AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gmail Hack: ನಿಮ್ಮ ಜಿಮೇಲ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ?: ಈ ಟ್ರಿಕ್ ಮೂಲಕ ತಿಳಿದುಕೊಳ್ಳಿ

Gmail Hack: ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೂಡ ಹ್ಯಾಕ್ ಮಾಡಬಹುದು. ನಿಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಜಿಮೇಲ್ಗೆ ಲಿಂಕ್ ಆಗಿದ್ದರೆ, ಅವುಗಳು ಸಹ ಅಪಾಯಕ್ಕೆ ಸಿಲುಕುತ್ತದೆ. ಫಿಶಿಂಗ್ ಅಥವಾ ಸ್ಪ್ಯಾಮ್ ಕಳುಹಿಸಬಹುದು. ಹ್ಯಾಕರ್‌ಗಳು ನಿಮ್ಮ ಖಾತೆಯಿಂದ ಇತರರಿಗೆ ನಕಲಿ ಇಮೇಲ್‌ಗಳನ್ನು ಕಳುಹಿಸಬಹುದು.

Gmail Hack: ನಿಮ್ಮ ಜಿಮೇಲ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ?: ಈ ಟ್ರಿಕ್ ಮೂಲಕ ತಿಳಿದುಕೊಳ್ಳಿ
Gmail (1)
Vinay Bhat
|

Updated on:May 06, 2025 | 1:38 PM

Share

ಬೆಂಗಳೂರು (ಮೇ. 06): ಜಿಮೇಲ್ ಹ್ಯಾಕ್ (Gmail Hack) ಮಾಡುವುದು ಇಂದು ತುಂಬಾ ಸುಲಭ. ನಿಮ್ಮ ಗೌಪ್ಯತೆಯನ್ನು ನೀವು ನೋಡಿಕೊಳ್ಳದಿದ್ದರೆ ಸ್ಕ್ಯಾಮರ್‌ಗಳು ಜಿಮೇಲ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಇಂದು ಜಿಮೇಲ್ ಕೇವಲ ಇಮೇಲ್‌ಗೆ ಸೀಮಿತವಾಗಿಲ್ಲ. ನಿಮ್ಮ ಯೂಟ್ಯೂಬ್, ಗೂಗಲ್ ಡ್ರೈವ್, ಫೋಟೋಗಳು, ಡಾಕ್ಸ್ ಮತ್ತು ಬ್ಯಾಂಕಿಂಗ್ ವಿವರಗಳನ್ನು ಸಹ ಇದಕ್ಕೆ ಲಿಂಕ್ ಮಾಡಬಹುದು. ಜಿಮೇಲ್ ಹ್ಯಾಕ್ ಆದಲ್ಲಿ, ನಿಮ್ಮ ವೈಯಕ್ತಿಕ ಡೇಟಾ ಸೋರಿಕೆ ಆಗುತ್ತದೆ. ಇಮೇಲ್‌ಗಳು, ದಾಖಲೆಗಳು, ಫೋಟೋಗಳು ಅಥವಾ ಕಾಂಟೆಕ್ಟ್ ಎಲ್ಲವೂ ಹ್ಯಾಕರ್​ಗಳ ಕೈ ಸೇರುತ್ತದೆ. ಬ್ಯಾಂಕ್ ವಂಚನೆಯ ಅಪಾಯ ಕೂಡ ಇದೆ. ಜಿಮೇಲ್ ಅಥವಾ ಬ್ಯಾಂಕ್ ವಿವರಗಳಿಗೆ ಸಂಬಂಧಿಸಿದ OTP ಮೂಲಕ ನೀವು ವಂಚನೆಗೊಳಗಾಗಬಹುದು.

ಅಷ್ಟೇ ಅಲ್ಲದೆ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೂಡ ಹ್ಯಾಕ್ ಮಾಡಬಹುದು. ನಿಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಜಿಮೇಲ್​ಗೆ ಲಿಂಕ್ ಆಗಿದ್ದರೆ, ಅವುಗಳು ಸಹ ಅಪಾಯಕ್ಕೆ ಸಿಲುಕುತ್ತದೆ. ಫಿಶಿಂಗ್ ಅಥವಾ ಸ್ಪ್ಯಾಮ್ ಕಳುಹಿಸಬಹುದು. ಹ್ಯಾಕರ್‌ಗಳು ನಿಮ್ಮ ಖಾತೆಯಿಂದ ಇತರರಿಗೆ ನಕಲಿ ಇಮೇಲ್‌ಗಳನ್ನು ಕಳುಹಿಸಬಹುದು.

ನಿಮ್ಮ ಜಿಮೇಲ್ ಹ್ಯಾಕ್ ಆಗಿದೆಯೇ ಎಂದು ತಿಳಿಯುವುದು ಹೇಗೆ?

ನಿಮ್ಮ ಜಿಮೇಲ್ ಹ್ಯಾಕ್ ಆಗಿದೆಯೇ ಎಂದು ಪರಿಶೀಲಿಸಲು ಮೊದಲು ನೀವು ಲಾಸ್ಟ್ ಅಕೌಂಟ್ ಪರಿಶೀಲಿಸಬೇಕು. ಇದಕ್ಕಾಗಿ, ನಿಮ್ಮ ಜಿಮೇಲ್ ತೆರೆಯಿರಿ. ಕೆಳಗಿನ ಬಲಭಾಗದಲ್ಲಿ ನೀಡಲಾದ ಲಾಸ್ಟ್ ಅಕೌಂಟ್ ಚಟುವಟಿಕೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಲಾಗಿನ್ ಹಿಸ್ಟರಿ ಅನ್ನು ವೀಕ್ಷಿಸಲು ವಿವರಗಳ ಮೇಲೆ ಕ್ಲಿಕ್ ಮಾಡಿ ನೋಡಿ. ಅಥವಾ ಲಿಂಕ್‌ಗೆ ಹೋಗಿ https://myaccount.google.com/security-checkup .

ಇದನ್ನೂ ಓದಿ
Image
ಮನೆಯ ಮೂಲೆ ಮೂಲೆಯಲ್ಲೂ ವೈಫೈ ಸಿಗ್ನಲ್ ಸಿಗುತ್ತೆ: ಈ 5 ಟ್ರಿಕ್ ಪ್ರಯತ್ನಿಸಿ
Image
ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಭಾರಿ ಕುಸಿತ: ಈ ಕಂಪನಿಗೆ ದೊಡ್ಡ ನಷ್ಟ
Image
ಡೇಟಾ ಪ್ಯಾಕ್ ಹಾಕಿದ್ದರೂ ನೆಟ್ ಕಾರ್ಯನಿರ್ವಹಿಸುತ್ತಿಲ್ಲವೇ? ಹೀಗೆ ಮಾಡಿ
Image
ಪಾಕಿಸ್ತಾನದಲ್ಲಿ ಆನ್​ಲೈನ್ ಶಾಪಿಂಗ್​ಗೆ ಯಾವ ವೆಬ್​ಸೈಟ್ ಬಳಸುತ್ತಾರೆ?

ಲಾಗಿನ್ ಸಾಧನ, ಅಪ್ಲಿಕೇಶನ್‌ಗಳು, ಪಾಸ್‌ವರ್ಡ್‌ಗಳು ಆಯ್ಕೆಗಳನ್ನು ಇಲ್ಲಿಂದ ಪರಿಶೀಲಿಸಿ. ಇದರಲ್ಲಿ ನೀವು ಅಸಾಮಾನ್ಯ ಚಟುವಟಿಕೆ ಎಚ್ಚರಿಕೆಯನ್ನು ನೋಡುತ್ತೀರಿ. ಅನುಮಾನಾಸ್ಪದ ಲಾಗಿನ್ ಇದ್ದಾಗ ಗೂಗಲ್ ಸಾಮಾನ್ಯವಾಗಿ ನಿಮಗೆ ಇಮೇಲ್ ಕಳುಹಿಸುತ್ತದೆ.

Tech Tips: ನಿಮ್ಮ ಮನೆಯ ಮೂಲೆ ಮೂಲೆಯಲ್ಲೂ ಫುಲ್ ವೈಫೈ ಸಿಗ್ನಲ್ ಸಿಗುತ್ತೆ: ಈ 5 ಟ್ರಿಕ್ ಪ್ರಯತ್ನಿಸಿ

ಜಿಮೇಲ್ ಹ್ಯಾಕಿಂಗ್ ತಡೆಯುವುದು ಹೇಗೆ?

ನಿಮ್ಮ ಜಿಮೇಲ್ ಐಡಿಗೆ ಬಲವಾದ ಪಾಸ್‌ವರ್ಡ್ ಹೊಂದಿಸಿ. ಈ ರೀತಿಯ Aa45#x@z ಪಾಸ್‌ವರ್ಡ್ ಬಳಸಿ. ಟು- ಸ್ಟೆಪ್ ವೆರಿಫಿಕೇಷನ್ ಅನ್ನು (2FA) ಆನ್ ಮಾಡಿ. ಇದಲ್ಲದೆ, ನಕಲಿ ಇಮೇಲ್‌ಗಳು ಅಥವಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಸಾರ್ವಜನಿಕ ವೈ- ಫೈ ಮೂಲಕ ಜಿಮೇಲ್‌ಗೆ ಲಾಗಿನ್ ಆಗಬೇಡಿ. ಆಂಟಿವೈರಸ್ ಮತ್ತು ಮೊಬೈಲ್ ಭದ್ರತಾ ಅಪ್ಲಿಕೇಶನ್‌ಗಳನ್ನು ಬಳಸಿ.

ನಿಮ್ಮ ಜಿಮೇಲ್ ಅನ್ನು ಹ್ಯಾಕ್ ಮಾಡಲಾಗಿದೆಯೇ ಅಥವಾ ಯಾವುದೇ ಡೇಟಾವನ್ನು ಕದ್ದಿದ್ದಾರೆಯೇ? ಎಂಬುದನ್ನು ಪರಿಶೀಲಿಸಲು ಮತ್ತೊಂದು ವಿಧಾನ ಕೂಡ ಇದೆ. ಹ್ಯಾವ್ ಐ ಬೀನ್ ಪನ್ಡ್ ಎಂಬ ಉಚಿತ, ವಿಶ್ವಾಸಾರ್ಹ ವೆಬ್‌ಸೈಟ್‌ನ ಸಹಾಯದಿಂದ ನೀವು ಅದನ್ನು ಸುಲಭವಾಗಿ ಪರಿಶೀಲಿಸಬಹುದು. ನಿಮ್ಮ ಇಮೇಲ್ ಐಡಿ ಯಾವುದೇ ಡೇಟಾ ಉಲ್ಲಂಘನೆಯ ಭಾಗವಾಗಿದೆಯೇ ಎಂದು ಈ ವೆಬ್‌ಸೈಟ್ ನಿಮಗೆ ತಿಳಿಸುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Tue, 6 May 25

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ