Best Smartphones: 10,000 ರೂ. ಗಿಂತ ಕಡಿಮೆ ಬೆಲೆಗೆ ಸಿಗುತ್ತಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳು ಇಲ್ಲಿದೆ ನೋಡಿ

Best Smartphones Under RS 10,000: ಕಳೆದ ಕೆಲವು ತಿಂಗಳಿಂದ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಬಜೆಟ್ ಸ್ಮಾರ್ಟ್​ಫೋನ್​ಗಳು (Budget Price Phone) ಬಿಡುಗಡೆ ಆಗಿವೆ. ಈ ಪೈಕಿ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ದೊರಕುವ ಮತ್ತು ಆಕರ್ಷಕ ಫೀಚರ್​​ವುಳ್ಳ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Best Smartphones: 10,000 ರೂ. ಗಿಂತ ಕಡಿಮೆ ಬೆಲೆಗೆ ಸಿಗುತ್ತಿರುವ ಬೆಸ್ಟ್ ಸ್ಮಾರ್ಟ್​​ಫೋನ್​ಗಳು ಇಲ್ಲಿದೆ ನೋಡಿ
Phone Under 10,000
Follow us
| Updated By: Vinay Bhat

Updated on: Apr 17, 2022 | 6:36 AM

ಭಾರತೀಯ ಸ್ಮಾರ್ಟ್​ಫೋನ್​ (Smartphone) ಮಾರುಕಟ್ಟೆಯಲ್ಲೀಗ ಬಜೆಟ್ ಬೆಲೆಯ ಮೊಬೈಲ್​ಗಳಿಗೆ ಏನೂ ಕೊರತೆಯಿಲ್ಲ. ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುವುದು ಮಾಮೂಲಾಗಿದೆ. ಫೋನ್  ಪ್ರಿಯರು ಕೂಡ ತಮ್ಮ ಆಯ್ಕೆಯ ಸ್ಮಾರ್ಟ್​ಫೋನ್​ಗಳನ್ನು ಖರೀದಿಸುತ್ತಿದ್ದಾರೆ. ಜೊತೆಗೆ ಸ್ವಲ್ಪ ಸಮಯ ಬಳಸಿ ಮತ್ತೊಂದು ಹೊಸ ಫೋನನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಕೂಡ ಜೋರಾಗಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲೂ ಹೊಸ ಫೋನುಗಳು ಹೆಚ್ಚಿನ ಸಂಖ್ಯೆಯಲ್ಲಿ ಲಗ್ಗೆ ಹಾಕುತ್ತಿವೆ. ಕಳೆದ ಕೆಲವು ತಿಂಗಳಿಂದ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಬಜೆಟ್ ಸ್ಮಾರ್ಟ್​ಫೋನ್​ಗಳು (Budget Price Phone) ಬಿಡುಗಡೆ ಆಗಿವೆ. ಈ ಪೈಕಿ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಬಯಸುವವರಿಗೆ ಅನೇಕ ಆಯ್ಕೆಗಳಿವೆ. ಅದರಂತೆ ಸದ್ಯ 10 ಸಾವಿರಕ್ಕಿಂತ (Under 10,000 Smartphone) ಕಡಿಮೆ ಬೆಲೆಗೆ ದೊರಕುವ ಮತ್ತು ಆಕರ್ಷಕ ಫೀಚರ್​​ವುಳ್ಳ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Realme Narzo 30A: ಈ ಸ್ಮಾರ್ಟ್​ಫೋನ್​ 6.5-ಇಂಚಿನ HD+ ಡಿಸ್​ಪ್ಲೇ ಹೊಂದಿದ್ದು, ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G85 ಚಿಪ್‌ಸೆಟ್ ಒಳಗೊಂಡಿದೆ. 4GB RAM ಮತ್ತು 64GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆಯಲ್ಲಿ ಸಿಗಲಿದೆ. ಡ್ಯುಯಲ್-ಸಿಮ್ ಕಾರ್ಡ್‌ ಬೆಂಬಲಿಸುವ ಈ ಸ್ಮಾರ್ಟ್​ಫೋನ್​ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 13 ಮೆಗಾಪಿಕ್ಸೆಲ್  ಪ್ರೈಮರಿ  ಕ್ಯಾಮೆರಾವನ್ನು ಇದರಲ್ಲಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 6,000mAh ಬ್ಯಾಟರಿಯನ್ನು ಹೊಂದಿದೆ. ಇದರ ಬೆಲೆ 8,999 ರೂ ಆಗಿದೆ.

ರೆಡ್ಮಿ 9A ಸ್ಪೋರ್ಟ್ ಫೋನ್ 6.53 ಇಂಚಿನ HD + LCD ಡಿಸ್‌ಪ್ಲೇ ಹೊಂದಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G25 SoC ಪ್ರೊಸೆಸರ್‌ ಶಕ್ತಿಯನ್ನು ಹೊಂದಿದ್ದು, ಆಂಡ್ರಾಯ್ಡ್ 10 ಆಧಾರಿತ MIUI 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 3 GB RAM ಮತ್ತು 32 GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಈ ಫೋನ್‌ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಅಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ ಇದು 5,000 mAh ಬ್ಯಾಟರಿ ಯನ್ನು ಹೊಂದಿದ್ದು, ಇದು 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ AI ಫೇಸ್ ಅನ್‌ಲಾಕ್ ಅನ್ನು ಸಹ ಬೆಂಬಲಿಸುತ್ತದೆ. ಇದರ ಬೆಲೆ ಕೇವಲ 6,99 ರೂ. ಆಗಿದೆ.

Micromax IN 2b: ಭಾರತೀಯ ಮೂಲದ ಮೈಕ್ರೋಮ್ಯಾಕ್ಸ್ IN 2b  ಸ್ಮಾರ್ಟ್​ಫೋನ್​ 10 ಸಾವಿರ ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಫೋನ್ ಆಗಿದೆ. ಇದು 6.25 ಇಂಚಿನ ಡಿಸ್​ಪ್ಲೇ ಹೊಂದಿದ್ದು, 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕರ್ ಪಡೆದುಕೊಂಡಿದೆ. ಈ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್​ನ ಕ್ಯಾಮೆರಾ ಹೊಂದಿದ್ದು, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ನೀಡಲಾಗುದೆ. ಇದರ ಬೆಲೆ ರೂ. 8,499 ರೂ. ಆಗಿದೆ.

ಮೋಟೋರೊಲಾ Moto E7 Plus: ಮೋಟೋರೊಲಾ ಕಂಪನಿಯ ಮೋಟೋ E7 ಪ್ಲಸ್ ಫೋನ್ ಬೆಲೆ ಕೇವಲ 8,999 ರೂ. ಆಗಿದೆ. ಇದು 6.5 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಕ್ವಾಲ್ಕಂ ಸ್ನಾಪ್ಡ್ರಾಗನ್ 460 SoC ಪ್ರೊಸೆಸರ್​ನಿಂದ ಕೂಡಿದೆ. 8 ಮೆಗಾಫಿಕ್ಸೆಲ್​ ಸೆಲ್ಫೀ ಕ್ಯಾಮೆರಾ, 48 ಮೆಗಾಫಿಕ್ಸೆಲ್​ ಬ್ಯಾಕ್ ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಬ್ಯಾಟರಿ ಪವರ್ ಕೂಡ ಇದೆ.

Samsung Galaxy F02s: ಸ್ಯಾಮ್‌ಸಂಗ್‌ನ ಈ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ 6.5 ಇಂಚಿನ HD+ Infinity-V ಡಿಸ್​​ಪ್ಲೇ ಹೊಂದಿದೆ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 450 SoC ಜೊತೆಗೆ 4GB RAM ಒಳಗೊಂಡಿದೆ, ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿದೆ. ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ  ನೀಡಲಾಗಿದೆ. ಧೀರ್ಘ ಕಾಲ ಬ್ಯಾಟರಿಯಾಗಿ 6,000mAh ಬ್ಯಾಟರಿಯನ್ನು ನೀಡಲಾಗಿದೆ. ಇದರ ಬೆಲೆ 9,499 ರೂ ಆಗಿದೆ.

Nokia C20 Plus: ನೋಕಿಯಾ ಸಿ 20 ಪ್ಲಸ್ 4,950mAh ಬ್ಯಾಟರಿಯೊಂದಿಗೆ 6.5-ಇಂಚಿನ HD+ ಸ್ಕ್ರೀನ್ ಮತ್ತು ಆಕ್ಟಾ-ಕೋರ್ ಯುನಿಸೋಕ್ SC9863a SoC ಯನ್ನು ಹೊಂದಿದೆ. ಜೊತೆಗೆ 3GB RAM ಆಯ್ಕೆಯಲ್ಲಿ ಸಿಗುತ್ತಿದೆ. 8 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿರುವ ಈ ಸ್ಮಾರ್ಟ್​ಫೋನ್​ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರ ಬೆಲೆ 9,999 ರೂ.

Redmi 10A: ಬರುತ್ತಿದೆ ಬಂಪರ್ ಫೀಚರ್ಸ್​ನ ರೆಡ್ಮಿ 10A ಸ್ಮಾರ್ಟ್‌ಫೋನ್‌: ಬಜೆಟ್ ಪ್ರಿಯರು ರೆಡಿಯಾಗಿರಿ

Moto G52: ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ಮೋಟೋ G52: ಬಿಡುಗಡೆಗೂ ಮೊದಲೇ ಸಖತ್ ಕ್ರೇಜ್

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ