ನೀವು ಸ್ಮಾರ್ಟ್​ಫೋನ್​ನಲ್ಲಿರುವ mAadhaar ಆ್ಯಪ್ ಬಳಸಿದ್ದೀರಾ?: ಏನಿದರ ಪ್ರಯೋಜನ?

Tech Tips: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದವರು ಬಳಕೆದಾರರ ಅನುಕೂಲಕ್ಕಾಗಿ ಆಧಾರ್ ಆ್ಯಪ್‌ ಅನ್ನು ಉನ್ನತೀಕರಿಸಿದ್ದಾರೆ. ಈ ಆ್ಯಪ್‌ ಆಂಡ್ರಾಯ್ಡ್ (Android) ಮತ್ತು ಐಓಸ್ (iOS) ಅಧಿಕೃತ ಆ್ಯಪ್‌ ಸ್ಟೋರ್‌ಗಳಲ್ಲಿ ಲಭ್ಯವಿದೆ.

ನೀವು ಸ್ಮಾರ್ಟ್​ಫೋನ್​ನಲ್ಲಿರುವ mAadhaar ಆ್ಯಪ್ ಬಳಸಿದ್ದೀರಾ?: ಏನಿದರ ಪ್ರಯೋಜನ?
mAadhaar
Follow us
TV9 Web
| Updated By: Vinay Bhat

Updated on: Oct 29, 2022 | 6:09 AM

ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್‌ (Aadhaar Card) ಎಂಬುದು ಒಂದು ಪ್ರಮುಖ ದಾಖಲೆ. ಆದರೆ ಆಧಾರ್ ಕಾರ್ಡ್ ಅನ್ನು ಎಲ್ಲೆಡೆ ಕೊಂಡೊಯ್ಯಲು ಸಾಧ್ಯವಿಲ್ಲ. ಇದಕ್ಕಾಗಿಯೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದವರು ಬಳಕೆದಾರರ ಅನುಕೂಲಕ್ಕಾಗಿ ಆಧಾರ್ ಆ್ಯಪ್‌ ಅನ್ನು ಉನ್ನತೀಕರಿಸಿದ್ದಾರೆ. ಈ ಆ್ಯಪ್‌ ಆಂಡ್ರಾಯ್ಡ್ (Android) ಮತ್ತು ಐಓಸ್ (iOS) ಅಧಿಕೃತ ಆ್ಯಪ್‌ ಸ್ಟೋರ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ ಆಧಾರ್ ಕಾರ್ಡಿನ ಸಾಫ್ಟ್ ಕಾಪಿ ಡೌನ್‌ಲೋಡ್ ಮಾಡುವುದರ ಜತೆಗೆ ಆಧಾರ್​ಗೆ ಸಂಬಂಧಿಸಿದ ಹಲವು ಸೇವೆಗಳು ಲಭ್ಯವಿದೆ. ಈ ಆ್ಯಪ್ ಮೂಲಕ ನಿಮ್ಮ ಮೊಬೈಲ್ ಫೋನ್‌ನಲ್ಲಿ ಆಧಾರ್‌ಗೆ ಸಂಬಂಧಿಸಿದ 35ಕ್ಕೂ ಹೆಚ್ಚು ಸೇವೆಗಳ ಲಾಭವನ್ನು ಪಡೆಯಬಹುದು. mAadhaar ಅಪ್ಲಿಕೇಶನ್ ಬಳಕೆದಾರರಿಗೆ ಅದರ ಆಧಾರ್ ಡೇಟಾವನ್ನು ಸಿಂಕ್ ಮಾಡಲು ಅನುಮತಿಸುತ್ತದೆ. ಈರೀತಿ ಮಾಡುವುದರಿಂದ ಯಾವುದೇ ಸಮಯದಲ್ಲಿ ಆಧಾರ್‌ಗೆ ಸಂಬಂಧಿಸಿದ ಮಾಹಿತಿಯನ್ನು ನೀವು ನಿಮ್ಮ ಬೆರಳ ತುದಿಯಲ್ಲಿ ಪಡೆಯಲು ಇದು ಸಹಾಯ ಮಾಡುತ್ತದೆ. ಹಾಗಾದ್ರೆ ಇದನ್ನು ಬಳಕೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.

  • ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಗೂಗಲ್ ಪ್ಲೇ ಸ್ಟೋರ್​ಗೆ ಬೇಟಿ ನೀಡಿ. ಐಒಎಸ್ ಬಳಕೆದಾರರಾಗಿದ್ದರೆ ಆ್ಯಪ್​ ಸ್ಟೋರ್ ಓಪನ್ ಮಾಡಿ.
  • ಸರ್ಚ್​ ಬಾರ್​ನಲ್ಲಿ mAadhaar ಎಂದು ಟೈಪ್ ಮಾಡಿ ಮತ್ತು ಡೌನ್​ಲೋಡ್ ಕೊಡಿ. ಅಥವಾ ಅಂಡ್ರಾಯ್ಡ್ ಬಳಕೆದಾರರು https://play.google.com/store/apps/details?id=in.gov.uidai.mAadhaarPlus&hl=en_IN ಐಒಎಸ್ ಅವರು https://apps.apple.com/in/app/maadhaar/id1435469474 ನಲ್ಲಿ ಡೌನ್​ಲೋಡ್ ಮಾಡಬಹುದು.
  • ಈಗ ನೀವು ಡೌನ್​ಲೋಡ್ ಮಾಡಿದ ಆ್ಯಪ್ ಸರಿಯಾಗಿದೆಯೇ ಎಂದು ಪರಶೀಲಿಸಿ. ಈ ಆ್ಯಪ್ ಅನ್ನು ಅಭಿವೃದ್ದಿ ಪಡಿಸಿದ ಬಗ್ಗೆ Unique Identification Authority of India ಎಂದು ಇದೆಯೇ ಎಂದು ನೋಡಿಕೊಳ್ಳಿ.
  • ಇನ್​ಸ್ಟಾಲ್ ಮಾಡಿ ಓಪನ್ ಮಾಡಿದ ತಕ್ಷಣ ಅಲ್ಲಿರುವ ವಿಷಯಗಳನ್ನು ಓದಿ ಮುಂದೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಭಾಷೆಯ ಆಯ್ಕೆ ಕೂಡ ಸಿಗುತ್ತದೆ.
  • ಇದರಲ್ಲಿ ಐದು ಜನರ ಪ್ರೊಫೈಲ್ ನೋಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಆ್ಯಡ್ ಪ್ರೊಫೈಲ್​ನಲ್ಲಿ ಓಟಿಪಿ ನಮೋದಿಸಬೇಕಾಗುತ್ತದೆ.

mAadhaar ಅಪ್ಲಿಕೇಶನ್ ಅನ್ನು ಭಾರತದಲ್ಲಿ ಎಲ್ಲಿಯಾದರೂ ಯಾವಾಗ ಬೇಕಾದರೂ ಬಳಸಬಹುದು. ಇದು ವ್ಯಾಲೆಟ್ ನಲ್ಲಿರುವ ಆಧಾರ್ ಕಾರ್ಡ್ ಗಿಂತ ಹೆಚ್ಚು. ಒಂದೆಡೆ, ಎಂ-ಆಧಾರ್ ಪ್ರೊಫೈಲ್ ಅನ್ನು ವಿಮಾನ ನಿಲ್ದಾಣವು ಮಾನ್ಯ ಐಡಿ ಪ್ರೂಫ್ ಆಗಿ ಸ್ವೀಕರಿಸುತ್ತದೆ ಮತ್ತು ಮತ್ತೊಂದೆಡೆ, ರೈಲ್ವೆಗಳು ತಮ್ಮ ಇಕೆವೈಸಿ ಅಥವಾ ಕ್ಯೂಆರ್ ಕೋಡ್ ಅನ್ನು ಆಧಾರ್ ಸೇವೆಗಳನ್ನು ಒದಗಿಸಿದ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಲು ಅಪ್ಲಿಕೇಶನ್‌ನಲ್ಲಿನ ವೈಶಿಷ್ಟ್ಯಗಳನ್ನು ಬಳಸಬಹುದು.

ಇದನ್ನೂ ಓದಿ
Image
iPhone 15: ಐಫೋನ್ 15 ಬಗ್ಗೆ ಹೊರಬಿತ್ತು ಶಾಕಿಂಗ್ ವಿಚಾರ: ಇದರಲ್ಲಿರಲಿದೆ ಅಚ್ಚರಿಯ ಆಯ್ಕೆ
Image
ಸಾಮಾಜಿಕ ಮಾಧ್ಯಮ ಕುಂದುಕೊರತೆಗಳಿಗೆ ಸಿಗಲಿದೆ ಪರಿಹಾರ; ಶೀಘ್ರದಲ್ಲೇ ಸರ್ಕಾರದಿಂದ ಸಮಿತಿ ರಚನೆ
Image
Fake App: ಈ ಆ್ಯಪ್ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ: ಗೂಗಲ್​ನಿಂದ ಎಚ್ಚರಿಕೆ ಸಂದೇಶ
Image
WhatsApp: ವಾಟ್ಸ್​ಆ್ಯಪ್​ನಲ್ಲಿ ಹೊಸ ಫೀಚರ್: ಫೋಟೋ, ವಿಡಿಯೋ ಫಾರ್ವರ್ಡ್ ಮಾಡೋವಾಗ ಸಿಗುತ್ತೆ ಈ ಆಯ್ಕೆ

mAadhaar ಅಪ್ಲಿಕೇಶನ್ ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ನಿಮ್ಮ ಬಯೋಮೆಟ್ರಿಕ್ ಲಾಕಿಂಗ್ / ಅನ್ಲಾಕಿಂಗ್ ಅನ್ನು ಮಾಡಬಹುದು. ಇದಕ್ಕಾಗಿ ನೀವು ಅಪ್ಲಿಕೇಶನ್‌ನಲ್ಲಿ ಸೆಟ್ಟಿಂಗ್ಸ್ ಸಕ್ರಿಯಗೊಳಿಸಬೇಕು. ಎಸ್​ಎಮ್​ಎಸ್​ ಆಧಾರಿತ ಓಟಿಪಿ ಬದಲಿಗೆ, mAadhaar ಸಮಯ ಆಧಾರಿತ ಒಂದು ಬಾರಿ ಪಾಸ್‌ವರ್ಡ್ (OTP) ಅನ್ನು ಉತ್ಪಾದಿಸುತ್ತದೆ. ಇದು ಬಹಳ ಕಡಿಮೆ ಸಮಯದವರೆಗೆ ಲೈವ್ ಒಟಿಪಿ ಆಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಕೂಡ ನೀಡುತ್ತದೆ.

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM