ಮಧ್ಯಮ ವರ್ಗದ ಹಲವು ಜನರು ಹೊಸ ಮೊಬೈಲ್ ಖರೀದಿಸಬೇಕು ಎಂದು ಎಷ್ಟೋ ದಿನಗಳಿಂದ ಕಾದುಕುಳಿತಿರುತ್ತಾರೆ. ಆದರೆ, ಹಣ ಹೊಂದಿಸಿಕೊಳ್ಳುವುದು, ಇರುವ ಹಣದಲ್ಲಿ ಯಾವ ಮೊಬೈಲ್ ಖರೀದಿಸಲಿ ಎಂಬ ಗೊಂದಲ ಹುಟ್ಟಿಕೊಳ್ಳುವುದು ಸಾಮಾನ್ಯ. ಕಡಿಮೆ ಬೆಲೆಗೆ ಉತ್ತಮ ಆಯ್ಕೆಯ, ಹೆಚ್ಚಿನ ಸೌಲಭ್ಯಗಳು ಇರುವ ಮೊಬೈಲ್ ಬೇಕು ಎಂಬ ಆಸೆಯೂ ಇದ್ದೇ ಇರುತ್ತದೆ. ಇಷ್ಟೆಲ್ಲಾ ಆಲೋಚನೆಗಳ ಮಧ್ಯೆ ಸುಲಭವಾಗಿ ಫೋನ್ ಖರೀದಿಗೆ ಏನಾದರೂ ಅವಕಾಶ ಇದೆಯೇ ಎಂದು ಹಲವರು ಹುಡುಕುತ್ತಿರುತ್ತಾರೆ. ಆಫರ್ಗಳ ಬಗ್ಗೆಯೂ ಒಂದು ಕಣ್ಣಿಟ್ಟಿರುತ್ತಾರೆ. ಅಂಥವರಿಗೆ ಇಲ್ಲಿ ವಿಶೇಷ ಸುದ್ದಿ ಒಂದಿದೆ.
ಕಡಿಮೆ ಬಜೆಟ್ನಲ್ಲಿ ಫೋನ್ ಕೊಳ್ಳಲು ಉತ್ತಮ ಆಯ್ಕೆ ಯಾವುದು, ಈ ಆಫರ್ ಏನು ಎಂದು ಇಲ್ಲಿದೆ ಮಾಹಿತಿ. ಈ ಆಫರ್ ಮೂಲಕ 13,999 ರೂಪಾಯಿ ಮೊಬೈಲ್ ಫೋನ್ ಕೇವಲ 699 ರೂಪಾಯಿಗೆ ಸಿಗಲಿದೆ. ಇದು 5ಜಿ ಮೊಬೈಲ್ ಆಗಿದ್ದು, ಫ್ಲಿಪ್ಕಾರ್ಟ್ನಿಂದ ಈ ಫೋನ್ ಖರೀದಿಸಬಹುದಾಗಿದೆ. ಈ ಫೋನ್ ಮತ್ಯಾವುದೂ ಅಲ್ಲ. ರಿಯಲ್ ಮಿ 8 5ಜಿ. ಫೋನ್ನಲ್ಲಿ ಇನ್ನೂ ಕೆಲವು ಆಕರ್ಷಕ ಸೌಲಭ್ಯಗಳಿವೆ.
ರಿಯಲ್ ಮಿ 8 5ಜಿ ಸ್ಮಾರ್ಟ್ಫೋನ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಸೂಪರ್ಸಾನಿಕ್ ಬ್ಲಾಕ್ ಮತ್ತು ಸೂಪರ್ಸಾನಿಕ್ ಬ್ಲೂ ಬಣ್ಣಗಳಲ್ಲಿ ರಿಯಲ್ ಮಿ ಫೋನ್ ಸಿಗಲಿದೆ. 4G RAM, 64 GB ಸ್ಟೋರೇಜ್ ಹೊಂದಿರಲಿದೆ. ಈ ಫೋನ್ನ ಬೆಲೆ 13,999 ರೂಪಾಯಿ ಆಗಿದೆ. ಮತ್ತೊಂದು ಆಯ್ಕೆಯಾಗಿ, 4GB RAM, 128GB ಸ್ಟೋರೇಜ್ ಹೊಂದಿರುವ ಇದೇ ಫೋನ್ 14,999 ರೂಪಾಯಿಯದ್ದಾಗಿದೆ. ಹಾಗೂ ಇದರಲ್ಲೇ ಟಾಪ್ ಆಯ್ಕೆ 8GB RAM, 128 GB ಸ್ಟೋರೇಜ್ ಆಗಿದ್ದು, ಅದರ ಬೆಲೆ 16,999 ರೂಪಾಯಿ ಆಗಿದೆ.
ರಿಯಲ್ ಮಿ 8 5ಜಿ ಫೋನ್ ಕೇವಲ 699 ರೂಪಾಯಿಗೆ ಲಭ್ಯ ಹೇಗೆ?
ಫ್ಲಿಪ್ಕಾರ್ಟ್ನಲ್ಲಿ ನೀಡಿರುವ ಮಾಹಿತಿಯಂತೆ, 13,999 ರೂಪಾಯಿ ಬೆಲೆಬಾಳುವ 4GB RAM ಹಾಗೂ 64 GB ಸ್ಟೋರೇಜ್ ಫೋನ್ ಮೇಲೆ 13,300 ರೂಪಾಯಿಯ ಎಕ್ಸ್ಚೇಂಜ್ ಆಫರ್ ಇರಲಿದೆ. ಅದರ ಅನ್ವಯ ನಿಗದಿತ ಹಳೆಯ ಫೋನ್ಗಳನ್ನು ನೀಡಿದರೆ, ಎಕ್ಸ್ಚೇಂಜ್ ಆಫರ್ ಮೂಲಕ ಕೇವಲ 699 ರೂಪಾಯಿಗೆ ರಿಯಲ್ ಮಿ 8 5ಜಿ ಫೋನ್ ಸಿಗಲಿದೆ.
ಇದಲ್ಲದೆ, ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿದರೆ ಶೇಕಡಾ 10ರಷ್ಟು ಅಥವಾ ಗರಿಷ್ಠ 750 ರೂಪಾಯಿಗಳ ಡಿಸ್ಕೌಂಟ್ ಲಭ್ಯವಾಗಲಿದೆ. ಎಸ್ಬಿಐ ಕಾರ್ಡ್ ಮೂಲಕ ಇಎಮ್ಐನಲ್ಲಿ ಫೋನ್ ಖರೀದಿಸುತ್ತೀರಾದರೆ ಶೇಕಡಾ 10ರಷ್ಟು ಅಥವಾ ಗರಿಷ್ಠ 1,000 ರೂಪಾಯಿಗಳ ಡಿಸ್ಕೌಂಟ್ ಸೌಲಭ್ಯ ಇದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಫೋನ್ ಖರೀದಿಸಿದರೆ ಶೇಕಡಾ 5ರಷ್ಟು ಕ್ಯಾಶ್ ಬ್ಯಾಕ್ ಆಫರ್ ಸಿಗಲಿದೆ.
ರಿಯಲ್ ಮಿ 8 5ಜಿ ಫೋನ್ ಹೇಗಿದೆ?
ಈ ಫೋನ್ನಲ್ಲಿ 6.5 ಇಂಚು HD ಡಿಸ್ಪ್ಲೇ ಇರಲಿದೆ. ಮೀಡಿಯಾಟೆಕ್ ಡಿಮೆನ್ಸಿಟಿ 700 (MT 6833) ಪ್ರೊಸೆಸರ್ ಇದೆ. ಇದರಿಂದ ಮೊಬೈಲ್ ಸ್ಪೀಡ್ ಮತ್ತು ಮಲ್ಟಿಟಾಸ್ಕಿಂಗ್ಗೆ ಅನುಕೂಲವಾಗಲಿದೆ. ಫೋಟೊಗ್ರಾಫಿಗೆ ಅನುಕೂಲ ಆಗುವಂತೆ ಮೂರು ರೇರ್ ಕ್ಯಾಮರಾಗಳು ಇದೆ. ಅದರಲ್ಲಿ 48 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್, 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ನ ಥರ್ಡ್ ಸೆನ್ಸಾರ್ ಇದೆ. 16 ಮೆಗಾಪಿಕ್ಸೆಲ್ನ ಫ್ರಂಟ್ ಕ್ಯಾಮರಾ ಕೂಡ ಫೋನ್ನಲ್ಲಿದೆ. 5000 mAh ಬ್ಯಾಟರಿ ಸೌಲಭ್ಯ ನೀಡಲಾಗಿದೆ.
ಇದನ್ನೂ ಓದಿ: ಮೊಬೈಲ್ ಸಿಗ್ನಲ್ ನಿಜಕ್ಕೂ ಹಾನಿಕರವೇ? ಅವುಗಳಿಂದ ಏನೆಲ್ಲಾ ತೊಂದರೆ ಆಗುತ್ತಿದೆ? ಇಲ್ಲಿದೆ ಅಸಲಿ ಸಂಗತಿ
ಶಿವನ ಕೈಯಲ್ಲಿ ವೈನ್ ಗ್ಲಾಸ್, ಮೊಬೈಲ್ ಇಟ್ಟು ಅಚಾತುರ್ಯ ಎಸಗಿದ ಇನ್ಸ್ಟಾಗ್ರಾಂ; ದೂರು ದಾಖಲಿಸಿದ ಬಿಜೆಪಿ ನಾಯಕ
Published On - 11:30 pm, Sun, 13 June 21