2023 ಹೊಸ ವರ್ಷ (New Year) ಬಂದಾಗಿದೆ. ಕೆಲ ಬಳಕೆದಾರರು ತಿಂಗಳ ರಿಚಾರ್ಜ್ ಮಾಡುವ ಬದಲು ವಾರ್ಷಿಕ ಯೋಜನೆಯತ್ತ ಮುಖ ಮಾಡುತ್ತಿದ್ದಾರೆ. ಇದಕ್ಕಾಗಿಯೆ ಬಳಕೆದಾರರಿಗೆ ಸಹಾಯ ಮಾಡಲು, ಟೆಲಿಕಾಂ ಆಪರೇಟರ್‌ಗಳು ಸಹ ಆಕರ್ಷಕ ವಾರ್ಷಿಕ ರೀಚಾರ್ಜ್ ಯೋಜನೆಗಳನ್ನು ನೀಡುದೆ. ಈ ಮೂಲಕ ಬಳಕೆದಾರರು ಇಡೀ ವರ್ಷ ರೀಚಾರ್ಜ್ ಮಾಡುವ ತಲೆಬಿಸಿ ಇರುವುದಿಲ್ಲ. ಈ ದೀರ್ಘಾವಧಿಯ ಯೋಜನೆಗಳು ಅನಿಯಮಿತ ಕರೆ, ಡೇಟಾ ಪ್ರಯೋಜನಗಳು, ಉಚಿತ ಎಸ್ಎಮ್ಎಸ್ ಸೇರಿದಂತೆ ಬಳಕೆದಾರ ಮನೋರಂಜನೆಗಾಗಿ OTT ಕೊಡುಗೆಗಳನ್ನು ಕೂಡ ನೀಡುತ್ತಿದೆ. ಹಾಗಾದರೆ ಜಿಯೋ (Jio), ಏರ್ಟೆಲ್ (Airtel) ಹಾಗೂ ವೊಡಾಫೋನ್ ಐಡಿಯಾದ ಅತ್ಯುತ್ತಮ ವಾರ್ಷಿಕ ಯೋಜನೆಗಳ ಪಟ್ಟಿ ನೋಡೋಣ.
ಜಿಯೋದ 2879 ರೂ. ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಒಟ್ಟಾರೆಯಾಗಿ 730GB ಸಿಗಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ದೊರೆಯುತ್ತದೆ. ಜಿಯೋ ಆ್ಯಪ್ಸ್ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಹಾಗೂ ಜಿಯೋ ಕ್ಲೌಡ್ ಚಂದಾದಾರಿಕೆ ಸಿಗಲಿದೆ.
2545 ರೂ. ಪ್ಲಾನ್ ಕೂಡ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 336 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.
Cyber Attack: 829 ಮಿಲಿಯನ್ ಸೈಬರ್ ದಾಳಿ: 2022 ರಲ್ಲಿ ಅತಿ ಹೆಚ್ಚು ಸೈಬರ್ ಅಟ್ಯಾಕ್ ಆಗಿದ್ದೇ ಭಾರತದಲ್ಲಿ
2999 ರೂ. ಪ್ಲಾನ್ ವಿಶೇಷ ಯೋಜನೆ ಆಗಿದ್ದು, ಇದು 365+ 23 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಜಿಯೋ ಆ್ಯಪ್ ಚಂದಾದಾರಿಕೆ ಲಭ್ಯವಿದೆ.
ಏರ್ಟೆಲ್ನ 3359 ರೂ. ಪ್ರಿಪೇಯ್ಡ್ ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್ಟೆಲ್ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಬಳಕೆದಾರರು ಒಂದು ವರ್ಷದ ಅಮೆಜಾನ್ ಪ್ರೈಮ್ ಮೊಬೈಲ್ ಎಡಿಷನ್ ಚಂದಾದಾರಿಕೆ ಮತ್ತು ಡಿಸ್ನಿ+ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ ಪಡೆಯುತ್ತಾರೆ. ವಿಂಕ್ ಮ್ಯೂಸಿಕ್, ಉಚಿತ ಹಲೋ ಟ್ಯೂನ್ ಜೊತೆಗೆ ಫಾಸ್ಟ್ ಟ್ಯಾಗ್ ರಿಚಾರ್ಜ್ ಮಾಡಿದರೆ 100 ರೂ. ಕ್ಯಾಶ್ಬ್ಯಾಕ್ ಸಿಗಲಿದೆ.
ಏರ್ಟೆಲ್ನ 2999 ರೂ. ಪ್ರಿಪೇಯ್ಡ್ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್ಟೆಲ್ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ವಿಂಕ್ ಮ್ಯೂಸಿಕ್, ಉಚಿತ ಹಲೋ ಟ್ಯೂನ್ ಜೊತೆಗೆ ಫಾಸ್ಟ್ ಟ್ಯಾಗ್ ರಿಚಾರ್ಜ್ ಮಾಡಿದರೆ 100 ರೂ. ಕ್ಯಾಶ್ಬ್ಯಾಕ್ ಸಿಗಲಿದೆ.
1799 ರೂ. ವಿನ ಪ್ಲಾನ್ ಕೂಡ ಇದ್ದು, ಇದುಕೂಡ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್ಟೆಲ್ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ವರ್ಷಕ್ಕೆ 3600 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.
ವಿ ಟೆಲಿಕಾಂನ 3099 ರೂ. ಪ್ಲಾನ್ನಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟ್ವರ್ಕ್ಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಒಂದು ವರ್ಷದ ವಿ ಮೂವೀಸ್, ಟಿವಿ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ.
2899 ರೂ. ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ, ವಿ ಮೂವೀಸ್, ಟಿವಿ ಉಚಿತವಾಗಿ ಲಭ್ಯವಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Mon, 2 January 23