Battlegrounds Mobile India: ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಭಾರತದಲ್ಲಿ ಅಧಿಕೃತ ಅನಾವರಣ

| Updated By: Srinivas Mata

Updated on: Jul 02, 2021 | 1:36 PM

ಭಾರತದಲ್ಲಿ ಬ್ಯಾಟಲ್​ಗ್ರೌಂಡ್ಸ್​ ಇಂಡಿಯಾ ಮೊಬೈಲ್ ಅಧಿಕೃತವಾಗಿ ಅನಾವರಣಗೊಂಡಿದೆ. ಇದರ ಡೌನ್​ಲೋಡ್​ ಮತ್ತಿತರ ವಿವರಗಳು ಇಲ್ಲಿವೆ.

Battlegrounds Mobile India: ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಭಾರತದಲ್ಲಿ ಅಧಿಕೃತ ಅನಾವರಣ
ಪ್ರಾತಿನಿಧಿಕ ಚಿತ್ರ
Follow us on

ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಭಾರತದಲ್ಲಿ ಅನಾವರಣಗೊಂಡಿದೆ. ಪಬ್​ಜಿ ಮೊಬೈಲ್​ನ ಪರ್ಯಾಯ ಬೇಟಾ ವರ್ಷನ್ ಈಗಾಗಲೇ ನೋಂದಣಿ ಮಾಡಿದವರಿಗೆ ಮೇ ತಿಂಗಳಲ್ಲಿ ಡೌನ್​ಲೋಡ್​ಗೆ ಸಿಕ್ಕಿದೆ. ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾದ ಅಧಿಕೃತ ವರ್ಷನ್​ ಭಾರತದಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್​ಲೋಡ್ ಮಾಡಬಹುದು. ಈ ಬಗ್ಗೆ ಡೆವಲಪರ್ ಆದ ಕ್ರಾಫ್ಟನ್ ಘೋಷಣೆ ಮಾಡಿದೆ. ಯಾವ ಬಳಕೆದಾರರು ಆರಂಭದ ವರ್ಷನ್ ಸಂಪರ್ಕ ಪಡೆದಿರುತ್ತಾರೋ ಅಧಿಕೃತ ವರ್ಷನ್ ಆ್ಯಪ್​ಗೆ ಅಪ್​ಡೇಟ್​ ಮಾಡಿಕೊಳ್ಳಬಹುದು. ಥರ್ಡ್ ಪಾರ್ಟಿ ಸ್ಟೋರ್ಸ್​ಗಳಿಂದ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ APK ಡೌನ್​ಲೋಡ್​ ಮಾಡಿಕೊಳ್ಳುವ ಅಗತ್ಯ ಇಲ್ಲ. ಇದರರ್ಥ ಏನೆಂದರೆ, ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಆ್ಯಪ್​ಗೆ​ ಐಫೋನ್ ಬಳಕೆದಾರರು ಕ್ರಾಪ್ಟನ್​ನಿಂದ ಘೋಷಣೆ ಆಗುವ ತನಕ ಕಾಯಬೇಕಾಗುತ್ತದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬೀಳಲಿದೆ.

ಈ ಮಧ್ಯೆ, ಆಂಡ್ರಾಯಿಡ್ ಬಳಕೆದಾರರು ಆರಂಭದ ವರ್ಷನ್ ಡೌನ್​ಲೋಡ್​ ಮಾಡಿರುತ್ತಾರೋ ಅಂಥವರು ಆ್ಯಪ್ ಪ್ಲೇಸ್ಟೋರ್​ ಲಿಸ್ಟಿಂಗ್​ಗೆ ಭೇಟಿ ನೀಡಿ, ಅಪ್​ಡೇಟ್​ ಮಾಡಬಹುದು. ಒಂದು ಸಲ ಅಪ್​ಡೇಟ್​ ಆದ ಮೇಲೆ ಶಾಶ್ವತವಾದದ್ದನ್ನು (ಕಾನ್​ಸ್ಟೆಬಲ್ ಸೆಟ್) ಸಂಗ್ರಹಿಸಬಹುದು. ಇದು ಇನ್​-ಗೇಮ್ ಈವೆಂಟ್ಸ್​ ವಿಭಾಗದಲ್ಲಿ 10 ಮಿಲಿಯನ್ ಡೌನ್​ಲೋಡ್ಸ್​ಗೆ ರಿವಾರ್ಡ್ ಆಗಿ ಸಿಗುತ್ತದೆ. ​​ಇಂಡಿಯಾ ಕಾ ಬ್ಯಾಟಲ್​​ಗ್ರೌಂಡ್ಸ್​ ಕೊಡುಗೆ ರಿವಾರ್ಡ್ ಪಡೆಯುವುದಕ್ಕೆ ಅವಧಿಯನ್ನು ಕ್ರಾಫ್ಟನ್ ವಿಸ್ತರಣೆ ಮಾಡಿದೆ. 1 ಮಿಲಿಯನ್ ಮತ್ತು 5 ಮಿಲಿಯನ್ ಡೌನ್​ಲೋಡ್​ ರಿವಾರ್ಡ್​ ಆಗಸ್ಟ್ 19ರ ತನಕ ಪಡೆಯಬಹುದು.

ಬ್ಯಾಟಲ್​ಗ್ರೌಂಡ್ಸ್​ ಇಂಡಿಯಾ ಮೊಬೈಲ್ ಗೇಮ್​ ಪಬ್​ಜಿ ಮೊಬೈಲ್​ ಹೋಲಿಕೆ ಇದೆ. ಅಲ್ಲಿ- ಇಲ್ಲಿ ಅಲ್ಪಸ್ವಲ್ಪ ಬದಲಾವಣೆ ಆಗುತ್ತದೆ. ಪ್ರಾಥಮಿಕವಾಗಿ ತಿಳಿಸಿರುವಂತೆ, ಹೊಸ ಗೇಮ್​ನಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಹಸಿರು ಬ್ಲಡ್ ಮತ್ತು ಪೂರ್ತಿ ದಿರಿಸಿನ ಪಾತ್ರಗಳು ಹೀಗೆ ಸಣ್ಣಪುಟ್ಟ ಬದಲಾವಣೆಗಳು ಆಗಿವೆ. ಅತಿ ದೊಡ್ಡ ಬದಲಾವಣೆ ಅಂದರೆ, ಗೇಮ್​ ಪ್ಲೇ ಮ್ಯಾನೇಜ್​ಮೆಂಟ್​ ಸಿಸ್ಟಮ್. ಈ ಮೂಲಕ ಆರೊಗ್ಯ ಕಾಪಾಡಿಕೊಳ್ಳುವುದಕ್ಕೆ ನೆನಪಿಸುತ್ತದೆ ಮತ್ತು ದೇಹದಲ್ಲಿ ನೀರಿನ ಅಂಶ ಇರುವಂತೆ ನೋಡಿಕೊಳ್ಳಲು ಸಲಹೆ ನೀಡುತ್ತದೆ. ಒಂದು ವೇಳೆ ನಿಮಗೆ 18 ವರ್ಷ ತುಂಬಿದಲ್ಲಿ ಈ ಮೆಸೇಜ್​ಗಳನ್ನು ಟರ್ನ್​ ಆಫ್ ಮಾಡಬಹುದು.

ಇದನ್ನೂ ಓದಿ:ಮೊಬೈಲ್​ ಗೇಮ್​ ಆಡಿ 1.33 ಲಕ್ಷ ರೂಪಾಯಿ ಖಾಲಿ ಮಾಡಿದ ಮಗ, ನಷ್ಟ ಭರಿಸಲು ಕಾರ್​ ಮಾರಿದ ಅಪ್ಪ; ಎಚ್ಚರ ಪೋಷಕರೇ ಎಚ್ಚರ! 

(Battlegrounds mobile India officially launched in India. Here is the details about gaming app)

Published On - 1:34 pm, Fri, 2 July 21