Apple Watch 8: ಕಾರು ಚಾಲಕನ ಪ್ರಾಣ ಉಳಿಸಿದ ಆ್ಯಪಲ್ ವಾಚ್ 8 ಸರಣಿ: ಇದು ಹೇಗೆ ಸಾಧ್ಯವಾಯಿತು ನೋಡಿ

| Updated By: Vinay Bhat

Updated on: Oct 29, 2022 | 2:23 PM

ಆ್ಯಪಲ್ ವಾಚ್ ಸರಣಿ 8 ರಲ್ಲಿ ಕ್ರ್ಯಾಶ್ ಡಿಟೆಕ್ಟರ್ ಆಯ್ಕೆ ಎರಡು ಮೋಷನ್ ಸೆನ್ಸರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ನೀವು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತವಾದರೆ ನಿಮ್ಮ ಕುಟುಂಬ ಅಥವಾ ಸ್ನೇಹಿತರಿಗೆ SOS ಕಾಲ್‌ ಕಳುಹಿಸುತ್ತದೆ.

Apple Watch 8: ಕಾರು ಚಾಲಕನ ಪ್ರಾಣ ಉಳಿಸಿದ ಆ್ಯಪಲ್ ವಾಚ್ 8 ಸರಣಿ: ಇದು ಹೇಗೆ ಸಾಧ್ಯವಾಯಿತು ನೋಡಿ
Apple Watch
Follow us on

ಆ್ಯಪಲ್ (Apple) ಕಂಪನಿಯ ಸಾಧನಗಳು ಮನುಷ್ಯನ ಪ್ರಾಣ ಉಳಿಸಿದಂತಹ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಇತ್ತೀಚೆಗಷ್ಟೆ ಆ್ಯಪಲ್ ಐಫೋನ್ 11 ಪ್ರೊ ಉಕ್ರೇನ್ ಸೈನಿಕನಿಗೆ ಬುಲೆಟ್ ತಗುಲುವುದನ್ನು ತಡೆದಿತ್ತು. ಇದಕ್ಕೂ ಮುನ್ನ ಆ್ಯಪಲ್‌ ವಾಚ್​ನಲ್ಲಿರುವ ECG ಫೀಚರ್‌ ವ್ಯಕ್ತಿಯೊಬ್ಬರ ಜೀವ ಉಳಿಸಿದ ಘಟನೆ ಹರಿಯಾಣದಲ್ಲಿ ವರದಿಯಾಗಿತ್ತು. ಇದೀಗ ಆ್ಯಪಲ್ ಕಂಪನಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ ಆ್ಯಪಲ್ ವಾಚ್ 8 ಸರಣಿ (Apple Watch Series 8) ವ್ಯಕ್ತಿಯೊಬ್ಬರು ಅಪಘಾತವಾಗಿದ್ದನ್ನು ಗುರುತಿಸಿ ಪ್ರಾಣ ಉಳಿಸಿದೆ. ಆ್ಯಪಲ್ ಕಳೆದ ಸೆಪ್ಟಂಬರ್​ನಲ್ಲಿ ಹೊಸ 8 ಸರಣಿಯ ವಾಚ್‌ ಅನಾವರಣ ಮಾಡಿತ್ತು. ಇದರಲ್ಲಿ ಫಾಲ್ ಡಿಟೆಕ್ಷನ್, ಮೆಡಿಕಲ್‌ ಎಮರ್ಜೆನ್ಸಿ ಸರ್ವಿಸ್‌ ನಂತಹ ಸೇವೆಗಳನ್ನು ಕಲ್ಪಿಸಲಾಗಿದೆ. ಮುಖ್ಯವಾಗಿ ಇದರಲ್ಲಿ ಕ್ರ್ಯಾಶ್ ಡಿಟೆಕ್ಟರ್ (Crash Detection) ಆಯ್ಕೆ ನೀಡಲಾಗಿದ್ದು, ಇದೀಗ ಈ ಫೀಚರ್ ಕಾರು ಚಾಲಕನ ಪ್ರಾಣವನ್ನು ಕಾಪಾಡಿದೆ.

ಅಮೆರಿಕಾದ ನೋಲನ್ ಅಬೆಲ್ ಎಂಬ ವ್ಯಕ್ತಿ ವೇಗವನ್ನು ಕಾರು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪ್ರಜ್ಞೆ ತಪ್ಪಿದ್ದ ಇವರಿಗೆ ಏನು ಮಾಡಲು ಆಗುತ್ತಿರಲಿಲ್ಲ. ಆದರೆ, ಇವರು ಆ್ಯಪಲ್ ವಾಚ್ ಸಿರೀಸ್ 8 ಕೈಗೆ ಕಟ್ಟಿದ್ದರು. ಅಪಘಾತವಾದ ತಕ್ಷಣ ವಾಚ್​ನಲ್ಲಿದ್ದ ಕ್ರ್ಯಾಶ್ ಡಿಟೆಕ್ಟರ್ ಆಯ್ಕೆ ಆನ್ ಆಗಿ ಎಮರ್ಜೆನ್ಸಿ ಕಾಂಟ್ಯಾಕ್ಟ್​ಗೆ ಕರೆ ಹೋಗಿದೆ. ಇದರಿಂದ ಇವರು ಪ್ರಾಣಾಪಾಯದಿಂದ ಪಾರಾಗಿದ್ದದಾರೆ.

ಆ್ಯಪಲ್ ವಾಚ್ ಸರಣಿ 8 ರಲ್ಲಿ ಕ್ರ್ಯಾಶ್ ಡಿಟೆಕ್ಟರ್ ಆಯ್ಕೆ ಎರಡು ಮೋಷನ್ ಸೆನ್ಸರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ನೀವು ಏನಾದರು ತೊಂದರೆಯಲ್ಲಿರುವುದು ಕಂಡು ಬಂದರೆ, ಅಥವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತವಾದರೆ ಇದು ನಿಮ್ಮ ಕುಟುಂಬ ಅಥವಾ ಸ್ನೇಹಿತರಿಗೆ SOS ಕಾಲ್‌ ಕಳುಹಿಸುತ್ತದೆ. ಹೀಗೆ ಎಮರ್ಜೆನ್ಸಿ ಕಂಟ್ಯಾಕ್ಟ್‌ಗಳಿಗೆ ತಕ್ಷಣವೇ ಸೂಚನೆ ನೀಡುತ್ತದೆ. ಈ ಆಯ್ಕೆ ನೂತನ ಐಫೋನ್ 14 ಸರಣಿಯಲ್ಲೂ ನೀಡಲಾಗಿದೆ.

ಇದನ್ನೂ ಓದಿ
Oppo A Series: ಧೂಳೆಬ್ಬಿಸುತ್ತಿದೆ ಒಪ್ಪೋ ಸಂಸ್ಥೆಯ ಹೊಸ ಸ್ಮಾರ್ಟ್​ಫೋನ್: 108MP ಕ್ಯಾಮೆರಾ ಫೋನುಗಳಿಗೆ ಶುರುವಾಯ್ತು ನಡುಕ
Drinik Virus: ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಹೊಸ ವೈರಸ್ ಪತ್ತೆ: ಭಾರತದ ಬ್ಯಾಂಕ್ ಗ್ರಾಹಕರೇ ಇದರ ಟಾರ್ಗೆಟ್
National Internet Day 2022: ಇಂಟರ್ನೆಟ್ ದಿನವಾದ ಇಂದು ನೀವು ತಿಳಿದಿರಬೇಕಾದ ಅಂಶಗಳು ಇಲ್ಲಿವೆ
ನೀವು ಸ್ಮಾರ್ಟ್​ಫೋನ್​ನಲ್ಲಿರುವ mAadhaar ಆ್ಯಪ್ ಬಳಸಿದ್ದೀರಾ?: ಏನಿದರ ಪ್ರಯೋಜನ?

ಆ್ಯಪಲ್‌ ವಾಚ್‌ ಸಿರೀಸ್‌ 8 ಫಾಲ್ ಡಿಟೆಕ್ಷನ್, ಮೆಡಿಕಲ್‌ ಎಮರ್ಜೆನ್ಸಿ ಸರ್ವಿಸ್‌ ನಂತಹ ಸೇವೆಗಳನ್ನು ಪಡೆದಿದೆ. ಈ ಸಿರೀಸ್‌ನ ವಾಚ್‌ಗಳು ಟೆಂಪ್‌ರೇಚರ್‌ ಸೆನ್ಸಾರ್‌ ಪ್ರತಿ 5 ಸೆಕೆಂಡಿಗೆ ಟೆಂಪ್‌ರೇಚರ್‌ನಲ್ಲಿ ಬದಲಾವಣೆಗಳನ್ನು ಟ್ರ್ಯಾಕ್‌ ಮಾಡಲು ಅವಕಾಶ ನೀಡಲಿದೆ. ಜೊತೆಗೆ ECG, ರಕ್ತದ ಆಮ್ಲಜನಕದ ಮಾನಿಟರಿಂಗ್ (SpO2) ಫೀಚರ್​ಗಳನ್ನು ಕೂಡ ಹೊಂದಿದೆ. ಸಾಮಾನ್ಯವಾಗಿ ಇದು 36 ಗಂಟೆಗಳ ಸ್ಟ್ಯಾಂಡ್‌ಬೈ ಅನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಆ್ಯಪಲ್ ವಾಚ್ ಅಲ್ಟ್ರಾ ಮಲ್ಟಿ ಬ್ಯಾಂಡ್ ಜಿಪಿಎಸ್ ಜೊತೆಗೆ ಬರುತ್ತದೆ. ಇದರಲ್ಲಿರುವ ಹೊಸ ಬಟನ್ ಇತರ ವಿಷಯಗಳ ಜೊತೆಗೆ ಸ್ಪೋರ್ಟ್ಸ್‌ ಟ್ರ್ಯಾಕಿಂಗ್‌ನೊಂದಿಗೆ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದರಲ್ಲಿ ನೈಟ್‌ ಮೋಡ್ ಆಯ್ಕೆ ಕೂಡ ನೀಡಲಾಗಿದ್ದು, ರಾತ್ರಿ ಸಮಯದಲ್ಲಿ ಶುಭ್ರವಾಗಿ ಘೋಚರಿಸುತ್ತದೆ. ಇದರ ಬೆಲೆ ಭಾರತದಲ್ಲಿ 56,000 ರೂ. ಆಗಿದೆ.