AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake App: ಪ್ಲೇ ಸ್ಟೋರ್​ನಲ್ಲಿ ಮೊಬೈಲ್ ಹ್ಯಾಕ್ ಮಾಡುವ, ಹಣ ಕದಿಯುವ ಆ್ಯಪ್ ಪತ್ತೆ: ಇನ್​ಸ್ಟಾಲ್ ಮಾಡಿದ್ರೆ ಗಮನಿಸಿ

ಸಂಶೋಧಕರು ಹೇಳುವ ಪ್ರರಕಾರ, ಕೆಲ ಹೊಸ ಆ್ಯಪ್​ಗಳು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆಯಂತೆ. ಇದು ಬಳಕೆದಾರರ ಲಾಗಿನ್ ಮಾಹಿತಿ, ಅಕೌಂಟ್ ನಂಬರ್ ಹಾಗೂ ನಿಮ್ಮ ಹಣದ ವಿವರವನ್ನು ಕದಿಯುತ್ತದೆ ಎಂದು ಹೇಳಿದೆ.

Fake App: ಪ್ಲೇ ಸ್ಟೋರ್​ನಲ್ಲಿ ಮೊಬೈಲ್ ಹ್ಯಾಕ್ ಮಾಡುವ, ಹಣ ಕದಿಯುವ ಆ್ಯಪ್ ಪತ್ತೆ: ಇನ್​ಸ್ಟಾಲ್ ಮಾಡಿದ್ರೆ ಗಮನಿಸಿ
Fake App
TV9 Web
| Edited By: |

Updated on:Nov 02, 2022 | 12:01 PM

Share

ವಿಶ್ವದಲ್ಲಿ ಇಂದು ಐದು ಬಿಲಿಯನ್ ಜನರು ಸ್ಮಾರ್ಟ್​ಫೋನನ್ನು (Smartphones) ಉಪಯೋಗಿಸುತ್ತಿದ್ದಾರೆ. ಇದರಲ್ಲಿ ಬಹುಪಾಲು ಆಂಡ್ರಾಯ್ಡ್ ಮೊಬೈಲ್​ಗಳೇ ಆಗಿವೆ. ಹೀಗಾಗಿ ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಕೆದಾರರು ಉಪಯೋಗಿಸುತ್ತಿರುವ ಗೂಗಲ್ ಪ್ಲೇ ಸ್ಟೋರ್​ನಲ್ಲಿ (Play Store) ನಕಲಿ ಆ್ಯಪ್​ಗಳ ಹಾವಳಿ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಪಾಯಕಾರಿ ವೈರಸ್​ಗಳನ್ನು ಗುರುತಿಸಿ ಗೂಗಲ್ ಕಿತ್ತೆಸೆದರೂ ಪುನಃ ಹೊಸ ಮಾಲ್ವೇರ್​ಗಳು ಹುಟ್ಟಿಕೊಳ್ಳುತ್ತಿವೆ. ಇತ್ತೀಚೆಗಷ್ಟೆ ಡ್ರಿನಿಕ್ (Drinik) ಎಂಬ ಮಾಲ್ವೆರ್ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ಕಂಡುಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಪುನಃ ಹಣ ಕದಿಯುವ ಮತ್ತೊಂದಿಷ್ಟು ಅಪಾಯಕಾರಿ ಆ್ಯಪ್​ಗಳು ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ನಲ್ಲಿರುವ ಪ್ಲೇಸ್ಟೋರ್​ನಲ್ಲಿ ಪತ್ತೆಯಾಗಿದೆ.

ಸಂಶೋಧಕರು ಹೇಳುವ ಪ್ರರಕಾರ, ಕೆಲ ಹೊಸ ಆ್ಯಪ್​ಗಳು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆಯಂತೆ. ಇದು ಬಳಕೆದಾರರ ಲಾಗಿನ್ ಮಾಹಿತಿ, ಅಕೌಂಟ್ ನಂಬರ್ ಹಾಗೂ ನಿಮ್ಮ ಹಣದ ವಿವರವನ್ನು ಕದಿಯುತ್ತದೆ ಎಂದು ಹೇಳಿದೆ. ಐದು ಪಾಯಕಾರಿ ಆ್ಯಪ್​ಗಳನ್ನು ಗುರುತಿಸಲಾಗಿದ್ದು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ. ಇಲ್ಲಿದೆ ನೋಡಿ ಹಣ ಕದಿಯುವ ಐದು ಡೇಂಜರಸ್ ಆ್ಯಪ್​ಗಳು.

  • File Manager Small, Lite
  • My Finances Tracker
  • Zetter Authentication
  • Codice Fiscale 2022
  • Recover Audio, Images & Videos

ಭಾರತದ ಬ್ಯಾಂಕ್​ಗಳೇ ಟಾರ್ಗೆಟ್:

ಇದನ್ನೂ ಓದಿ
Image
WhatsApp Ban: ಒಂದೇ ತಿಂಗಳಲ್ಲಿ ಭಾರತದ 26 ಲಕ್ಷ ವಾಟ್ಸ್​ಆ್ಯಪ್ ಖಾತೆ ಬ್ಯಾನ್: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
Image
Xiaomi 12i Hypercharge: 210W ಫಾಸ್ಟ್ ಚಾರ್ಜರ್: ಭಾರತಕ್ಕೆ ಬರುತ್ತಿದೆ ಚೀನಾದಲ್ಲಿ ಧೂಳೆಬ್ಬಿಸುತ್ತಿರುವ ಈ ಪವರ್​ಫುಲ್ ಸ್ಮಾರ್ಟ್​ಫೋನ್
Image
10-12 ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ: ರಾಜೀವ್ ಚಂದ್ರಶೇಖರ್
Image
Twitter ban: ಎಲಾನ್ ಮಸ್ಕ್ ಮತ್ತೊಂದು ನಿರ್ಧಾರ: ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ಬ್ಯಾನ್

ಕಳೆದ ವಾರವಷ್ಟೆ ಕಂಡುಬಂದತಹ ಡ್ರಿನಿಕ್ ವೈರಸ್ ಎಂಬ ವೈರಲ್ ಆದಾಯ ತೆರಿಗೆ ಮರುಪಾವತಿಯ ಹೆಸರಿನಲ್ಲಿ ಬಳಕೆದಾರರ ಸೂಕ್ಷ್ಮ ಡೇಟಾವನ್ನು ಕದಿಯುತ್ತದೆ. ಅಲ್ಲದೆ ಭಾರತೀಯ ಬಳಕೆದಾರರ 18 ಬ್ಯಾಂಕ್‌ಗಳನ್ನು ಇದು ಟಾರ್ಗೆಟ್ ಮಾಡಿದೆಯಂತೆ. ಪ್ರಸ್ತುತ, ಈ ಬ್ಯಾಂಕ್‌ಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಇದೆ ಎಂದು ಹೇಳಲಾಗಿದೆ. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆ ಹೊಂದಿದ್ದರೆ ಎಚ್ಚರ ವಹಿಸಿ. ಕೇವಲ ಒಂದು ಬ್ಯಾಂಕ್ ಮಾತ್ರವಲ್ಲದೆ ಭಾರತದಲ್ಲಿರುವ ಒಟ್ಟು 27 ಬ್ಯಾಂಕಿಂಗ್ ಸಂಸ್ಥೆಗಳನ್ನು ಈ ವೈರಸ್ ಟಾರ್ಗೆಟ್ ಮಾಡಿಕೊಂಡಿದೆ. ಡ್ರಿನಿಕ್ ವೈರಸ್‌ನ ಹೊಸ ಆವೃತ್ತಿಯು ಬಳಕೆದಾರರನ್ನು ಫಿಶಿಂಗ್‌ ಪೇಜ್‌ಗೆ ಕರೆದೊಯ್ಯುತ್ತದೆ ಮತ್ತು ಬಳಕೆದಾರರ ಎಲ್ಲ ಮಾಹಿತಿಯನ್ನು ಕದಿಯುತ್ತದೆ. ಈ ಮಾಲ್ವೇರ್ ಅಭಿವೃದ್ಧಿಪಡಿಸಿದವರು ಪೂರ್ತಿಯಾಗಿ ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಆಗಿ ರೂಪಿಸಿದ್ದಾರೆ ಎಂದು ಹೇಳಲಾಗಿದೆ.

ಡ್ರಿನಿಕ್ ಮಾಲ್‌ವೇರ್‌ APK ಫೈಲ್‌ನೊಂದಿಗೆ ಮಸೇಜ್ ಕಳುಹಿಸುವ ಮೂಲಕ ಬಳಕೆದಾರರನ್ನು ಗುರುತಿಸುತ್ತದೆ. iAssist ಎಂಬ ಅಪ್ಲಿಕೇಶನ್‌ನೊಂದಿಗೆ ಬರುತ್ತದಂತೆ. ಇದು ಬಳಕೆದಾರರ ಕ್ರೆಡಿಟ್ ಕಾರ್ಡ್ CVV, PIN ಮತ್ತು ಪ್ರಮುಖ ವಿವರಗಳನ್ನು ಕದಿಯಬಹುದು. ನಿಮಗೆ ತಿಳಿಯದೆ ನಿಮ್ಮ ಸ್ಮಾರ್ಟ್​ಫೋನ್ ಒಳಗೆ ಪ್ರವೇಶ ಪಡೆದು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತದೆ. ನೀವು ಬ್ಯಾಂಕಿಂಗ್‌ಗೆ ಸಂಬಂಧಿಸಿದ ಯಾವುದೇ ಲಿಂಕ್ ಅನ್ನು ಎಸ್​ಎಮ್​ಎಸ್​ ಮೂಲಕ ಅಥವಾ ಇಮೇಲ್ ಮೂಲಕ ಪಡೆದರೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಎರಡು ಬಾರಿ ಪರಿಶೀಲಿಸಬೇಕು. ಯಾವುದೇ ಮೂರನೇ ವ್ಯಕ್ತಿ ಕಳುಹಿಸದ ಮೆಸೇಜ್ ಅನ್ನು ಕಡೆಗಣಿಸಿ.

Published On - 12:01 pm, Wed, 2 November 22

ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್