ಮೊಬೈಲ್ನ ಗೂಗಲ್ ಪ್ಲೇ ಸ್ಟೋರ್ನಲ್ಲಿರುವ (Google Play store) ಹಲವು ಆ್ಯಪ್ಗಳು ನಿಮ್ಮ ಖಾಸಗಿ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿದೆ. ಹೀಗಾಗಿ, ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಈ ಬ್ಲೂಟೂತ್ ಆ್ಯಪ್ಗಳನ್ನು (Bluetooth App) ನೀವೇನಾದರೂ ಬಳಸುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಂಡು, ಆ ಆ್ಯಪ್ಗಳನ್ನು ಅನ್ಇನ್ಸ್ಟಾಲ್ ಮಾಡುವುದು ಒಳಿತು. ಬಳಕೆದಾರರ ಮಾಹಿತಿಯನ್ನು ಕದಿಯಬಹುದಾದ ಕೆಲವು ಮಾಲ್‌ವೇರ್ ಅನ್ನು ಒಳಗೊಂಡಿರುವ ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡಲಾಗಿದೆ.
ಈ ಬ್ಲೂಟೂತ್ ಆ್ಯಪ್‌ಗಳ ಬಗ್ಗೆ ನಿಯಮಿತವಾಗಿ ಸ್ಕ್ಯಾನಿಂಗ್ ಅನ್ನು ನಡೆಸುತ್ತಿದ್ದರೂ ಮತ್ತು ಈ ಅಪ್ಲಿಕೇಶನ್ ಡೆವಲಪರ್‌ಗಳ ಕುರಿತು ಸೂಚನೆ ನೀಡಲಾಗಿದ್ದರೂ ಅದನ್ನು ಪತ್ತೆಹಚ್ಚಲು ಮತ್ತು ಡಿಲೀಟ್ ಮಾಡಲು ಗೂಗಲ್ ವಿಫಲವಾಗಿದೆ. ಕೆಲವು ಅಪ್ಲಿಕೇಶನ್ ಡೆವಲಪರ್‌ಗಳು ದುರುದ್ದೇಶಪೂರಿತ ಕೋಡ್ ಹೊಂದಿರುವ ಬ್ಲೂಟೂತ್ ಕೇಂದ್ರಿತ ಅಪ್ಲಿಕೇಶನ್‌ಗಳನ್ನು ಡಿಸೈನ್ ಮಾಡಿದ್ದಾರೆ. ಇದರಿಂದ ಗ್ರಾಹಕರ ಖಾಸಗಿ ಮಾಹಿತಿ ಸೋರಿಕೆಯಾಗುವ, ಹ್ಯಾಕ್ ಆಗುವ ಸಾಧ್ಯತೆಗಳು ಇರುತ್ತವೆ.
ಇದನ್ನೂ ಓದಿ: WhatsApp Ban: ಒಂದೇ ತಿಂಗಳಲ್ಲಿ ಭಾರತದ 26 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಇದೀಗ ಪಟ್ಟಿ ಮಾಡಲಾಗಿರುವ ಬ್ಲೂಟೂತ್ ಕೇಂದ್ರಿತ ಅಪ್ಲಿಕೇಶನ್‌ಗಳ ಹಳೆಯ ಆವೃತ್ತಿಗಳು Android/Trojan.HiddenAdsನ ಇದೇ ರೀತಿಯ ಮಾಲ್‌ವೇರ್ ರೂಪಾಂತರಗಳನ್ನು ಹೊಂದಿವೆ ಎನ್ನಲಾಗಿದೆ. ಈ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿವೆ. ಒಟ್ಟಾರೆಯಾಗಿ, 4 ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡಲಾಗಿದೆ. ಈ ಆ್ಯಪ್ಗಳನ್ನು ಕನಿಷ್ಠ 1 ಮಿಲಿಯನ್ ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಮೊಬೈಲ್ ಬಳಕೆದಾರರು ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದಾಗ ಅವರ ಮೊಬೈಲ್ನಲ್ಲಿರುವ ಖಾಸಗಿ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ. ಆ ಆ್ಯಪ್ಗಳೆಂದರೆ,
– ಬ್ಲೂಟೂತ್ ಆಟೋ ಕನೆಕ್ಟ್ (Bluetooth Auto Connect)
– ಡ್ರೈವರ್: ಬ್ಲೂಟೂತ್ ವೈ-ಫೈ, ಯುಎಸ್ಬಿ (Driver: Bluetooth Wi-Fi, USB)
– ಬ್ಲೂಟೂತ್ ಅಪ್ಲಿಕೇಶನ್ ಸೆಂಡರ್ (Bluetooth App Sender)
– ಮೊಬೈಲ್ ಟ್ರಾನ್ಸ್ಫರ್: ಸ್ಮಾರ್ಟ್ ಸ್ವಿಚ್ (Mobile transfer: smart switch)
ಇದನ್ನೂ ಓದಿ: Fake App: ಪ್ಲೇ ಸ್ಟೋರ್‌ನಲ್ಲಿ ಮೊಬೈಲ್ ಹ್ಯಾಕ್ ಮಾಡುವ, ಹಣ ಕದಿಯುವ ಆ್ಯಪ್ ಪತ್ತೆ: ಇನ್ಸ್ಟಾಲ್ ಮಾಡಿದ್ರೆ ಗಮನಿಸಿ
ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ 28 ಮಿಲಿಯನ್‌ಗಿಂತಲೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಹೊಂದಿದೆ. ಇವುಗಳನ್ನು ಮಾಲ್‌ವೇರ್ ಮತ್ತು ಇತರ ದುರ್ಬಲತೆಗಳಿಗಾಗಿ ಆಗಾಗ ಸ್ಕ್ಯಾನ್ ಮಾಡಲಾಗುತ್ತದೆ. ಆದರೆ ಈಗಲೂ ಗೂಗಲ್ ಈ ಮಾಲ್‌ವೇರ್‌ಗಳನ್ನು ಹಿಡಿಯಲು ವಿಫಲವಾಗಿದೆ. ಹೀಗಾಗಿ, ನಿಮ್ಮ ಫೋನ್‌ಗಳಲ್ಲಿ ಅನುಮಾನಾಸ್ಪದ ಮತ್ತು ಮಾಲ್‌ವೇರ್ ರಕ್ಷಣೆಯನ್ನು ರನ್ ಮಾಡುವ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಂತೆ ಬಳಕೆದಾರರು ಎಚ್ಚೆತ್ತುಕೊಳ್ಳುವುದು ಒಳಿತು.