ಧ್ವನಿ ಆಧಾರಿತ ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ಆದ ಕ್ಲಬ್ ಹೌಸ್ ಮೇ 25ನೇ ತಾರೀಕಿಗೆ ಭಾರತದಲ್ಲಿ 1.03 ಲಕ್ಷಕ್ಕೂ ಹೆಚ್ಚು ಬಾರಿ ಗೂಗಲ್ ಪ್ಲೇಸ್ಟೋರ್ನಲ್ಲಿ ಡೌನ್ಲೋಡ್ ಆಗಿದೆ. ಅಂದ ಹಾಗೆ ಈ ಆ್ಯಪ್ ಭಾರತದಲ್ಲಿ ಬಿಡುಗಡೆ ಆಗಿದ್ದು ಮೇ 21ನೇ ತಾರೀಕು. ಇನ್ನು ಐಇಎಸ್ಗೆ ಆಗಿರುವ ಡೌನ್ಲೋಡ್ 2 ಲಕ್ಷಕ್ಕೂ ಹೆಚ್ಚಿದೆ. ಆಸಕ್ತಿಕರ ಸಂಗತಿ ಏನೆಂದರೆ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಯೋಜಕರಾಗಿ ಕಾಣಿಸಿಕೊಂಡಿರುವವರು ಮಲಯಾಳಿಗಳು. ಭಾರತದಲ್ಲಿ ಮಾತ್ರ ಅಷ್ಟೇ ಅಲ್ಲ, ಅನಿವಾಸಿ ಭಾರತೀಯರ ಪೈಕಿಯು ಆಯೋಜಕರ ರೂಮ್ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದು ಮಲಯಾಳಿಗಳೇ. ಇದರರ್ಥ ಏನೆಂದರೆ, ಮಧ್ಯರಾತ್ರಿ 3 ಗಂಟೆಗೆ ಕ್ಲಬ್ ಹೌಸ್ ಲಾಗ್ ಇನ್ ಆದರೂ ಈ ಸೋಷಿಯಲ್ ಮೀಡಿಯಾದ ರೂಮ್ಗಳಲ್ಲಿ ಕೊರತೆ ಇದ್ದೇ ಇರುತ್ತದೆ. ಈ ಬಗ್ಗೆ ಕೇಸಿ ನ್ಯೂಟನ್ ಮಾಹಿತಿ ಹಂಚಿಕೊಂಡಿದ್ದು, ಈ ತನಕ ಆಂಡ್ರಾಯಿಡ್ನಲ್ಲಿ 26 ಲಕ್ಷ ಡೌನ್ಲೋಡ್ ಆಗಿದ್ದು, ಭಾರತದಲ್ಲೇ 10 ಲಕ್ಷದಷ್ಟು ಡೌನ್ಲೋಡ್ ಆಗಿದೆ. ಮೇ ತಿಂಗಳಲ್ಲಿ ಐಒಎಸ್ನಲ್ಲಿ 7,19,000 ಡೌನ್ಲೋಡ್ ಆಗಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಶೇ 22ರಷ್ಟು ಕಡಿಮೆ ಆಗಿದೆ.
ಈ ಕ್ಲಬ್ ಹೌಸ್ ಆ್ಯಪ್ ಅನ್ನು ಎಲಾನ್ ಮಸ್ಕ್, ಮಾರ್ಕ್ ಝುಕರ್ಬರ್ಗ್ ಅಂಥವರು ಬಳಸುತ್ತಿರುವುದರಿಂದ ಜನಪ್ರಿಯತೆ ಹೆಚ್ಚಾಗಿದೆ. ಕ್ಲಬ್ ಹೌಸ್ಗೆ ಆರಂಭದ ವರ್ಷದಲ್ಲೇ ಹತ್ತಾರು ಲಕ್ಷ ಬಳಕೆದಾರರು ಸಿಕ್ಕಿದ್ದಾರೆ. ಸಿಕ್ಕಾಪಟ್ಟೆ ಜನ ಆಡಿಯೋ ಆಧಾರಿಯ ಸೋಷಿಯಲ್ ಅಪ್ಲಿಕೇಷನ್ಗಳಲ್ಲಿ ಆಸಕ್ತರಾಗಿರುವುದರಿಂದ ಹಲವು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ತಮ್ಮದೇ ವರ್ಷನ್ನ ಕ್ಲಬ್ ಹೌಸ್ ಅಭಿವೃದ್ಧಿ ಮಾಡುವುದಕ್ಕೆ ಪ್ರಯತ್ನಿಸುತ್ತಿವೆ. ಚಾಟ್ ರೂಮ್ಗಳಲ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ನಡೆಸಬಹುದು. ಇದರಲ್ಲಿ 5000 ಮಂದಿಯ ತನಕ ಒಂದು ಗುಂಪಾಗಿ ಚಾಟಿಂಗ್ಗೆ ಅವಕಾಶ ಇದೆ. ಇದು ಆಡಿಯೋ- ಓನ್ಲಿ ಆ್ಯಪ್. ನೇರ ಮಾತುಕತೆಗಳನ್ನು ಆಯೋಜಿಸುವುದಕ್ಕೆ ಈ ಪ್ಲಾಟ್ಫಾರ್ಮ್ ಬಳಸಿಕೊಳ್ಳಬಹುದು. ಮಾತನಾಡುವ ಹಾಗೂ ಕೇಳಿಸಿಕೊಳ್ಳುವ ಮೂಲಕ ಇದರಲ್ಲಿ ಭಾಗವಹಿಸಬಹುದು.
ಈ ಆ್ಯಪ್ನಲ್ಲಿ ನಡೆಯುವ ಸಂಭಾಷಣೆಗಳ ರೆಕಾರ್ಡ್ ಮಾಡುವುದಕ್ಕೆ, ದಾಖಲಿಸುವುದಕ್ಕೆ, ಮತ್ತೊಮ್ಮೆ ಪ್ರಸಾರ ಮಾಡುವುದಕ್ಕೆ ಅವಕಾಶ ಇಲ್ಲ. ಆದ್ದರಿಂದ ಬೆದರಿಕೆ, ಜನಾಂಗೀಯ ನಿಂದನೆ ಇಂಥದ್ದು ಆಗಬಹುದು. ಆಗ ದೂರು ನೀಡಲು ಸಾಧ್ಯವಿಲ್ಲ ಎಂಬ ಆರೋಪ ಇದೆ. ಇನ್ನು ಈ ಆ್ಯಪ್ನ ಮೂಲದಲ್ಲೇ ಖಾಸಗಿತನ ಕಾಯ್ದುಕೊಳ್ಳುವುದರೂ ಸಮಸ್ಯೆ ಇದ್ದು, ಒಮನ್, ಜೋರ್ಡಾನ್, ಚೀನಾದಂಥ ದೇಶಗಳು ಈ ಆ್ಯಪ್ನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ.
New Clubhouse stats from Sensor Tower:
-2.6M installs on Android so far, 1M of which are in India
– 719K downloads on iOS in May, down 22 percent month over month— Casey Newton (@CaseyNewton) June 1, 2021
ಇದನ್ನೂ ಓದಿ: Clubhouse app: ಕ್ಲಬ್ ಹೌಸ್ ಆ್ಯಪ್ ಈಗ ಭಾರತದಲ್ಲೂ ಲಭ್ಯ; ಏನಿದರ ವೈಶಿಷ್ಟ್ಯ, ಯಾವುದಕ್ಕೆ ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ
ಇದನ್ನೂ ಓದಿ: Audio- Only Forum Hotline: ಫೇಸ್ಬುಕ್ನಿಂದ ಲೈವ್ ಆಡಿಯೋ ಹಾಟ್ಲೈನ್ ಪ್ರಯೋಗ; ಇದೇನು, ಎತ್ತ?
(Audio only social media clubhouse app most used by Malayalis in India and abroad here is the numbers)