Audio- Only Forum Hotline: ಫೇಸ್​ಬುಕ್​ನಿಂದ ಲೈವ್ ಆಡಿಯೋ ಹಾಟ್​ಲೈನ್ ಪ್ರಯೋಗ; ಇದೇನು, ಎತ್ತ?

|

Updated on: Apr 08, 2021 | 5:15 PM

ಫೇಸ್​ಬುಕ್​ನಿಂದ ಆಡಿಯೋ- ಓನ್ಲಿ ಫೋರಂ "ಹಾಟ್​ಲೈನ್" ಅನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಏನಿದು ಅಪ್ಲಿಕೇಷನ್, ಇದರ ಪ್ರಯೋಜನ ಹಾಗೂ ವಿಶೇಷಗಳೇನು ಎಂಬ ವಿವರ ಇಲ್ಲಿದೆ.

Audio- Only Forum Hotline: ಫೇಸ್​ಬುಕ್​ನಿಂದ ಲೈವ್ ಆಡಿಯೋ ಹಾಟ್​ಲೈನ್ ಪ್ರಯೋಗ; ಇದೇನು, ಎತ್ತ?
ಪ್ರಾತಿನಿಧಿಕ ಚಿತ್ರ
Follow us on

ಫೇಸ್​ಬುಕ್​ನಿಂದ ಬುಧವಾರದಂದು ಪ್ರಾಯೋಗಿಕವಾಗಿ ಹಾಟ್​ಲೈನ್ ಎಂಬ ಆನ್​ಲೈನ್ ಫೋರಂ ಆರಂಭಿಸಲಾಗಿದೆ. ಈಗಾಗಲೇ ಕ್ಲಬ್​ಹೌಸ್ ಹೆಸರಿನಲ್ಲಿ ಶುರುವಾಗಿರುವ ಇಂಥದ್ದೇ ಲೈವ್ ಆಡಿಯೋ ಟ್ರೆಂಡ್ ಜನಪ್ರಿಯವಾಗಿದ್ದು, ಅದಕ್ಕೆ ಸ್ಪರ್ಧೆ ನೀಡಲು ಫೇಸ್​ಬುಕ್ ಪ್ರಯತ್ನ ಆರಂಭಿಸಿದೆ. ಆಡಿಯೋ- ಓನ್ಲಿ (ಧ್ವನಿ- ಮಾತ್ರ) ಆನ್​ಲೈನ್ ಪ್ರತಿಸ್ಪರ್ಧಿಯಿಂದ ತನ್ನ ಬಳಕೆದಾರರನ್ನು ಉಳಿಸಿಕೊಳ್ಳುವುದು ಫೇಸ್​ಬುಕ್​ಗೆ ಸವಾಲಾಗಿ ಪರಿಣಮಿಸಿದೆ. ರೆಡ್​ಇಟ್​ನ ಆಸ್ಕ್ ಮಿ ಎನಿಥಿಂಗ್ ಸೆಷನ್ಸ್ ಮತ್ತು ಕ್ಲಬ್​ಹೌಸ್​ಗೆ ಫೇಸ್​ಬುಕ್​ನ ಈಗಿನ ಅಪ್ಲಿಕೇಷನ್ ಸವಾಲು ಒಡ್ಡಲು ರೂಪಿಸುತ್ತಿರುವಂತಿದೆ.

ಆಡಿಯೋ- ಓನ್ಲಿ ಸಾಮಾಜಿಕ ಮಾಧ್ಯಮದ ಕೌತುಕವು ವರ್ಷದ ಹಿಂದೆ ಶುರುವಾಗಿದ್ದು, ಕೊರೊನಾ ಬಿಕ್ಕಟ್ಟಿನ ವೇಳೆಯಲ್ಲಿ ಭಾರೀ ಪ್ರಚಾರ ಗಿಟ್ಟಿಸಿದೆ. ಹಾಟ್​ಲೈನ್ ಎಂಬುದು ಬಳಕೆದಾರರಿಗೆ ಧ್ವನಿ, ಟೆಕ್ಸ್ಟ್, ವಿಡಿಯೋ ಇವೆಲ್ಲವುಗಳ ಮೂಲಕ ಆಯೋಜಕರೊಂದಿಗೆ ಆನ್​ಲೈನ್​ನಲ್ಲಿ ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡುತ್ತದೆ. ಬಳಕೆದಾರರು ಬರವಣಿಗೆಯಲ್ಲೂ ಪ್ರಶ್ನೆ ಕೇಳಬಹುದು. ಕ್ಲಬ್​ಹೌಸ್​ನಲ್ಲಿ ಇದು ಸಾಧ್ಯವಿಲ್ಲ. ಇದರ ಜತೆಗೆ ಭಾಷಣಕಾರರು ವೇದಿಕೆ ಮೇಲೆ ಯಾರು ಮಾತನಾಡಬೇಕು ಎಂದು ಕೂಡ ಆಯ್ಕೆ ಮಾಡಿಕೊಳ್ಳಬಹುದು.

ಸಂವಾದದಂತೆ, ಲೈವ್ ಮಲ್ಟಿಮೀಡಿಯಾ ಪ್ರಶ್ನೋತ್ತರದಂತೆ ತಮ್ಮ ಉದ್ಯಮವನ್ನು ಕಟ್ಟಲು ವೃತ್ತಿಪರ ಕೌಶಲ ಕಲಿಯುವುದಕ್ಕೆ ಹಾಟ್​ಲೈನ್ ಮೂಲಕವಾಗಿ ಪ್ರಶ್ನೋತ್ತರ ಸಹಾಯ ಮಾಡಲಿದೆ ಎಂಬ ಭರವಸೆ ನಮ್ಮದು ಎಂದು ಫೇಸ್​ಬುಕ್ ವಕ್ತಾರೆ ಮಾಧ್ಯಮ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಸೆಷನ್​ನಲ್ಲಿ ಭಾಗವಹಿಸಿದವರು ವೆಬ್ ಕ್ಯಾಮೆರಾಗಳನ್ನು ಬಳಸುವುದಕ್ಕೆ ಅವಕಾಶ ಇದೆ. ಟೆಕ್ಸ್ಟ್ ಚಾಟ್​ಗಳಿಂದ ಬೈಗುಳ, ಬೆದರಿಕೆ ಸಂದೇಶಗಳನ್ನು ತೆಗೆದುಹಾಕಬಹುದು ಎಂದು ಫೇಸ್​ಬುಕ್ ತಿಳಿಸಿದೆ.

ಫೇಸ್​ಬುಕ್ ಸಿಬ್ಬಂದಿ ಹಾಟ್​ಲೈನ್ ಕಾರ್ಯಕ್ರಮಗಳನ್ನು ನಿಗಾ ಮಾಡುತ್ತಾರೆ. ಯಾರು ನಿಯಮ ಉಲ್ಲಂಘನೆ ಮಾಡುತ್ತಾರೋ ಅಂಥವರನ್ನು ಹೊರಹಾಕಲಾಗುತ್ತದೆ ಎಂದು ಟೆಕ್​ಕ್ರಂಚ್ ವರದಿ ಮಾಡಿದೆ. ಫೇಸ್​ಬುಕ್​ನಿಂದ ಇತರ ಹಲವು ಪ್ಲಾಟ್​ಫಾರ್ಮ್​ಗಳನ್ನು ಪರೀಕ್ಷಿಸುತ್ತಿರುವುದಾಗಿ ಕಂಪೆನಿಯ ವಕ್ತಾರೆ ಹೇಳಿದ್ದಾರೆ. ಪ್ರಶ್ನೋತ್ತರ ಪ್ರಾಡಕ್ಟ್ ವೆನ್ಯೂ, ಸಂಗೀತ ಅಪ್ಲಿಕೇಷನ್ ಕೊಲಾಬ್ ಮತ್ತು ಟಿಕ್​ಟಾಕ್​ನಂತೆ ಇರುವ ಬಾರ್ಸ್ ಪರೀಕ್ಷೆ ನಡೆಸುತ್ತಿದೆ.

ಇನ್ನು ಆಡಿಯೋ ಕಾಲಿಂಗ್ ಅಪ್ಲಿಕೇಷನ್ ಕ್ಯಾಚ್​ಅಪ್ ಪರೀಕ್ಷೆ ಕಳೆದ ವರ್ಷ ಮುಕ್ತಾಯ ಆಗಿದೆ. ಝೂಮ್ ವಿಡಿಯೋ ಕಾನ್ಫರೆನ್ಸಿಂಗ್ ಸರ್ವೀಸ್ ಮತ್ತು ಕ್ಲಬ್​ಹೌಸ್ ಯಶಸ್ಸಿನ ನಂತರದಲ್ಲಿ ಫೇಸ್​ಬುಕ್​ನಿಂದ ತನ್ನ ಮುಖ್ಯ ಸೈಟ್, ಅದರ ಸಹೋದರ ಸಂಸ್ಥೆ ಇನ್​ಸ್ಟಾಗ್ರಾಮ್​ನಲ್ಲಿ ಲೈವ್ ವಿಡಿಯೋ ಮತ್ತು ಆಡಿಯೋ ಸಾಮರ್ಥ್ಯ ಹೆಚ್ಚಿಸಿದೆ.

ಇದನ್ನೂ ಓದಿ: 13 ವರ್ಷದ ಒಳಗಿನ ಮಕ್ಕಳು ಕೂಡ ಇನ್​ಸ್ಟಾಗ್ರಾಂ ಖಾತೆ ತೆರೆಯಬಹುದು.. ಫೇಸ್​ಬುಕ್​ನಿಂದ ಹೊಸ ಆ್ಯಪ್ ಲಾಂಚ್ ಸಾಧ್ಯತೆ

(Social media giant Facebook has experimentally launched audio-only forum Hotline on Wednesday.)

Published On - 5:10 pm, Thu, 8 April 21