5G on APPLE iPhone: ಮುಂದಿನ ವಾರದಿಂದ ಆಯ್ದ ಗ್ರಾಹಕರಿಗೆ ಆ್ಯಪಲ್ ಐಫೋನ್​ನಲ್ಲೂ ಸಿಗಲಿದೆ 5ಜಿ

ಬೀಟಾ ಪ್ರೋಗ್ರಾಂ ಬಳಕೆದಾರರಿಗೆ ಸಾಫ್ಟ್​ವೇರ್ ಅನ್ನು ಮೊದಲು ಬಿಡುಗಡೆ ಮಾಡಲಾಗುತ್ತದೆ. ಅವರ ಬಳಕೆಯ ಅನುಭವದ ಆಧಾರದಲ್ಲಿ ವೈಶಿಷ್ಟ್ಯಗಳಲ್ಲಿ ಸುಧಾರಣೆ ಮಾಡಿಕೊಂಡು ಡಿಸೆಂಬರ್​ನಿಂದ ಸಾರ್ವಜನಿಕವಾಗಿ ಸೇವೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

5G on APPLE iPhone: ಮುಂದಿನ ವಾರದಿಂದ ಆಯ್ದ ಗ್ರಾಹಕರಿಗೆ ಆ್ಯಪಲ್ ಐಫೋನ್​ನಲ್ಲೂ ಸಿಗಲಿದೆ 5ಜಿ
ಆ್ಯಪಲ್ ಐಫೋನ್ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Ganapathi Sharma

Updated on: Nov 03, 2022 | 10:40 AM

ನವದೆಹಲಿ: ಮುಂದಿನ ವಾರದಿಂದ ಐಫೋನ್ (APPLE iPhone) ‘ಐಒಎಸ್ (iOS) 16 ಬೀಟಾ’ ಸಾಫ್ಟ್​​ವೇರ್​ನಲ್ಲಿ ಆಯ್ದ ಗ್ರಾಹಕರಿಗೆ 5ಜಿ ನೆಟ್​ವರ್ಕ್ ಸೇವೆ ದೊರೆಯಲಿದೆ ಎಂದು ಆ್ಯಪಲ್ ತಿಳಿಸಿದೆ. ‘ಐಒಎಸ್ 16 ಬೀಟಾ’ ಸಾಫ್ಟ್​​ವೇರ್​ನಲ್ಲಿ ಇರುವ ಆ್ಯಪಲ್​ನ ಏರ್​ಟೆಲ್ (Airtel) ಮತ್ತು ಜಿಯೋ (Jio) ಗ್ರಾಹಕರಿಗೆ 5ಜಿ ಸೇವೆ ದೊರೆಯಲಿದೆ. ಡಿಸೆಂಬರ್​ನಿಂದ ಸಾರ್ವಜನಿಕವಾಗಿ ಸೇವೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ಬೀಟಾ ಪ್ರೋಗ್ರಾಂ ಬಳಕೆದಾರರಿಗೆ ಸಾಫ್ಟ್​ವೇರ್ ಅನ್ನು ಮೊದಲು ಬಿಡುಗಡೆ ಮಾಡಲಾಗುತ್ತದೆ. ಅವರ ಬಳಕೆಯ ಅನುಭವದ ಆಧಾರದಲ್ಲಿ ವೈಶಿಷ್ಟ್ಯಗಳಲ್ಲಿ ಸುಧಾರಣೆ ಮಾಡಿಕೊಂಡು ಸಾರ್ವಜನಿಕರಿಗೆ ಸಾಫ್ಟ್​ವೇರ್ ಲಭ್ಯವಾಗುವಂತೆ ಮಾಡಲಾಗುತ್ತದೆ.

ಬಳಕೆದಾರರ ಪ್ರತಿಕ್ರಿಯೆಗೆ ಆ್ಯಪಲ್ ಮನವಿ

ಇದನ್ನೂ ಓದಿ
Image
Air Asia: ಏರ್​ ಏಷಿಯಾ ಸಂಪೂರ್ಣ ಒಡೆತನ ಟಾಟಾ ಕಂಪನಿಯ ತೆಕ್ಕೆಗೆ
Image
Invest Karnataka 2022: ಹೂಡಿಕೆ ಸಮಾವೇಶದ ಮೊದಲ ದಿನವೇ ಹರಿದು ಬಂತು 3.61 ಲಕ್ಷ ಕೋಟಿ ರೂ.
Image
Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ
Image
ಪಿಂಚಣಿದಾರು ಆನ್​ಲೈನ್​ನಲ್ಲಿ ಜೀವನ ಪ್ರಮಾಣಪತ್ರ ಪುರಾವೆ ಸಲ್ಲಿಸಲು ಇಲ್ಲಿದೆ 5 ಸುಲಭ ವಿಧಾನ

5ಜಿ ಸೇವೆಯ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬೀಟಾ ಪ್ರೋಗ್ರಾಂ ಬಳಕೆದಾರರನ್ನು ಆ್ಯಪಲ್ ಮನವಿ ಮಾಡಿದೆ. ಬಳಕೆದಾರರು ನೀಡುವ ಸಲಹೆ, ಸೂಚನೆ ಮತ್ತು ಬಳಕೆಯ ಅನುಭವದ ಪ್ರತಿಕ್ರಿಯೆಯನ್ನು ಗಣನೆಗೆ ತೆಗೆದುಕೊಂಡು ಸಾಫ್ಟ್​ವೇರ್ ಅಪ್​ಡೇಟ್ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ನೆಟ್‌ವರ್ಕ್ ದೃಢೀಕರಣ, ಗುಣಮಟ್ಟ ಮತ್ತು ಕಾರ್ಯಕ್ಷಮತೆಗಾಗಿ ನಡಸುವ ಪರೀಕ್ಷೆಗಳು ಪೂರ್ಣಗೊಂಡ ತಕ್ಷಣ ಐಫೋನ್ ಬಳಕೆದಾರರಿಗೆ ಅತ್ಯುತ್ತಮ 5ಜಿ ಅನುಭವವನ್ನು ಒದಗಿಸಿಕೊಡಲು ಭಾರತದಲ್ಲಿನ ಪಾಲುದಾರರೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಕಳೆದ ತಿಂಗಳು ಆ್ಯಪಲ್ ತಿಳಿಸಿತ್ತು.

ಇದನ್ನೂ ಓದಿ: Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ

ಸಾಫ್ಟ್​ವೇರ್ ಅಪ್​ಡೇಟ್ ಮಾಡುವ ಮೂಲಕ ಡಿಸೆಂಬರ್​ ವೇಳೆಗೆ ಭಾರತದ ಎಲ್ಲ ಗ್ರಾಹಕರಿಗೆ 5ಜಿ ಎನೇಬಲ್ ಮಾಡಲಾಗುವುದು ಎಂದೂ ಆ್ಯಪಲ್ ತಿಳಿಸಿದೆ. ಬಳಕೆದಾರರು ಐಫೋನ್​ನಲ್ಲಿ ಆ್ಯಪಲ್​ನ ಬೀಟಾ ಸಾಫ್ಟ್​ವೇರ್ ಪ್ರೋಗ್ರಾಂ ಅನ್ನು ಎನ್​ರೋಲ್ ಮಾಡಿಕೊಂಡು, ಇತರ ಅಗತ್ಯ ಅಪ್​ಡೇಟ್​ಗಳನ್ನು ಮಾಡಿಕೊಂಡು 5ಜಿ ಸೇವೆ ಪಡೆಯಬಹುದಾಗಿದೆ. ಏರ್​ಟೆಲ್ ಮತ್ತು ಜಿಯೋ ಗ್ರಾಹಕರಿಗೆ ಇದು ಅನ್ವಯವಾಗಲಿದೆ ಎಂದು ಆ್ಯಪಲ್ ಮಾಹಿತಿ ನೀಡಿದೆ.

ದೇಶದಲ್ಲಿ ಅಕ್ಟೋಬರ್ 1ರಂದು 5ಜಿ ಸೇವೆಗೆ ಚಾಲನೆ ನೀಡಲಾಗಿತ್ತು. ಏರ್​ಟೆಲ್, ಜಿಯೋ, ವೊಡಾಫೋನ್ 5ಜಿ ನೆಟ್​ವರ್ಕ್​ಗೆ ಅಪ್​ಗ್ರೇಡ್ ಆಗುತ್ತಿದ್ದು, ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ಆರಂಭದ ಹಂತದಲ್ಲಿ 5G ಇಂಟರ್ನೆಟ್ ಸೇವೆ ಒದಗಿಸಲಾಗುತ್ತಿದೆ. ಸೇವೆಗೆ ಚಾಲನೆ ನೀಡಿದ ಒಂದೇ ತಿಂಗಳಲ್ಲಿ 10 ಲಕ್ಷ ಗ್ರಾಹಕರನ್ನು ಹೊಂದಿರುವುದಾಗಿ ಭಾರ್ತಿ ಏರ್​ಟೆಲ್ ಬುಧವಾರ ಹೇಳಿಕೊಂಡಿತ್ತು.