AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Web: ಬಹುಬೇಡಿಕೆಯ ವೈಶಿಷ್ಟ್ಯ: ವಾಟ್ಸ್ಆ್ಯಪ್ ವೆಬ್ ಬಳಸುವವರಿಗೆ ಬಂಪರ್ ಸುದ್ದಿ

WhatsApp Web Video Call Feature: ನೀವು ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್ಆ್ಯಪ್ ಬಳಸುತ್ತಿದ್ದರೆ ನಿಮಗೆ ಅತ್ಯುತ್ತಮವಾದ ಫೀಚರ್ ಒಂದು ಸಿಗಲಿದೆ. ಇಲ್ಲಿಯವರೆಗೆ ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಮಾತ್ರ ಧ್ವನಿ ಕರೆಗಳು ಮತ್ತು ವಿಡಿಯೋ ಕರೆಗಳನ್ನು ಮಾಡಬಹುದಾಗಿತ್ತು, ಆದರೆ ಈಗ ವೆಬ್‌ನಲ್ಲಿಯೂ ಈ ಸೌಲಭ್ಯವನ್ನು ಪಡೆಯಲಿದ್ದಾರೆ.

WhatsApp Web: ಬಹುಬೇಡಿಕೆಯ ವೈಶಿಷ್ಟ್ಯ: ವಾಟ್ಸ್ಆ್ಯಪ್ ವೆಬ್ ಬಳಸುವವರಿಗೆ ಬಂಪರ್ ಸುದ್ದಿ
Whatsapp Web
Vinay Bhat
|

Updated on: May 06, 2025 | 4:02 PM

Share

ಬೆಂಗಳೂರು (ಮೇ. 06): ವಾಟ್ಸ್​ಆ್ಯಪ್ (WhatsApp) ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಾಗುವ ಇನ್ಸ್ಟೆಂಟ್ ಮೆಸೇಜಿಂಗ್ ಆಪ್ ಆಗಿದೆ. ಪ್ರಪಂಚದಾದ್ಯಂತ 3.5 ಶತಕೋಟಿಗೂ ಹೆಚ್ಚು ಜನರು ಇದನ್ನು ತಮ್ಮ ಫೋನ್‌ಗಳಲ್ಲಿ ಬಳಸುತ್ತಾರೆ. ಇದರ ಸುಲಭ ಇಂಟರ್ಫೇಸ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳು ಬಳಕೆದಾರರನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ವಾಟ್ಸ್​ಆ್ಯಪ್ ತನ್ನ ಲಕ್ಷಾಂತರ ಬಳಕೆದಾರರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಹೊಸ ಅಪ್ಡೇಟ್​ಗಳನ್ನು ಕೂಡ ಪರಿಚಯಿಸುತ್ತದೆ. ಈ ಮಧ್ಯೆ, ಇದೀಗ ವಾಟ್ಸ್​ಆ್ಯಪ್ ಮತ್ತೊಂದು ಅದ್ಭುತ ವೈಶಿಷ್ಟ್ಯವನ್ನು ಪರಿಚಯಿಸಿದೆ.

ನೀವು ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್​ಆ್ಯಪ್ ಬಳಸುತ್ತಿದ್ದರೆ ನಿಮಗೆ ಅತ್ಯುತ್ತಮವಾದ ಫೀಚರ್ ಒಂದು ಸಿಗಲಿದೆ. ವಾಸ್ತವವಾಗಿ, ಇಲ್ಲಿಯವರೆಗೆ ವಾಟ್ಸ್​ಆ್ಯಪ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಮಾತ್ರ ಧ್ವನಿ ಕರೆಗಳು ಮತ್ತು ವಿಡಿಯೋ ಕರೆಗಳನ್ನು ಮಾಡಬಹುದಾಗಿತ್ತು, ಆದರೆ ಈಗ ಕೋಟ್ಯಂತರ ವಾಟ್ಸ್​ಆ್ಯಪ್ ಬಳಕೆದಾರರು ವೆಬ್‌ನಲ್ಲಿಯೂ ಈ ಸೌಲಭ್ಯವನ್ನು ಪಡೆಯಲಿದ್ದಾರೆ.

ಇಲ್ಲಿಯವರೆಗೆ, ವಾಟ್ಸ್​ಆ್ಯಪ್ ವೆಬ್‌ನಲ್ಲಿ ಚಾಟಿಂಗ್ ಸೌಲಭ್ಯ ಲಭ್ಯವಿತ್ತು ಆದರೆ ಕರೆ ಮಾಡಲು, ಬಳಕೆದಾರರು ವಿಂಡೋಸ್ ಅಥವಾ ಮ್ಯಾಕ್ ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿತ್ತು. ಆದರೆ ಈಗ ವಾಟ್ಸ್​ಆ್ಯಪ್​​​ನ ಎಲ್ಲಾ ವೆಬ್ ಬಳಕೆದಾರರು ಯಾವುದೇ ಅಪ್ಲಿಕೇಶನ್‌ನ ಸಹಾಯವಿಲ್ಲದೆ ನೇರ ಧ್ವನಿ ಕರೆ ಮತ್ತು ವಿಡಿಯೋ ಕರೆ ಮಾಡಲು ಸಾಧ್ಯವಾಗುತ್ತದೆ. ವಾಟ್ಸ್​ಆ್ಯಪ್​​​ನ ಈ ವೈಶಿಷ್ಟ್ಯವು ಕೋಟ್ಯಂತರ ಬಳಕೆದಾರರಿಗೆ ಉತ್ತಮ ಅನುಕೂಲವನ್ನು ಒದಗಿಸಲಿದೆ.

ಇದನ್ನೂ ಓದಿ
Image
ನಿಮ್ಮ ಜಿಮೇಲ್ ಖಾತೆ ಹ್ಯಾಕ್ ಮಾಡಲಾಗಿದೆಯೇ?: ಈ ಟ್ರಿಕ್ ಮೂಲಕ ತಿಳಿದುಕೊಳ್ಳಿ
Image
ಮನೆಯ ಮೂಲೆ ಮೂಲೆಯಲ್ಲೂ ವೈಫೈ ಸಿಗ್ನಲ್ ಸಿಗುತ್ತೆ: ಈ 5 ಟ್ರಿಕ್ ಪ್ರಯತ್ನಿಸಿ
Image
ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಭಾರಿ ಕುಸಿತ: ಈ ಕಂಪನಿಗೆ ದೊಡ್ಡ ನಷ್ಟ
Image
ಡೇಟಾ ಪ್ಯಾಕ್ ಹಾಕಿದ್ದರೂ ನೆಟ್ ಕಾರ್ಯನಿರ್ವಹಿಸುತ್ತಿಲ್ಲವೇ? ಹೀಗೆ ಮಾಡಿ

WABetaInfo ಮಾಹಿತಿಯನ್ನು ಹಂಚಿಕೊಂಡಿದೆ

ವಾಟ್ಸ್​ಆ್ಯಪ್​​​ನ ಈ ಹೊಸ ವೈಶಿಷ್ಟ್ಯದ ಕುರಿತು ಮಾಹಿತಿಯನ್ನು WABetaInfo ವೆಬ್‌ಸೈಟ್ ಒದಗಿಸಿದೆ, ಇದು ಕಂಪನಿಯ ನವೀಕರಣಗಳು ಮತ್ತು ಮುಂಬರುವ ವೈಶಿಷ್ಟ್ಯಗಳ ಮೇಲೆ ನಿಗಾ ಇಡುತ್ತದೆ. ವರದಿಯ ಪ್ರಕಾರ, ವಾಟ್ಸ್​ಆ್ಯಪ್​​​ನ ಈ ಹೊಸ ವೈಶಿಷ್ಟ್ಯವನ್ನು ವೆಬ್‌ನ ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ಕಂಪನಿಯು ಪ್ರಸ್ತುತ ಈ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಶೀಘ್ರದಲ್ಲೇ ಇದನ್ನು ಸಾಮಾನ್ಯ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು.

Gmail Hack: ನಿಮ್ಮ ಜಿಮೇಲ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ?: ಈ ಟ್ರಿಕ್ ಮೂಲಕ ತಿಳಿದುಕೊಳ್ಳಿ

ಹೊಸ ವೈಶಿಷ್ಟ್ಯವು ಜಾರಿಗೆ ಬಂದ ನಂತರ, ವಾಟ್ಸ್​ಆ್ಯಪ್​​​ ಬಳಕೆದಾರರು ವಾಟ್ಸ್​ಆ್ಯಪ್​​​ ವೆಬ್‌ನಲ್ಲಿರುವ ಬ್ರೌಸರ್‌ನಿಂದ ನೇರವಾಗಿ ಧ್ವನಿ ಕರೆ ಮತ್ತು ವಿಡಿಯೋ ಕರೆ ಮಾಡಲು ಅಪ್ಲಿಕೇಶನ್‌ನಲ್ಲಿ ಫೋನ್ ಮತ್ತು ಕ್ಯಾಮೆರಾ ಐಕಾನ್ ಅನ್ನು ಪಡೆಯುತ್ತಾರೆ. ಈ ಐಕಾನ್‌ಗಳನ್ನು ಚಾಟ್ ಐಕಾನ್‌ನ ಬಲಭಾಗದಲ್ಲಿ ನೀಡಲಾಗುತ್ತದೆ. ವೆಬ್‌ನಲ್ಲಿ ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಹೆಚ್ಚು ಬಳಸುವ ಬಳಕೆದಾರರಿಗೆ ವಾಟ್ಸ್​ಆ್ಯಪ್​​​ನ ಮುಂಬರುವ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಲಿದೆ.

ವಾಟ್ಸ್​ಆ್ಯಪ್​​ ​ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ತಂದಿದೆ:

ವಾಟ್ಸ್​ಆ್ಯಪ್​​​ ತನ್ನ ವೇದಿಕೆಯನ್ನು ನಿರಂತರವಾಗಿ ಸುರಕ್ಷಿತೆ ಬಗ್ಗೆ ಹೆಚ್ಚು ಗಮನಕೊಡುತ್ತದೆ. ಇದಕ್ಕಾಗಿ ಕಂಪನಿಯು ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ. ಇತ್ತೀಚೆಗೆ ವಾಟ್ಸ್​ಆ್ಯಪ್​​​ ತನ್ನ ಲಕ್ಷಾಂತರ ಜನರಿಗೆ ‘ಅಡ್ವಾನ್ಸ್ಡ್ ಚಾಟ್ ಪ್ರೈವಸಿ’ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವನ್ನು ಬಳಸುವುದರಿಂದ, ಬಳಕೆದಾರರು ತಮ್ಮ ಚಾಟ್‌ಗಳನ್ನು ಎಕ್ಸ್​ಪೊರ್ಟ್ ಮಾಡುವುದನ್ನು ತಡೆಯಲು ಸಾಧ್ಯವಾಗುತ್ತದೆ. ತಮ್ಮ ಚಾಟ್‌ಗಳು ದುರುಪಯೋಗವಾಗಬಹುದೆಂಬ ಚಿಂತೆಯಲ್ಲಿರುವ ಬಳಕೆದಾರರಿಗೆ ಈ ವೈಶಿಷ್ಟ್ಯವು ಹೆಚ್ಚಿನ ಪರಿಹಾರವನ್ನು ನೀಡುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ