ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ?, ಅದುಕೂಡ ಕಡಿಮೆ ಬೆಲೆಯಲ್ಲಿ?. ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಬೆಸ್ಟ್ ಫೋನ್ ಬಗ್ಗೆ ಈ ಲೇಖನದಲ್ಲಿ ಹೇಳುತ್ತೇವೆ. ನಮ್ಮ ದೇಶದಲ್ಲಿ ಟಾಪ್ ಬ್ರ್ಯಾಂಡ್ 5G ಫೋನ್‌ಗಳು (5G Smartphone) ಕಡಿಮೆ ಬೆಲೆಗೆ ಲಭ್ಯವಿವೆ. ಕೇವಲ ನೀವು 15,000 ರೂ. ಗಿಂತ ಕಡಿಮೆ ಬಜೆಟ್‌ನಲ್ಲಿ ಉತ್ತಮ ಕ್ಯಾಮೆರಾ, ಹೆಚ್ಚಿನ ರಿಫ್ರೆಶ್ ರೇಟ್ ಸ್ಕ್ರೀನ್‌ಗಳು ಮತ್ತು AMOLED ಡಿಸ್ ಪ್ಲೇ ಹೊಂದಿರುವ ಫೋನ್‌ಗಳನ್ನು ಖರೀದಿಸಬಹುದು. ಇಲ್ಲಿದೆ ನೋಡಿ ರೂ. 15,000 ಒಳಗಿನ ಅತ್ಯುತ್ತಮ 5G ಫೋನ್‌ಗಳ ಪಟ್ಟಿ.
ಮೋಟೋರೊಲ G54 5G ಫೋನ್ 6.5-ಇಂಚಿನ ಪೂರ್ಣ HD ಪ್ಲಸ್ IPS LCD ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಫೋನ್ ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ, ಅಟೋ-ಫೋಕಸ್ ಹೊಂದಿರುವ 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ನೀಡಲಾಗಿದೆ. IP52 ರೇಟಿಂಗ್‌ನೊಂದಿಗೆ ನೀರು-ನಿವಾರಕ ವಿನ್ಯಾಸವನ್ನು ಹೊಂದಿದೆ. ಇದು ಮೀಡಿಯಾಟಎಕ್ ಡೈಮನ್ಸಿಟಿ 7020 ಚಿಪ್‌ನಿಂದ 8GB RAM, 128GB ಆಂತರಿಕ ಮೆಮೊರಿ ಮತ್ತು 6000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 14,499 ರೂ. ಆಗಿದೆ.
ಚಿನ್ನ ಖರೀದಿಸುವ ಮುನ್ನ ಈ ಆ್ಯಪ್ ಇನ್ಸ್ಟಾಲ್ ಮಾಡಿ: ಅಸಲಿಯೋ-ನಕಲಿಯೋ ತಿಳಿದುಕೊಳ್ಳಿ
ರಿಯಲ್ ಮಿ ನಾರ್ಜೋ 60X 5G ಫೋನ್ 6.72-ಇಂಚಿನ ಪೂರ್ಣ HD ಪ್ಲಸ್ IPS LCD ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ SoC ಚಿಪ್ ಸೆಟ್ ನೀಡಲಾಗಿದೆ. ಇದು 6GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಹಿಂಭಾಗದಲ್ಲಿ, 50MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸರ್ ಇದೆ. ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಇದೆ. 5000mAh ಸಾಮರ್ಥ್ಯದ ಬ್ಯಾಟರಿ ಇರುವ ಈ ಫೋನಿನ ಬೆಲೆ 13,499 ರೂ.
ಸ್ಯಾಮ್ಸಂಗ್ ಗ್ಯಾಲಕ್ಸಿ F14 5G ಫೋನ 90Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಸ್ಯಾಮ್ಸಂಗ್ನ ಎಕ್ಸಿನೊಸ್ 1330 ಚಿಪ್‌ನೊಂದಿಗೆ ಬರುತ್ತದೆ. 6 ಜಿಬಿ RAM 128 GB ಇಂಟರ್ನಲ್ ಮೆಮೊರಿ ಇದೆ. 50MP ಪ್ರಾಥಮಿಕ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 2MP ಮ್ಯಾಕ್ರೋ ಕ್ಯಾಮೆರಾಗಳಿವೆ. ಸೆಲ್ಫಿಗಾಗಿ ಮುಂಭಾಗ 13MP ಕ್ಯಾಮೆರಾವನ್ನು ನೀಡಲಾಗಿದೆ. 6000mAh ಬ್ಯಾಟರಿ ಇದೆ. ಇದರ ಬೆಲೆ ರೂ. 12,490.
ಪೋಕೋ X5 5G ಫೋನ್ ಕ್ವಾಲ್ಕಮ್ ಸ್ನಾಪ್ಡ್ರಾಗನ್ 695 ಚಿಪ್‌ನೊಂದಿಗೆ ಬರುತ್ತದೆ. ಇದು 8 GB RAM ಮತ್ತು 128 GB ಆಂತರಿಕ ಮೆಮೊರಿಯನ್ನು ಹೊಂದಿದೆ. 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ ಪೂರ್ಣ HD ಪ್ಲಸ್ ಸೂಪರ್ AMOLED ಡಿಸ್ ಪ್ಲೇ ನೀಡಲಾಗಿದೆ. 48MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಸ್ನ್ಯಾಪರ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾದೊಂದಿಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಇದೆ. 5000 mAh ಬ್ಯಾಟರಿ 33W ವೇಗದ ಚಾರ್ಜರ್ ಬೆಂಬಲದೊಂದಿಗೆ ಬರುತ್ತದೆ. ಇದರ 6GB RAM, 128GB ರೂಪಾಂತರದ ಬೆಲೆ ರೂ. 14,499.
ಇನ್ಫಿನಿಕ್ಸ್ ಹಾಟ್ 30 5G ಫೋನ್ 120Hz ರಿಫ್ರೆಶ್ ದರದೊಂದಿಗೆ ದೊಡ್ಡ 6.78-ಇಂಚಿನ ಪೂರ್ಣ HD ಪ್ಲಸ್ ಡಿಸ್ ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮನ್ಸಿಟಿ 6020 SoC ನಿಂದ ಚಾಲಿತವಾಗಿದೆ. ಇದು 8 GB RAM ಮತ್ತು 128 GB ಆಂತರಿಕ ಮೆಮೊರಿಯೊಂದಿಗೆ ಬರುತ್ತದೆ. ಹಿಂಭಾಗದಲ್ಲಿ 50MP ಪ್ರಾಥಮಿಕ ಕ್ಯಾಮೆರಾ ಇದೆ. ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. ಇದು 6000 mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ ರೂ. 12,499.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ