದು ಎನ್ನಲಾಗಿದೆ.

ಬೆಂಗಳೂರು (ಅ. 13): ಆಪಲ್ (Apple) ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಇದೆ. ಆಪಲ್ ಪ್ರಿಯರು ಹೊಸ ಸಾಧನಗಳಿಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಆಪಲ್ ಈ ವಾರ ಐಪ್ಯಾಡ್ ಪ್ರೊ, ವಿಷನ್ ಪ್ರೊ ಮತ್ತು 14-ಇಂಚಿನ ಮ್ಯಾಕ್‌ಬುಕ್ ಪ್ರೊ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಎಲ್ಲಾ ಸಾಧನಗಳು ಕಂಪನಿಯ ಇತ್ತೀಚಿನ M5 ನೊಂದಿಗೆ ಬರುತ್ತವೆ. ಈ ಬಿಡುಗಡೆಗಾಗಿ ಕಂಪನಿಯು ಯಾವುದೇ ಕಾರ್ಯಕ್ರಮವನ್ನು ನಡೆಸುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಬದಲಾಗಿ ಈ ಕುರಿತ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಗಳು ಮತ್ತು ಪ್ರಚಾರದ ಯೂಟ್ಯೂಬ್ ವೀಡಿಯೊಗಳ ಮೂಲಕ ಘೋಷಿಸಲಾಗುತ್ತದೆ.
M5 ಐಪ್ಯಾಡ್ ಪ್ರೊ
ಕೆಲವು ದಿನಗಳ ಹಿಂದೆ, ರಷ್ಯಾದ ಯೂಟ್ಯೂಬರ್ ಒಬ್ಬರು ಹೊಸ ಐಪ್ಯಾಡ್ ಪ್ರೊ ಅನ್ನು ಅನ್‌ಬಾಕ್ಸ್ ಮಾಡಿ ಕ್ಯಾಮೆರಾದಲ್ಲಿ ಅದರ ಫಸ್ಟ್ ಲುಕ್ ಅನ್ನು ಬಹಿರಂಗ ಪಡಿಸಿದರು. ಇದು ಹೊಸ M5 ಚಿಪ್ ಮತ್ತು 128GB ಸಂಗ್ರಹಣೆಯನ್ನು ಹೊಂದಿರುತ್ತದೆ. ಹಿಂದಿನ ಮಾದರಿಯಿಂದ ಇದರ ವಿನ್ಯಾಸ ಬದಲಾಗದೆ ಇದ್ದರೂ, ಐಪ್ಯಾಡ್ ಪ್ರೊ ಹೆಸರನ್ನು ಹಿಂಭಾಗದಿಂದ ತೆಗೆದುಹಾಕಲಾಗಿದೆ. ಇದು C1X ಮೋಡೆಮ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಹೀಗಾಗಿ ಇದು ಈವರೆಗಿನ ಅತ್ಯಂತ ವೇಗವಾಗಿ ಸಂಪರ್ಕಗೊಂಡಿರುವ ಐಪ್ಯಾಡ್ ಆಗಿರುತ್ತದೆ.
ವಿಷನ್ ಪ್ರೋ 2
ಮುಂದಿನ ಕೆಲವು ವರ್ಷಗಳಲ್ಲಿ ಆಪಲ್ AI ಗ್ಲಾಸ್‌ಗಳ ಮೇಲೆ ಕೇಂದ್ರೀಕರಿಸಲು ವಿಷನ್ ಪ್ರೊ ಅನ್ನು ಸ್ಥಗಿತಗೊಳಿಸಬಹುದು, ಆದರೆ ಅದಕ್ಕೂ ಮೊದಲು, ಅದು ವಿಷನ್ ಪ್ರೊ 2 ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ದುಬಾರಿ ಸಾಧನವು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿಲ್ಲ. ಹೊಸ ಮಾದರಿಯು ನವೀಕರಿಸಿದ ಚಿಪ್, ಆರಾಮದಾಯಕ ಪಟ್ಟಿ ಮತ್ತು ಬ್ಲಾಕ್ ಫಿನಿಶಿಂಗ್ ಅನ್ನು ಹೊಂದಿರುತ್ತದೆ. ಇದು ಕ್ಯಾಮೆರಾ ಮತ್ತು AI ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳ್ಳಬಹುದು ಎಂಬ ವದಂತಿಯೂ ಇದೆ.
Tech Tips: LCD ಅಥವಾ AMOLED: ನಿಮ್ಮ ಕಣ್ಣಿಗೆ ಯಾವ ಡಿಸ್ಪ್ಲೇ ಫೋನ್ ಉತ್ತಮ?, ಇಲ್ಲಿದೆ ವಿವರವಾದ ಮಾಹಿತಿ
ಹೊಸ ಮ್ಯಾಕ್‌ಬುಕ್ ಪ್ರೊ
ಆಪಲ್ ಈ ವಾರ ಹೊಸ 14-ಇಂಚಿನ ಮ್ಯಾಕ್‌ಬುಕ್ ಪ್ರೊ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಇದರಲ್ಲಿ M5 ಚಿಪ್ ಅಳವಡಿಸಲಾಗಿದೆ. ಇದರ ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಆದಾಗ್ಯೂ, ಮುಂದಿನ ವರ್ಷದ ವೇಳೆಗೆ, ಕಂಪನಿಯು ಅದನ್ನು OLED ಡಿಸ್ ಪ್ಲೇ, ಟಚ್‌ಸ್ಕ್ರೀನ್ ಮತ್ತು ಹೊಸ ಚಿಪ್‌ನೊಂದಿಗೆ ಅಪ್‌ಗ್ರೇಡ್ ಮಾಡಬಹುದು.
ಉಳಿದ ಸಾಧನಗಳು ಯಾವಾಗ ಬಿಡುಗಡೆ ಆಗುತ್ತವೆ?
ಹಿಂದಿನ ವರದಿಗಳು ಆಪಲ್ ಟಿವಿ, ಹೋಮ್‌ಪಾಡ್ ಮಿನಿ ಮತ್ತು ಏರ್‌ಟ್ಯಾಗ್ 2 ಈ ಉತ್ಪನ್ನಗಳ ಜೊತೆಗೆ ಬಿಡುಗಡೆಯಾಗಬಹುದೆಂದು ಸೂಚಿಸಿದ್ದವು, ಆದರೆ ಅದರ ಸಾಧ್ಯತೆ ಕಡಿಮೆ. ಇತ್ತೀಚಿನ ವರದಿಯ ಪ್ರಕಾರ, ಈ ಉತ್ಪನ್ನಗಳು ಈ ವಾರ ಬಿಡುಗಡೆಯಾಗುವುದಿಲ್ಲ. ಆಪಲ್ ಮುಂದಿನ ವರ್ಷದ ಆರಂಭದಲ್ಲಿ ಹೊಸ ಐಪ್ಯಾಡ್ ಏರ್, ಮ್ಯಾಕ್‌ಬುಕ್ ಏರ್, ಸ್ಟುಡಿಯೋ ಡಿಸ್ಪ್ಲೇ ಮತ್ತು ಐಫೋನ್ 17 ಇ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








