ಬೆಂಗಳೂರು (ಮಾ. 20): ಭಾರತಕ್ಕೆ ಬೇಸಿಗೆ (Summer) ಸಮಯಕ್ಕಿಂತ ಬೇಗನೆ ಬಂದಿದೆ. ಅದರಲ್ಲೂ ಕರ್ನಾಟಕದ ಮಂದಿ ರಣಬಿಸಿಲಿನಿಂದ ಕಂಗೆಟ್ಟಿದ್ದಾರೆ. ಶೆಖೆಯಿಂದ ಪಾರಾಗಲು ನಾನಾ ತಂತ್ರ ರೂಪಿಡಸುತ್ತಿದ್ದಾರೆ. ನಡು ಬೇಸಿಗೆಯಲ್ಲಿ ಶಾಖದಿಂದಾಗಿ ಪರಿಸ್ಥಿತಿ ತುಂಬಾ ಹದಗೆಡುವ ಮೊದಲು, ನಿಮ್ಮ ಮನೆಯಲ್ಲಿರುವ ಫ್ಯಾನ್‌ಗಳನ್ನು ಎಸಿ ಆಗಿ ಪರಿವರ್ತಿಸಿ. ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಲವು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ಹವಾನಿಯಂತ್ರಣಗಳನ್ನು ಅಳವಡಿಸುವ ಬಗ್ಗೆಯೂ ಯೋಚಿಸುತ್ತಿದ್ದಾರೆ. ಕೆಲವರು ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅನೇಕ ಜನರು ಕೇವಲ ಸೀಲಿಂಗ್ ಫ್ಯಾನ್ ಮೂಲಕವೇ ತಂಪು ಮಾಡುತ್ತಿದ್ದಾರೆ.
ಆದರೆ, ಇಂದಿನ ಶೆಖೆಗೆ ಈ ಫ್ಯಾನ್ ಏನೂ ನಾಟುವುದಿಲ್ಲ. ಕೆಲವೊಂದು ಬಾರಿ ಇದರಿಂದ ಬಿಸಿ ಗಾಳಿ ಕೂಡ ಬರಲು ಪ್ರಾರಂಭಿಸುತ್ತದೆ. ಹೀಗಿರುವಾಗ ನೀವು ಫ್ಯಾನ್‌ನ ಗಾಳಿಯನ್ನು AC ಯಷ್ಟು ತಂಪಾಗಿಸಬಹುದು ಎಂಬುದು ನಿಮಗೆ ಗೊತ್ತೇ?. ಅದು ಹೇಗೆ?, ಇಲ್ಲಿದೆ ನೋಡಿ ಮಾಹಿತಿ
ಮನೆಯಲ್ಲಿ ಅಳವಡಿಸಲಾದ ಸೀಲಿಂಗ್ ಫ್ಯಾನ್ ಬಿಸಿ ಗಾಳಿಯನ್ನು ನೀಡಲು ಪ್ರಾರಂಭಿಸಿದರೆ, ಅದರ ಸ್ಥಾನ ಸರಿಯಾಗಿಲ್ಲ ಎಂದು ಅರ್ಥಮಾಡಿಕೊಳ್ಳಿ. ತಂಪಾದ ಗಾಳಿಯನ್ನು ಬೀಸಲು ಫ್ಯಾನ್ ಬ್ಲೇಡ್‌ಗಳು ಅಪ್ರದಕ್ಷಿಣಾಕಾರವಾಗಿ ತಿರುಗಬೇಕು. ಫ್ಯಾನ್‌ನ ಯಾವುದೇ ಬ್ಲೇಡ್ ವಕ್ರವಾಗಿದ್ದರೆ ಅಥವಾ ಸಡಿಲವಾಗಿದ್ದರೆ, ಅದನ್ನು ತಕ್ಷಣ ಸರಿ ಮಾಡಿಸಿ.
ಹಳೆಯ ಅಥವಾ ಕೆಟ್ಟ ಕೆಪಾಸಿಟರ್ ಫ್ಯಾನ್ ನಿಧಾನವಾಗಲು ಕಾರಣವಾಗಬಹುದು. ಹೊಸ ಕೆಪಾಸಿಟರ್ ಅನ್ನು ಸ್ಥಾಪಿಸುವ ಮೂಲಕ ನೀವು ಫ್ಯಾನ್‌ನ ವೇಗವನ್ನು ಹೆಚ್ಚಿಸಬಹುದು. ಶೆಖೆ ಗಾಲದಲ್ಲಿ ಕೆಪಾಸಿಟರ್ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚು.. ಹೀಗಾಗಿ ಕೆಪಾಸಿಟರ್ ಅನ್ನು ಚೆಕ್ ಮಾಡಿ, ಹಾಳಾಗಿದ್ದರೆ ಅಥವಾ ನಿಧಾನವಾಗಿ ಗಾಳಿ ಬರುತ್ತಿದ್ದರೆ ಬದಲಾಯಿಸಿ. ಹಾಗೆಯೆ ಫ್ಯಾನ್ ಅನ್ನು ನಿರಂತರವಾಗಿ ಚಾಲನೆಯಲ್ಲಿಡುವುದರಿಂದ ಹಲವು ಬಾರಿ ಫ್ಯಾನ್ ಬಿಸಿ ಗಾಳಿಯನ್ನು ನೀಡುತ್ತದೆ. ನಿರಂತರವಾಗಿ ಓಡುವುದರಿಂದ ಫ್ಯಾನ್ ಮೋಟಾರ್ ಬಿಸಿಯಾಗುತ್ತದೆ. ಇದಕ್ಕಾಗಿ, ಮಧ್ಯೆ ಸ್ವಲ್ಪ ಸಮಯದವರೆಗೆ ಫ್ಯಾನ್ ಅನ್ನು ಆಫ್ ಮಾಡುವುದನ್ನು ನೆನಪಿನಲ್ಲಿಡಿ.
Tech Tips: ನಿಮ್ಮ ಯೂಟ್ಯೂಬ್ ವಿಡಿಯೋವನ್ನು ಬೇರೆ ಭಾಷೆಗೆ ಡಬ್ ಮಾಡೋದು ಹೇಗೆ?: ಇಲ್ಲಿದೆ ಟ್ರಿಕ್
ಬೇಸಿಗೆಯಲ್ಲಿ ಅನೇಕ ಜನರು ತಲೆಯ ಮೇಲೆ ಒದ್ದೆಯಾದ ಟವೆಲ್‌ಗಳನ್ನು ಹಾಕಿ ತಿರುಗಾಡುವುದನ್ನು ನೀವು ನೋಡಿರಬೇಕು. ಇದರಿಂದಾಗಿ ಸುತ್ತಲಿನ ಬಿಸಿ ಗಾಳಿಯು ತಂಪಾಗಿರುತ್ತದೆ. ಹಾಗೆಯೆ ಫ್ಯಾನ್‌ನ ಗಾಳಿಯನ್ನು ತಂಪಾಗಿಸಲು ಕೂಡ ನೀವು ಈ ತಂತ್ರವನ್ನು ಬಳಸಬಹುದು. ನೀವು ಯಾವುದಾದರು ಸಹಾಯದಿಂದ ಟೇಬಲ್ ಫ್ಯಾನ್ ಮುಂದೆ ಒದ್ದೆಯಾದ ಟವಲ್ ಅನ್ನು ನೇತು ಹಾಕಬಹುದು. ಆಗ ಗಾಳಿಯು ಹೆಚ್ಚಿನ ತಂಪನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಐಸ್ ಅನ್ನು ಸಹ ಬಳಸಬಹುದು. ಇದಕ್ಕಾಗಿ ನೀವು ಫ್ಯಾನ್ ಮುಂದೆ ಸ್ವಲ್ಪ ಐಸ್ ಇಡಬೇಕಾಗುತ್ತದೆ. ಈಗ ಅದರಿಂದ ಹೊರಬರುವ ಗಾಳಿಯು ತುಂಬಾ ತಂಪಾಗಿರುವುದನ್ನು ನೀವು ನೋಡುತ್ತೀರಿ.
ನಿಮ್ಮ ಕೋಣೆ ಕಿಟಕಿಯ ಪಕ್ಕದಲ್ಲಿದ್ದರೆ. ಅಥವಾ ಕೋಣೆಯಲ್ಲಿ ಕಿಟಕಿ ಇದ್ದರೆ, ಅದನ್ನು ತೆರೆದಿಡಿ. ಅಡ್ಡ ಗಾಳಿ ವ್ಯವಸ್ಥೆಯಿಂದಾಗಿ, ತಂಪಾದ ಗಾಳಿಯು ಕೋಣೆಗೆ ಪ್ರವೇಶಿಸುತ್ತದೆ. ನೀವು ಕಿಟಕಿಯ ಮೇಲೆ ಸಣ್ಣ ಟೇಬಲ್ ಫ್ಯಾನ್ ಅನ್ನು ಸಹ ಇರಿಸಬಹುದು. ಇದು ಕೋಣೆಯಲ್ಲಿ ಗಾಳಿಯ ಪ್ರಸರಣವನ್ನು ಹೆಚ್ಚಿಸುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ