Battlegrounds Mobile India: ಅಧಿಕೃತವಾಗಿ ವಾಪಸ್​ ಆದ PUBG; ಪ್ರೀ ರಿಜಿಸ್ಟ್ರೇಷನ್ ಹೇಗೆ?

|

Updated on: May 13, 2021 | 11:29 PM

PUBG ಗೇಮ್ ಈಗ ಅಧಿಕೃತವಾಗಿ ಈಗ ಭಾರತಕ್ಕೆ ಹಿಂತಿರುಗಿದೆ. ಹೆಸರು ಏನು ಗೊತ್ತಾ? Battlegrounds Mobile India. ಪ್ರೀ ರಿಜಿಸ್ಟ್ರೇಷನ್ ಕೂಡ ಶುರುವಾಗಿದೆ.

Battlegrounds Mobile India: ಅಧಿಕೃತವಾಗಿ ವಾಪಸ್​ ಆದ PUBG; ಪ್ರೀ ರಿಜಿಸ್ಟ್ರೇಷನ್ ಹೇಗೆ?
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಬಹಳ ಸಮಯದ ನಿರೀಕ್ಷೆ ಹಾಗೂ ಊಹೆಯ ನಂತರ ಅಂತೂ PUBG Mobile ಮತ್ತೆ ಭಾರತಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಈ ಬಾರಿ ಅದರ ಹೆಸರು ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿದೆ. ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ- ಅ ಬ್ಯಾಟಲ್ ರಾಯಲ್ ಎಕ್ಸ್​ಪೀರಿಯೆನ್ಸ್- ಇದಕ್ಕೆ ಆರಂಭಕ್ಕೂ ಮುನ್ನ ಪ್ರೀ ರಿಜಿಸ್ಟ್ರೇಷನ್ ಇದೆ. ಕ್ರಾಫ್ಟನ್ ಈ ಬಗ್ಗೆ ಮಾತನಾಡಿ, ನಿರಂತರವಾಗಿ ಗೇಮ್ ಕಂಟೆಂಟ್​ಗಳನ್ನು ತರುವ ಉದ್ದೇಶದಿಂದ ಇ- ಸ್ಪೋರ್ಟ್ಸ್ ಎಕೋಸಿಸ್ಟಮ್ ನಿರ್ಮಿಸುವುದಾಗಿ ಹೇಳಿದೆ. ಇದಕ್ಕಾಗಿ ಸರಣಿಯಲ್ಲಿ ಭಾರತಕ್ಕಾಗಿಯೇ ಮೀಸಲಾದ ಇನ್- ಗೇಮ್ ಕಾರ್ಯಕ್ರಮಗಳನ್ನು ನೀಡುವುದಾಗಿ ಹೇಳಿದೆ.

ಬ್ಯಾಟಲ್​ಗೌಂಡ್ಸ್ ಮೊಬೈಲ್ ಇಂಡಿಯಾ ಪ್ರೀ ರಿಜಿಸ್ಟ್ರೇಷನ್
ವರದಿಗಳ ಪ್ರಕಾರ, ಈ ಗೇಮ್​ನ ಡೆವಲಪರ್ ಆದ ಕ್ರಾಫ್ಟನ್​ನಿಂದ ಜೂನ್​ ತಿಂಗಳಲ್ಲಿ ಗೇಮ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ ಕಂಪೆನಿಯಿಂದ ಅಧಿಕೃತವಾಗಿ ಯಾವುದೂ ದೃಢಪಟ್ಟಿಲ್ಲ. ಆದರೆ ವರದಿಗಳನ್ನು ಆಧರಿಸಿ ಹೇಳುವುದಾದರೆ, ಜೂನ್​ನಲ್ಲಿ ಗೇಮ್ ಆರಂಭ ಆಗುವುದಾದರೆ ಅದಕ್ಕೂ ಕನಿಷ್ಠ ಒಂದು ವಾರ ಮುಂಚೆಯಾದರೂ ಪ್ರೀ- ರಿಜಿಸ್ಟ್ರೇಷನ್ ಶುರುವಾಗಬೇಕು. PUBG Mobile ಇಂಡಿಯಾ ಆಂಡ್ರಾಯಿಡ್ ಮತ್ತು iOS ಎರಡರಲ್ಲೂ ಲಭ್ಯವಿದೆ. ಆದ್ದರಿಂದ ಕಂಪೆನಿಯು ಇದೇ ಟ್ರೆಂಡ್ ಅನುಸರಿಸಿದರೆ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಪ್ರೀ ರಿಜಿಸ್ಟ್ರೇಷನ್ ಆಂಡ್ರಾಯಿಡ್ ಮತ್ತು iOS ಬಳಕೆದಾರರಿಗೆ ಸಿಗಲಿದೆ.

ಕಂಪೆನಿ ಹೇಳುವ ಪ್ರಕಾರ, ಈ ಗೇಮ್ ವಿಶ್ವಮಟ್ಟದ ಮಲ್ಟಿಪ್ಲೇಯರ್ ಅನುಭವವನ್ನು ಮೊಬೈಲ್​ನಲ್ಲಿ ಕಾಣುತ್ತೇವೆ. ಮೊಬೈಲ್ ಸಾಧನದಲ್ಲಿ ಈ ಗೇಮ್ ಉಚಿತವಾಗಿ ಆಡುವ ಅನುಭವ ಪಡೆಯಬಹುದು. ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾ ಭಾರತದಲ್ಲಿ ಎಕ್ಸ್​ಕ್ಲೂಸಿವ್ ಇನ್ ಗೇಮ್ ಆಗಿರುತ್ತದೆ.

ಬ್ಯಾಟಲ್​ಗ್ರೌಂಡ್ಸ್ ಮೊಬೈಲ್​ ಆಡುವಾಗ 18 ವರ್ಷಕ್ಕಿಂತ ಕೆಳಗಿನವರದು ಕಾನೂನು ಅನುಮತಿಯಂತೆ ಪೋಷಕರ ಸಮ್ಮತಿ ಇಲ್ಲದೆ ಉದ್ದೇಶಪೂರ್ವಕವಾಗಿ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಹಂಚಿಕೊಳ್ಳುವುದಿಲ್ಲ. ಪೋಷಕರು ಅಥವಾ ಗಾರ್ಡಿಯನ್ ಮೊಬೈಲ್ ಸಂಖ್ಯೆಯನ್ನು ಕೇಳಲಾಗುತ್ತದೆ. ಕಾನೂನು ಪ್ರಕಾರ ಈ ಗೇಮ್ ಆಡಲು ಅರ್ಹರು ಎಂದು ಅವರು ಖಾತ್ರಿಪಡಿಸಬೇಕು. ಇನ್ನು ಪೋಷಕರು, ಗಾರ್ಡಿಯನ್ ಒಪ್ಪಿಗೆ ಇಲ್ಲದೆ ಮಾಹಿತಿಯನ್ನು ನೀಡಿದ್ದಲ್ಲಿ, ಆ ಮಾಹಿತಿಯನ್ನು ಡಿಲೀಟ್ ಮಾಡುವಂತೆ ಕೇಳಿದರೆ ಅದನ್ನು ತೆಗೆದುಹಾಕುತ್ತೇವೆ ಎಂದು ಕಂಪೆನಿ ಹೇಳಿದೆ.

ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ 118 ಆ್ಯಪ್​ಗಳನ್ನು ಕಳೆದ ಸೆಪ್ಟೆಂಬರ್ 2ರಂದು ಭಾರತದಲ್ಲಿ ನಿಷೇಧ ಮಾಡಲಾಗಿತ್ತು. ಅದರಲ್ಲಿ ಪ್ಲೇಯರ್ಸ್ ಅನೌನ್​ಸ್ ಬ್ಯಾಟಲ್​ಗ್ರೌಂಡ್ಸ್ (PUBG) ಮೊಬೈಲ್ ಕೀಡ ಒಂದಾಗಿತ್ತು. PUBGಗೆ ಜಾಗತಿಕವಾಗಿ 60 ಕೋಟಿ ಡೌನ್​ಲೋಡ್ಸ್ ಮತ್ತು 5 ಕೋಟಿ ಸಕ್ರಿಯ ಆಟಗಾರರಿದ್ದಾರೆ. ಭಾರತದಲ್ಲೇ ಹತ್ತಿರಹತ್ತಿರ 3.3 ಕೋಟಿ ಆಟಗಾರರು ಭಾರತದಲ್ಲಿ ಇದ್ದಾರೆ.

ಇದನ್ನೂ ಓದಿ: ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿ ಬರುತ್ತಿದೆ PUBG; ಅಧಿಕೃತ ಪೋಸ್ಟರ್ ಬಿಡುಗಡೆ

(Battlegrounds mobile India officially back to India. Previously it was PUBG. How to preregistration for this?)