Clubhouse app: ಕ್ಲಬ್ ಹೌಸ್ ಆ್ಯಪ್ ಈಗ ಭಾರತದಲ್ಲೂ ಲಭ್ಯ; ಏನಿದರ ವೈಶಿಷ್ಟ್ಯ, ಯಾವುದಕ್ಕೆ ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ

|

Updated on: May 22, 2021 | 11:57 AM

ಭಾರತಕ್ಕೂ ಕಾಲಿಟ್ಟಿದೆ ಕ್ಲಬ್ ಹೌಸ್ ಆ್ಯಪ್. ಇದು ಆಡಿಯೋ ಓನ್ಲಿ ಸೋಷಿಯಲ್ ಮೀಡಿಯಾ ಚಾಟ್. 5000 ಮಂದಿ ತನಕದ ಗುಂಪು ಇದರಲ್ಲಿ ಭಾಗಿ ಆಗಬಹುದು. ಮಾತು ಆಡಬಹುದು ಹಾಗೂ ಕೇಳಿಸಿಕೊಳ್ಳಬಹುದು.

Clubhouse app: ಕ್ಲಬ್ ಹೌಸ್ ಆ್ಯಪ್ ಈಗ ಭಾರತದಲ್ಲೂ ಲಭ್ಯ; ಏನಿದರ ವೈಶಿಷ್ಟ್ಯ, ಯಾವುದಕ್ಕೆ ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಕ್ಲಬ್ ಹೌಸ್ ಆಂಡ್ರಾಯಿಡ್ ಆ್ಯಪ್ ಈಗ ಭಾರತದಲ್ಲೂ ಡೌನ್​ಲೋಡ್ ಮಾಡಬಹುದಾಗಿದೆ. ಇದೊಂದು ಸೋಷಿಯಲ್ ಆಡಿಯೋ ಆ್ಯಪ್. ಈಗ ವಿಶ್ವದಾದ್ಯಂತ ಗೂಗಲ್ ಸ್ಟೋರ್ ಬಳಕೆದಾರರಿಗೆ ಸಿಗುತ್ತಿದೆ. ಇದರಲ್ಲಿ ದೃಢೀಕರಣ (ವೆರಿಫಿಕೇಷನ್) ಪ್ರಕ್ರಿಯೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಅನ್ನೋದು ಹಲವರ ದೂರಾಗಿದೆ. ಪ್ಲೇ ಸ್ಟೋರ್​ನಲ್ಲಿನ ರೀವ್ಯೂಸ್ ವಿಭಾಗದಲ್ಲಿನ ಪ್ರಕಾರ, ಸೈನ್ ಅಪ್ ಮಾಡುವುದಕ್ಕೆ ಸಮಸ್ಯೆ ಆಗುತ್ತಿದೆ. ವೆರಿಫಿಕೇಷನ್ ಕೋಡ್ ದೊರೆಯುತ್ತಿಲ್ಲ ಮತ್ತು ಸಂಖ್ಯೆಯನ್ನು ಮರು ನಮೂದಿಸಲು ಮೊಬೈಲ್​ನಲ್ಲಿ ಯತ್ನಿಸಿದಾಗ ಅಂಕಿಗಳು ತಪ್ಪಾಗಿವೆ ಅಥವಾ ಇದನ್ನು ಬೆಂಬಲಿಸುವುದಿಲ್ಲ ಎಂದ ಸಂದೇಶ ಬರುತ್ತಿದೆ. ಇನ್ನು iOSನಲ್ಲಿ ಕ್ಲಬ್​ ಹೌಸ್ ಇನ್ವೈಟ್- ಓನ್ಲಿ. ಅಂದರೆ ಯಾರಾದರೂ ಆಹ್ವಾನ ನೀಡಿದರಷ್ಟೇ ಸಿಗುತ್ತದೆ. ಇದು ಆಂಡ್ರಾಯಿಡ್ ಬಳಕೆದಾರರಿಗೂ ಮುಂದುವರಿಯಲಿದೆ.

ಸೈನ್ ಅಪ್ ಮಾಡುವುದಕ್ಕೇ ಸಮಸ್ಯೆ ಆಗಿರುವುದರಿಂದ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕ್ಲಬ್ ಹೌಸ್​ ಆ್ಯಪ್​ಗೆ 1 ಸ್ಟಾರ್ ರೇಟಿಂಗ್ ಸಿಕ್ಕಿದೆ. ಈ ಆ್ಯಪ್ ಅನ್ನು 1 ಲಕ್ಷಕ್ಕೂ ಹೆಚ್ಚು ಆ್ಯಂಡ್ರಾಯ್ಡ್ ಬಳಕೆದಾರರು ಡೌನ್​ಲೋಡ್ ಮಾಡಿದ್ದಾರೆ. ಕೆಲವರು ಸೈನ್​ ಅಪ್​ಗೆ ಆಹ್ವಾನ ಪಡೆಯಲು ಒದ್ದಾಡುತ್ತಾ ಇದ್ದಾರೆ. ಕ್ಲಬ್​ ಹೌಸ್​ಗೆ ಲಾಗ್ ಇನ್ ಆಗಬೇಕು ಅಂದರೆ ಮತ್ತೊಬ್ಬ ಬಳಕೆದಾರರಿಂದ ಆಹ್ವಾನ ಬರಬೇಕು. ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಇದು ಕ್ಲಬ್​ ಹೌಸ್​ನ ಪಬ್ಲಿಕ್ ಡೇಟಾ ವರ್ಷನ್. ಈ ಪ್ಲಾಟ್​​ಫಾರ್ಮ್​ನಿಂದ ಇನ್ನೂ ಆಂಡ್ರಾಯಿಡ್​ ಆ್ಯಪ್​ಗೆ ಸ್ಥಿರವಾದ ವರ್ಷನ್ ಘೋಷಣೆ ಮಾಡಬೇಕಿದೆ.

ಈ ಕ್ಲಬ್​ ಹೌಸ್​ ಆ್ಯಪ್​ ಅನ್ನು ಎಲಾನ್ ಮಸ್ಕ್, ಮಾರ್ಕ್ ಝುಕರ್​ಬರ್ಗ್ ಅಂಥವರು ಬಳಸುತ್ತಿರುವುದರಿಂದ ಜನಪ್ರಿಯತೆ ಹೆಚ್ಚಾಗಿದೆ. ಕ್ಲಬ್​ ಹೌಸ್​ಗೆ ಆರಂಭದ ವರ್ಷದಲ್ಲೇ ಹತ್ತಾರು ಲಕ್ಷ ಬಳಕೆದಾರರು ಸಿಕ್ಕಿದ್ದಾರೆ. ಸಿಕ್ಕಾಪಟ್ಟೆ ಜನ ಆಡಿಯೋ ಆಧಾರಿಯ ಸೋಷಿಯಲ್ ಅಪ್ಲಿಕೇಷನ್​ಗಳಲ್ಲಿ ಆಸಕ್ತರಾಗಿರುವುದರಿಂದ ಹಲವು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ತಮ್ಮದೇ ವರ್ಷನ್​ನ ಕ್ಲಬ್​ ಹೌಸ್​ ಅಭಿವೃದ್ಧಿ ಮಾಡುವುದಕ್ಕೆ ಪ್ರಯತ್ನಿಸುತ್ತಿವೆ.

ಫೇಸ್​ಬುಕ್​ನಿಂದ ಆಡಿಯೋ ಚಾಟ್ ಆಧಾರಿತ ಫೀಚರ್ ಅಭಿವೃದ್ಧಿಗೆ ಪ್ರಯತ್ನ ನಡೆಯುತ್ತಿದೆ. ಅದನ್ನು ಮೆಸೆಂಜರ್ ಆ್ಯಪ್​ಗೆ ಸೇರ್ಪಡೆ ಮಾಡಬಹುದು. ಅದೇ ರೀತಿ ಲಿಂಕ್ಡ್​ಇನ್ ಕೂಡ ಅದೇ ರೀತಿಯ ಫೀಚರ್​ ಮೇಲೆ ಕೆಲಸ ಮಾಡುತ್ತಿದೆ. ಕೆಲವು ಹೆಸರಾಂತ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಈಗಾಗಲೇ ಕ್ಲಬ್​ಹೌಸ್​ಗೆ ಪರ್ಯಾಯವನ್ನು ತಂದಿವೆ. ಟ್ವಿಟ್ಟರ್ ಸ್ಪೇಸಸ್, ಡಿಸ್​ಕಾರ್ಡ್ ಸ್ಟೇಜ್ ಚಾನೆಲ್, ಇನ್​ಸ್ಟಾ ಗ್ರಾಮ್ ಲೈವ್ ರೂಮ್ಸ್, ಟೆಲಿಗ್ರಾಮ್ ಕೂಡ ವಾಯ್ಸ್ ಚಾಟ್ಸ್ 2.0 ತಂದಿವೆ.

ಕ್ಲಬ್ ಹೌಸ್ ಆ್ಯಪ್​ ಬಗ್ಗೆ ಮಾಹಿತಿಯನ್ನು ಹುಡುಕಿದರೆ, ಇದು ಇನ್ವಿಟೇಷನ್ ಓನ್ಲಿ ಸೋಷಿಯಲ್ ಮೀಡಿಯಾ ಆ್ಯಪ್ ಅಂತಲೇ ಮಾಹಿತಿ ಸಿಗುತ್ತದೆ. ಇದರ ಮೂಲಕವಾಗಿ ಚಾಟ್​ ರೂಮ್​ಗಳಲ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ನಡೆಸಬಹುದು. ಇದರಲ್ಲಿ 5000 ಮಂದಿಯ ತನಕ ಒಂದು ಗುಂಪಾಗಿ ಚಾಟಿಂಗ್​ಗೆ ಅವಕಾಶ ಇದೆ. ಇದು ಆಡಿಯೋ- ಓನ್ಲಿ ಆ್ಯಪ್. ನೇರ ಮಾತುಕತೆಗಳನ್ನು ಆಯೋಜಿಸುವುದಕ್ಕೆ ಈ ಪ್ಲಾಟ್​ಫಾರ್ಮ್ ಬಳಸಿಕೊಳ್ಳಬಹುದು. ಮಾತನಾಡುವ ಹಾಗೂ ಕೇಳಿಸಿಕೊಳ್ಳುವ ಮೂಲಕ ಇದರಲ್ಲಿ ಭಾಗವಹಿಸಬಹುದು. ಈ ಆ್ಯಪ್​ನಲ್ಲಿ ನಡೆಯುವ ಸಂಭಾಷಣೆಗಳ ರೆಕಾರ್ಡ್ ಮಾಡುವುದಕ್ಕೆ, ದಾಖಲಿಸುವುದಕ್ಕೆ, ಮತ್ತೊಮ್ಮೆ ಪ್ರಸಾರ ಮಾಡುವುದಕ್ಕೆ ಅವಕಾಶ ಇಲ್ಲ. ಆದ್ದರಿಂದ ಬೆದರಿಕೆ, ಜನಾಂಗೀಯ ನಿಂದನೆ ಇಂಥದ್ದು ಆಗಬಹುದು. ಆಗ ದೂರು ನೀಡಲು ಸಾಧ್ಯವಿಲ್ಲ ಎಂಬ ಆರೋಪ ಇದೆ. ಇನ್ನು ಈ ಆ್ಯಪ್​ನ ಮೂಲದಲ್ಲೇ ಖಾಸಗಿತನ ಕಾಯ್ದುಕೊಳ್ಳುವುದರೂ ಸಮಸ್ಯೆ ಇದ್ದು, ಒಮನ್, ಜೋರ್ಡಾನ್, ಚೀನಾದಂಥ ದೇಶಗಳು ಈ ಆ್ಯಪ್​ನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ.

ಇದನ್ನೂ ಓದಿ: Audio- Only Forum Hotline: ಫೇಸ್​ಬುಕ್​ನಿಂದ ಲೈವ್ ಆಡಿಯೋ ಹಾಟ್​ಲೈನ್ ಪ್ರಯೋಗ; ಇದೇನು, ಎತ್ತ?

(Clubhouse audio only chat app now available in India. Know the features and other details of this app)