AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಭಾರಿ ಕುಸಿತ: ಈ ಚೀನಾದ ಕಂಪನಿಗೆ ಅತಿ ದೊಡ್ಡ ನಷ್ಟ

Indian Smartphone market: ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಬಹಳ ಕಡಿಮೆ ಹೊಸ ಸಾಧನಗಳನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಹಳೆಯ ಸಾಧನಗಳನ್ನು ಸಹ ಕಡಿಮೆ ರವಾನಿಸಲಾಗಿದೆ. ಇದರಿಂದಾಗಿ, ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ. 7 ರಷ್ಟು ಭಾರಿ ಕುಸಿತ ಕಂಡುಬಂದಿದೆ.

ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಭಾರಿ ಕುಸಿತ: ಈ ಚೀನಾದ ಕಂಪನಿಗೆ ಅತಿ ದೊಡ್ಡ ನಷ್ಟ
ಸ್ಮಾರ್ಟ್​​ಫೋನ್
Vinay Bhat
|

Updated on: May 03, 2025 | 2:51 PM

Share

ಬೆಂಗಳೂರು (ಮೇ. 03): ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ (Smartphones) ಬೇಡಿಕೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಆದರೆ, ವಿವೋ ಮತ್ತೊಮ್ಮೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ. ಮಾರ್ಚ್‌ನಲ್ಲಿ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಚೀನಾದ ಬ್ರ್ಯಾಂಡ್ ವಿವೋ ಶೇ. 22 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಅದೇ ಸಮಯದಲ್ಲಿ, ಮತ್ತೊಂದು ಚೀನೀ ಬ್ರ್ಯಾಂಡ್ ಶಿಯೋಮಿ ಈ ಬಾರಿ ಕೂಡ ಹಿಂದುಳಿದಿದೆ. ಹಲವು ವರ್ಷಗಳಿಂದ ಭಾರತವನ್ನು ಆಳುತ್ತಿದ್ದ ಶಯೋಮಿ ಕಂಪನಿಯ ಮಾರುಕಟ್ಟೆ ಪಾಲು ಈಗ ಕೇವಲ ಶೇ. 13 ಕ್ಕೆ ಇಳಿದಿದೆ.

ಕೌಂಟರ್‌ಪಾಯಿಂಟ್‌ನ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಬಹಳ ಕಡಿಮೆ ಹೊಸ ಸಾಧನಗಳನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಹಳೆಯ ಸಾಧನಗಳನ್ನು ಸಹ ಕಡಿಮೆ ರವಾನಿಸಲಾಗಿದೆ. ಇದರಿಂದಾಗಿ, ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ. 7 ರಷ್ಟು ಭಾರಿ ಕುಸಿತ ಕಂಡುಬಂದಿದೆ.

ವಿವೋದ ಪ್ರಾಬಲ್ಯ

ವರದಿಯ ಪ್ರಕಾರ, ಈ ತ್ರೈಮಾಸಿಕದಲ್ಲಿ ವಿವೋ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಿದೆ. ಕಂಪನಿಯ ಮಾರುಕಟ್ಟೆ ಪಾಲು ಶೇ. 22 ರಷ್ಟಿದೆ. ಈ ಮೂಲಕ ವಿವೋ ಸಾಗಣೆಗಳು ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ ಕಂಪನಿಯ ಮಾರುಕಟ್ಟೆ ಪಾಲು ಶೇ. 19 ರಷ್ಟಿತ್ತು. ಅದೇ ಸಮಯದಲ್ಲಿ, ದಕ್ಷಿಣ ಕೊರಿಯಾದ ಕಂಪನಿ ಸ್ಯಾಮ್‌ಸಂಗ್ ಶೇ. 17 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿ ಎರಡನೇ ಸ್ಥಾನದಲ್ಲಿದೆ. ಒಪ್ಪೋ ಮಾರುಕಟ್ಟೆ ಪಾಲು ಶೇ. 15 ರಷ್ಟಿದ್ದು, ಈ ಅವಧಿಯಲ್ಲಿ ಚೀನಾದ ಕಂಪನಿ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ
Image
ಡೇಟಾ ಪ್ಯಾಕ್ ಹಾಕಿದ್ದರೂ ನೆಟ್ ಕಾರ್ಯನಿರ್ವಹಿಸುತ್ತಿಲ್ಲವೇ? ಹೀಗೆ ಮಾಡಿ
Image
ಪಾಕಿಸ್ತಾನದಲ್ಲಿ ಆನ್​ಲೈನ್ ಶಾಪಿಂಗ್​ಗೆ ಯಾವ ವೆಬ್​ಸೈಟ್ ಬಳಸುತ್ತಾರೆ?
Image
ಪಾಕ್​ನಲ್ಲಿ ಫೋನ್‌ಪೇ-ಪೇಟಿಎಂ ಇಲ್ಲ: ಈ ಆ್ಯಪ್ ಯೂಸ್ ಮಾಡ್ತಾರೆ
Image
ಕಳ್ಳ ನೋಟನ್ನು ಸ್ಮಾರ್ಟ್​ಫೋನ್​ನಲ್ಲಿ ಪತ್ತೆ ಹಚ್ಚುವುದು ಹೇಗೆ?

Tech Tips: ಡೇಟಾ ಪ್ಯಾಕ್ ಹಾಕಿದ್ದರೂ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿಲ್ಲವೇ? ಈ ಸೆಟ್ಟಿಂಗ್ಸ್ ಮಾಡಿ

ಶಿಯೋಮಿಗೆ ಭಾರಿ ನಷ್ಟ

ಕಳೆದ ವರ್ಷ, ಶಿಯೋಮಿ ವಿವೋ ಜೊತೆ ಹೆಗಲಿಗೆ ಹೆಗಲು ಕೊಟ್ಟು ಪೈಪೋಟಿ ನಡೆಸಿ ಮೊದಲ ತ್ರೈಮಾಸಿಕದಲ್ಲಿ ಶೇ. 19 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿತು. ಈ ವರ್ಷ ಕಂಪನಿಯು ಭಾರಿ ನಷ್ಟವನ್ನು ಅನುಭವಿಸಿದೆ ಮತ್ತು ಚೀನೀ ಬ್ರ್ಯಾಂಡ್‌ನ ಮಾರುಕಟ್ಟೆ ಪಾಲು ಕೇವಲ ಶೇ. 13 ಕ್ಕೆ ಇಳಿದಿದೆ. ಈ ರೀತಿಯಾಗಿ, ಶಿಯೋಮಿ ಮಾರುಕಟ್ಟೆ ಪಾಲಿನಲ್ಲಿ ನಾಲ್ಕನೇ ಸ್ಥಾನವನ್ನು ತಲುಪಿದೆ. ರಿಯಲ್‌ ಮಿ ಮಾರುಕಟ್ಟೆ ಪಾಲು ಶೇ. 1 ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಕಂಪನಿಯು ಶೇ. 11 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿ ಐದನೇ ಸ್ಥಾನದಲ್ಲಿ ಉಳಿಯಿತು. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಿಯಲ್‌ ಮಿ ಮಾರುಕಟ್ಟೆ ಪಾಲು ಶೇ. 10 ರಷ್ಟಿತ್ತು.

ಆಪಲ್‌ನ ದಾಖಲೆಯ ಬೆಳವಣಿಗೆ:

ಭಾರತದಲ್ಲಿ ಐಫೋನ್‌ಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಆಪಲ್ ವರ್ಷದಿಂದ ವರ್ಷಕ್ಕೆ ಶೇ. 29 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆಪಲ್ ಪ್ರೀಮಿಯಂ ವಿಭಾಗದಲ್ಲಿ ಪ್ರಾಬಲ್ಯ ಮುಂದುವರಿಸಿದೆ. ಈ ವಿಭಾಗದಲ್ಲಿ ಆಪಲ್‌ನ ಮಾರುಕಟ್ಟೆ ಪಾಲು ಶೇ. 26 ರಷ್ಟಿದೆ. ಇದಲ್ಲದೆ, ನಥಿಂಗ್ ನ ಮಾರುಕಟ್ಟೆ ಪಾಲು ಕೂಡ ಹೆಚ್ಚಾಗಿದೆ. ಲಂಡನ್ ಮೂಲದ ಈ ಕಂಪನಿಯು ವರ್ಷದಿಂದ ವರ್ಷಕ್ಕೆ ಶೇ. 156 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದಲ್ಲದೆ, ಮೊಟೊರೊಲಾ ವರ್ಷದಿಂದ ವರ್ಷಕ್ಕೆ ಶೇ. 59 ರಷ್ಟು ಪ್ರಾಬಲ್ಯ ಸಾಧಿಸಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ