App Store: ಬಹುದೊಡ್ಡ ನಿರ್ಧಾರ: ಆ್ಯಪ್ ಸ್ಟೋರ್‌ನಿಂದ 1.35 ಲಕ್ಷ ಅಪ್ಲಿಕೇಶನ್‌ಗಳನ್ನು ಕಿತ್ತೆಸೆದ ಆ್ಯಪಲ್
Apple App Store: ಆ್ಯಪ್ ಸ್ಟೋರ್‌ನಲ್ಲಿ ತಮ್ಮ ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡಲು, ಡೆವಲಪರ್‌ಗಳು ತಮ್ಮ ವಿಳಾಸ, ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯಂತಹ ವಿವರಗಳನ್ನು ಒದಗಿಸುವುದು ಕಡ್ಡಾಯ. ಯಾವುದೇ ಡೆವಲಪರ್ ಈ ಮಾಹಿತಿಯನ್ನು ಒದಗಿಸದಿದ್ದರೆ ಅವರ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗುತ್ತದೆ. ಸದ್ಯ ವ್ಯಾಪಾರಿಗಳ ಮಾಹಿತಿಯನ್ನು ಬಹಿರಂಗಪಡಿಸದ ಕಾರಣ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ.

ನೀವು ಐಫೋನ್ ಬಳಸುತ್ತಿದ್ದರೆ ಮತ್ತು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಆ್ಯಪ್ ಸ್ಟೋರ್ ಬಳಸುತ್ತಿದ್ದರೆ, ನಿಮಗಾಗಿ ಬಹುಮುಖ್ಯವಾದ ಸುದ್ದಿ ಇದೆ. ಟೆಕ್ ದೈತ್ಯ ಆ್ಯಪಲ್ ತನ್ನ ಆ್ಯಪ್ ಸ್ಟೋರ್ ಮೇಲೆ ಬಹುದೊಡ್ಡ ಕ್ರಮ ಕೈಗೊಂಡಿದೆ. ಆ್ಯಪಲ್ ಆ್ಯಪ್ ಸ್ಟೋರ್ ನಿಂದ ಸುಮಾರು 1.35 ಲಕ್ಷ ಆ್ಯಪ್ ಗಳನ್ನು ತೆಗೆದುಹಾಕಿದೆ. ಆ್ಯಪ್ ಸ್ಟೋರ್‌ನಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸಲು ಕಂಪನಿಯು ಈ ಕ್ರಮವನ್ನು ತೆಗೆದುಕೊಂಡಿದೆ.
ಆ್ಯಪಲ್ ಫೆಬ್ರವರಿ 17 ರವರೆಗೆ ಆ್ಯಪ್ ಡೆವಲಪರ್‌ಗಳಿಗೆ ವ್ಯಾಪಾರಿ ಮಾಹಿತಿಯನ್ನು ಒದಗಿಸಲು ಸಮಯ ನೀಡಿತ್ತು. ಈಗ ಕಂಪನಿಯು ಮಾಹಿತಿಯನ್ನು ಬಹಿರಂಗಪಡಿಸದ ಕಾರಣ ಲಕ್ಷಾಂತರ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಕಂಪನಿಯು ಕಳೆದ ಕೆಲವು ದಿನಗಳಲ್ಲಿ ಯುರೋಪಿಯನ್ ಒಕ್ಕೂಟದ ನಿಯಮಗಳನ್ನು ಪಾಲಿಸಿ ತನ್ನ ಆ್ಯಪ್ ಸ್ಟೋರ್‌ನಿಂದ ಸುಮಾರು 1.35 ಲಕ್ಷ ಆ್ಯಪ್ ಗಳನ್ನು ತೆಗೆದುಹಾಕಿದೆ.
EU ನಿಯಮಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ:
ಯುರೋಪಿಯನ್ ಒಕ್ಕೂಟದ ನಿಯಮಗಳ ಪ್ರಕಾರ, ಅಪ್ಲಿಕೇಶನ್ ಡೆವಲಪರ್‌ಗಳು ತಮ್ಮ ವ್ಯಾಪಾರ ಸ್ಥಿತಿಯನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಸರಳವಾಗಿ ಹೇಳುವುದಾದರೆ, ಆ್ಯಪ್ ಸ್ಟೋರ್‌ನಲ್ಲಿ ತಮ್ಮ ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡಲು, ಡೆವಲಪರ್‌ಗಳು ತಮ್ಮ ವಿಳಾಸ, ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯಂತಹ ವಿವರಗಳನ್ನು ಒದಗಿಸುವುದು ಕಡ್ಡಾಯ. ಯಾವುದೇ ಡೆವಲಪರ್ ಈ ಮಾಹಿತಿಯನ್ನು ಒದಗಿಸದಿದ್ದರೆ ಅವರ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗುತ್ತದೆ.
ಯುರೋಪ್‌ನಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಡಿಜಿಟಲ್ ಸೇವಾ ಕಾಯ್ದೆಯನ್ನು ಪರಿಚಯಿಸಲಾಗಿದೆ. ಇದನ್ನು ತಾತ್ಕಾಲಿಕವಾಗಿ 2023 ರಲ್ಲಿ ಜಾರಿಗೆ ತರಲಾಯಿತು ಆದರೆ ಈಗ ಇದನ್ನು ಫೆಬ್ರವರಿ 17, 2025 ರಂದು ಸಂಪೂರ್ಣವಾಗಿ ಜಾರಿಗೆ ತರಲಾಗಿದೆ. ಇದಕ್ಕಾಗಿಯೇ ಅಪ್ಲಿಕೇಶನ್ ಡೆವಲಪರ್ ಗಳಿಗೆ ಫೆಬ್ರವರಿ 17 ರವರೆಗೆ ಸಮಯ ನೀಡಲಾಯಿತು.
ವ್ಯಾಪಾರಿಗಳ ಮಾಹಿತಿಯನ್ನು ಬಹಿರಂಗಪಡಿಸದ ಕಾರಣ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಮತ್ತು ಅವುಗಳಿಗೆ ಸಂಬಂಧಿಸಿದ ಮಾಹಿತಿ ಬರುವವರೆಗೆ ಅವುಗಳನ್ನು ಆ್ಯಪ್ ಸ್ಟೋರ್‌ಗೆ ಹಿಂತಿರುಗಿಸಲಾಗುವುದಿಲ್ಲ ಎಂದು ಕಂಪನಿ ಹೇಳಿದೆ. ಆ್ಯಪ್ ಸ್ಟೋರ್ ಪ್ರಾರಂಭವಾದ ನಂತರ ಆ್ಯಪಲ್ ತೆಗೆದುಕೊಂಡ ಅತಿದೊಡ್ಡ ಕ್ರಮ ಇದಾಗಿದೆ ಎಂದು ಹೇಳಲಾಗಿದೆ.
AI Smartphones: ಇಲ್ಲಿದೆ ಅದ್ಭುತ AI ವೈಶಿಷ್ಟ್ಯ ಹೊಂದಿರುವ ಸೂಪರ್ ಸ್ಮಾರ್ಟ್‌ಫೋನ್ಸ್: ಬೆಲೆ 30,000 ಕ್ಕಿಂತ ಕಡಿಮೆ
ಭಾರತದಲ್ಲಿ ಆ್ಯಪಲ್ ಇಂಟೆಲಿಜೆನ್ಸ್:
ಆ್ಯಪಲ್ ಇಂಟೆಲಿಜೆನ್ಸ್ ಭಾರತಕ್ಕೆ ಬರುತ್ತಿದೆ ಎಂದು ಆ್ಯಪಲ್ ಅಂತಿಮವಾಗಿ ಘೋಷಿಸಿದೆ. ಅಧಿಕೃತ ಪ್ರಕಟಣೆಯ ಪ್ರಕಾರ, ಕಂಪನಿಯು ಆ್ಯಪಲ್ ಇಂಟೆಲಿಜೆನ್ಸ್ ಲಭ್ಯತೆಯನ್ನು ಹೆಚ್ಚಿನ ಪ್ರದೇಶಗಳು ಮತ್ತು ಭಾಷೆಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ. ಆಪಲ್ ಹೇಳುವಂತೆ, “ಸಹಾಯಕ ಮತ್ತು ಸಂಬಂಧಿತ ಬುದ್ಧಿಮತ್ತೆಯನ್ನು ನೀಡುವ ವೈಯಕ್ತಿಕ ಗುಪ್ತಚರ ವ್ಯವಸ್ಥೆಯಾದ ಆ್ಯಪಲ್ ಇಂಟೆಲಿಜೆನ್ಸ್ ಶೀಘ್ರದಲ್ಲೇ ಫ್ರೆಂಚ್, ಜರ್ಮನ್, ಇಟಾಲಿಯನ್, ಪೋರ್ಚುಗೀಸ್ (ಬ್ರೆಜಿಲ್), ಸ್ಪ್ಯಾನಿಷ್, ಜಪಾನೀಸ್, ಕೊರಿಯನ್ ಮತ್ತು ಚೈನೀಸ್ (ಸರಳೀಕೃತ) ಸೇರಿದಂತೆ ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿರುತ್ತದೆ – ಜೊತೆಗೆ ಸಿಂಗಾಪುರ ಮತ್ತು ಭಾರತಕ್ಕೆ ಸ್ಥಳೀಯ ಇಂಗ್ಲಿಷ್ನಲ್ಲಿ ಲಭಗಯವಿರುತ್ತದೆ.”
ಇದಲ್ಲದೆ, ಈ ಅಪ್‌ಡೇಟ್ iOS 18.4 ನೊಂದಿಗೆ ಬರಲಿದೆ ಎಂದು ಕಂಪನಿಯು ದೃಢಪಡಿಸಿದೆ. “ಈ ಹೊಸ ಭಾಷೆಗಳು ಏಪ್ರಿಲ್‌ನಲ್ಲಿ iOS 18.4, iPadOS 18.4, ಮತ್ತು macOS Sequoia 15.4 ಬಿಡುಗಡೆಯೊಂದಿಗೆ ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಪ್ರವೇಶಿಸಬಹುದಾಗಿದೆ ಮತ್ತು ಡೆವಲಪರ್‌ಗಳು ಇದನ್ನು ಪರೀಕ್ಷಿಸಲು ಪ್ರಾರಂಭಿಸಬಹುದು” ಎಂದು ಹೇಳಿದೆ.
ಆ್ಯಪಲ್ ಸಿಇಒ ಟಿಮ್ ಕುಕ್ ಕಂಪನಿಯ AI-ಚಾಲಿತ ಸೂಟ್, ಆ್ಯಪಲ್ ಇಂಟೆಲಿಜೆನ್ಸ್, ಈ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದ ಕೆಲವು ವಾರಗಳ ನಂತರ ಈ ಘೋಷಣೆ ಆಗಿದೆ. ಈ ಕ್ರಮವು ದೇಶದಲ್ಲಿ ಆ್ಯಪಲ್ನ AI ಸಾಮರ್ಥ್ಯಗಳನ್ನು ವಿಸ್ತರಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ, ಇವು ಹಿಂದೆ ಕ್ಲೀನ್ ಅಪ್ ಟೂಲ್‌ನಂತಹ ಆಯ್ದ ವೈಶಿಷ್ಟ್ಯಗಳಿಗೆ ಮಾತ್ರ ಸೀಮಿತವಾಗಿದ್ದವು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 am, Mon, 24 February 25